ಐದನೆಯ ಹಾಗೂ ಎಂಟನೆಯ ತರಗತಿ ಶಿಷ್ಯವೃತ್ತಿ ಪರೀಕ್ಷೆಯ ಅರ್ಜಿ ತುಂಬಲು ಆರಂಭ
ಮಹಾರಾಷ್ಟ್ರ ರಾಜ್ಯದ ಎಲ್ಲ ಸರಕಾರಿ ಜಿ. ಪ., ನ. ಪ., ಮ. ಪಾ. ಹಾಗೂ ಎಲ್ಲ ಅನುದಾನಿತ/ವಿನಾ ಅನುದಾನಿತ ಪ್ರಾಥಮಿಕ ಮತ್ತು ಉಚ್ಚ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣ ಪಡಿಯುತ್ತಿರುವ 5ನೇ ಹಾಗೂ 8ನೇ ತರಗತಿಯ ವಿದ್ಯಾರ್ಥಿಗಳ ಸಲುವಾಗಿ ಪೂರ್ವ ಉಚ್ಚ ಪ್ರಾಥಮಿಕ ಹಾಗೂ ಪೂರ್ವ ಮಾಧ್ಯಮಿಕ ಶಿಷ್ಯವೃತ್ತಿ ಪರೀಕ್ಷೆ 2026 ರ ಅರ್ಜಿಗಳು https://2026.puppssmsce.in/ ವೆಬ್ಸೈಟ್ ನಲ್ಲಿ ಶಾಲೆಯನ್ನು ನೋಂದಣಿ ಮಾಡುವ ಮೂಲಕ ವಿದ್ಯಾರ್ಥಿಗಳ ಅರ್ಗಿಗಳು ಆನ್ಲೈನ್ ತುಂಬಲು ಆರಂಭವಾಗಿರುತ್ತದೆ. ಫೆಬ್ರುವಾರಿ 2026 ರಲ್ಲಿ ನಡೆಯುವ ಈ ಶಿಷ್ಯವೃತ್ತಿ ಪರೀಕ್ಷೆಯ ಅರ್ಜಿ ತುಂಬಲು ದಿ. 30/11/2025 ಇದು ಕೊನೆಯ ದಿನಾಂಕವಾಗಿರುತ್ತದೆ.
ಸದರಿ ಶೈಕ್ಷಣಿಕ ವರ್ಷದಿಂದ ಶಿಷ್ಯವೃತ್ತಿ ಪರೀಕ್ಷೆಯಲ್ಲಿ ಬದಲಾವಣೆ ಮಾಡಲಾಗಿದ್ದು ವರ್ಗ 5ನೇ ಹಾಗೂ 8ನೇ ತರಗತಿಗಾಗಿ ತೆಗೆದುಕೊಳ್ಳಲಾಗುತ್ತಿರುವ ಪೂರ್ವ ಉಚ್ಚ ಪ್ರಾಥಮಿಕ ಹಾಗೂ ಪೂರ್ವ ಮಾಧ್ಯಮಿಕ ಶಿಷ್ಯವೃತ್ತಿ ಪರೀಕ್ಷೆಯು ಈ ವರ್ಷದಿಂದ ಪೂರ್ವ ಪ್ರಾಥಮಿಕ ಮತ್ತು ಉಚ್ಚ ಪ್ರಾಥಮಿಕ ಶಿಷ್ಯವೃತ್ತಿ ಪರೀಕ್ಷೆ ಎಂದು ನಾಮಕರಣ ಮಾಡಲಾಗಿದ್ದು, ವರ್ಗ 4ನೇ ಹಾಗೂ 7ನೇ ತರಗತಿಗಳ ವಿದ್ಯಾರ್ಥಿಗಳಿಗಾಗಿ ಈ ಪರೀಕ್ಷೆ ನಡೆಸಲಾಗುವುದು ಎಂದು ಸರ್ಕಾರ ಆದೇಶ ನೀಡಿರುತ್ತದೆ. ವರ್ಷ 2025 ರಲ್ಲಿ ಮಾತ್ರ ಮೊದಲು 5ನೇ ಹಾಗೂ 8ನೇ ತರಗತಿಯ ವಿದ್ಯಾರ್ಥಿಗಳ ಸಲುವಾಗಿ ಪೂರ್ವ ಉಚ್ಚ ಪ್ರಾಥಮಿಕ ಹಾಗೂ ಪೂರ್ವ ಮಾಧ್ಯಮಿಕ ಶಿಷ್ಯವೃತ್ತಿ ಪರೀಕ್ಷೆ 2026 ತೆಗೆದುಕೊಂಡು ಫೆಬ್ರುವಾರಿ ಎರಡನೆಯ ಸಪ್ತಾಹದಲ್ಲಿ ವರ್ಗ 4ನೇ ಹಾಗೂ 7ನೇ ತರಗತಿಗಳ ವಿದ್ಯಾರ್ಥಿಗಳಿಗಾಗಿ ಪೂರ್ವ ಪ್ರಾಥಮಿಕ ಮತ್ತು ಉಚ್ಚ ಪ್ರಾಥಮಿಕ ಶಿಷ್ಯವೃತ್ತಿ ಪರೀಕ್ಷೆ ತೆಗೆದುಕೊಳ್ಳಲಾಗುವುದು. ಮುಂದಿನ ವರ್ಷದಿಂದ ಕೇವಲ ವರ್ಗ 4ನೇ ಹಾಗೂ 7ನೇ ತರಗತಿಗಳ ವಿದ್ಯಾರ್ಥಿಗಳಿಗಾಗಿ ಪೂರ್ವ ಪ್ರಾಥಮಿಕ ಮತ್ತು ಉಚ್ಚ ಪ್ರಾಥಮಿಕ ಶಿಷ್ಯವೃತ್ತಿ ಪರೀಕ್ಷೆ ತೆಗೆದುಕೊಳ್ಳಲಾಗುವುದು.

0 ಕಾಮೆಂಟ್‌ಗಳು
ಧನ್ಯವಾದಗಳು