History and Politics STD 10th Guide For Kannada Medium
ಇತಿಹಾಸ ಮತ್ತು ರಾಜಶಾಸ್ತ್ರ ಹತ್ತನೆಯ
ಇಯತ್ತೆ
ಅನ್ವಯಿಕ ಇತಿಹಾಸ
ಅ. ಕ್ರ. |
ಪಾಠಗಳು |
1. |
ಇತಿಹಾಸ ಲೇಖನ : ಪಾಶ್ಚಿಮಾತ್ಯ ಪರಂಪರೆ |
2. |
ಇತಿಹಾಸ ಲೇಖನ : ಭಾರತೀಯ ಪರಂಪರೆ |
3. |
ಅನ್ವಯಿಕ ಇತಿಹಾಸ. |
4. |
ಭಾರತೀಯ ಕಲೆಗಳ ಇತಿಹಾಸ. |
5. |
ಪ್ರಸಾರ ಮಾಧ್ಯಮಗಳು ಮತ್ತು ಇತಿಹಾಸ.. |
6. |
ಮನರಂಜನೆಯ ಮಾಧ್ಯಮಗಳು ಮತ್ತು ಇತಿಹಾಸ |
7. |
ಆಟಗಳು ಮತ್ತು ಇತಿಹಾಸ. |
8. |
ಪರ್ಯಟನೆ ಮತ್ತು ಇತಿಹಾಸ. |
9. |
ಐತಿಹಾಸಿಕ ಆಸ್ತಿಯ ಸಂರಕ್ಷಣೆ. |
ವಿಷಯ |
ಪಾಠಗಳು |
ಒಳಗೊಂಡ
ಪಾಠಗಳು |
ಗುಣಗಳು |
ಆಯ್ಕೆಯ
ಗುಣಗಳು |
ಇತಿಹಾಸ |
1 |
ಪಾಠ
1 ಹಾಗೂ 2 |
6 |
9 |
2 |
ಪಾಠ
3 |
3 |
5 |
|
3 |
ಪಾಠ
4 ರಿಂದ 8 |
16 |
23 |
|
4 |
ಪಾಠ
9 |
3 |
5 |
|
|
ಒಟ್ಟು
ಗುಣಗಳು |
28 |
42 |
|
ರಾಜಶಾಸ್ತ್ರ |
1 |
ಪಾಠ
1 |
3 |
5 |
2 |
ಪಾಠ
2 ಹಾಗೂ 3 |
5 |
8 |
|
3 |
ಪಾಠ
4 ಹಾಗೂ 5 |
4 |
7 |
|
|
ಒಟ್ಟು
ಗುಣಗಳು |
12 |
20 |
1. ಇತಿಹಾಸ ಲೇಖನ : ಪಾಶ್ಚಿಮಾತ್ಯ
ಪರಂಪರೆ
ಪ್ರ. 1. ಅ) ಕೆಳಗೆ ಕೊಟ್ಟ ಪರ್ಯಾಯಗಳಲ್ಲಿ ಯೋಗ್ಯ
ಪರ್ಯಾಯವನ್ನು ಆಯ್ದುಕೊಂಡು ವಿಧಾನಗಳನ್ನು ಪೂರ್ಣಮಾಡಿರಿ.
(1) ………….. ನು ಆಧುನಿಕ ಇತಿಹಾಸಲೇಖನದ ಜನಕನಾಗಿದ್ದನು
ಎಂದು ಹೇಳಬಹುದು.
(ಅ) ವ್ಯಾಲ್ಟೆರ (ಬ) ರೇನೆ ದೇಕಾರ್ತ
(ಕ) ಲಿಯೋಪಾಲ್ಡ ರಾಂಕೆ (ಡ) ಕಾರ್ಲಮಾರ್ಕ್ಸ್
(2) ಆರ್ಕಿಯಾಲಾಜಿ ಆಫ್ ನಾಲೇಜ ಎಂಬ ಗ್ರಂಥವನ್ನು ............ಇವನು
ಬರೆದನು.
(ಅ) ಕಾರ್ಲಮಾರ್ಕ್ಸ್ (ಬ) ಮೈಕೆಲ್ ಪುಕೊ (ಕ) ಲುಸಿಯಾಫೇಬರ (ಡ) ವ್ಯಾಲ್ಟೆರ
ಬ) ಕೆಳಗಿನವುಗಳಲ್ಲಿ ತಪ್ಪಾದ ಜೋಡಿಯನ್ನು ತಿದ್ದಿ
ಮತ್ತೆ ಬರೆಯಿರಿ.
(1) ಜಾರ್ಜ ವಿಲ್ಹೆಮ್ ಫ್ರೆಡರಿಕ್ ಹೆಗೆಲ್ - ರೀಝನ್ ಇನ್
ಹಿಸ್ಟರಿ
ಉತ್ತರ: ತಪ್ಪು- ಜಾರ್ಜ ವಿಲ್ಹೆಮ್ ಫ್ರೆಡರಿಕ್ ಹೆಗೆಲ್ ಇವರು
ಎನ್ಸಾಯಿಕ್ಲೋಪೀಡಿಯಾ ಆಫ್ ಫಿಲಾಸೋಫಿಕಲ್ಸೈನ್ಸೆಸ್
ಗ್ರಂಥ ಬರೆದಿರುತ್ತಾರೆ.
(2) ಲಿಯೋಪಾಲ ವ್ಹಾನ್ ರಾಂಕೆ - ದ ಥೇರಿ ಆ್ಯಂಡ್
ಪ್ರಾಕ್ಟಿಸ್ ಆಫ್ ಹಿಸ್ಟರಿ
(3) ಹಿರೋಡೊಟಸ್ - ದ ಹಿಸ್ಟರಿಜ
(4) ಕಾರ್ಲಮಾರ್ಕ್ಸ್ - ಡಿಸ್ಕೋರ್ಸ್ ಆನ್ ದ
ಮೆಥಡ್
ಉತ್ತರ: ತಪ್ಪು, ಕಾರ್ಲ್ಮಾರ್ಕ್ಸ್
ಇವರು ದಾಸ್ ಕ್ಯಾಪಿಟಲ್ ಇದನ್ನು ರಚಿಸಿರುತ್ತಾರೆ.
ಪ್ರ. 2. ಕೆಳಗಿನ ಕಲ್ಪನೆಗಳನ್ನು
ಸ್ಪಷ್ಟಪಡಿಸಿರಿ.
(1)
ದ್ವಂದ್ವವಾದ: ಹೆಗೆಲ್ ಅಭಿಪ್ರಾಯದಂತೆ ಯಾವುದೇ ಘಟನೆಯನ್ನು
ಅರ್ಥೈಸುವಾಗ ಅದನ್ನು ಎರಡು ವಿರುದ್ದ ಪ್ರಕಾರಗಳಲ್ಲಿ ವಿಂಗಡಿಸಬೇಕಾಗುತ್ತದೆ. ಅದರ ಹೊರತು ಮಾನವೀ
ಮನಸ್ಸಿಗೆ ಘಟನೆಯ ಆಕಲನೆಯಾಗುವುದಿಲ್ಲ. ಉದಾಹರಣೆಗಾಗಿ ಸತ್ಯ-ಅಸತ್ಯ, ಒಳ್ಳೆಯದು-ಕೆಟ್ಟದ್ದು. ಈ ಪದ್ದತಿಗೆ
ದ್ವಂದ್ವವಾದ (ಡೈಲೆಕ್ಟಿಕ್ಸ್) ಎಂದು ಕರೆಯಲಾಗುತ್ತದೆ. ಈ ಪದ್ಧತಿಯಲ್ಲಿ ಮೊದಲು ಒಂದು
ಸಿದ್ಧಾಂತವನ್ನು ಮಂಡಿಸಲಾಗುತ್ತದೆ. ಆ ನಂತರ ಆ 'ಸಿದ್ಧಾಂತವನ್ನು
ಖಂಡಿಸಿ ಅದರ ವಿರೋಧಿ ಸಿದ್ಧಾಂತವನ್ನು ಮಂಡಿಸಲಾಗುತ್ತದೆ ಈ ಎರಡೂ ಸಿದ್ಧಾಂತಗಳ ತರ್ಕಬದ್ದ
ವಿಶ್ಲೇಷಣೆಯ ನಂತರ ಆ ಎರಡರ ಸಾರವು ಯಾವುದರಲ್ಲಿ ಸಮಾವೇಶವಾಗಿದೆಯೋ ಅಂತಹ ಸಿದ್ಧಾಂತವನ್ನು
ಸಮನ್ವಯ ಪದ್ದತಿಯಿಂದ ಮಂಡಿಸಲಾಗುತ್ತದೆ.
(2)
ಆ್ಯನಲ್ಸ ಪ್ರಣಾಲಿ: ಆ್ಯನಲ್ಲ ಎಂಬ ಹೆಸರಿನಿಂದ ಗುರುತಿಸಲ್ಪಡುವ
ಇತಿಹಾಸಲೇಖನದ ಪ್ರಣಾಲಿ ಉದಯಕ್ಕೆ ಬಂದಿತು. ಆ್ಯನಲ್ಲ ಪ್ರಣಾಲಿಯಿಂದಾಗಿ ಇತಿಹಾಸಲೇಖನಕ್ಕೆ ಒಂದು
ಬೇರೆ ದಿಶೆ ದೊರಕಿತು. ಇತಿಹಾಸದ ಅಭ್ಯಾಸವು ಕೇವಲ ರಾಜಕೀಯ ಸ್ಥಿತ್ಯಂತರಗಳು (ಘಟನೆಗಳು), ರಾಜರುಗಳು, ಮಹಾನ್ ನೇತಾರರು ಹಾಗೂ ಅದಕ್ಕೆ ಸಂಬಂಧಿತ
ರಾಜಕಾರಣ, ಮುತ್ಸದ್ದಿತನ, ಯುದ್ಧಗಳು- ಇವುಗಳ ಮೇಲೆ ಕೇಂದ್ರಿತವಾಗಿರದೆ, ಆ ಕಾಲದ ಹವಾಮಾನ, ಸ್ಥಳೀಯ ಜನ, ಕೃಷಿ, ವ್ಯಾಪಾರ, ತಂತ್ರಜ್ಞಾನ, ಸಾರಿಗೆ, ಸಂಪರ್ಕದ ಸಾಧನಗಳು, ಸಾಮಾಜಿಕ ವಿಭಜನೆ ಹಾಗೂ ಸಮೂಹದ ಮಾನಸಿಕತೆ
ಮುಂತಾದ ವಿಷಯಗಳ ಅಭ್ಯಾಸ ಮಾಡುವುದೂ ಮಹತ್ವದ್ದಾಗಿದೆಯೆಂದು ತಿಳಿಯಲಾಯಿತು. ಆ್ಯನಲ್ಸ ಪ್ರಣಾಲಿಯನ್ನು ಆರಂಭಿಸುವ ಮತ್ತು ಅದನ್ನು
ವಿಕಸಿತಗೊಳಿಸುವ ಶ್ರೇಯವನ್ನು ಫ್ರೆಂಚ್ ಇತಿಹಾಸಕಾರರಿಗೆ ನೀಡಲಾಗುತ್ತದೆ
ಪ್ರ.
3. ಕೆಳಗಿನ ವಿಧಾನಗಳನ್ನು ಕಾರಣಸಹಿತ ಸ್ಪಷ್ಟಪಡಿಸಿರಿ.
(1) ಮಹಿಳೆಯರ ಜೀವನಕ್ಕೆ ಸಂಬಂಧಿತ ವಿವಿಧ ಆಯಾಮಗಳ
ಬಗ್ಗೆ ಸವಿಸ್ತಾರ ವಿಚಾರ ಮಾಡುವ ಸಂಶೋಧನೆಗಳು ಆರಂಭವಾದವು.
ಉತ್ತರ: ಸ್ತ್ರೀವಾದಿ ಇತಿಹಾಸಲೇಖನ ಎಂದರೆ ಮಹಿಳೆಯರ
ದೃಷ್ಟಿಕೋನ ಮಾಡಿದ ಇತಿಹಾಸದ ಪುನರ್ರಚನೆ. ಸೀಮೆ-ದ-ಬೋವ್ದಾ ಎಂಬ ಫ್ರೆಂಚ ವಿದೂಷಿಯೂ ಸ್ತ್ರೀವಾದದ ಮೂಲಭೂತ
ನಿಲುವನ್ನು ಸಿಡ್ಡಪಡಿಸಿದಳು. ಸ್ತ್ರಿವಾದಿ ಇತಿಹಾಸ ಲೇಖನದಲ್ಲಿ ಮಹಿಳೆಯರ ಸಮಾವೇಶವನ್ನು
ಮಾಡುವುದುರ ಜೊತೆಗೆ ಇತಿಹಾಸಲೇಖನ ಕ್ಷೇತ್ರದಲ್ಲಿ ಪುರಷಪ್ರಧಾನ ದೃಷ್ಟಿಕೋನದ ಪುನರ್ವಿಚಾರ ಮಾಡುವುದಕ್ಕೆ ಮಹತ್ವ
ನೀಡಲಾಯಿತು. ಆ ನಂತರ ಮಹಿಳೆಯರ ಜೀವನಕ್ಕೆ
ಸಂಬಂಧಿತ ನೌಕರಿ, ರೋಜಗಾರ್, ಟ್ರೇಡ
ಯೂನಿಯನ್, ಅವರ ಸಲುವಾಗಿ ಕೆಲಸ ಮಾಡುವ ಸಂಸ್ಥೆಗಳು , ಮಹಿಳೆಯರ ಕೌಟುಂಬಿಕ ಆಯುಷ್ಯ, ಮುಂತಾದ ವಿವಿಧ ಆಯಾಮಗಳು
ಬಗ್ಗೆ ಸವಿಸ್ತರ್ ವಿಚಾರ್ ಮಾಡುವ ಸಂಶೋಧನೆಗಳು ಆರಂಭವಾದವು.
(2) ಪುಕೊ ಇವನ ಲೇಖನ ಪದ್ಧತಿಗೆ ಜ್ಞಾನದ
ಪುರಾತತ್ವ ಎಂದು ಕರೆಯಲಾಗಿದೆ.
ಉತ್ತರ: ಇಪ್ಪತ್ತನೆಯ ಶತಮಾನದಲ್ಲಿಯ ಫ್ರೆಂಚ
ಇತಿಹಾಸಕರಣದ ಮೈಕಲ್ ಫುಕೋ ಇವನ ಬರವಣಿಗೆಯಿಂದ ಇತಿಹಾಸಲೇಖನದ ಒಂದು ಹೊಸ ಕಪ್ಪನೆ ಮುಂದೆ
ಬಂದಿತು. ತನ್ನ ‘ ಆರ್ಕಿಯಾಲಜಿ ಆಫ್ ನಾಲೇಜ್‘ ಗ್ರಂಥದಲ್ಲಿ ಕಾಲಾನುಕ್ರಮವಾಗಿ ಇತಿಹಾಸದ ಅಖಂಡ ರಚನೆ ಮಾಡುವ ಪದ್ದತಿಯು ತಪ್ಪಾಗಿದೆ
ಎಂದು ಪ್ರತಿಪಾದಿಸಿದನು. ಪುರಾತತ್ವದಲ್ಲಿ ಅಂತಿಮ ಸತ್ಯದವರೆಗೆ ತಲುಪುವುದು ಗುರಿಯಾಗಿರದೆ ಭೂತಕಾಲದಲ್ಲಿಯ
ಸ್ಥಿತ್ಯಂತರಗಳ ಸ್ಪಷ್ಟೀಕರಣ ನೀಡುವ ಪ್ರಯತ್ನ ವಿರುತ್ತದೆ ಎಂಬುದರ ಕಡೆಗೆ ಅವನು ಗಮನ ಸೆಳೆದನು. ಆದ್ದರಿಂದ
ಅವನು ಈ ಪದ್ದತಿಗೆ ಜ್ಞಾನದ ಪುರಾತತ್ವ ಎಂದು ಕರೆದಿದ್ದಾನೆ.
ಪ್ರ. 4. ಕೆಳಗಿನ ಪ್ರಶ್ನೆಗಳಿಗೆ 25ರಿಂದ 30 ಶಬ್ದಗಳಲ್ಲಿ ಉತ್ತರ ಬರೆಯಿರಿ.
(1) ಇತಿಹಾಸಲೇಖನ ಎಂದರೇನು?
ಉತ್ತರ: ಇತಿಹಾಸದಲ್ಲಿ ಲಭ್ಯ ಪುರಾವೆಗಳ ಚಿಕಿತ್ಸಕ ಸಂಶೋಧನೆ ಮಾಡಿ ಭೂತಕಾಲದಲ್ಲಿ
ಸಂಭವಿಸಿದ ಘಟನೆಗಳನ್ನು ಕ್ರಮವಾಗಿ ಹೊಂದಿಸಿ ಅವುಗಳ ಆಕಲನೆ ಮಾಡುವ ಉದ್ದೇಶದಿಂದ
ಮಂಡಿಸಲಾಗುತ್ತದೆ ಅಥವಾ ಲೇಖನ ಮಾಡಲಾಗುತ್ತದೆ ಈ ರೀತಿ ಮಂಡಿಸುವ ಲೇಖನ ಪದ್ಧತಿಗೆ ಇತಿಹಾಸ ಲೇಖನ ಎನ್ನಲಾಗುತ್ತದೆ.
(2) ರೇನೆ ದೇಕಾರ್ತ ಇವನು ಇತಿಹಾಸಲೇಖನದಲ್ಲಿ ಯಾವ
ವಿಚಾರವನ್ನು ಒತ್ತಾಯಪೂರ್ವಕವಾಗಿ ಮಂಡಿಸಿದನು?
ಉತ್ತರ: ಇತಿಹಾಸ ಲೇಖನಕ್ಕಾಗಿ ಬಳಸಲಾಗುವ
ಐತಿಹಾಸಿಕ ಸಾಧನಗಳ ವಿಶೇಷತಃ ಕಾಗದ ಪತ್ರಗಳ
ವಿಶ್ವಾಸರ್ಹತೆಯನ್ನು ಪರೀಕ್ಷಿಸಿಕೊಳ್ಳವುದು ಅವಶ್ಯಕವಾಗಿದೆ ಎಂಬ ವಿಚಾರವನ್ನು ಒತ್ತಾಯ
ಪೂರ್ವಕವಾಗಿ ಮಂಡಿಸಲಾಗುತ್ತಿದೆ.
(3) ವ್ಯಾಲ್ಟೆರ ಇವನಿಗೆ ಆಧುನಿಕ ಇತಿಹಾಸಲೇಖನದ ಜನಕನೆಂದು
ಏಕೆ ಕರೆಯಲಾಗುತ್ತದೆ?
ಉತ್ತರ: ಇತಿಹಾಸಲೇಖನಕ್ಕಾಗಿ ಕೇವಲ ವಸ್ತುವಿಷ್ಠ ಸತ್ಯ
ಘಟನೆಗಳ ಕಾಲಾನುಕ್ರಮ ಇಷ್ಟರ ಮೇಲೆ ಲಕ್ಷವನ್ನು ಕೇಂದ್ರೀಕರಿಸದೆ ಆ ಕಾಲದ ಸಮಾಜದ ಪರಂಪರೆ, ವ್ಯಾಪಾರ, ಆರ್ಥಿಕ ವ್ಯವಸ್ಧೆ,
ಕೃಷಿ ಮುಂತಾದ ಸಂಗತಿಗಳ ವಿಚಾರ ಮಾಡುವುದು ಅವಶ್ಯಕವಾಗಿದೆ ಎಂಬ ವಿಚಾರವನ್ನು ವಾವ್ಟೇರ ಎಂಬ
ಫ್ರೆಂಚ ತತ್ವಜ್ಜಾನಿಯು ಮಂಡಿಸಿದನು. ಅದರಿಂದಾಗಿ ಇತಿಹಾಸದ ರಚನೆ ಮಾಡುವಾಗ ಮಾನವ ಜೀವನದ
ಸರ್ವಾಂಗೀಣ ವಿಚಾರವಾಗಬೇಕು ಎಂಬ ವಿಚಾರ ಮುಂದೆ ಬಂದಿತು. ಆ ದೃಷ್ಟಿ ಯಿಂದ ವವ್ಟೆರನು ಆಧುನಿಕ
ಇಯತಿಹಾಸಲೇಖನದ ಜನಕನಾಗಿದ್ದನು ಎಂಬ ಹೇಳಬಹುದು.
ಪ್ರ. 5. ಕೆಳಗಿನ ಕಲ್ಪನಾಚಿತ್ರವನ್ನು ಪೂರ್ಣಮಾಡಿರಿ.
ಮಹತ್ವದ
ವಿಚಾರವಂತರು: (ಅ) ವ್ಯಾಲ್ಟೆರ
(ಬ)
ರೇನೆ ದೇಕಾರ್ತ
(ಕ)
ಲಿಯೋಪಾಲ್ಡ ವ್ಹಾನ್ ರಾಂಕೆ
(ಡ) ಕಾರ್ಲಮಾರ್ಕ್ಸ್
(ಇ) ಮೈಕೆಲ್ ಪುಕೊ
(ಈ) ಲುಸಿಯಾಫೇಬರ
(ಉ) ಜಾರ್ಜ
ವಿಲ್ಹೆಮ್ ಫ್ರೆಡರಿಕ್
(ಊ) ಹಿರೋಡೊಟಸ್
ಪ್ರ. 6. ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
(1 ) ಕಾರ್ಲಮಾರ್ಕ್ಸನ ವರ್ಗಸಿದ್ದಾಂತವನ್ನು
ಸ್ಪಷ್ಟಪಡಿಸಿರಿ.
ಉತ್ತರ ;ಇತಿಹಾಸವು
ಅಮೂರ್ತ ಕಲ್ಪನೆಗಳದ್ದಾಗಿದಾರೆ ಅದು ಜೀವಂತ ಮನುಷ್ಯರದಾಗಿರುತ್ತದೆ. ಮನುಷ್ಯ
ಮನುಷ್ಯರಲ್ಲಿಯ ಬಾಂಧವ್ಯವೂ ಅವರ ಮೂಲಭೂತ ಆವಶ್ಯಕತೆಗಳನ್ನು ಪೂರೈಸುವ ಸಲುವಾಗಿ
ಲಭ್ಯವಿರುವ ಉತ್ಪಾದನೆಯ ಸಾಧನಗಳ ಸ್ವರೂಪದ ಮೇಲೆ ಮತ್ತು ಒಡೆತನದ ಮೇಲೆ ಅವಲಂಬಿಸಿರುತ್ತದೆ.
ಸಮಾಜದಲ್ಲಿಯ ವಿವಿಧ ಘಟಕಗಳಿಗೆ ಈ ಸಾಧನಗಳು ಸಮಪ್ರಮಾಣದಲ್ಲಿ ಲಭ್ಯವಾಗುವುದಿಲ್ಲ. ಅದರಿಂದ
ವರ್ಗಗಳ ಮೇಲೆ ಆಧಾರಿತ ಸಮಾಜದ ವಿಷಮ ವಿಭಜನೆಯಾಗಿ ವರ್ಗಸಂಘರ್ಷ ನಿರ್ಮಾಣವಾಗುತ್ತದೆ. ಮಾನವನ
ಇತಿಹಾಸವು ಇಂತಹ ವರ್ಗಸಂಘರ್ಷದ ಇತಿಹಾಸವಾಗಿದ್ದು ಯಾವ ವರ್ಗದ ವಶದಲ್ಲಿ ಉತ್ಪಾದನೆಯ ಸಾಧನಗಳು
ಇರುತ್ತವೆಯೋ ಅದು ಇತರ ವರ್ಗಗಳ ಆರ್ಥಿಕ ಶೋಷಣೆ ಮಾಡುತ್ತದೆ ಎಂದು ಕಾರ್ಲ್ ಮಾರ್ಕ್ಸನು ತನ್ನ ‘ದಾಸ ಕ್ಯಾಪಿಟಲ್ ಎಂಬ ಗ್ರಂಥದಲ್ಲಿ ಪ್ರತಿಪಾದಿಸಿದ್ದಾನೆ.
(2) ಆಧುನಿಕ ಇತಿಹಾಸಲೇಖನ ಪದ್ಧತಿಯ ನಾಲ್ಕು ವೈಶಿಷ್ಟ್ಯಗಳು
ಯಾವವು?
ಉತ್ತರ : ಆಧುನಿಕ ಇತಿಹಾಸ ಲೇಖನ ಪದ್ಧತಿಯ
ವೈಶಿಷ್ಟ್ಯಗಳು: 1) ಆಧುನಿಕ ಇತಿಹಾಸ ಲೇಖನ ಪದ್ಧತಿಯ ಆರಂಭ ಯೋಗ್ಯ
ಪ್ರಶ್ನೆಗಳ ಮಂಡನೆಯೊಂದಿಗೆ ಶಾಸ್ತ್ರಶುದ್ಧವಾದ ಪದ್ದತಿಯಿಂದ ಆಗುತ್ತದೆ. 2) ಈ ಪ್ರಶ್ನೆಗಳು
ಮಾನವೀ ಸಮಾಜ ಘಟಕಗಳಿಂದ ವಿಶಿಷ್ಟ ಕಾಲಾವಧಿಯಲ್ಲಿ ಮಾಡಿದ ಕೃತಿಗಳ ವಿಷಯವಾಗಿ ಇರುತ್ತದೆ. ಇತಿಹಾಸದಲ್ಲಿ
ಆ ಕೃತಿಗಳ ಸಂಬಂಧ ದೈವಿ ಘಟಕದೊಂದಿದೆ ಅಥವಾ ಕಥೆ –ದಂತಕತೆಯೊಂದಿಗೆ ಇರಲಾರದು. 3) ಇತಿಹಾಸದಲ್ಲಿಯ
ಈ ಪ್ರಶ್ನೆಗಳಿಗೆ ವಿಶ್ವಾಸಾರ್ಹ ಪುರಾವೆಗಳ ಆಧಾರವಿರುತ್ತವೆ. ಅದರಿಂದಾಗಿ ಇತಿಹಾಸದ ರಚನೆಯು
ತರ್ಕಬದ್ದವಾಗಿರುತ್ತದೆ. 4) ಮಾನವನು ಮಾಡಿದ ಭೂತಕಾಲಿನ ಕೃತಿಯ ಆಧಾರದಿಂದ ಇತಿಹಾಸ ವಿಷಯದಲ್ಲಿ
ಮಾನವನ ಪ್ರಗತಿಯನ್ನು ತಿಳಿದುಕೊಳ್ಳಲಾಗುತ್ತದೆ.
(3) ಸ್ತ್ರೀವಾದಿ ಇತಿಹಾಸಲೇಖನ ಎಂದರೇನು?
ಉತ್ತರ ;ಸ್ತ್ರೀವಾದಿ
ಲೇಖನ ಎಂದರೆ ಮಹಿಳೆಯರ ದೃಷ್ಟಿಕೋನದಿಂದ ಮಾಡಿದ ಇತಿಹಾಸದ ಪುನರ್ರಚನೆ. ಸೀಮೊ-ದ-ಬೋವ್ಹಾ ಎಂಬ
ಫ್ರೆಂಚ್ ವಿದುಷಿಯೂ ಸ್ತ್ರೀವಾದದ ಮೂಲಭೂತ ನಿಲುವನ್ನು ಸಿಡ್ಡಪಡಿಸಿದಳು. ಸ್ತ್ರೀವಾದಿ ಇತಿಹಾಸ
ಲೇಖನದಲ್ಲಿ ಮಹಿಳೆಯರ ಸಮಾವೇಶ ಮಾಡುವುದರ ಜೊತೆಗೆ ಇತಿಹಾಸ ಲೇಖನದ ಕ್ಷೇತ್ರದಲ್ಲಿ ಪುರುಷಪ್ರಧಾನ
ದೃಷ್ಟಿಕೋನದ ಪುನರ್ವಿಚಾರ ಮಾಡುವುದಕ್ಕೆ ಮಹತ್ವ ನೀಡಲಾಯಿತು. ಆ ನಂತರ ಮಹಿಳೆಯರ ಜೀವನಕ್ಕೆ
ಸಂಬಂಧಿತ ನೌಕರಿ, ರೋಜಗಾರು, ಟ್ರೇಡ್
ಯುನಿಯನ್, ಅವರ ಸಲುವಾಗಿ ಕೆಲಸ ಮಾಡುವ ಸಂಸ್ಥೆಗಳು, ಮಹಿಳೆಯರ ಕೌಟುಂಬಿಕ ಆಯುಷ್ಯ ಮುಂತಾದ ವಿವಿಧ ಆಯಾಮುಗಳ ಬಗ್ಗೆ ಸವಿಸ್ತಾರ ವಿಚಾರ
ಮಾಡುವ ಸಂಶೋಧನೆಗಳು ಆರಂಭವಾದವು. 1990ರ ನಂತರ ‘ಮಹಿಳೆಯರನ್ನು
ಸ್ವತಂತ್ರ ವರ್ಗವೆಂದು ಮನ್ನಿಸಿ ಇತಿಹಾಸ ಲೇಖನಕ್ಕೆ ಮಹತ್ವ ನೀಡಿದ್ದು ಕಂಡು ಬರುತ್ತದೆ.
(4) ಲಿಯೋಪಾಲ್ಡ ವ್ಹಾನ ರಾಂಕೆಯ ಇತಿಹಾಸ ವಿಷಯದ
ದೃಷ್ಟಿಕೋನವನ್ನು ಸ್ಪಷ್ಟಪಡಿಸಿರಿ.
ಉತ್ತರ: 19ನೇ ಶತಮಾನದಲ್ಲಿ ಬರ್ಲಿನ್
ವಿಶ್ವವಿದ್ಯಾಲಯದಲ್ಲಿಯ ಇತಿಹಾಸಸಂಶೋಧಕ ಲಿಯೋಪಾಲ್ಡ್ ವ್ಹಾನ ರಾಂಕೆ ಇವನು ಇತಿಹಾಸ ಸಂಶೋಧನೆಯ
ಚಿಕಿತ್ಸಕ ಪದ್ಧತಿ ಹೇಗೆ ಇರಬೇಕು ಎಂಬುದನ್ನು ಹೇಳಿದನು. ಮೂಲ ದಸ್ತಾವೇಜುಗಳ ಆಧಾರದಿಂದ ದೊರಕಿದ
ಮಾಹಿತಿ ಅತ್ಯಂತ ಮಹತ್ವದ್ದಾಗಿರುತ್ತದೆ ಎಂಬುದಕ್ಕೆ ಅವನು ಮಹತ್ವ ನೀಡಿದನು. ಅದರಂತೆ ಐತಿಹಾಸಿಕ
ಘಟನೆಗಳಿಗೆ ಸಂಬಂಧಿತವಾಗಿರುವ ಎಲ್ಲ ಪ್ರಕಾರದ ಕಾಗದಪತ್ರಗಳು ಮತ್ತು ದಸ್ತಾವೇಜುಗಳನ್ನು
ಆಮೂಲಾಗ್ರವಾಗಿ ಶೋಧಿಸುವುದು ಅತ್ಯಂತ ಮಹತ್ವದ್ದಾಗಿರುತ್ತದೆ ಎಂದು ಅವನು ಹೇಳಿದನು. ಇಂಥ ಪದ್ಧತಿಯಿಂದ
ಸತ್ಯದವರೆಗೆ ತಲುಪುವುದು ಸಾಧ್ಯವಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದನು. ಇತಿಹಾಸ
ಲೇಖನದಲ್ಲಿಯ ಕಾಲ್ಪನಿಕತೆಯನ್ನು ಅವನು ಟೀಕಿಸಿದನು. ಅವನು ಜಾಗತಿಕ ಇತಿಹಾಸ ರಚನೆಗೆ ಮಹತ್ವ
ನೀಡಿದನು. “The Theory and Practice of History” ಮತ್ತು “The Sicret
of World History” ಈ ಗ್ರಂಥಗಳಲ್ಲಿ ಅವನ ವಿವಿಧ ಲೇಖನಗಳ ಸಂಕಲನೇ ಇದೆ.
ಉಪಕ್ರಮ:
(1) ನಿಮ್ಮ ಮೆಚ್ಚಿನ ಯಾವುದೇ ವಿಷಯದ ವಿಸ್ತ್ರತ
ಮಾಹಿತಿಯನ್ನು ಪಡೆಯಿರಿ ಮತ್ತು ಅದರ ಇತಿಹಾಸವನ್ನು ಬರೆಯಿರಿ.
* ಪೆನ್ನಿನ (ಲೆಕ್ಕಣಿಕೆಯ) ಇತಿಹಾಸ.
* ಮುದ್ರಣಕಲೆಯ ಇತಿಹಾಸ
* ಗಣಕಯಂತ್ರದ ಇತಿಹಾಸ
2. ಇತಿಹಾಸ ಲೇಖನ:
ಭಾರತೀಯ ಪರಂಪರೆ
ಪ್ರ. 1. ಅ) ಕೆಳಗೆ ಕೊಟ್ಟ ಪರ್ಯಾಯಗಳಲ್ಲಿ ಯೋಗ್ಯ
ಪರ್ಯಾಯವನ್ನು ಆಯ್ದುಕೊಂಡು ವಿಧಾನಗಳನ್ನು ಪೂರ್ಣಮಾಡಿರಿ.
1. ......... ಇವರು ಭಾರತೀಯ ಪುರಾತತ್ವ
ಸರ್ವೇಕ್ಷಣ ವಿಭಾಗದ ಪ್ರಥಮ ಮುಖ್ಯ ಸಂಚಾಲಕರಾಗಿದ್ದರು.
(1) ಅಲೆಕ್ಝಾಂಡರ
ಕನಿಂಗಹ್ಯಾಮ್
(2) ವಿಲ್ಯಮ
ಜೋನ್ಸ್
(3) ಜಾನ
ಮಾರ್ಶಲ್
(4) ಫ್ರೇಡರಿಕ್
ಮ್ಯಾಕ್ಸ್ಮುಲ್ಲರ್
2.
................... ಇವನು ಹಿತೋಪದೇಶ ಎಂಬ ಸಂಸ್ಕೃತ ಗ್ರಂಥವನ್ನು
ಜರ್ಮನ್ ಭಾಷೆಯಲ್ಲಿ ಅನುವಾದ ಮಾಡಿದನು.
(1) ಜೇಮ್ಸ್
ಮಿಲ
(2) ಫ್ರೇಡರಿಕ್
ಮ್ಯಾಕ್ಸ್ಮುಲ್ಲರ್
(3) ಮೌಂಟ್
ಸ್ಟುವರ್ಟ್ ಎಲ್ಪಿನ್ ಸ್ಟನ್
(4) ಜಾನ
ಮಾರ್ಶಲ್
ಬ) ಕೆಳಗಿನವುಗಳಲ್ಲಿ ತಪ್ಪಾದ ಜೋಡಿಯನ್ನು ತಿದ್ದಿ
ಮತ್ತೆ ಬರೆಯಿರಿ.
(1) ಹೂ ವೇರ ದ ಶೂದ್ರಾಜ - ವಂಚಿತರ ಇತಿಹಾಸ
(2) ಸ್ತ್ರೀ-ಪುರುಷ ತುಲನಾ - ಸ್ತ್ರೀವಾದಿ ಲೇಖನ
(3) ದ ಇಂಡಿಯನ್ ವಾರ ಆಫ ಇಂಡಿಪೆಂಡನ್ನ 1857 -ಮಾರ್ಕ್ಸವಾದಿ ಇತಿಹಾಸ
(4) ಗ್ರ್ಯಾಂಟ ಡಫ್ - ವಸಾಹತುವಾದಿ ಇತಿಹಾಸ
ಉತ್ತರ: (3) ತಪ್ಪು, ಇದು ರಾಷ್ಟ್ರವಾದಿ ಇತಿಹಾಸದ ಉದಾಹರಣೆಯಾಗಿದೆ. ಇದನ್ನು ವಿನಾಯಕ ದಾಮೋದರ ಸಾವರಕರ ಬರೆದಿರುತ್ತಾರೆ.
ಪ್ರ.
2. ಕೆಳಗಿನ ವಿಧಾನಗಳನ್ನು ಕಾರಣಸಹಿತ ಸ್ಪಷ್ಟಪಡಿಸಿರಿ
(1) ಪ್ರಾದೇಶಿಕ ಇತಿಹಾಸಲೇಖನಕ್ಕೆ ಚಾಲನೆ
ದೊರೆಯಿತು.
ಉತ್ತರ: ರಾಷ್ಟ್ರವಾದಿ ಇತಿಹಾಸಲೇಖನದ ಪ್ರಭಾವದಿಂದಾಗಿ
ಪ್ರದೇಶಿಕ ಇತಿಹಾಸಲೇಖನಕ್ಕೂ ಚಾಲನೆ ದೊರೆಯಿತು. ದಕ್ಷಿಣ ಭಾರತದ ಭೌಗೋಳಿಕ ವೈಶಿಷ್ಟ್ಯಗಳ ಕಡೆಗೆ
ಮತ್ತು ಇತಿಹಾಸದ ಕಡೆಗೆ ಸ್ವತಂತ್ರವಾಗಿ ಇತಿಹಾಸಕಾರರ
ಗಮನ ಸೆಳೆಯಲಾಯಿತು.
(2) ಬಖರ ಇದು ಐತಿಹಾಸಿಕ ಸಾಹಿತ್ಯದಲ್ಲಿಯ ಒಂದು
ಮಹತ್ವದ ಪ್ರಕಾರವಾಗಿದೆ.
ಉತ್ತರ: ಬಖರ ಅಂದರೆ ಖಬರ ಅಥವಾ ಚರಿತ್ರೆ ಲೇಖನ.
ವೀರಯೋಧರ ಸ್ತುತಿ, ಐತಿಹಾಸಿಕ ಘಟನೆಗಳು,
ಯುದ್ಧಗಳು, ಮಹಾನ ವ್ಯಕ್ತಿಗಳ ಚರಿತ್ರೆಗಳು ಇತ್ಯಾದಿ ವಿಷಯಗಳ ಲೇಖನವು
ನಮಗೆ ಬಖರಗಳಲ್ಲಿ ಓದಲು ಸಿಗುತ್ತದೆ. ಮರಾಠಿ ಭಾಷೆಯಲ್ಲಿ ಸಭಾಸದ ಬಖರದಲ್ಲಿ ಛತ್ರಪತಿ ಶಿವಾಜಿ
ಮಹಾರಾಜರ ಆಡಳಿತದ ಮಾಹಿತಿ ದೊರೆಯುತ್ತದೆ. ಭಾವುಸಾಹೇಬಾಂಚಿ ಬಖರದಲ್ಲಿ ಪಾನಿಪತ ಯುದ್ಧದ ವರ್ಣನೆ
ಇದೆ. ಹೀಗೆ ಬಖರ ಇದು ಐತಿಹಾಸಿಕ ಸಾಹಿತ್ಯದಲ್ಲಿಯ ಒಂದು ಮಹತ್ವದ ಪ್ರಕಾರವಾಗಿದೆ.
ಪ್ರ. 3. ಕೆಳಗಿನ ಪ್ರಶ್ನೆಗಳಿಗೆ 25ರಿಂದ 30 ಶಬ್ದಗಳಲ್ಲಿ ಉತ್ತರ ಬರೆಯಿರಿ.
(1) ಮುಘಲ ಸಾಮ್ರಾಟನಾದ ಬಾಬರನ
ಆತ್ಮಚರಿತ್ರೆಯಲ್ಲಿ ಯಾವ ಸಂಗತಿಗಳ ಸಮಾವೇಶವಿದೆ?
ಉತ್ತರ:ಮುಘಲ ಸಾಮ್ರಾಟ ಬಾಬರನ ಆತ್ಮ ಚರಿತ್ರೆ ‘ತುಝಕ-ಇ-ಬಾಬರಿ’ಯಲ್ಲಿ ಅವನು ಮಾಡಿದ ಯುದ್ಧಗಳ ವರ್ಣನೆಯಿದೆ.
ಅದರ ಜೊತೆಗೆ ಅವನು ಪ್ರವಾಸ ಮಾಡಿದ ಪ್ರದೇಶಗಳ ಮತ್ತು ಪಟ್ಟಣಗಳ ವರ್ಣನೆ, ಅಲ್ಲಿಯ ಸ್ಥಾನಿಕ ಅರ್ಥವ್ಯವಸ್ಥೆ ಮತ್ತು ರೂಢಿ-ಸಂಪ್ರದಾಯಗಳು, ವನಸ್ಪತಿ ಸೃಷ್ಟಿ ಇವುಗಳ ಬಗ್ಗೆ ಸೂಕ್ಷ್ಮವಾಗಿ ಮಾಡಿದ ನಿರೀಕ್ಷಣೆಗಳ ಸಮಾವೇಶ ಕೂಡ ಈ
ಚರಿತ್ರೆಯಲ್ಲಿ ಇದೆ.
(2) ರಾಷ್ಟ್ರವಾದಿ ಇತಿಹಾಸಲೇಖನದಲ್ಲಿ
ಸ್ವಾತಂತ್ರ್ಯ ವೀರ ಸಾವರಕರ ಇವರ ಕೊಡುಗೆ ಯಾವುದು?
ಉತ್ತರ:ಭಾರತೀಯರು ಬ್ರಿಟಿಷರ ವಿರುದ್ದ ಸ್ವತಂತ್ಯ್ರ
ಹೋರಾಟಕ್ಕೆ ಪ್ರೇರಣೆ ನೀಡುವ ಸಲುವಾಗಿ ರಾಷ್ಟ್ರವಾದಿ ಇತಿಹಾಸಲೇಖನದ ಉಪಯೋಗವಾಯಿತು. ಅದರಲ್ಲಿ
ಸ್ವರಾಂತ್ರವಿರ ವಿ. ಡಾ. ಸವರತರರು ಬರೆದ ‘ದ ಇಂಡಿಯನ್ ವಾರ
ಆಫ್ ಇಂಡಿಪೆಂಡಾನ್ಸ್ 1857’ (1857ಚೆ ‘ಸ್ವತಂತ್ಯ್ರ
ಸಮರ’) ಪುಸ್ತಕವು ವಿಶೇಷ ಮಹತ್ವದ್ದಾಗಿದೆ.
ಪ್ರ. 4 . ಕೆಳಗಿನ ಪ್ರಶ್ನೆಗಳಿಗೆ ಉತ್ತರ
ಬರೆಯಿರಿ.
(1) ಮಾರ್ಕ್ಸವಾದಿ ಇತಿಹಾಸಲೇಖನ ಎಂದರೇನು?
ಉತ್ತರ; ಮಾರ್ಕ್ಸವಾದಿ ಇತಿಹಾಸಕಾರರ ಲೇಖನಗಳಲ್ಲಿ ಅರ್ಥವ್ಯವಸ್ಥೆಯಲ್ಲಿಯ ಉತ್ಪಾದನೆಯ ಸಾಧನಗಳು, ಪದ್ದತಿ ಮತ್ತು ಉತ್ಪಾದನೆಯ ಪ್ರಕ್ರಿಯಲ್ಲಿಯ ಮಾನವೀ ಸಂಬಂಧ ಇವುಗಳ ವಿಚಾರವೂ
ಕೇಂದ್ರಸ್ಥಾನದಲ್ಲಿತ್ತು. ಸರ್ವಸಾಮಾನ್ಯ ಜನತೆಯ ಮೇಲೆ ಪ್ರತಿಯೊಂದು ಸಾಮಾಜಿಕ ಘಟನೆಯು ಯಾವ
ಪರಿಣಾಮ ಬಿರುತ್ತದೆಯೆಂಬುದರ ವಿಶ್ಲೇಷಣೆ ಮಾಡುವುದು ಮರ್ಕ್ಸವಾದಿ ಇತಿಹಾಸಲೇಖನದ ಮಹತ್ವದ
ಸೂತ್ರವಾಗಿತ್ತು. ಮರ್ಕ್ಸವಾದಿ ಇತಿಹಾಸಕರರು ಜಾತಿವ್ಯವಸ್ಥೆಯಲ್ಲಿ ಆಗುತ್ತ ಹೋದ ಬದಲಾವಣೆಗಳ
ಅಭ್ಯಾಸ ಮಾಡಿದರು. ಭಾರತದಲ್ಲಿ ಮರ್ಕ್ಸವಾದಿ ಇತಿಹಾಸಲೇಖನ ಪದ್ದತಿಯ ಬಳಕೆಯನ್ನು ಪ್ರಭಾವಶೀಲ
ರೀತಿಯಿಂದ ಮಾಡಿದ ಇತಿಹಾಸಕಾರರಲ್ಲಿ ದಾವೊದರ ಧರ್ಮಾನಂದ ಕೊಸಂಬಿ, ಕಾಮ್ರೇಡ
ಶ್ರೀಪಾದ ಅಮೃತ ಡಾಂಗೆ, ರಾಮಶರಣ ಶರ್ಮಾ, ಕಾಮ್ರೇಡ
ಶ ರದ ಪಾಟೀಲ ಮುಂತಾದವರ ಕೊಡುಗೆಯೂ ಮಹತ್ವದ್ದಾಗಿವೆ. ಡಾಂಗೆ ಇವರು ಭಾರತೀಯ ಕಮ್ಯೂನಿಷ್ಟ ಪಕ್ಷದ
ಸಂಸ್ಥಾಪಕ ಸದ್ಯಸಾರಲ್ಲಿ ಒಬ್ಬರಾಗಿದ್ದರು. ಅವರ ‘ಪ್ರಿಮಿಟಿವ್ಹ
ಕಮ್ಯೂನಿಝಮ್ ಟು ಸ್ಲೇವ್ಹರಿ’
ಎಂಬ ಪುಸ್ತಕವು ಮಾರ್ಕ್ಸವಾದಿ ಇತಿಹಾಸಲೇಖನದ ಉದಾಹರಣೆಯಾಗಿದೆ.
(2) ಇತಿಹಾಸಾಚಾರ್ಯ ವಿ.ಕಾ. ರಾಜವಾಡೆಯವರ
ಕೊಡುಗೆಯನ್ನು ಇತಿಹಾಸಲೇಖನದಲ್ಲಿಯ ಸ್ಪಷ್ಟಪಡಿಸಿರಿ.
ಉತ್ತರ: ಇತಿಹಾಸ ಲೇಖನ, ಭಾಷಾಶಾಸ್ತ್ರ, ವ್ಯುತ್ಪತ್ತಿ,
ವ್ಯಾಕರಣ ಇತ್ಯಾದಿ ಅನೇಕ ವಿಷಯಗಳ ಮೇಲೆ ಮೂಲಭೂತ ಸಂಶೋಧನೆ ಮಾಡುವ ಮತ್ತು ಮರಾಠಿ ಭಾಷೆಯಲ್ಲಿ
ಲೇಖನ ಮಾಡುವ ಇತಿಹಾಸಕಾರರೆಂದು ವಿ.ಕಾ. ರಾಜವಾಡೆ ಪರಿಚಿತರಾಗಿದ್ದಾರೆ. ಇನ್ನ ಇತಿಹಾಸವನ್ನು
ನಾವು ಬರೆಯಬೇಕು ಎಂದು ಅವರು ಸಮರ್ಥಿಸಿದರು. ಮರಾಠರ ಇತಿಹಾಸದ ಸಾಧನಗಳು’ ಎಂಬ ಶೀರ್ಷಕವಿರುವ ಗ್ರಂಥದ 22 ಸಂಪುಟಗಳನ್ನು ಅವರು ಸಂಪಾದಿಸಿದರು. ಅದರ
ಪ್ರಸ್ತಾವನೆಯಲ್ಲಿ “ಇತಿಹಾಸವೆಂದರೆ ಭೂತಕಾಲಿನ ಸಮಾಜದ ಸರ್ವಾಂಗೀಣ
ಸಮಗ್ರ ಜೀವನದರ್ಶನ, ಕೇವಲ ರಾಜಕೀಯ ಸ್ಥಿತ್ಯಂತರಗಳು, ಅಧಿಕಾರ ಪಡೆಯಲು ಮಾಡುವ ಕಾರಸ್ಥಾನಗಳು ಹಾಗೂ ಯುಧ್ಧಗಳ ವೃತ್ತಾಂತವಲ್ಲ.” ಎಂಬ ಅವರ
ಅಭಿಪ್ರಾಯವಾಗಿತ್ತು. ಕೇವಲ ವಿಶ್ವಾಸಾರ್ಹ ಕಾಗದ ಪಾತ್ರಗಳ ಆಧಾರದಿಂದ ಇತಿಹಾಸವನ್ನು ಬರೆಯಬೇಕು, ಎಂಬುದುಡ್ ಅವರ ಅಗ್ರಹವಾಗಿತ್ತು.
ಪ್ರ. 3. ಕೆಳಗಿನ ಕೋಷ್ಟಕವನ್ನು ಪೂರ್ಣಮಾಡಿರಿ.
ಜೇಮ ಮಿಲ್ |
ದ
ಹಿಸ್ಟರಿ ಆಫ್ ಬ್ರಿಟಿಷ ಇಂಡಿಯಾ |
ಜೇಮ್ಸ್ ಗ್ರಾಂಟ್ ಡಫ್
|
ಎ
ಹಿಸ್ಟರಿ ಆಫ್ ದ ಮರಾಠಾಜ್ |
ಮೌಂಟ
ಸ್ಟುವರ್ಟ ಎಲ್ಫಿನ್ಸ್ಟನ್ |
ದ ಹಿಸ್ಟರಿ ಆಫ್ ಇಂಡಿಯಾ |
ಶ್ರೀ. ಆ. ಡಾಂಗೆ (A.S. ಡಾಂಗೆ) |
ಪ್ರಿಮಿಟಿವ್
ಕಮ್ಯೂನಿಝಮ್ ಟು ಸ್ಲೇವ್ಹರಿ |
ಡಾ.
ಬಾಬಾಸಾಹೇಬ ಅಂಬೇಡಕರ |
ಹೂ ವೇರ ದ ಶೂದ್ರಾಜ |
ಮಹಾತ್ಮಾ
ಜ್ಯೋತಿಬಾ ಫುಲೆ |
ಗುಲಾಮಗಿರಿ |
ಪ್ರ.
5. ಕೆಳಗಿನ ಕಲ್ಪನಾಚಿತ್ರವನ್ನು ಪೂರ್ಣಮಾಡಿರಿ.
ಇತಿಹಾಸಲೇಖನದ
ಉದ್ದೇಶ |
ಬಾಬರನು
ಮಾಡಬೇಕಾದ ಯುದ್ಧದ ವರ್ಣನೆಗಳು |
ಕಾಶ್ಮೀರದ
ಇತಿಹಾಸ |
ಛತ್ರಪತಿ ಶಿವಾಜಿ ಮಹಾರಾಜರ ಆಡಳಿತ ಮಾಹಿತಿ |
ಝಿಯಾಉದ್ದೀನ
ಬರನಿ |
ಮುಘಲ ಸಾಮ್ರಾಟ ಬಾಬರ |
ಕಲ್ಹಣ
|
ಕೃಷ್ಣಾಜಿ ಅನಂತ ಸಭಾಸದ |
ತಾರೀಖ್-ಇ -ಪಿರುಝ್ |
ತುಝಕ್ ಇ ಬಾಬರಿ |
ರಾಜತರಂಗಿಣಿ |
ಸಭಾಸದ ಬಖರ
|
ಪ್ರ. 6. ಕೆಳಗಿನ ಕಲ್ಪನೆಗಳನ್ನು
ಸ್ಪಷ್ಟಪಡಿಸಿರಿ.
(1) ಪೌರ್ವಾತ್ಯ ಇತಿಹಾಸಲೇಖನ: ಯುರೋಪಿನಲ್ಲಿಯ ಅಭ್ಯಾಸಕರಲ್ಲಿ
ಪೌರ್ವಾತ್ಯ ಸಂಸ್ಕೃತಿ ಮತ್ತು ದೇಶಗಳ ವಿಷಯವಾಗಿ ಕುತೂಹಲ ಜಾಗೃತವಾಗಿತ್ತು. ಅವುಗಳ ಬಗ್ಗೆ ಆದರ
ಮತ್ತು ಉತ್ಸುಕತೆಯಿರುವ ಕೆಲವು ಅಭ್ಯಾಸಕರು ಯೂರೋಪಿಯನ್ ಭಾಷೆಗಳಲ್ಲಿಯ ಗುಣ ಸಮಾನತೆಯ ಅಭ್ಯಾಸ
ಮಾಡಿದರು. ಪೌರ್ವಾತ್ಯ ವಿದ್ವಾಂಸರು ವೈದಿಕ ವಾಙ್ಮಯ ಮತ್ತು ಸಂಸ್ಕೃತ ಸಾಹಿತ್ಯದ ಅಭ್ಯಾಸ
ಮಾಡುವುದಕ್ಕೆ ಮಹತ್ವ ನೀಡಿದರು. ಇದರಿಂದ ಈ ಭಾಷೆಗಳ ಜನನಿಯಾಗಿರುವ ಒಂದು ಪ್ರಾಚೀನ
ಇಂಡೋ-ಯೂರೋಪಿಯನ್ ಭಾಷೆ ಅಸ್ತಿತ್ವದಲ್ಲಿತ್ತು ಎಂಬ ಕಲ್ಪನೆಯನ್ನು ಮಂಡಿಸಲಾಯಿತು.
(2) ರಾಷ್ಟ್ರವಾದಿ ಇತಿಹಾಸಲೇಖನ: 19ನೇ
ಮತ್ತು 20ನೇ ಶತಮಾನಗಳಲ್ಲಿ ಇಂಗ್ಲೀಷ್ ಶಿಕ್ಷಣ ಕಲಿತು ಮುಂದೆ ಬಂದ ಭಾರತೀಯ ಇತಿಹಾಸಕಾರರ
ಲೇಖನಗಳಲ್ಲಿ ಭಾರತದ ಪ್ರಾಚೀನ ವೈಭವದ ಅಭಿಮಾನ ಮತ್ತು ಭಾರತೀಯರ ಆತ್ಮಪ್ರಜ್ಞೆಜಾಗೃತಗೊಳಿಸುವುದರ
ಕಡೆಗೆ ಒಲವು ಕಾಣಿಸುತ್ತದೆ. ಅವರ ಲೇಖನಗಳಿಗೆ ರಾಷ್ಟ್ರವಾದಿ ಇತಿಹಾಸ ಲೇಖನ ಎಂದು
ಕರೆಯಲಾಗುತ್ತದೆ.
(3) ವಂಚಿತರ ಇತಿಹಾಸ: ವಂಚಿತ
ಸಮೂಹಗಳ ಇತಿಹಾಸಲೇಖನದ ಆರಂಭ ಮಾರ್ಕ್ಸವಾದಿ ಇತಿಹಾಸಲೇಖನದ ಪರಂಪರೆಯೊಳಗಿಂದಲೇ ಆಯಿತೆಂದು
ಹೇಳಬಹುದು. ಇತಿಹಾಸ ಲೇಖನದ ಆರಂಭವನ್ನು ಸಮಾಜದ ಕೆಳಭಾಗದಲ್ಲಿರುವ ಸರ್ವಸಾಮಾನ್ಯ ಜನತೆಯ
ಸ್ತರದಿಂದ ಮಾಡಬೇಕು ಎಂಬ ಕಲ್ಪನೆಯನ್ನು ಆಂಟೊನಿಯೋ ಗ್ರಾಮಚಿ ಎಂಬ ಇಟಾಲಿಯನ್ ತತ್ವಜ್ಞಾನಿ
ಮಂಡಿಸಿದನು. ವಂಚಿತರ ಇತಿಹಾಸ ಬರೆಯುವ ಸಲುವಾಗಿ ಜನಪರಂಪರೆಯನ್ನು ಒಂದು ಮಹತ್ವದ ಸಾಧನವೆಂದು
ತಿಳಿಯಲಾಗಿದೆ. ಅದಕ್ಕಿಂತ ಮೊದಲೇ ಭಾರತದಲ್ಲಿ ವಂಚಿತರ ಇತಿಹಾಸದ ವಿಚಾರವು ಮಹಾತ್ಮಾ ಜ್ಯೋತಿಬಾ ಫುಲೆ
ಮತ್ತು ಡಾ. ಬಾಬಾಸಾಹೇಬ ಅಂಬೇಡಕರ ಇವರ ವಿಚಾರದಲ್ಲಿ, ಲೇಖನದಲ್ಲಿ
ಮತ್ತು ಪ್ರತ್ಯಕ್ಷ ಕೃತಿಗಳಲ್ಲಿ ವ್ಯಕ್ತವಾಗಿದೆ. ಮಹಾತ್ಮಾ ಫುಲೆ ‘ಗುಲಾಮಗಿರಿ
ಎಂಬ ಪುಸ್ತಕದಲ್ಲಿ ಶುದ್ರಾತಿಶೂದ್ರರ ಇತಿಹಾಸವನ್ನು ಹೊಸದಾಗಿ ಬಿಡಿಸಿ ತೋರಿಸಿದರು. ಧರ್ಮದ
ಹೆಸರಿನಲ್ಲಿ ಮಹಿಳೆರ, ಶೂದ್ರರ ಮತ್ತು ಅತಿ ಶೂದ್ರರ ಮೇಲಾಗುವ ಶೋಷಣೆಯ
ಕಡೆಗೆ ಗಮನ ಸೆಳೆದರು.
ಉಪಕ್ರಮ:
ಪಾಠದಲ್ಲಿ
ಉಲ್ಲೇಖಿಸಲಾದ ವಿವಿಧ ಇತಿಹಾಸಕಾರರ ಕಾರ್ಯಗಳ ಮಾಹಿತಿಯನ್ನು ನೀಡುವ ಸಚಿತ್ರ ಹಸ್ತಲಿಖಿತವನ್ನು
ಇಂಟರ್ನೆಟ್ ಸಹಾಯದಿಂದ ತಯಾರಿಸಿರಿ.
3. ಅನ್ವಯಿಕ ಇತಿಹಾಸ
ಪ್ರ. 1. ಅ) ಕೆಳಗೆ ಕೊಟ್ಟ ಪರ್ಯಾಯಗಳಲ್ಲಿ ಯೋಗ್ಯ
ಪರ್ಯಾಯವನ್ನು ಆಯ್ದುಕೊಂಡು ವಿಧಾನಗಳನ್ನು ಪೂರ್ಣಮಾಡಿರಿ.
(1) ಜಗತ್ತಿನಲ್ಲಿನ ಅತ್ಯಂತ ಪ್ರಾಚೀನ
ಸಂಗ್ರಹಾಲಯವು ......... ಎಂಬ ಪ್ರಾಚೀನ ನಗರದ ಉತ್ಖನನ ಮಾಡುವಾಗ ದೊರಕಿತು.
(ಅ)ದಿಲ್ಲಿ
(ಬ)
ಹರಪ್ಪಾ (ಕ) ಉರ (ಡ) ಕೋಲಕಾತಾ
(2) ಭಾರತದ ರಾಷ್ಟ್ರೀಯ ಅಭಿಲೇಖಾಗಾರವು..........
ಯಲ್ಲಿದೆ.
(ಅ) ದಿಲ್ಲಿ (ಬ) ಕೋಲಕಾತಾ (ಕ) ಮುಂಬಯಿ (ಡ)
ಚೆನ್ನೈ
ಬ) ಕೆಳಗಿನವುಗಳಲ್ಲಿ ತಪ್ಪಾದ ಜೋಡಿಯನ್ನು ತಿದ್ದಿ
ಮತ್ತೆ ಬರೆಯಿರಿ.
(1) ಕುಟಿಯಟ್ಟಮ್- ಕೇರಳದಲ್ಲಿಯ ಸಂಸ್ಕೃತ ನಾಟ್ಯ
ಪರಂಪರೆ
(2) ರಮ್ಮನ - ಪಶ್ಚಿಮ ಬಂಗಾಲದಲ್ಲಿಯ ನೃತ್ಯ
(3) ರಾಮಲೀಲಾ - ಉತ್ತರಭಾರತದಲ್ಲಿಯ ಸಾದರೀಕರಣ
(4) ಕಾಲಬೇಲಿಯಾ- ರಾಜಸ್ಥಾನದ ಜಾನಪದ ಸಂಗೀತ ಮತ್ತು ಜಾನಪದ ನೃತ್ಯ
ಉತ್ತರ: ತಪ್ಪಾದ ಜೋಡಿ, (2) ರಮ್ಮನ - ಪಶ್ಚಿಮ ಬಂಗಾಲದಲ್ಲಿಯ ನೃತ್ಯ
ಪ್ರ. 2. ಕೆಳಗಿನ ಕಲ್ಪನೆಗಳನ್ನು
ಸ್ಪಷ್ಟಪಡಿಸಿರಿ.
1. ಅನ್ವಯಿಕ ಇತಿಹಾಸ: ಇತಿಹಾಸದ ಮೂಲಕ ಭೂತಕಾಲದಲ್ಲಿಯ ಘಟನೆಗಳ ವಿಷಯದ ಜ್ಞಾನದ
ಉಪಯೋಗವು ವರ್ತಮಾನ ಮತ್ತು ಭವಿಷತ್ಕಾಲಗಳಲ್ಲಿ ಎಲ್ಲ ಜನರಿಗೆ ಹೇಗೆ ಆಗಬಹುದು ಎಂಬುದರ ಅಭ್ಯಾಸ
ಮಾಡುವ ಶಾಸ್ತ್ರವೇ ಅನ್ವಯಿಕ ಇತಿಹಾಸವಾಗಿದೆ. ವರ್ತಮಾನದಲ್ಲಿಯ ಸಾಮಾಜಿಕ ಆಹ್ವಾಹನೆಗಳ ಮೇಲೆ
ಉಪಾಯಯೋಜನೆ ಮಾಡುವುದು, ಸಾಮಾಜಿಕ ಉಪಯುಕ್ತತೆಯ
ನಿರ್ಣಯಗಳನ್ನು ಕೈಕೊಳ್ಳುವುದು ಇತ್ಯಾದಿ ಸಂಗತಿಗಳಿಗಾಗಿ ಹಿಂದೆ ಆಗಿ ಹೋದ ಘಟನೆಗಳ ವಿಶ್ಲೇಷಣೆಯು
ದಿಶಾದರ್ಶಕವಾಗುತ್ತದೆ.
ಅನ್ವಯಿಕ ಇತಿಹಾಸದ ಆಧಾರದಿಂದ ಮೂರ್ತ ಮತ್ತು
ಅಮೂರ್ತ ಸ್ವರೂಪದಲ್ಲಿಯ ಸಂಸ್ಕೃತಿಕ ವಿಶ್ವಪರಂಪರೆಯ ರಕ್ಷಣೆ ಮತ್ತು ಸಂವರ್ಧನ ಮಾಡಲು ಬರುತ್ತದೆ.
ಅದರಿಂದಾಗಿ ಅನೇಕ ಉದ್ಯೋಗಾವಕಾಶಗಳು ನಿರ್ಮಾಣವಾಗುತ್ತವೆ. ಸ್ವಲ್ಪದರಲ್ಲಿ ಹೇಳುವುದಾದರೆ
ಇತಿಹಾಸದ ಆಧಾರದಿಂದ ವರ್ತಮಾನಕಾಲವನ್ನು ಅರ್ಥಮಾಡಿಕೊಂಡು ಭವಿಷತ್ಕಾಲವನ್ನು ರೂಪಿಸುವುದು ಎಂದು
ಹೇಳಬಹುದು.
(3) ಅಭಿಲೇಖಾಗಾರ: ಐತಿಹಾಸಿಕವಾಗಿ
ಮಹತ್ವದ ದಸ್ತಾವೇಜುಗಳು, ಹಳೆಯ ಕಾಗದ ಪತ್ರಗಳು ದಪ್ತರಗಳು, ಹಳೆಯ ಚಲನಚಿತ್ರಗಳು ಮುಂತಾದವುಗಳನ್ನು ರಕ್ಷಣೆಮಾಡಿ ಇಡಲಾಗುವ ಸ್ಥಳಕ್ಕೆ ಅಭಿಲೇಖಾಗಾರ
ಎನ್ನಲಾಗುತ್ತದೆ. ಪುಣೆಯಲ್ಲಿ ಆಗಾಖಾನ ಪ್ಯಾಲೇಸ್ ಎಂಬ ಅಭಿಲೇಖಾಗಾರ ಇದ್ದು ಅದರಲ್ಲಿ ಮಹಾತ್ಮಾ
ಗಾಂಧೀಜಿಯವರ ಜೀವನಕ್ಕೆ ಸಂಬಂಧಿತ ಸಾಹಿತ್ಯಗಳು, ಅವರ ಪತ್ರ ಲೇಖನ
ಇತ್ಯಾದಿ ಸಾಹಿತ್ಯಗಳಿವೆ.
ಕೋಲಕಾತಾದಲ್ಲಿ
ಏಶಿಯಾಟಿಕ ಸೊಸೈಟಿಯ ವತಿಯಿಂದ ಕ್ರಿ.ಶ. 1814 ರಲ್ಲಿ ಇಂಡಿಯನ್ ಮ್ಯುಝಿಯಮ್ ಎಂಬ ಅಭಿಲೇಖಾಗಾರ
ಇದೆ.
ಪ್ರ. 3. ಕೆಳಗಿನ ಪ್ರಶ್ನೆಗಳಿಗೆ 25ರಿಂದ 30 ಶಬ್ದಗಳಲ್ಲಿ ಉತ್ತರ ಬರೆಯಿರಿ.
(1) 'ಜನರಿಗಾಗಿ ಇತಿಹಾಸ' ಈ ಕಲ್ಪನೆಯನ್ನು ಸ್ಪಷ್ಟಪಡಿಸಿರಿ.
ಉತ್ತರ: ಇತಿಹಾಸದ ಮೂಲಕ ಭೂತಕಾಲದಲ್ಲಿಯ ಘಟನೆಗಳ ವಿಷಯದ
ಜ್ಞಾನದ ಉಪಯೋಗವು ವರ್ತಮಾನ ಮತ್ತು ಭವಿಷತ್ಕಾಲಗಳಲ್ಲಿ ಎಲ್ಲ ಜನರಿಗೆ ಹೇಗೆ ಆಗಬಹುದು ಎಂಬುದರ
ಅಭ್ಯಾಸ ಮಾಡುವ ಶಾಸ್ತ್ರವೇ ಅನ್ವಯಿಕ ಇತಿಹಾಸವಾಗಿದೆ. ಈ ಸಂಜ್ಞೆಗಾಗಿ ‘ಜನರಿಗಾಗಿ ಇತಿಹಾಸ’ ಎಂಬ ಪರ್ಯಾಯ ಪದ ಪ್ರಚಾರದಲ್ಲಿದೆ. ವರ್ತಮಾನದಲ್ಲಿಯ
ಸಾಮಾಜಿಕ ಆಹ್ವಾಹನೆಗಳ ಮೇಲೆ ಉಪಾಯಯೋಜನೆ ಮಾಡುವುದು, ಸಾಮಾಜಿಕ
ಉಪಯುಕ್ತತೆಯ ನಿರ್ಣಯಗಳನ್ನು ಕೈಕೊಳ್ಳುವುದು ಇತ್ಯಾದಿ ಸಂಗತಿಗಳಿಗಾಗಿ ಹಿಂದೆ ಆಗಿ ಹೋದ ಘಟನೆಗಳ
ವಿಶ್ಲೇಷಣೆಯು ದಿಶಾದರ್ಶಕವಾಗುತ್ತದೆ.
ಅನ್ವಯಿಕ
ಇತಿಹಾಸದ ಆಧಾರದಿಂದ ಮೂರ್ತ ಮತ್ತು ಅಮೂರ್ತ ಸ್ವರೂಪದಲ್ಲಿಯ ಸಂಸ್ಕೃತಿಕ ವಿಶ್ವಪರಂಪರೆಯ ರಕ್ಷಣೆ
ಮತ್ತು ಸಂವರ್ಧನ ಮಾಡಲು ಬರುತ್ತದೆ. ಅದರಿಂದಾಗಿ ಅನೇಕ ಉದ್ಯೋಗಾವಕಾಶಗಳು ನಿರ್ಮಾಣವಾಗುತ್ತವೆ.
ಸ್ವಲ್ಪದರಲ್ಲಿ ಹೇಳುವುದಾದರೆ ಇತಿಹಾಸದ ಆಧಾರದಿಂದ ವರ್ತಮಾನಕಾಲವನ್ನು ಅರ್ಥಮಾಡಿಕೊಂಡು
ಭವಿಷತ್ಕಾಲವನ್ನು ರೂಪಿಸುವುದು ಎಂದು ಹೇಳಬಹುದು.
(2) ಐತಿಹಾಸಿಕ ವಿಶ್ವ ಪರಂಪರೆಯ ಸಂದರ್ಭದಲ್ಲಿ
ಯುನೆಸ್ಕೊ ಯಾವ ಕಾರ್ಯಮಾಡಿದೆ?
ಉತ್ತರ: ಯುನೆಸ್ಕೋದ ಜಾಗತಿಕ ನೈಸರ್ಗಿಕ ವಿಶ್ವಪರಂಪರೆಯ
ಯಾದಿಯಲ್ಲಿ ಪಶ್ಚಿಮ ಘಟ್ಟದ ಸಮಾವೇಶವನ್ನು 2012ರಲ್ಲಿ ಮಾಡಲಾಗಿದೆ. ಸಾತಾರಾ ಜಿಲ್ಲೆಯಲ್ಲಿಯ ಕಾಸ
ಪಠಾರ ಇದು ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿಯೇ ಇದೆ.
(3) ಸಾಂಸ್ಕೃತಿಕ ವಿಶ್ವ ಪರಂಪರೆಯ ಸ್ಥಳಗಳ
ಪಟ್ಟಿಯಲ್ಲಿಯ ಮಹಾರಾಷ್ಟ್ರದಲ್ಲಿಯ ಸ್ಥಳಗಳು ಯಾವವೆಂಬುದನ್ನು ಹುಡುಕಿ ಬರೆಯಿರಿ.
ಉತ್ತರ: ಅಜಂತಾದ ಗುಹೆಗಳು, ಎಲ್ಲೂರಿನ ಗುಹೆಗಳು, ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್
ಮುಂಬಯಿ,
ಪ್ರ. 5. ಕೆಳಗಿನ ಕಲ್ಪನಾಚಿತ್ರವನ್ನು ಪೂರ್ಣಮಾಡಿರಿ.
ಸಾಂಸ್ಕೃತಿಕ ವಿಶ್ವ ಪರಂಪರೆ |
|
ಮೂರ್ತ
|
ಅಮೂರ್ತ |
ಈ
ಪ್ರಕಾರದಲ್ಲಿ ಪ್ರಾಚೀನ ಸ್ಥಳಗಳು, ಕಟ್ಟಡಗಳು, ವಸ್ತುಗಳು, ಹಸ್ತಲಿಖಿತಗಳು, ಶಿಲ್ಪಗಳು,
ಚಿತ್ರಗಳು ಇತ್ಯಾದಿಗಳು ಸಮಾವೇಶವಾಗುತ್ತವೆ. |
ಈ
ಪ್ರಕಾರದಲ್ಲಿ: ·
ಮೌಖಿಕ ಪರಂಪರೆ ಮತ್ತು ಅದಕ್ಕಾಗಿ ಬಳಸಲಾಗುವ ಭಾಷೆ ·
ಪರಂಪರಾಗತ ಜ್ಞಾನ ·
ಹಬ್ಬ-ಹರಿದಿನಗಳನ್ನು ಆಚರಿಸುವ ಸಾಮಾಜಿಕ ಪದ್ಧತಿಗಳು
ಹಾಗೂ ಧಾರ್ಮಿಕ ವಿಧಿಗಳು ·
ಕಲೆಯನ್ನು ಸಾದರಪಡಿಸುವ ಪದ್ಧತಿಗಳು ·
ವಿಶಿಷ್ಟ ಪರಂಪರಾಗತ ಕೌಶಲ್ಯಗಳು ·
ಇಂಥ ಪರಂಪರೆ, ಪದ್ಧತಿ, ಕೌಶಲ್ಯ ಇತ್ಯಾದಿಗಳ ಪ್ರಾತಿನಿಧ್ಯ ಮಾಡುವ ಸಮೂಹ, ಗುಂಪು.
|
ಪ್ರ.
5. ಕೆಳಗಿನ ವಿಧಾನಗಳನ್ನು ಕಾರಣಸಹಿತ ಸ್ಪಷ್ಟಪಡಿಸಿರಿ
(1) ತಂತ್ರಜ್ಞಾನದ ಇತಿಹಾಸವನ್ನು
ಅಭ್ಯಸಿಸಬೇಕಾಗುತ್ತದೆ.
ಉತ್ತರ: ಕೃಷಿ ಉತ್ಪಾದನೆ, ವಸ್ತುಗಳ ಉತ್ಪಾದನೆ, ವಾಸ್ತುಶಿಲ್ಪ, ಯಂತ್ರವಿದ್ಯೆ, ಮುಂತಾದವುಗಳಲ್ಲಿ ಆಗುತ್ತಾ ಹೋದ
ಬದಲಾವಣೆಗಳು ಮತ್ತು ಅದರ ಹಿಂದಿನ ಕಾರಣ ಪರಂಪರೆಯ ಸರಪಳಿಯನ್ನು ತಿಳಿದುಕೊಳ್ಳುವ ಸಲುವಾಗಿ
ತಂತ್ರಜ್ಞಾನದ ಇತಿಹಾಸವನ್ನು ಅಭ್ಯಾಸಿಸಬೇಕಾಗುತ್ತದೆ. ವೈಜ್ಞಾನಿಕ ಸಂಶೋಧನೆ ಹಾಗೂ
ತಂತ್ರಜ್ಞಾನದಲ್ಲಿಯ ಪ್ರಗತಿ ಪರಸ್ಪರಾವಲಂಬಿಯಾಗಿರುತ್ತವೆ. ಮಾನವನ ಉತ್ಕ್ರಾಂತಿಯ ಪ್ರಗತಿಯಲ್ಲಿ
ಕಲ್ಲಿನ ಆಯುಧಗಳನ್ನು ತಯಾರಿಸುವುದರಿಂದ ಹಿಡಿದು ಕೃಷಿ ಉತ್ಪಾದನೆಯ ವಿಕಾಸದವರೆಗೆ ಅವನಿಗೆ ತಿಳಿದ
ವಿಜ್ಞಾನ ಮತ್ತು ಅದರ ಮೇಲೆ ಆಧರಿತವಾದ ತಂತ್ರಜ್ಞಾನಗಳು ಅತ್ಯಂತ ಮಹತ್ವದ್ದಾಗಿದ್ದವು. ಆದ್ದರಿಂದ
ತಂತ್ರಜ್ಞಾನದ ಇತಿಹಾಸವನ್ನು ಅಭ್ಯಾಸ ಮಾಡಬೇಕಾಗುತ್ತದೆ.
(2) ಜಾಗತಿಕ ವಿಶ್ವಪರಂಪರೆಯ ಸ್ಥಾನಕ್ಕೆ
ಪಾತ್ರವಾಗುವ ಸ್ಥಳ (ತಾಣ)ಗಳು, ಪರಂಪರೆ
ಇವುಗಳ ಪಟ್ಟಿಯನ್ನು ಯುನೆಸ್ಕೋದ ಮುಖಾಂತರ ಪ್ರಕಟಿಸಲಾಗುತ್ತದೆ.
ಉತ್ತರ: ಮುಂದಿನ ಮಾನವೀ ತಲೆಮಾರುಗಳ ಹಿತಕ್ಕಾಗಿ ನಮ್ಮ
ಪರಂಪರೆಯ ಸಂರಕ್ಷಣೆಯಾಗುವುದು ಅವಶ್ಯಕವಾಗಿದೆ. ನಾಮಶೇಷವಾಗುವ ಮಾರ್ಗದಲ್ಲಿರುವ ಸಾಂಸ್ಕೃತಿಕ
ಮತ್ತು ನೈಸರ್ಗಿಕ ವಿಶ್ವಪರಂಪರೆಯ ರಕ್ಷಣೆ ಮತ್ತು ಸಂವರ್ಧನೆಯಾಗಬೇಕು ಎಂಬ ಉದ್ದೇಶದಿಂದ
ಯುನೆಸ್ಕೋ ಈ ಜಾಗತಿಕ ಸಂಘಟನೆಯು ಕೆಲವು ದಿಶಾದರ್ಶಕ ತತ್ವಗಳನ್ನು ಜಾಹೀರು ಮಾಡಿದೆ. ಆ
ದಿಶಾದರ್ಶಕ ತತ್ವಗಳ ಆಧಾರದಿಂದ ಜಾಗತಿಕ ವಿಶ್ವಪರಂಪರೆಯ ಸ್ಥಾನಕ್ಕೆ ಪಾತ್ರವಾಗುವ ಸ್ಥಳಗಳು, ಪರಂಪರೆ ಇವುಗಳ ಪಟ್ಟಿಯನ್ನು ಯುನೆಸ್ಕೋದ ಮುಖಾಂತರ ಪ್ರಕಟಿಸಲಾಗುತ್ತದೆ.
ಪ್ರ. 6. ಕೆಳಗಿನ ಪ್ರಶ್ನೆಗಳಿಗೆ ಸವಿಸ್ತಾರವಾಗಿ
ಉತ್ತರ ಬರೆಯಿರಿ.
(1) ಕೆಳಗಿನ ವಿಷಯಗಳ ಸಂಶೋಧನೆಯಲ್ಲಿ ಇತಿಹಾಸದ
ಸಂಶೋಧನೆಯ ಪದ್ಧತಿಯು ಹೇಗೆ ಉಪಯುಕ್ತವಾಗಲಿದೆಯೆಂಬುದನ್ನು ಸ್ಪಷ್ಟಪಡಿಸಿರಿ.
(ಅ) ವಿಜ್ಞಾನ
(ಬ) ಕಲೆ
(ಕ)
ವ್ಯವಸ್ಥಾಪನ ಶಾಸ್ತ್ರ
ಉತ್ತರ: ಪ್ರತಿಯೊಂದು ಕ್ಷೇತ್ರದಲ್ಲಿಯ ಜ್ಞಾನ
ಸಮೂಹಕ್ಕೆ ಸ್ವತಂತ್ರ ಇತಿಹಾಸವಿರುತ್ತದೆ. ಆಯಾ ಕ್ಷೇತ್ರಗಳಲ್ಲಿಯ ಮುಂದಿನ ಪ್ರಗತಿಯ ದಿಷೆಯು ಈ
ಜ್ಞಾನ ಸಮೂಹದ ಸ್ಥಿತಿಯ ಮೇಲೆ ಅವಲಂಬಿಸಿರುತ್ತದೆ. ಈ ರೀತಿಯ ಅನೇಕ ವಿಷಗಳ ಸಂಶೋಧನೆಯಲ್ಲಿ
ಇತಿಹಾಸದ ಸಂಶೋಧನೆ ಪದ್ದತಿಯು ಉಪಯುಕ್ತವಾಗುತ್ತದೆ.
(ಅ) ವಿಜ್ಞಾನ: ವೈಜ್ಞಾನಿಕ
ಶೋಧ ಹಾಗೂ ಸಿದ್ಧಾಂತ ಇವುಗಳ ಕಾಲಕ್ರಮ ಮತ್ತು ಆ ಶೋಧನೆಯ ಹಿಂದಿನ ಕಾರಣ ಪರಂಪರೆಯ ಸರಪಳಿಯನ್ನು
ತಿಳಿದುಕೊಳ್ಳುವುದು. ಅದರ ಸಲುವಾಗಿ ವಿಜ್ಞಾನದ ಇತಿಹಾಸವನ್ನು ಅಭ್ಯಾಸಿಸಬೇಕಾಗುತ್ತದೆ.
ಅವಶ್ಯಕತೆಯು ಶೋಧನೆಯ ಜನನಿಯಾಗಿದೆ ಎಂದು ಹೇಳಲಾಗುತ್ತದೆ. ಅನೇಕಸಲ ವೈಜ್ಞಾನಿಕ ಶೋಧವು ಮಾನವೀ
ಅವಶ್ಯಕತೆಯನ್ನು ಪೂರೈಸುವ ಹಾಗೂ ಜಿಜ್ಞಾಸೆಯನ್ನು ಈಡೇರಿಸುವ ಪ್ರಯತ್ನದೊಳಗಿಂದ ಆಗಿರುತ್ತದೆ.
ಅದರ ಸಲುವಾಗಿ ಮೊದಲು ಅಸ್ತಿತ್ವದಲ್ಲಿದ್ದ ವೈಜ್ಞಾನಿಕ ಜ್ಞಾನದ ಉಪಯೋಗ ಮಾಡಲಾಗುತ್ತದೆ.
(ಬ) ಕಲೆ: ವಿವಿಧ
ಕಲಾಕ್ಷೇತ್ರಗಳಲ್ಲಿಯ ಅಭಿವ್ಯಕ್ತಿ ಮತ್ತು ಅದರ ಹಿಂದಿನ ವೈಚಾರಿಕ, ಭಾವನಿಕ, ಸಾಂಸ್ಕೃತಿಕ ಪರಂಪರೆಗಳ ಆಧಾರದಿಂದ ಉಂಟಾದ ಕಲೆಗಳ
ವಿಕಸವನ್ನು ತಿಳಿದುಕೊಳ್ಳುವುದು ಮಹತ್ವದ್ದಾಗಿರುತ್ತದೆ. ಯಾವುದೇ ಕಲಾವಿಷ್ಕರಣ ಮರ್ಮವು
ಕಲಾಕೃತಿಯ ವಿಕಾಸಕ್ರಮಗಳು ಸಾಂಸ್ಕೃತಿಕ ಇತಿಹಾಸದ ಅಭ್ಯಾಸದ ಮೂಲಕ ತಿಳಿಯಬಹುದು.
(ಕ)
ವ್ಯವಸ್ಥಾಪನ ಶಾಸ್ತ್ರ: ಉತ್ಪಾದನೆಯ ಸಾಧನಗಳು, ಮಾನವ ಸಂಪನ್ಮೂಲ ಮತ್ತು ಉತ್ಪಾದನೆಯ ವಿವಿಧ ಪ್ರಕ್ರಿಯೆಗಳು,
ಮರುಕಟ್ಟೆ ಮತ್ತು ಮಾರಾಟ ಇವುಗಳ ವ್ಯವಸ್ಥಾಪನೆಯ ಸರಪಳಿಯಲ್ಲಿ ಅವುಗಳಿಗೆ ಸಂಬಂಧಿತ
ಭೂತಕಾಲದಲ್ಲಿಯ ಪದ್ಧತಿ ಹೇಗಿತ್ತು ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿರುತ್ತದೆ.
(2) ಅನ್ವಯಿಕ ಇತಿಹಾಸದ ಸಂಬಂಧವು ವರ್ತಮಾನಕಾಲದ
ಜೊತೆ ಹೇಗೆ ಇರುತ್ತದೆ?
ಉತ್ತರ:
(3) ಇತಿಹಾಸದ ಸಾಧನಗಳ ರಕ್ಷಣೆಯಾಗುವ ಸಲುವಾಗಿ
ಕನಿಷ್ಠ 10 ಉಪಾಯಗಳನ್ನು ಸೂಚಿಸಿರಿ.
(4) ನೈಸರ್ಗಿಕ ಮತ್ತು ಸಾಂಸ್ಕೃತಿಕ ವಿಶ್ವಪರಂಪರೆಯ
ರಕ್ಷಣೆಮಾಡುವ ಯೋಜನೆಯಿಂದ ಯಾವ ಸಂಗತಿಗಳು ಸಾಧ್ಯವಾಗುತ್ತವೆ?
ಉಪಕ್ರಮ: ಭಾರತದ ನಕಾಶೆಯಲ್ಲಿ ಜಾಗತಿಕ ಪರಂಪರೆಯ
ಸ್ಥಳಗಳನ್ನು ತೋರಿಸಿರಿ.
4. ಭಾರತೀಯ ಕಲೆಗಳ
ಇತಿಹಾಸ
ಪ್ರ. 1. ಅ) ಕೆಳಗೆ ಕೊಟ್ಟ ಪರ್ಯಾಯಗಳಲ್ಲಿ ಯೋಗ್ಯ
ಪರ್ಯಾಯವನ್ನು ಆಯ್ದುಕೊಂಡು ವಿಧಾನಗಳನ್ನು ಪೂರ್ಣಮಾಡಿರಿ.
(1) ಚಿತ್ರಕಲೆ ಮತ್ತು ಶಿಲ್ಪಕಲೆಗಳು..........ಯಲ್ಲಿ ಸಮಾವೇಶವಾಗುತ್ತವೆ.
(ಅ) ದೃಶ್ಯಕಲೆ (ಬ) ಲಲಿತ ಕಲೆ (ಕ) ಜಾನಪದಕಲೆ (ಡ)
ಅಭಿಜಾತ ಕಲೆ
(2) ಮಥುರಾ ಶಿಲ್ಪಶೈಲಿಯು ........ರ ಕಾಲದಲ್ಲಿ ಉದಯವಾಯಿತು.
(ಅ) ಕುಶಾಣ (ಬ) ಗುಪ್ತ (ಕ) ರಾಷ್ಟ್ರಕೂಟ (ಡ) ಮೌರ್ಯ
ಬ) ಕೆಳಗಿನವುಗಳಲ್ಲಿ ತಪ್ಪಾದ ಜೋಡಿಯನ್ನು ತಿದ್ದಿ
ಮತ್ತೆ ಬರೆಯಿರಿ.
(1) ಕುತುಬಮಿನಾರ - ಮೆಹರೌಲಿ
(2) ಗೋಲಗುಮ್ಮಟ - ವಿಜಾಪೂರ
(3) ಛತ್ರಪತಿ ಶಿವಾಜಿ ಮಹಾರಾಜ ರೇಲ್ವೆ ಟರ್ಮಿನಸ್
-ದಿಲ್ಲಿ ತಪ್ಪು , ಮುಂಬಯಿಯಲ್ಲಿದೆ
(4) ತಾಜಮಹಲ –ಆಗ್ರಾ
ಉತ್ತರ: ಛತ್ರಪತಿ ಶಿವಾಜಿ ಮಹಾರಾಜ ರೇಲ್ವೆ ಟರ್ಮಿನಸ್
- ಮುಂಬಯಿಯಲ್ಲಿದೆ
ಪ್ರ. 2. ಕೆಳಗಿನ ಕಲ್ಪನೆಗಳನ್ನು
ಸ್ಪಷ್ಟಪಡಿಸಿರಿ.
(1) ಕಲೆ:
ಸ್ವಂತದ ಅನುಭವಗಳು ಹಾಗೂ ಅವುಗಳಿಂದ ಉಂಟಾದ ಜ್ಞಾನ ಮತ್ತು ಮನಸ್ಸಿನಲ್ಲಿಯ ಭಾವನೆಗಳನ್ನೂ ಇತರರ
ವರೆಗೆ ತಲುಪಿಸುವ ಸಹಜ ಪ್ರವೃತ್ತಿ ಎಲ್ಲರಿಗೂ ಇರುತ್ತದೆ. ಈ ಸಹಜಪ್ರವೃತ್ತಿಯ ಪ್ರೇರಣೆಯಿಂದ
ಯಾವಾಗ ಒಂದು ಸೌಂದರ್ಯಪೂರ್ಣ ನಿರ್ಮಿತಿ ಮಾಡಲಾಗುವುದೋ ಆಗ ಅದಕ್ಕೆ ಕಲೆ ಎಂದು ಕರೆಯುವರು.ಕಲಾನಿರ್ಮಿತಿಯ
ಮೂಲದಲ್ಲಿ ಕಲಾವಿದನ ಸೃಜನಶೀಲತೆ, ಸಂವೇದನಶೀಲತೆ ಮತ್ತು ಕೌಶಲ್ಯ
ಈ ಘಟಕಗಳು ಅತ್ಯಂತ ಮಹತ್ವದ್ದಾಗಿರುತ್ತವೆ. ಕಲೆಯಲ್ಲಿ ಶಿಲ್ಪಕಲೆ,
ಚಿತ್ರಕಲೆ, ಗಾಯನ, ನೃತ್ಯ, ವಾದನ ಹೀಗೆ ವಿವಿಧ ಸ್ವರೂಪದ ಆವಿಷ್ಕಾರಗಳು ಒಳಗೊಂಡಿರುತ್ತವೆ.
(2) ಹೇಮಾಡಪಂತಿ ಶೈಲಿ: ಮಹಾರಾಷ್ಟ್ರದಲ್ಲಿ
ಹನ್ನೆರಡನೆಯ ಮತ್ತು ಹದಿಮೂರನೆಯ ಶತಮಾನದಲ್ಲಿ ಕಟ್ಟಿಸಲಾಗಿರುವ ಮಂದಿರಗಳಿಗೆ ಹೇಮಾಂಡಪಂತಿ
ಮಂದಿರಗಳು ಎನ್ನುವರು. ಹೇಮಾಂಡಪಂತಿ ಮಂದಿರಗಳ ಹೊರಗಿನ ಗೋಡೆಗಳು ನಕ್ಷತ್ರಾಕೃತಿ ಇರುತ್ತವೆ. ತಾರಾಕೃತಿ
(ನಕ್ಷತ್ರಾಕೃತಿ) ಮಂದಿರ ರಚನೆಯಲ್ಲಿ ಮಂದಿರದ ಹೊರಗಿನ ಗೋಡೆಗಳು ಅನೇಕ ಕೊನಗಳಲ್ಲಿ
ವಿಭಾಗಿಸಲ್ಪಟ್ಟಿರುತ್ತವೆ. ಅದರಿಂದಾಗಿ ಆ ಗೋಡೆಗಳು ಹಾಗೂ ಅವುಗಳ ಮೇಲಿನ ಶಿಲ್ಪಗಳ ಮೇಲೆ ಛಾಯಾ
ಪ್ರಕಾಶದ ಸುಂದರ ಪರಿಣಾಮ ಕಾಣಿಸುತ್ತದೆ. ಹೇಮಾಂಡಪಂತಿ ಮಂದಿರದ ಮಹತ್ವದ ವೈಶಿಷ್ಟ್ಯವೆಂದರೆ
ಗೋಡೆಯ ಕಲ್ಲುಗಳನ್ನು ಜೋಡಿಸಲು ನಡುವೆ ಸುಣ್ಣದ ಬಳಕೆ ಮಾಡದೆ ಒಂದು ಕಲ್ಲನ್ನು ಕೆಟ್ಟಿ ಅದರಲ್ಲಿ
ವೆಜ್ಜ (ರಂಧ್ರ) ಮಾಡಿ ಆ ವೆಜ್ಜದಲ್ಲಿ ಮತ್ತೊಂದು ಕಲ್ಲಿನ ಕೆಟ್ಟಿದ ಚೂಪಾದ ಭಾಗವನ್ನು ಸರಿಯಾಗಿ
ಕುಡಿಸಲಾಗುತ್ತಿತ್ತು. ಮುಂಬಯಿ ಹತ್ತಿರ ಅಂಬರಾನಾಥ್ –ಅಂಬ್ರೇಶ್ವರ, ನಾಶಿಕ ಹತ್ತಿರದ ಸಿನ್ನರ-ಗೊಂದೇಶ್ವರ, ಹಿಂಗೋಲಿ ಜಿಲ್ಲೆಯ
ಔಂಢಾ ನಾಗನಾಥ, ಇವು ಹೇಮಾಂಡಪಂತಿ ಮಂದಿರಗಳ ಉದಾಹರಣೆಗಳಾಗಿವೆ.
(3) ಮರಾಠಾ ಚಿತ್ರಶೈಲಿ : ಸಾಮಾನ್ಯವಾಗಿ
ಕ್ರಿಸ್ತಿಶಕದ ಹದಿನೇಳನೆಯ ಶತಮಾನದ ಉತ್ತರಾರ್ಧದಲ್ಲಿ ಮರಾಠಾ ಚಿತ್ರಶೈಲಿಯ ಉದಯವಾಯಿತು. ಈ
ಶೈಲಿಯಲ್ಲಿಯ ಚಿತ್ರಗಳು ಬಣ್ಣಬಣ್ಣದ್ದಾಗಿದ್ದು ಅವು ಭಿತ್ತಿಚಿತ್ರ ಹಾಗೂ ಹಸ್ತಲಿಖಿತಗಳಲ್ಲಿಯ
ಲಘುಚಿತ್ರಗಳ ಸ್ವರೂಪದಲ್ಲಿವೆ. ವಾಯಿ, ಸಾತಾರಾ, ಮೇಣವಲಿ ಮುಂತಾದ ಸ್ಥಳಗಳಲ್ಲಿಯ ಹಳೆಯ ಮಹಾಲುಗಳಲ್ಲಿ ಮರಾಠಾ ಚಿತ್ರಶೈಲಿಯ ಕೆಲವು
ಭಿತ್ತಿಚಿತ್ರಗಳನ್ನು ಕಾಣಬಹುದು. ಮರಾಠಾ ಚಿತ್ರಶೈಲಿಯ ಮೇಲೆ ರಾಜಪೂತ ಚಿತ್ರಶೈಲಿಯ ಮತ್ತು
ಯೂರೋಪಿಯನ್ ಚಿತ್ರಶೈಲಿಯ ಪ್ರಭಾವ ಕಂಡು ಬರುತ್ತದೆ.
ಪ್ರ. 3. ಕೆಳಗಿನ ವಿಧಾನಗಳನ್ನು ಕಾರಣಸಹಿತ
ಸ್ಪಷ್ಟಪಡಿಸಿರಿ
(1) ಕಲೆಯ ಇತಿಹಾಸದ ಆಳವಾದ ಅಭ್ಯಾಸವಿರುವ ತಜ್ಞರ
ಅವಶ್ಯಕತೆ ಇರುತ್ತದೆ.
ಉತ್ತರ: ಕಲಾ ವಸ್ತುಗಳ ಕ್ರಯ-ವಿಕ್ರಯ ಮಾಡುವುದು ಒಂದು
ಸ್ವತಂತ್ರ ವಿಶ್ವವಿದೆ. ಅಲ್ಲಿ ಕಲಾ ವಸ್ತುಗಳ ಮೂಲ್ಯವನ್ನು ನಿರ್ಧರಿಸುವ ಸಲುವಾಗಿ ಆ ಕಲಾ
ವಸ್ತುವು ನಕಲಿ ಇಲ್ಲವಲ್ಲ ಎಂಬುದನ್ನು ಪರೀಕ್ಷಿಸುವುದು ಅವಶ್ಯಕವಾಗಿದೆ. ಅದಕ್ಕಾಗಿ ಕಲೆಯ
ಇತಿಹಾಸದ ಆಳವಾದ ಅಭ್ಯಾಸ ಮಾಡಿರುವ ತಜ್ಞರ ಅವಶ್ಯಕತೆ ಇರುತ್ತದೆ.
(2) ನಷ್ಟವಾಗುವುದರಲ್ಲಿದ್ದ ಚಿತ್ರಕಥೀಯಂತಹ
ಪರಂಪರೆಯ ಪುನರುಜ್ಜಿವನ ಮಾಡುವುದು ಅವಶ್ಯಕವಾಗಿದೆ.
ಉತ್ತರ: ಒಂದು ಕಥೆಗಾಗಿ ಸುಮಾರು 30 ರಿಂದ 50
ಚಿತ್ರಗಳನ್ನು ಬಳಸಲಾಗುತ್ತದೆ. ಬೇರೆ ಬೇರೆ ಕೆಥೆಗಳಿನ್ನೂ ಹೇಳುವ ಸಲುವಾಗಿ ತಲೆತಲಾಂತರವಾಗಿ
ನಡೆದು ಬಂದ ಇಂಥ ಚಿತ್ರಗಳ ಗ್ರಂಥಗಳನ್ನು ಚಿತ್ರಕಾಥಿ ಕುಟುಂಬಗಳಲ್ಲಿ ಸಂರಕ್ಷಿಸಿ ಇಡಲಾಗಿರುತ್ತದೆ.
ನಷ್ಟ್ರವಾಗುವುದರಲ್ಲಿದ್ದ ಈ ಪರೇಂಪರೆಯ ಪುನರುಜ್ಜೀವನ ಮಾಡುವ ಪ್ರಯತ್ನವನ್ನು ಸರಕಾರಿ ಮತ್ತು
ಕಲಾವಿದರ ವತಿಯಿಂದ ಮಾಡಲಾಗುತ್ತಿದೆ.
ಪ್ರ. 3. ಕೆಳಗಿನ ಪ್ರಶ್ನೆಗಳಿಗೆ 25ರಿಂದ 30 ಶಬ್ದಗಳಲ್ಲಿ ಉತ್ತರ ಬರೆಯಿರಿ.
(1) ಜಾನಪದ ಶಿಲ್ಪಕಲೆಯನ್ನು ಕುರಿತು ಮಾಹಿತಿ
ಬರೆಯಿರಿ.
ಉತ್ತರ: ಚಿತ್ರಕಲೆಯಂತೆ
ಶಿಲ್ಪಕಲೆಯೂ ಕೂಡ ಶಿಲಾಯುಗದ ಕಾಲದಷ್ಟೇ ಪ್ರಾಚೀನವಾಗಿದೆ. ಕಲ್ಲಿನ ಆಯುಧಗಳನ್ನು
ತಯಾರಿಸುವುದೆಂದರೆ ಒಂದು ಪ್ರಕಾರದ ಶಿಲ್ಪಕಲೆಯ ಆರಂಭವೇ ಆಗಿತ್ತು ಎಂದು ಹೇಳಬಹುದು. ಭರತದಲ್ಲಿ
ಧಾರ್ಮಿಕ ಪ್ರಸಂಗಗಳಲ್ಲಿ ಮಣ್ಣಿನ ಮೂರ್ತಿಗಳನ್ನು ತಯಾರಿಸಿ ಅವುಗಳ ಪೂಜೆ ಮಾಡುವ ಇಲ್ಲವೇ
ಅವುಗಳನ್ನು ಅರ್ಪಣೆ ಮಾಡುವ ರೂಢಿಯು ಹರಪ್ಪಾ ಸಂಸ್ಕೃತಿಯ ಕಾಲದಿಂದಲೂ ಇತ್ತು. ಅದು ಇಂದಿನವರೆಗೂ
ಬಂಗಾಲ, ಬಿಹಾರ, ಗುಜರಾತ, ರಾಜಸ್ಥಾನ ಇತ್ಯಾದಿ ಅನೇಕ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದ್ದುದು ಕಂಡು ಬರುತ್ತದೆ.
(2) ಗಾಂಧಾರ ಶಿಲ್ಪಕಲಾಶೈಲಿಯ ಮಾಹಿತಿ ಬರೆಯಿರಿ.
ಉತ್ತರ: ಗಾಂಧಾರ ಶಿಲ್ಪಕಲಾಶೈಲಿ ಇದೊಂದು ಮೂರ್ತಿವಿಜ್ಞಾನಶಾಸ್ತ್ರವಾಗಿದೆ.
ಅಪಘಾನಿಸ್ತಾನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕ್ರಿಸ್ತಶಕ ಪೂರ್ವ ಎರಡನೆಯ ಶತಮಾನದಲ್ಲಿ ಗ್ರೀಕ
ಮತ್ತು ಪರ್ಶಿಯನ್ ಪ್ರಭಾವವನ್ನು ತೋರಿಸುವ ಗಾಂಧಾರ ಶಿಲ್ಪಕಲಾಶೈಲಿಯು ಉದಯವಾಯಿತು.
ಪ್ರ. 5. ಕೆಳಗಿನ ಕಲ್ಪನಾಚಿತ್ರವನ್ನು ಪೂರ್ಣಮಾಡಿರಿ.
ಮಂದಿರದ
ವಾಸ್ತುಶಿಲ್ಪದ ಶೈಲಿ |
ನಾಗರ |
ದ್ರಾವಿಡ್ |
ಹೇಮಾಡಪಂತಿ |
ವೈಶಿಷ್ಟ್ಯಗಳು |
1.ತಳದಿಂದ
ಕ್ರಮವಾಗಿ ಶಿಖರದಂತಹ ಪ್ರತಿಕೃತಿ ಮೇಲಿನವರೆಗೆ ರಚಿಸಲಾಗಿರುತ್ತದೆ. 2.ಶಿಖರದ
ರಚನೆ ತಳದಿಂದ ತುದಿಯ ವರೆಗೆ ನೆರವಾಗಿರುತ್ತದೆ. 3.ಶಿಖರದ
ಮೇಲೆ ಕಲಾಕೃತಿಗಳು ಇರುತ್ತವೆ. |
1.ಮಂದಿರಗಳ
ಶಿಖರಗಳು ಪ್ಯಾರಾಮಿಡ್ ಆಕಾರದ್ದು ಇರುತ್ತವೆ. 2.ಶಿಖರಗಳಿಗಿಂತ
ಗೋಪುರಗಳು ದೊಡ್ಡದಾಗಿ ಮತ್ತು ಭವ್ಯವಾಗಿ ಇರುತ್ತವೆ. |
1.ಈ ಶೈಲಿಯ ಮಂದಿರಗಳ
ಕಟ್ಟಡವು ಚೌರಸ ಹಾಗೂ ನಕ್ಷತ್ರಾಕೃತಿ ಇರುತ್ತವೆ. 2.
ಮಂದಿರಗಳ ಕಟ್ಟಡಗಳಲ್ಲಿ ಸುಣ್ಣ, ಮಣ್ಣು ಬಳಕೆ ಮಾಡಿರುವುದಿಲ್ಲ. |
ಉದಾಹರಣೆಗಳು |
1.ಖಜುರಾಹೊದಲ್ಲಿಯ
ಕಂಡಾರಿಯಾ ಮಹಾದೇವ ಮಂದಿರ 2.ಭುವನೇಶ್ವರ
ಲಿಂಗರಾಜ ಮಂದಿರ 3.
ಕೋಣಾರ್ಕ-ಸೂರ್ಯ ಮಾಂದಿರ 4.
ರಾಜಸ್ಥಾನದಲ್ಲಿಯ ಅಬು ಗುಡ್ಡ ಮೇಲಿನ ದಿಲಾವಾಡಾ ಮಂದಿರ |
1.ಮದುರಾಯಿ-ಮೀನಾಕ್ಷಿ
ಮಂದಿರ 2. ಮಹಾಬಲಿಪುರಂ –ರಥಮಂದಿರ 3.
ತಂಜಾವರ –ಬಹದೀಶ್ವರ್ ಮಂದಿರ 4.
ತಿರುಪತಿ ಬಾಲಾಜಿ ಮಂದಿರ |
1.ಸಿನ್ನರ – ಗೊಂದೇಶ್ವರ
ಮಂದಿರ 2.
ಅಂಬರನಾಥ –ಶಿವಮಂದಿರ 3.
ಖಿದ್ರಾಪುರದ ಕೊಪೇಶ್ವರ ಮಂದಿರ 4.
ಹಿಂಗೋಲಿ –ಔಂಢಾ ನಾಗನಾಥ ಮಂದಿರ |
(1) ಜಾನಪದ ಚಿತ್ರಕಲಾ ಶೈಲಿಯನ್ನು ಕುರಿತು
ಸವಿಸ್ತಾರ ಮಾಹಿತಿ ಬರೆಯಿರಿ.
ಉತ್ತರ: ಜಾನಪದ ಚಿತ್ರಕಲೆಯ ಪರಂಪರೆಯು ಗುಹಾಚಿತ್ರಗಳ ಪರಂಪರೆಯೊಡನೆ
ಸಂಬಂಧವನ್ನು ತಿಳಿಸುವಂತಿದೆ. ಮನೆಯಲ್ಲಿಯ ಮದುವೆ ಸಮಾರಂಭಗಳಲ್ಲಿ, ಹಬ್ಬ-ಹರಿದಿನಗಳಲ್ಲಿ ಗೋಡೆಗಳ ಮೇಲೆ ಚಿತ್ರ ತೆಗೆಯುವುದು, ಅಂಗಳದಲ್ಲಿ
ರಂಗೋಲಿ ತೆಗೆಯುವುದು ಅದರಂತೆ ಚಿತ್ರಗಳ ಸಹಾಯದಿಂದ ಆಖ್ಯಾನಗಳನ್ನು ಹೇಳುವುದು ಇವುಗಳಿಂದ ಪ್ರದೇಶಿಕ
ಜಾನಪದ ಕಲೆಗಳ ಪರಂಪರೆಯಲ್ಲಿಯ ವಿವಿಧ ಶೈಲಿಗಳು ವಿಕಸಿತವಾದವು. ಗುಹಾಚಿತ್ರಗಳಲ್ಲಿ ಮನುಷಾಕೃತಿ, ಪ್ರಾಣಿ ಹಾಗೂ ಕೆಲವು ಜ್ಯಾಮಿತಿಯ ಆಕೃತಿಗಳ ಸಮಾವೇಶವಿರುತ್ತದೆ. ಪುರಾತನ ಶಿಲಾಯುಗದಿಂದ
ಹಿಡಿದು ಬೇಸಾಯದ ಆರಂಭವಾಗುವವರೆಗಿನ ಕಾಲದ ವರೆಗೆ ಈ ಚಿತ್ರಗಳ ಶೈಲಿ, ವಿಷಯಗಳಲ್ಲಿ
ಬದಲಾವಣೆಯಾಗುತ್ತ ಹೋದದ್ದು ಕಂಡು ಬರುತ್ತದೆ.
(2) ಭಾರತದಲ್ಲಿಯ ಮುಸ್ಲಿಮ ವಾಸ್ತುಶಿಲ್ಪಶೈಲಿಯ
ವೈಶಿಷ್ಟ್ಯಗಳನ್ನು ಉದಾಹರಣೆಯೊಂದಿಗೆ ಸ್ಪಷ್ಟಪಡಿಸಿರಿ.
ಉತ್ತರ: ಮಧ್ಯಯುಗೀನ ಭಾರತದಲ್ಲಿ ಮುಸ್ಲಿಮ ರಾಜರುಗಳ ಆಶ್ರಯದಲ್ಲಿ
ಪರ್ಶಿಯನ್, ಮಧ್ಯ ಏಷಿಯಾದ, ಅರಬಿ ಮತ್ತು ಇಸ್ಲಾಮಪೂರ್ವ ಭಾರತೀಯ ಇತ್ಯಾದಿ
ವಸ್ತು ಶಿಲ್ಪಶೈಲಿಯ ಅನೇಕ ಪ್ರವಾಹಗಳು ಒಂದೆಡೆ ಬಂದವು. ಅದರೊಳಗಿನಿಂದ ಭರತದಲ್ಲಿಯ ಮುಸ್ಲಿಮ ವಾಸ್ತುಶಿಲ್ಪ
ವಿಕಸಿತವಾಯಿತು. ಅನೇಕ ಸುಂದರ ಕಟ್ಟಡಗಳ ನಿರ್ಮಾಣ ಮಾಡಲಾಯಿತು. ದಿಲ್ಲಿ ಹತ್ತಿರದ ಮೇಹರೌಲಿ ಎಂಬಲ್ಲಿ
ಕುತುಬಮಿನಾರ, ಅಗ್ರಾದಲ್ಲಿಯ ತಾಜಮಹಲ ಹಾಗೂ ವಿಜಯಪುರದಲ್ಲಿಯ ಗೋಲಗುಮ್ಮಟ
ಇವು ಮುಸ್ಲಿಮ ವಾಸ್ತುಶಿಲ್ಪಶೈಲಿಯ ಜಗತ್ಪ್ರಸಿದ್ದ ಉದಾಹರಣೆಗಳಾಗಿವೆ. ಕುತುಬುದ್ದಿನ ಐಬಕ ಇವನ ಕಾಲದಲ್ಲಿ
ಕುತುಬಮಿನಾರ ಕಟ್ಟುವುದಕ್ಕೆ ಆರಂಭವಾಯಿತು ಹಾಗೂ ಅಲ್ತಮಶ ಇವನ ಕಾಲದಲ್ಲಿ ಕಟ್ಟಡ ಪೂರ್ಣವಾಯಿತು. ಕುತುಬಮಿನಾರ
ಇದು ಜಗತ್ತಿನಲ್ಲಿಯ ಅತ್ಯಂತ ಎತ್ತರವಾದ ಮಿನಾರ ಇದೆ. ಅದರ ಉದ್ದಳತೆಯು 73 ಮೀಟರ (240ಫೂಟ) ಇದೆ.
ಇದನ್ನು ಜಾಗತಿಕ ವಿಶ್ವಪರಂಪರೆಯ ಸ್ಥಲವೆಂದು ಯುನೆಸ್ಕೋ ಘೋಷಣೆ ಮಾಡಿದೆ.
(3) ಕಲಾಕ್ಷೇತ್ರದಲ್ಲಿ ಉದ್ಯೋಗದ ಯಾವ ಅವಕಾಶಗಳು
ಲಭ್ಯವಾಗಿವೆಯೆಂಬುದನ್ನು ಸ್ಪಷ್ಟಪಡಿಸಿರಿ.
ಉತ್ತರ: ಕಲೆಯ ಇತಿಹಾಸ ಒಂದು ಜ್ಞಾನಶಾಖೆ ಇದೆ. ಈ ಕ್ಷೇತ್ರದಲ್ಲಿ
ಸಂಶೋಧನೆಯ ಮತ್ತು ಉದ್ಯೋಗದ ಅವಕಾಶಗಳು ಲಭ್ಯವಾಗಬಹುದು.
1) ಕಲೆಯ
ಇತಿಹಾಸದ ಅಭ್ಯಾಸಕರು ಪತ್ರಿಕೋದ್ಯಮದಕ್ಷೇತ್ರದಲ್ಲಿಯೂ ಕೆಲಸ ಮಾಡಬಲ್ಲರು.
2) ಕಲಾ
ವಸ್ತುಗಳ ಕ್ರಯ-ವಿಕ್ರಯದ ಒಂದು ಸ್ವತಂತ್ರ ವಿಶ್ವವಿದೆ. ಅಲ್ಲಿ ಕಲಾವಸ್ತುಗಳ ಮೂಲ್ಯ ನಿರ್ಧರಿಸುವ
ಸಲುವಾಗಿ ಆ ಕಲಾವಸ್ತುವು ನಕಲಿ ಇಲ್ಲವೇ ಎಂಬುದು ತಿಳಿಯುವುದಕ್ಕಾಗಿ ಕಲೆಯ ಇತಿಹಾಸದ ಆಳವಾದ ಅಭ್ಯಾಸ
ಮಾಡಿರುವ ತಜ್ಞರ ಅವಶ್ಯ್ಕತೆ ಇರುತ್ತದೆ.
3) ಸಂಸ್ಕೃತಿ
ಪರಂಪರೆಯ ರಕ್ಷಣೆ ಮತ್ತು ಸಂವರ್ಧನೆ ಹಾಗೂ ಸಂಸ್ಕೃತಿಕ
ಪರ್ಯಟನೆ ಇವು ಹೊಸದಾಗಿ ವಿಕಸಿತವಾಗುತ್ತಿರುವ ಕ್ಷೇತ್ರಗಳಾಗಿವೆ. ಈ ಕ್ಷೇತ್ರದಲ್ಲಿಯ ಕಲೆಯ ಅಭ್ಯಾಸಕರಿಗೆ
ಅನೇಕ ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ. ಅದರಲ್ಲಿ ಸಂಗ್ರಹಾಲಯ ಮತ್ತು ಅಭಿಲೇಖಾಗಾರ, ಗ್ರಂಥಾಲಯ ಮತ್ತು ವಾರ್ತಾಪ್ರಸರಣೆಯ ತಂತ್ರಜ್ಞಾನ, ಪುರಾತತ್ವ
ಸಂಶೋಧನೆ ಹಾಗೂ ಭಾರತೀಯ ವಿದ್ಯಾ ಇತ್ಯಾದಿ ಕೆಲವು ಮಹತ್ವದ ಕ್ಷೇತ್ರಗಳಾಗಿವೆ.
(4) 23ನೇ ಪುಟದ ಮೇಲಿನ ಚಿತ್ರವನ್ನು ನಿರೀಕ್ಷಿಸಿ
ಕೆಳಗಿನ ಅಂಶಗಳ ಆಧಾರದಿಂದ ವಾರಲೀ ಚಿತ್ರಕಲೆಯ ವಿಷಯವಾಗಿ ಮಾಹಿತಿ ಬರೆಯಿರಿ.
(ಅ) ನಿಸರ್ಗದ ವರ್ಣನೆ
(ಬ) ಮಾನವಾಕೃತಿಯ ಚಿತ್ರಣ
(ಕ) ವ್ಯವಸಾಯ
(ಡ) ಮನೆಗಳು
ಉಪಕ್ರಮ:
(1) ಯುನೆಸ್ಕೊ ಜಾಹೀರು ಮಾಡಿದ ಭಾರತದಲ್ಲಿಯ
ಜಾಗತಿಕ ವಿಶ್ವಪರಂಪರೆಯ ಸ್ಥಳಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಿರಿ.
(2) ನಿಮ್ಮ ಪರಿಸರದಲ್ಲಿ ಮೂರ್ತಿಗಳನ್ನು
ತಯಾರಿಸುವ ಕುಶಲಕರ್ಮಿಗಳ ಕೆಲಸದ ನಿರೀಕ್ಷಣೆ ಮಾಡಿರಿ ಮತ್ತು ಅವರ ಸಂದರ್ಶನ ಪಡೆಯಿರಿ.
0 ಕಾಮೆಂಟ್‌ಗಳು
ಧನ್ಯವಾದಗಳು