ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಬಬಲಾದ ಜಿಲ್ಲಾ ಪರಿಷದ ಪ್ರಾಥಮಿಕ ಶಾಲೆಯಲ್ಲಿ 79 ನೇ ಸ್ವಾತಂತ್ರ್ಯದಿನ ಆಚರಣೆ

ಬಬಲಾದ ಜಿಲ್ಲಾ ಪರಿಷದ ಪ್ರಾಥಮಿಕ ಶಾಲೆಯಲ್ಲಿ 79 ನೇ ಸ್ವಾತಂತ್ರ್ಯದಿನ ಆಚರಣೆ









      ಬಬಲಾದ (15 ಅಗಷ್ಟ 2025): ಅಕ್ಕಲಕೋಟ ತಾಲೂಕಿನ ಬಬಲಾದ ಜಿಲ್ಲಾ ಪರಿಷದ ಪ್ರಾಥಮಿಕ ಕನ್ನಡ, ಮರಾಠಿ ಮತ್ತು ಉರ್ದು ಶಾಲೆಗಳ ಸಹಯೋಗದಲ್ಲಿ ಕನ್ನಡ ಶಾಲೆಯ ಆವರಣದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಜಿ. ಪ. ಪ್ರಾಥಮಿಕ ಉರ್ದು ಶಾಲೆSMC ಅಧ್ಯಕ್ಷ ಶ್ರೀ ತನ್ವೀರ್ ಕರಜಗಿ ರಾಷ್ಟ್ರಪೀತಾ ಮಹಾತ್ಮಾ ಗಾಂಧಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರೆ, ಮರಾಠಿ ಶಾಲೆಯ SMC ಅಧ್ಯಕ್ಷರಾದ ಶ್ರೀ. ರಾಚಣ್ಣ ರೋಡಗೆ ಧ್ವಜಸ್ತಂಭ ಪೂಜೆ ಮಾಡಿದರು. ಮತ್ತು ಕನ್ನಡ ಶಾಲೆSMC ಸಮಿತಿಯ ಅಧ್ಯಕ್ಷರಾದ ಶ್ರೀ. ಗಂಭೀರಪ್ಪ ಮಡ್ಡಿ ಇವರು ಧ್ವಜಾರೋಹಣ ಮಾಡಿದರು. ಆ ನಂತರ ಬಬಲಾದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ರಾಷ್ಟ್ರಪೀತ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಸಂಜಯ ಮಡ್ಡಿ ಹಾಗೂ ಅಶ್ಫಾಕ್ ಬೋರೆವಾಲೆ ಇವರು ಪೂಜೆ ಮಾಡಿದರೆ ಧ್ವಜಸ್ತಂಭದ ಪೂಜೆಯನ್ನು ಶ್ರೀ ಬೋಳದೆ ಅವರು ನೆರವೇರಿಸಿದರು. ಬಬಲಾದ ಗ್ರಾಮದ ಪ್ರಥಮ ನಾಗರಿಕ, ಸರಪಂಚ ಅಂಬಿಕಾತಾಯಿ ಆಚಗೊಂಡ ಹಾಗೂ ಗ್ರಾಮಸೇವಕ ಸೌ. ವಾಘಮೋಡೆ ಮೇಡಂ ಇವರ ಶುಭ ಹಸ್ತದಿಂದ ಧ್ವಜಾರೋಹಣ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಂಟಾ ಮುಕ್ತಿ ಸಮಿತಿಯ ಅಧ್ಯಕ್ಷರು ಶ್ರೀ. ಇರಣ್ಣಾ ರೋಡಗೆ ವಹಿಸಿದರು.

        ಈ ಸಂದರ್ಭದಲ್ಲಿ ಬಾಲಕ ಮತ್ತು ಬಾಲಕಿಯರಿಂದ ಭಾಷಣ ನಡೆಯಿತು. ಮಕ್ಕಳು ವಿವಿಧ ವಿಷಯಗಳ ಮೇಲೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ದೇಶಭಕ್ತಿಗೀತೆಯನ್ನು ಹಾಡಿದರು. ಎಲ್ಲ ಶಾಲೆಯ ವಿದ್ಯಾರ್ಥಿಗಳಿಂದ ಸಾಮೂಹಿಕವಾಗಿ ಸಂಗೀತಮಯ ಕವಯತ್ತು ತೆಗೆದುಕೊಳ್ಳಲಾಯಿತು. ಪಾಲಕ ಶ್ರೀ ವಸಂತ ಸುತಾರ ಇವರು ತಮ್ಮ ಮಗ ಕಿರಣ ಸುತಾರನ ಹುಟ್ಟು ಹಬ್ಬದ ಅಂಗವಾಗಿ ಶಾಲೆಯ ವಿದ್ಯಾತಿಗಳಿಗೆ ವಹಿ-ಪೆಣ್ಣುಗಳನ್ನು ಕಾಣಿಕೆಯಾಗಿ ನೀಡಿದರೆ ಇನ್ನೋರ್ವ ಪಾಲಕರು ಎಲ್ಲ ಮಕ್ಕಳಿಗೆ ಚಾಕಲೆಟ್ ಹಂಚಿದರು.  

        ಅಧ್ಯಕ್ಷ ಶ್ರೀಮತಿ ಅಂಬಿಕಾತಾಯಿ ಆಚಗೊಂಡ, ಗ್ರಾಮ ಸೇವಕ ಶ್ರೀಮತಿ ವಾಘಮೋಡೆ ಮೇಡಂ, ದಸ್ತಗಿರ್ ಕರಜಗಿ, ಇರಣ್ಣ ರೋಡಗೆ, ಗುರುಶಾಂತ್ ಮಡ್ಡಿ, ಇರಣ್ಣ ಶಾಬಾದೆ ಸರ್, ರಮೇಶ ರೋಡಗೆ, ವಿಜಯ ರಾಠೋಡ್, ಮಹಾದೇವ ಚವ್ಹಾಣ, ಶಬ್ಬೀರ್ ಕರಜಗಿ, ಭೋಗೇಶ್ವರ ಫೂಲಾರಿ, ವಿಲಾಸ ರೋಡಗೆ, ಸಿದ್ದಾರಾಮ ದುರ್ಗ, ಮಹಾಂತೇಶ ಕಲಶೆಟ್ಟಿ, ವಿಶ್ವನಾಥ ಫೂಲಾರಿ, ಸಂತೋಷ ಪಾಟೀಲ, ಅಸ್ಪಾಕ ಬೋರೆವಾಲೆ, ಶ್ರೀಶೈಲ ರೋಡಗೆ, ವಸಂತ ಸುತಾರ ಹಾಗೂ ಬಬಲಾದ ಗ್ರಾಮದ ಸಮಸ್ತ ನಾಗರಿಕರು, ಯುವಕರು, ಪಾಲಕರು, ಅಂಗನವಾಡಿ ಕಾರ್ಯಕರ್ತೆಯರಾದ ಮಂಗಲ್ ಶಹಬಾದೆ ಮತ್ತು ಕವಿತಾ ಪ್ಯಾಟಿ, ಸಹಾಯಕಿಯರು, ಆಶಾ ಕಾರ್ಯಕರ್ತೆಯರು. ಪ್ರಿಯಾಂಕಾ ಕ್ಷೇತ್ರಿ, ಸೀಮಾ ಚಂಬಾರ್, ಆರತಿ ಫುಲಾರಿ, ಗಜರಾಬಾಯಿ ಕಲಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಕರು ಶ್ರೀ. ದಿನೇಶ್ ಚವ್ಹಾಣ, ಶ್ರೀ. ರಮೇಶ ಶಿವಮೂರ್ತಿ, ಶ್ರೀಮತಿ ಸುನಂದಾ ಖಜೂರ್ಗಿ, ಶ್ರೀಮತಿ ಸುಜಾತಾ ಕಾಂಬಳೆ, ಅಶೋಕ ಶಿಂಗೆ, ಶ್ರೀ. ಸೂರಜ್ ಕದಮ, ಶ್ರೀ.ಮಂಜುನಾಥ ತೇಲಿ, ಶ್ರೀ. ವಾಘಮಾರೆ ಸರ್, ಶ್ರೀ ಹುಷೆನೀ ಸರ್ಫರಾಜ, ಝಿಯಾ ಸರ್  ಸಹಕರಿಸಿದರು. ಸೂತ್ರ ಸಂಚಲನೆ ಶ್ರೀ ದಿನೇಶ್ ಚವ್ಹಾಣ ಅವರು ನಿರ್ವಹಿಸಿದರು, ಕೊನೆಗೆ  ಮಕ್ಕಳಿಗೆ ಗ್ರಾಮ ಪಂಚಾಯತ ಬಬಲಾದ ಪರವಾಗಿ ಬಿಸ್ಕೆಟ್ ಮತ್ತು ಚಾಕಲೇಟ್ ವಿತರಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು