ಅಕ್ಕಲಕೋಟ : ಜಿ. ಪ. ವಿದ್ಯಾರ್ಥಿಗಳ ತಾಲೂಕ ಮಟ್ಟದ ಕ್ರೀಡಾ ಸ್ಪರ್ಧೆ ಉತ್ಸಾಹದಲ್ಲಿ
ಸಂಪನ್ನ
ಅಕ್ಕಲಕೋಟ: ತಾಲೂಕಿನಲ್ಲಿರುವ
ಜಿಲ್ಲಾ ಪರಿಷದ ಪ್ರಾಥಮಿಕ ಶಾಲೆಗಳ ಅಂತರಶಾಲೆಯ ತಾಲೂಕ ಮಟ್ಟದ ಕ್ರೀಡಾ ಸ್ಪರ್ಧೆಗಳು ದಿನಾಂಕ: 04
ಡಿಸೆಂಬರ ಹಾಗೂ 05 ಡಿಸೆಂಬರ2025 ರಂದು ಅತಿ ಉತ್ಸಾಹದಲ್ಲಿ ನೆರವೇರಿತು. ಅಕ್ಕಲಕೋಟದ ಫತ್ತೆಸಿಂಗ
ಕ್ರೀಡಾಂಗಣದ ಮೇಲೆ ಪಂಚಾಯತ ಸಮಿತಿ(ಶಿಕ್ಷಣ ವಿಭಾಗ) ಗಟ ಶಿಕ್ಷಣಾಧಿಕಾರಿ ಶ್ರೀ ಪ್ರಶಾಂತ ಅರಬಾಳೆ
ಇವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಮಕ್ಕಳ ಕ್ರೀಡಾಕೂಟ ಅತ್ಯಂತ ಶಿಸ್ತುಬದ್ಧವಾಗಿ ಹಾಗೂ ಉತ್ಸಾಹದಲ್ಲಿ
ಜರುಗಿತು.
ದಿನಾಂಕ
04 ಮುಂಜಾನೆ 10 ಗಂಟೆಗೆ ಗಟ ಶಿಕ್ಷಣಾಧಿಕಾರಿ ಶ್ರೀ ಪ್ರಶಾಂತ ಅರಬಾಳೆ, ವಿಸ್ತಾರ ಅಧಿಕಾರಿ ಶ್ರೀ ಸೋಮಶೇಖರ ಸ್ವಾಮಿ ಸಾಹೇಬ ವಿಸ್ತಾರ ಅಧಿಕಾರಿ ಶ್ರೀ ಲಕ್ಕಪ್ಪ
ಪೂಜಾರಿ ಸಾಹೇಬ, ರಾಷ್ಟ್ರೀಯ ಆಟಗಾರತಿ ಕು. ಟೀನವಾಲಾ ಇವರು ಹವೆಯಲ್ಲಿ ಬಲೂನುಗಳನ್ನು
ಬಿಡುವ ಮೂಲಕ ಕ್ರೀಡಾಂಗಣದ ಉದ್ಘಾಟನೆ ಮಾಡಿದರು. ಎರಡೂ ದಿನ ಸ್ಪರ್ಧೆ ಆರಂಭದ ಮುಂಚೆ ಕ್ರೀಡೆಯ ಪ್ರತಿಜ್ಞೆ
ಮಾಡಲಾಯಿತು. ಖೋ-ಖೋ, ಕಬ್ಬಡ್ಡಿ, ಕುಂಟಾಟ,(ಸಾಂಘಿಕ ಸ್ಪರ್ಧೆ) 100 ಮೀ ಮತ್ತು 200ಮೀ ಓಟ ಹಾಗೂ ಚದುರಂಗ(ವಯಕ್ತಿಕ ಸ್ಪರ್ಧೆ) ಹೀಗೆ
ಸ್ಪರ್ಧೆಗಳಿದ್ದು ಸಣ್ಣ ಗುಂಪು 1ನೇ ತರಗತಿಯಿಂದ 5ನೇ ತರಗತಿ ಹಾಗೂ ದೊಡ್ಡ ಗುಂಪು 6ನೇ ತರಗತಿಯಿಂದ
8ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗಾಗಿ ಸ್ಪರ್ಧೆ ತೆಗೆದುಕೊಳ್ಳಲಾಯಿತು.
ಗೆಲುವು
ಪಡೆದ ಪ್ರಥಮ, ದ್ವಿತೀಯ ಹಾಗೂ ತೃತೀಯ ಕ್ರಮಾಂಕ ಪಡೆದ ಸಂಘಕ್ಕೆ ಹಾಗೂ
ಸ್ಪರ್ಧಿಗಳಿಗೆ ಟ್ರೋಫಿ, ಮೆಡಲ್ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಪ್ರಥಮ ಕ್ರಮಾಂಕ ಪಡೆದ ಎಲ್ಲ ಸಂಘಗಳು ಹಾಗೂ ಸ್ಪರ್ಧಿಗಳು ಜಿಲ್ಲಾಸ್ತರಿಯ ಸ್ಪರ್ಧೆಗೆ ಆಯ್ಕೆಯಾಗಿದ್ದು
ಡಿಸೆಂಬರ್ 08 ರಿಂದ ಜಿಲ್ಲಾಸ್ತರಿಯ ಸ್ಪರ್ಧೆಗಳು ನಡೆಯಲಿವೆ. ಎಲ್ಲರಿಗೂ ಜಿಲ್ಲಾ ಮಟ್ಟದ ಸ್ಪರ್ಧೆಗೆ
ಆಯ್ಕೆಪತ್ರವನ್ನು ನೀಡಲಾಯಿತು. ಉತ್ಕೃಷ್ಟ ಮೂಲ್ಯಮಾಪನೆ ಮಾಡಿರುವ ಪಂಚ ಹಾಗೂ ಕ್ರೀಡಾ ಸಮನ್ವಯಕ ಇವರಿಗೆ
“ವೀರಶಶಿ ಸಾಮಾಜಿಕ ಪ್ರತಿಷ್ಠಾನ ಚಪ್ಪಳಗಾಂವ ತಾ. ಅಕ್ಕಲಕೋಟ” ಸಂಸ್ಥೆಯ ಅಧ್ಯಕ್ಷರಾದ ಶ್ರೀ
ಗೌರೀಶಂಕರ ವೀರಪಾಕ್ಷಪ್ಪ ದೋಡ್ಯಾಳೆ ಸರ್ ಇವರು ತಮ್ಮ ದಿವಂಗತ ತಂದೆಯವರಾದ ಕೈ. ವೀರಪಾಕ್ಷಪ್ಪ ಸಾತಪ್ಪ
ದೊಡ್ಯಾಳ ಸರ ಅವರ ಸ್ಮರಣಾರ್ಥವಾಗಿ ಟ್ರೋಫಿ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಿದರು.
ಈ ಸಮಯದಲ್ಲಿ ಗಟ ಶಿಕ್ಷಣಾಧಿಕಾರಿ ಶ್ರೀ ಪ್ರಶಾಂತ ಅರಬಾಳೆ ಸಾಹೇಬ, ವಿಸ್ತಾರ ಅಧಿಕಾರಿ ಶ್ರೀ ಸೋಮಶೇಖರ ಸ್ವಾಮಿ ಸಾಹೇಬ, ವಿಸ್ತಾರ
ಅಧಿಕಾರಿ ಶ್ರೀ ಲಕ್ಕಪ್ಪ ಪೂಜಾರಿ ಸಾಹೇಬ, ಎಲ್ಲ ಕೇಂದ್ರದ ಕೇಂದ್ರ ಪ್ರಮುಖರು, ಬ. ಆರ್.ಸಿ.ಸದಸ್ಯರು, ಎಲ್ಲ ಪಂಚರು, ಶಿಕ್ಷಕರು ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ರಾಷ್ಟ್ರೀಯ ಖೋ ಖೋ ಪಂಚ ಪರೀಕ್ಷೆ ಉತ್ತೀರ್ಣರಾದ
ಪ್ರಕಾಶ ಸೋನಟಕ್ಕೆ ಸರ್, ರಾಜ್ಯ ಖೋ ಖೋ ಕೋಚ್ ಸಿದ್ಧಾರಾಮ ಗಾಯಕವಾಡ ಸರ್, ಪ್ರೇಮದಾಸ್ ರಾಠೋಡ ಸರ್, ರಾಜ್ಯ ಬ್ಯಾಡ್ಮಿಂಟನ್ ಸಂಘದ ವ್ಯವಸ್ಥಾಪಕರಾಗಿ
ಆಯ್ಕೆಯಾದ ಶಿವಾಜಿ ವಶಪಟೆ ಸರ್ ಇವರನ್ನು ವಿಶೇಷವಾಗಿ
ಸನ್ಮಾನ ಮಾಡಲಾಯಿತು. “ವೀರಶಶಿ ಸಾಮಾಜಿಕ ಪ್ರತಿಷ್ಠಾನ
ಚಪ್ಪಳಗಾಂವ ತಾ. ಅಕ್ಕಲಕೋಟ” ಸಂಸ್ಥೆಯ ಅಧ್ಯಕ್ಷ ಶ್ರೀ ಗೌರೀಶಂಕರ ವೀರಪಾಕ್ಷಪ್ಪ ದೋಡ್ಯಾಳೆ ಸರವರಿಗೆ
ಗಟ ಶಿಕ್ಷಣಾಧಿಕಾರಿ ಶ್ರೀ ಪ್ರಶಾಂತ ಅರಬಾಳೆ ಸಾಹೇಬರು ಶ್ರೀ ಸ್ವಾಮಿ ಸಮರ್ಥ ಪ್ರೇತಿಮೆ, ಶಾಲು ಹಾಗೂ ಹೂಮಾಲೆಯೊಂದಿಗೆ ಸನ್ಮಾನ ಮಾಡಿದರು. ಕ್ರೀಡಾ ಸ್ಪರ್ಧೆ ಯಶಶ್ವಿಯಾಗಿಸಲು ಕ್ರೀಡಾ ಸಮನ್ವಯ ಸಮಿತಿಯ
ಸದಸ್ಯರು ಪರಿಶ್ರಮ ಪಟ್ಟರು. ಸ್ಪರ್ಧೆಯ ನಿಯೋಜನೆ ವಿಸ್ತಾರ ಅಧಿಕಾರಿ ಸೋಮಶೇಖರ ಸ್ವಾಮಿ ಸಾಹೇಬರು, ಲಕ್ಕಪ್ಪ ಪೂಜಾರಿ ಸಾಹೇಬರು, ದೇವಿದಾಸ ವಾಘಮೋಡೆ, ವೀರಭದ್ರ ಯಾದವಾಡ್ ಸರ್, ಬಸವರಾಜ ಖೀಲಾರಿ, ಬಿ.ಆರ್. ಸಿ ಸದಸ್ಯ ಶರದ ಕುಂಭಾರ, ಗಣೇಶ ಅಂಬುರೆ, ವಿಶಾಲ್ ಶೇಟೆ, ಸುಜಿತ್ ಪಾಟಿಲ್, ವಿಟಕರ್
ಇವರೆಲ್ಲರೂ ಸುವ್ಯವಸ್ಥಿತವಾಗಿ ಮಾಡಿ ಸ್ಪರ್ಧೆ ಸಂಪನ್ನವಾಗಿಸಿದರು.
ಸಣ್ಣ ಗುಂಪಿನ ತೀರ್ಪು
ಕುಂಟಾಟ
• ಹುಡುಗಿಯರು – ಪ್ರಥಮ:
ಮೈಸಲಗಿ
ಕನ್ನಡ ಶಾಲೆ ದ್ವಿತೀಯ: ತೋಳಣುರ ಕನ್ನಡ
• ಹುಡುಗರು – ಪ್ರಥಮ: ಲೋಹಾರಾ ವಸ್ತಿ ಶಾಲೆ, ಕರಜಗಿ ದ್ವಿತೀಯ: ಉಡಗಿ ಮರಾಠಿ
ಖೋ-ಖೋ
• ಹುಡುಗಿಯರು – ಪ್ರಥಮ: ಕೊರ್ಸೆಗಾಂವ ಮರಾಠಿ
ಶಾಲೆ ದ್ವಿತೀಯ: ನಾಗೋರೆ
• ಹುಡುಗರು –
ಪ್ರಥಮ:
ಶಾವಳ ಮರಾಠಿ ಶಾಲೆ ದ್ವಿತೀಯ: ಮೈಂದರ್ಗಿ ಕನ್ನಡ
ಕಬ್ಬಡ್ಡಿ
• ಹುಡುಗರು – ಪ್ರಥಮ: ಜೇವೂರ ಕನ್ನಡ ಶಾಲೆ
ದ್ವಿತೀಯ:
ಕಾಝೀಕಣಬಸ
• ಹುಡುಗಿಯರು – ಚಿಂಚೋಳಿ(ನ) ಮರಾಠಿ ಶಾಲೆ ದ್ವಿತೀಯ :ತಳೆವಾಡ
ವಯಕ್ತಿಕ ಸ್ಪರ್ಧೆಗಳು
• 100 ಮೀಟರ್ ಓಟ –
ಆಕಾಶ ರಾಜಕುಮಾರ ಕಾಂಬಳೆ (ಬಬಲಾದ ಕನ್ನಡ ಶಾಲೆ)
ಸಾಕ್ಷಿ ಪರಮೇಶ್ವರ ರೇವುರೆ (ಜೇವೂರ
ಇಬ್ರಾಹಿಮಪುರ ಮರಾಠಿ ಶಾಲೆ)
• 200 ಮೀಟರ್ ಓಟ –
ಗುರಯ್ಯ ಈರಯ್ಯ ಸ್ವಾಮಿ (ಅಂಕಲಗಿ ಕನ್ನಡ ಶಾಲೆ)
ಸವಿತಾ
ಖೀಲಾರಿ (ನಾಗಣಸುರ ಮರಾಠಿ ಶಾಲೆ)
• ಚದುರಂಗ – ಯಶ ಅಮೋಘಸಿದ್ಧ ಬಂದೀಛೊಡೆ
ಹಾಗೂ ಲಕ್ಷ್ಮಿ ಶುಭಾಷ ಮಾಳಿ (ಸಾಫಳೆ ಮರಾಠಿ ಶಾಲೆ)
ದೊಡ್ಡ ಗುಂಪಿನ ತೀರ್ಪು
ಕುಂಟಾಟ
• ಹುಡುಗಿಯರು – ಪ್ರಥಮ: ತೋಳಣುರ
ಕನ್ನಡ ಶಾಲೆ
ದ್ವಿತೀಯ: ಮೈಸಲಗಿ ಕನ್ನಡ ಶಾಲೆ
• ಹುಡುಗರು – ಪ್ರಥಮ: ಕಾಜಿಕಣಬಸ ಶಾಲೆ
ದ್ವಿತೀಯ: ನಾಗಣಸುರ ಮರಾಠಿ ಶಾಲೆ.
ಖೋ-ಖೋ
• ಹುಡುಗಿಯರು – ಪ್ರಥಮ: ದೇವಿಕವಠೆ ಮರಾಠಿ ಶಾಲೆ
ದ್ವಿತೀಯ: ನಾಗಣಸುರ ಮರಾಠಿ ಶಾಲೆ
• ಹುಡುಗರು ಪ್ರಥಮ: ಶಾವಳ
ಮರಾಠಿ ಶಾಲೆ
ದ್ವಿತೀಯ: ಕನ್ನಡ ಶಾಲೆ ಸಿನ್ನುರ.
ಕಬ್ಬಡ್ಡಿ
• ಹುಡುಗರು ಪ್ರಥಮ : ದಹಿಟಣೆವಾಡಿ ಮರಾಠಿ
ಶಾಲೆ
ದ್ವಿತೀಯ: ಕನ್ನಡ ಶಾಲೆ ಸಿನ್ನುರ.
• ಹುಡುಗಿಯರು ಪ್ರಥಮ: ಕುಡಲ ಮರಾಠಿ ಶಾಲೆ
ದ್ವಿತೀಯ: ಬಬಲಾದ ಕನ್ನಡ ಶಾಲೆ
ವಯಕ್ತಿಕ ಸ್ಪರ್ಧೆಗಳು
• 100 ಮೀಟರ್ ಓಟ –
ಪೈಗಂಬರ್ ಲಾಮಶಾಕಶೇಖ (ನಾಗಣಸುರ), ರಾಧಿಕಾ ಹಣಮಂತ
ಪವಾರ (ಕೊರ್ಶೆಗಾಂವ)
• 200 ಮೀಟರ್ ಓಟ –
ಭೀಮಶಾ ಬಸವರಾಜ ಬಜಂತ್ರಿ (ಕನ್ನಡ ತೋಳಣುರ), ಚೌಡೇಶ್ವರಿ ಗಜಾನನ ಕೋಳಿ (ತೋರಣಿ)
• ಚದುರಂಗ – ಶ್ರೀನಿವಾಸ ಅಶೋಕ ಮುಂದೆವಾಡಿ(ಕರಜಗಿ
ಕನ್ನಡ), ವೈಷ್ಣವಿ ಚಂದ್ರಕಾಂತ ಘಂಟೆ(ಸಾಫಳೆ)








0 ಕಾಮೆಂಟ್‌ಗಳು
ಧನ್ಯವಾದಗಳು