ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

swarajya rakshak - ಸ್ವರಾಜ್ಯ ಹಾಗೂ ಪರೀಕ್ಷಾ

ಮಕ್ಕಳೇ, ಇಂದು ೧೯ ಫೆಬ್ರುವರಿ, ೨೦೨೩ ಹಿಂದವೀ ಸ್ವರಾಜ್ಯ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ. ಶಿವಾಜಿ ಮಹಾರಾಜರ ಬಗೆಗಿರುವ ಒಂದು ಕಥೆಯನ್ನು ಇಲ್ಲಿ ಕೊಡುತ್ತಿದ್ದೇನೆ.

 ಸ್ವರಾಜ್ಯ ಹಾಗೂ ಪರೀಕ್ಷಾ


ಪುರಂದರ ಒಪ್ಪಂದದ ಪ್ರಕಾರ ಛತ್ರಪತಿ ಶಿವಾಜಿ ಮಹಾರಾಜರಿಗೆ ಔರಂಗಜೇಬನಿಗೆ ಭೇಟಿಯಾಗಲು ಆಗ್ರಾ ಹೋಗಬೇಕಾಯಿತು. ಅವರು ತಮ್ಮ ಎಲ್ಲ ಕಿಲ್ಲೇದಾರರಿಗೆ ಒಂದು ಪತ್ರ ಬರೆದರು. ರಾತ್ರಿಯ ಹೊತ್ತು ಸೂರ್ಯಾಸ್ತದ ನಂತರ ಸೂರ್ಯೋದಯದ ವರೆಗೆ ಕೋಟೆಯ ಹೆಬ್ಬಾಗಿಲು ತೆರೆಯಬಾರದು. ತುಂಬ ಅವಶ್ಯಕವೆಂದು ಅನಿಸಿದರೆ ಜೀಜಾವು ಮಾಸಾಹೇಬ, ಪ್ರಧಾನಿಗಳು ಅಥವಾ ಸರನೋಬತ ಇವರ ಲಿಖಿತ ಅಪ್ಪಣೆ ಪತ್ರ ತರಬೇಕು. ನಾನೂ ಬಂದರೂ ಸರಿ ಇದೆ ಆದೇಶದ ಪಾಲನೆ ಮಾಡಬೇಕು. ಬಾಗಿಲು ತೆರೆಯಬೇಡಿ ಎಂದು ಹೇಳಿ ಮಹಾರಾಜರು 5 ಮಾರ್ಚ್ 1666ರಂದು ರಾಯಗಡ ಮೇಲಿಂದ ತೆರಳಿದರು. ಜೊತೆಗೆ ಯುವರಾಜ ಸಂಭಾಜಿ ಮತ್ತು ಆಯ್ದ ನಾಲ್ಕು ನೂರು ಜನರು ಇದ್ದರು. 

Read more:  ಧರ್ಮದ ದಾರ್ಶನಿಕ ಯುವ ಶಕ್ತಿ ಸ್ವಾಮಿ ವಿವೇಕಾನಂದ

   ಜನ್ನುರ್ ಪರಗಣೆಯಲ್ಲಿ ಮುಕ್ಕಾಮ ಮಾಡಿದರು. ರಾತ್ರಿ ಊಟ ಮುಗಿಸಿದ ನಂತರ ಮಹಾರಾಜರು ಶಾಂತಚಿತ್ತದಿಂದ ವಿಚಾರಮಗ್ನರಾದರು. ಸ್ವರಾಜ್ಯದ ಬಗ್ಗೆಯೇ ಚಿಂತಿಸುತ್ತಿದ್ದರು. ಸ್ವರಾಜ್ಯದ ಗತಿ ಏನಾದೀತು? ' ಮಹಾರಾಜರೇ, ನೀವೇನೂ ಕಾಳಜಿ ಮಾಡಬೇಡಿ . ಹಾಗೆ ಚರ್ಚೆ ಮುಂದುವರೆಯಿತು. ಮಹಾರಾಜರು ಒಮ್ಮೆಲೆ ಎದ್ದು ನಿಂತರು ಮತ್ತು ಹೇಳಿದರು, "ನೀವು ಹೇಳುತ್ತೀರಿ ಎಂದ ಮೇಲೆ ಆಗಿಯೇ ಹೋಗಲಿ ಪರೀಕ್ಷೆ, ನಡೆಯಿರಿ." ಎಂಟು ಹತ್ತು ಸರದಾರರ ಜೊತೆಗೂಡಿ ಮಹಾರಾಜರು ಸಿದ್ಧಗಡ ಕೋಟೆಗೆ ಮರಳಿದರು. ಇವರನ್ನು ನೋಡಿದ ಭಿಲ್ಲ ನಾಯಿಕ, ಯಾರದು? ಎಲ್ಲಿಗೆ ಹೊರಟಿದ್ದೀರಿ? ಎಂದು ಕೇಳಿದರು. ಅಷ್ಟರಲ್ಲಿ ಒಬ್ಬ ಸರದಾರ ಹೇಳಿದರು, "ಮಹಾರಾಜರು ಇದ್ದಾರೆ. ಮೊಘಲರ ಜೊತೆಗಿನ ಒಪ್ಪಂದ ಮುರಿದು ಹೋಯಿತು. ಮೊಘಲ್ ಸೈನ್ಯ ಬೆನ್ನಿಗೆ ಇದೆ. ಕೋಟೆಯ ಬಾಗಿಲು ತೆಗೆಯಿರಿ." ಇದನ್ನು ಕೇಳಿದ ತಕ್ಷಣ ಭಿಲ್ಲ ಮಹಾರಾಜರಿಗೆ ಮೂಜುರೆ ಮಾಡಿ ಕೋಟೆಯ ಕಿಲ್ಲೆದಾರನಿಗೆ ವರದಿ ಮಾಡಲು ಹೋದನು. ಕಿಲ್ಲೇದಾರ ಹೆಬ್ಬಾಗಿಲಿನ ಹತ್ತಿರ ಬಂದನು. ಮಹಾರಾಜರು ಹೊರಗಿನಿಂದ ಕಾಯುತ್ತಿದ್ದರು. ಕಿಲ್ಲೆದಾರ ಒಳಗಿನಿಂದಲೇ ಮೂಜೂರೆ ಮಾಡಿ ನಿಂತುಕೊಂಡನು. ಎಲ್ಲರಿಗೂ ಆತ ಸೂಚನೆಗಳನ್ನು ಕೊಡುತ್ತಿದ್ದನು. ಮಶಾಲ ಹಿಡಿದ ಸೈನಿಕರೇಲ್ಲ ತಾವು ನಿಂತ ಸ್ಥಳದಿಂದಲೇ ಮಹಾರಾಜರಿಗೆ ವಂದಿಸಿ ತಮ್ಮ ಗಸ್ತಿ ಹಾಕುವ ಕೆಲಸ ಮುಂದುವರಿಸಿದರು. "ಬಾಗಿಲು ತೆಗೆಯಿರಿ" ಮಹಾರಾಜರು ಆದೇಶ ನೀಡಿದರು. ಕಿಲ್ಲೆದಾರ ಶಾಂತನಾಗಿ ನಿಂತಿದನು. ರಾಜರು ಮತ್ತೆ ಕೂಗಿದರು, " ಬಾಗಿಲು ತೆಗೆಯಿರಿ." ಕಿಲ್ಲೆದಾರ್ ವಿನಂತಿಪೂರ್ವಕ ಕೇಳಿದನು, ಮಹಾರಾಜರೆ, ನಿಮ್ಮ ಹತ್ತಿರ ಜೀಜಾವು ಮಾಸಾಹೇಬ, ಪ್ರಧಾನಿಗಳು ಅಥವಾ ಸರನೋಬತ ಇವರ ಲಿಖಿತ ಅಪ್ಪಣೆ ಪತ್ರ ಇದೆಯೇ?" "ಪತ್ರ? ಈ ವೇಳೆ ನನ್ನ ಹತ್ತಿರ ಹೇಗೆ ಇರಬೇಕು? ಬೇಗ ಬಾಗಿಲು ತೆರೆಯದ್ದಿದ್ದರೆ ನಿನ್ನ ರುಂಡ ತೆಗೆಯಲಾಗುವುದು." ಕಿಲ್ಲೇದಾರ ಶಾಂತನಾಗಿ, ನಿಶ್ಚಯಪೂರ್ವಕ ಉತ್ತರಿಸಿದನು. "ಬಾಗಿಲು ಮುಂಜಾನೆ ತೆರೆಯಲಾಗುವುದು. ಅಲ್ಲಿಯವರೆಗೆ ಮೊಘಲ್ ಸೈನ್ಯ ನಿಮ್ಮ ಕೂದಲೇಳೆಯು ಕೊಂಕಿಸಲಾರದು ಎಂಬುದರ ದಕ್ಷತೆ ತೆಗೆದುಕೊಳ್ಳಲಾಗಿದೆ." ಮುಂಜಾನೆ ಬಾಗಿಲು ತೆರೆಯಲಾಯಿತು. ಕಿಲ್ಲೆದಾರ್ ಮತ್ತು ಇತರ ಸೈನಿಕರು ಮುಜುರೆ ಮಾಡಿ ಬದಿಗೆ ನಿಂತುಕೊಂಡರು. ಮಹಾರಾಜರು ಸಿಟ್ಟಿನಿಂದ ಕಿಲ್ಲೇದಾರನನ್ನು ನೋಡುತ್ತಿದ್ದರು. ಸ್ವಲ್ಪ ಹೊತ್ತಿನ ಬಳಿಕ ಮಹಾರಾಜರ ಸಿಟ್ಟು ಮಾಯವಾಯಿತು. ಅವರು ಕಿಲ್ಲೇದಾರನ ಹೆಗಲ ಮೇಲೆ ಕೈಸವರುತ್ತ ಸಮಾಧಾನದಿಂದ ಹೇಳಿದರು, "ನಿಮ್ಮಂಥ ಕರ್ತವ್ಯನಿಷ್ಠ ಮಾವಳೆಗಳು ಜೊತೆಗಿದ್ದರೆ ಸಂಪೂರ್ಣ ರಾಷ್ಟ್ರ ಸ್ವರಾಜ್ಯದಲ್ಲಿ ತರೋಣ."

ಹೀಗೆ ಹಿಂದವೀ ಸ್ವರಾಜ್ಯ ಸ್ಥಾಪನೆ ಮಾಡುವಲ್ಲಿ ಸಾಮಾನ್ಯರಲ್ಲಿ ಸಾಮಾನ್ಯ ಜನರೂ ನಿಷ್ಠೆಯಿಂದ ದುಡಿದು ಅಸಾಮಾನ್ಯ ರೇನಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು