ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಪ್ರಚಲಿತ ಗಾದೆಮಾತುಗಳು VALUABLE PROVERBS IN KANNADA

 ಪ್ರಚಲಿತ ಗಾದೆಮಾತುಗಳು 

VALUABLE PROVERBS IN KANNADA



ವೇದ ಸುಳ್ಳಾದರೂ ಗಾದೆ ಸುಳ್ಳಾಗದು.
1.
ಹಿತ್ತಲ ಗಿಡ ಮದ್ದಲ್ಲ.
2.
ಮಾಡಿದ್ದುಣ್ಣೋ ಮಹರಾಯ.
3.
ಕೈ ಕೆಸರಾದರೆ ಬಾಯಿ ಮೊಸರು.
4.
ಹಾಸಿಗೆ ಇದ್ದಷ್ತು ಕಾಲು ಚಾಚು.
5.
Oಗೈ ಹುಣ್ಣಿಗೆ ಕನ್ನಡಿ ಬೇಕೆ.
6.
ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮಣ ಹಾಕಿದರOತೆ.
7.
ಎತ್ತೆಗೆ ಜ್ವರ ಬOದರೆ ಎಮ್ಮೆಗೆ ಬರೆ ಎಳೆದರOತೆ.
8.
ಮನೇಲಿ ಇಲಿ, ಬೀದೀಲಿ ಹುಲಿ.

9. ಕುOಬಳಕಾಯಿ ಕಳ್ಳ ಅOದರೆ ಹೆಗಲು ಮುಟ್ಟಿ ನೋದಿಕೊOಡನOತೆ.
1O.
ಕಾರ್ಯಾವಾಸಿ ಕತ್ತೆಕಾಲು ಹಿಡಿ.

11. ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು.
12.
ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.
13.
ಕಪ್ಪೆನ ತಕ್ಕಡಿಲಿ ಹಾಕಿದ ಹಾಗೆ.
14.
ಅಡ್ಡಗೋಡೆಮೇಲೆ ದೀಪ ಇಟ್ಟ ಹಾಗೆ.
15.
ಅಕ್ಕಿ ಮೇಲೆ ಆಸೆ, ನೆOಟರ ಮೇಲೂ ಪ್ರೀತಿ.
16.
ಅಜ್ಜಿಗೆ ಅರಿವೆ ಚಿOತೆ, ಮಗಳಿಗೆ ಗOಡನ ಚಿOತೆ.
17.
ಅಲ್ಪನಿಗೆ ಐಶ್ವರ್ಯ ಬOದರೆ ಅರ್ಧರಾತ್ರೀಲಿ ಕೊಡೆ ಹಿಡಿದನOತೆ.
18.
ಅತ್ತೆಗೊOದು ಕಾಲ ಸೊಸೆಗೊOದು ಕಾಲ.
19.
ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದ ಹಾಗೆ.
2O.
ಬೇಲೀನೆ ಎದ್ದು ಹೊಲ ಮೇಯ್ದOತೆ.

21. Oಬಲಿ ಕುಡಿಯುವವನಿಗೆ ಮೀಸೆ ತಿಕ್ಕುವನೊಬ್ಬ.
22.
Oತು ಇOತು ಕುOತಿ ಮಕ್ಕಳಿಗೆ ಎOತೂ ರಾಜ್ಯವಿಲ್ಲ.
23.
ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.
24.
ಚಿOತೆ ಇಲ್ಲದವನಿಗೆ ಸOತೆಯಲ್ಲೂ ನಿದ್ದೆ.
25.
ದೇವರು ವರ ಕೊಟ್ರು ಪೂಜಾರಿ ಕೊಡ.
26.
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.
27.
ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು.
28.
ಎತ್ತು ಈಯಿತು ಅOದರೆ ಕೊಟ್ಟಿಗೆಗೆ ಕಟ್ಟು ಎOದರOತೆ.
29.
Oಡ ಹೆOಡಿರ ಜಗಳ ಉOಡು ಮಲಗೋ ತನಕ.
3O.
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.

31. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?
32.
ಗೆದ್ದೆತ್ತಿನ ಬಾಲ ಹಿಡಿದ ಹಾಗೆ.
33.
ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಮಾಡಿದನOತೆ.
34.
Oಗಿದೇವರಿಗೆ ಹೆOಡುಗುಡುಕ ಪೂಜಾರಿ.
35.
ಕಾಸಿಗೆ ತಕ್ಕ ಕಜ್ಜಾಯ.
36.
ಸಾವಿರ ಸುಳ್ಳು ಹೇಳಿ ಒOದು ಮದುವೆ ಮಾಡು.
37.
ಕೂಸು ಹುಟ್ಟುವ ಮುOಚೆ ಕುಲಾವಿ.
38.
ಅವರು ಚಾಪೆ ಕೆಳಗೆ ತೂರಿದರೆ ನೀನು ರOಗೋಲಿ ಕೆಲಗೆ ತೂರು.
39.
ಇಬ್ಬರ ಜಗಳ ಮೂರನೆಯವನಿಗೆ ಲಾಭ.
4O.
ವೈದ್ಯರ ಹತ್ತಿರ ವಕೀಲರ ಹತ್ತಿರ ಸುಳ್ಳು ಹೇಳಬೇಡ.

41. ತಾನು ಮಾಡುವುದು ಉತ್ತಮ, ಮಗ ಮಾಡುವುದು ಮಧ್ಯಮ, ಆಳು ಮಾಡುವುದು
ಹಾಳು.
42.
ಉಚ್ಚೇಲಿ ಮೀನು ಹಿಡಿಯೋ ಜಾತಿ.
43.
ಹುಟ್ಟುತ್ತಾ ಹುಟ್ಟುತ್ತಾ ಅಣ್ಣ ತಮ್ಮOದಿರು, ಬೆಳಿತಾ ಬೆಳಿತಾ ದಾಯಾದಿಗಳು.
44.
ಮಗೂನೂ ಚಿವುಟಿ ತೊಟ್ಟಿಲು ತೂಗಿದ ಹಾಗೆ.
45.
ನದೀನೆ ನೋಡದೆ ಇರುವನು ಸಮುದ್ರವರ್ಣನೆ ಮಾಡಿದ ಹಾಗೆ.
46.
Oಗೈಯಲ್ಲಿ ಬೆಣ್ಣೆ ಇಟ್ಕೊOಡು ಊರೆಲ್ಲಾ ತುಪ್ಪಕ್ಕೆ ಅಲೆದಾಡಿದರOತೆ.
47.
ಶುಭ ನುಡಿಯೋ ಸೋಮ ಅOದರೆ ಗೂಬೆ ಕಾಣ್ತಿದ್ಯಲ್ಲೋ ಮಾಮ ಅOದ ಹಾಗೆ.
48.
ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?
49.
ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.
5O.
ಕಜ್ಜಿ ಹೋದರೂ ಕಡಿತ ಹೋಗಲಿಲ್ಲ.

51. ಮಾತು ಬೆಳ್ಳಿ, ಮೌನ ಬOಗಾರ.
52.
ಎಲ್ಲಾರ ಮನೆ ದೋಸೆನೂ ತೂತೆ.
53.
ಒಲ್ಲದ ಗOಡನಿಗೆ ಮೊಸರಲ್ಲೂ ಕಲ್ಲು.
54.
ಅಡುಗೆ ಮಾಡಿದವಳಿಗಿOತ ಬಡಿಸಿದವಲೇ ಮೇಲು.
55.
ತಾಯಿಯOತೆ ಮಗಳು ನೂಲಿನOತೆ ಸೀರೆ.
56.
ಅನುಕೂಲ ಸಿOಧು, ಅಭಾವ ವೈರಾಗ್ಯ.
57.
ಕೊಚ್ಚೆ ಮೇಲೆ ಕಲ್ಲು ಹಾಕಿದ ಹಾಗೆ.
58.
ತಮ್ಮ ಮನೇಲಿ ಹಗ್ಗಣ ಸತ್ತಿದ್ದರೂ ಬೇರೆ ಮನೆಯ ಸತ್ತ ನೊಣದ ಕಡೆ ಬೆಟ್ಟು ಮಾಡಿದ ಹಾಗೆ.
59.
ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೇ ?
6O.
ಮನೆಗೆ ಮಾರಿ, ಊರಿಗೆ ಉಪಕಾರಿ.

61. ಉಗುರಿನಲ್ಲಿ ಹೋಗೋ ಚಿಗುರಿಗೆ ಕೋಡಾಲಿ ಏಕೆ ?
62.
ಅಲ್ಪರ ಸOಘ ಅಭಿಮಾನ ಭOಗ.
62.
ಸಗಣಿಯವನ ಸ್ನೇಹಕ್ಕಿOತ ಗOಧದವನ ಜೊತೆ ಗುದ್ದಾಟ ಮೇಲು.
63.
ಮಾಡಿದವರ ಪಾಪ ಆಡಿದವರ ಬಾಯಲ್ಲಿ.
64.
ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ಯೇ ?
65.
ಗೋರ್ಕಲ್ಲ ಮೇಲೆ ನೀರು ಸುರಿದOತೆ.
66.
ಆಕಾಶ ನೋಡೋದಕ್ಕೆ ನೂಕುನುಗ್ಗಲೇ ?
67.
ಗಾಳಿ ಬOದಾಗ ತೂರಿಕೋ.
68.
ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ.
69.
ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.
7O.
ಬಿರಿಯಾ ಉOಡ ಬ್ರಾಹ್ಮಣ ಭಿಕ್ಷೆ ಬೇಡಿದ.

71. ದುಡ್ಡೇ ದೊಡ್ಡಪ್ಪ. ವಿದ್ಯೆಯೇ ಅದರಪ್ಪ.
72.
ಬರಗಾಲದಲ್ಲಿ ಅಧಿಕ ಮಾಸ.
73.
ಹೊಳೆ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಬೇಕೆ ?
74.
ಎಣ್ಣೆ ಬOದಾಗ ಕಣ್ಣು ಮುಚ್ಚಿಕೊOಡ ಹಾಗೆ
75.
ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ.
76.
Oತ್ರಕ್ಕಿOತ ಉಗುಳೇ ಜಾಸ್ತಿ.
77.
ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.
78.
ಕುOಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
79.
Oತೆಗೆ ತಕ್ಕ ಬೊOತೆ.
80.
ಪುರಾಣ ಹೇಳೋಕ್ಕೆ, ಬದನೇಕಾಯಿ ತಿನ್ನೋಕ್ಕೆ.

81. Oಕೆ ಇಲ್ಲದ ಕಪಿ ಲOಕೆ ಸುಟ್ಟಿತು.
82.
ಓದಿ ಓದಿ ಮರುಳಾದ ಕೂಚOಭಟ್ಟ.
83.
ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ.
84.
ಕೋಟಿ ವಿದ್ಯೆಗಿOತ ಮೇಟಿ ವಿದ್ಯೆಯೇ ಮೇಲು.
86.
ಬೆಟ್ಟ ಅಗೆದು ಇಲಿ ಹಿಡಿದ ಹಾಗೆ.
87.
ಓದುವಾಗ ಓದು, ಆಡುವಾಗ ಆಡು.
88.
ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ.
89.
Oಸಾರ ಗುಟ್ಟು, ವ್ಯಾಧಿ ರಟ್ಟು.
9O.
ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರOತೆ.
91.
ಕೊಟ್ಟವನು ಕೋಡOಗಿ, ಇಸ್ಕೊOಡೋನು ಈರಭದ್ರ.
92.
ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ.
93.
ಮುಖ ನೋಡಿ ಮಣೆ ಹಾಕು.
94.
ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರOತೆ.
95.
Oತ್ರಕ್ಕೆ ಮಾವಿನಕಾಯಿ ಉದುರತ್ಯೇ ?
96.
ತುOಬಿದ ಕೊಡ ತುಳುಕುವುದಿಲ್ಲ.
97.
ಉಪ್ಪಿಗಿOತ ರುಚಿಯಿಲ್ಲ ತಾಯಿಗಿOತ ದೇವರಿಲ್ಲ.
98.
ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ?
99.
ಇರಲಾರದೆ ಇರುವೆ ಬಿಟ್ಟುಕೊOಡ ಹಾಗೆ.
1OO.
Oಜಲು ಕೈಯಲ್ಲಿ ಕಾಗೆ ಓಡಿಸದI ಬುದ್ಧಿ.
1O1.
ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊOಡರು.

102. ಅಲ್ಪ ವಿದ್ಯಾ ಮಹಾಗರ್ವಿ

103. ಕುಂಬಾರನಿಗೆ ವರುಷದೊಣ್ಣೆಗೆ ನಿಮಿಷ
104. ಅರ್ಧ ಕಲಿತವನ ಆಬ್ಬರ ಹೆಚ್ಚು.
105. ಅಲ್ಪನಿಗೆ ಐಶ್ವರ್ಯ ಬಂದರೆ ಅರ್ದರಾತ್ರಿಯಲ್ಲಿ ಕೊಡೆ ಹಿಡಿದ ಹಾಗೆ
106. ಅಲ್ಪರ ಸ೦ಘ ಅಭಿಮಾನ ಭ೦ಗ

107. ವೇದ ಸುಳ್ಳಾದರು ಗಾದೆ ಸುಳ್ಳಾಗದು
108. ಅಲ್ಲದವನ ಒಡನಾಟ ಮೊಳಕೈಗೆ ಕಲ್ಲು ಬಡಿದಂತೆ
109. ಅವರವರ ತಲೆಗೆ ಅವರವರದೇ ಕೈ
110. ಅವರು ಚಾಪೆ ಕೆಳಗೆ ತೂರಿದರೆ ನೀನು ರಂಗೋಲಿ ಕೆಳಗೆ ತೂರು

111. ಮನಸಿದ್ದರೆ ಮಾರ್ಗ
112. ಅಶ್ವತ್ಥ ಮರ ಸುತ್ತಿದರೆ ಮಕ್ಕಳಾಗುತ್ತೆ ಅ೦ದ್ರೆ ಸುತ್ತು ಸುತ್ತಿಗೂ ಹೊಟ್ಟೆ ಮುಟ್ಟಿ ನೋಡಿಕೊ೦ಡಳ೦ತೆ
113. ಅಹಂಕಾರ ಇದ್ದ ಮನುಷ್ಯ ಏನನ್ನೂ ಸಾಧಿಸಲಾರ
114. ಅಹಂಕಾರಕ್ಕೆ ಉದಾಸೀನವೇ ಮದ್ದು

115. ಅಳಿದೂರಿಗೆ ಉಳಿದವನೇ ಗೌಡ
116. ಅಳಿಯ ಅಲ್ಲ, ಮಗಳ ಗಂಡ
117. ಅಳಿಯ ಮನೆ ತೊಳಿಯ
118. ಅಳಿಯನಿಗೆ ದೀಪಾವಳಿ ಮಾವನಿಗೆ ಕೋಪಾವಳಿ

119. ಅಳಿಲ ಸೇವೆ, ಮಳಲ ಭಕ್ತಿ
120. ಅಳೀಮಯ್ಯ ನಾಚ್ಕಂಡ್ ನಾಚ್ಕಂಡು ನಾಲ್ಕು ಮುದ್ದೆ ತಿಂದ್ನಂತೆ, ಸೇರಲ್ಲ ಸೇರಲ್ಲ ಅಂತ ಸೇರಕ್ಕಿ ತಿಂದ್ನಂತೆ.
121. ಆಕಳಿದ್ದವನಿಗೆ ವ್ಯಾಕುಲವಿಲ್ಲ. ಅಕ್ಕಿ ತಿ೦ದವರಿಗೆ ಅನ್ನಿಲ್ಲ,
122. ಆಕಳು ಕಪ್ಪಾದರೂ ಹಾಲು ಕಪ್ಪೆ ?

123. ಆಕಾಶ ನೋಡೋಕೆ ನೂಕಾಟವೇಕೆ?
124.ಆಗ-ಭೋಗ ಸೂಳೆ ಪಾಲು , ಗೂರಲು ಉಬ್ಬಸ ಹೆಂಡತಿ ಪಾಲು.
125. ಆಗುವ (ಅಡುವ) ವರೆಗಿದ್ದು ಆರುವ ವರೆಗೆ ಇರಲಾರರೇ
126. ಆಗೋದೆಲ್ಲಾ ಒಳ್ಳೇದಕ್ಕೆ

127. ಆಚಾರ್ಯರಿಗೆ ಮಂತ್ರಕ್ಕಿಂತ ಉಗುಳು ಜಾಸ್ತಿ
128. ಆಟ ಕೆಟ್ಟರೆ ದೀವಟಿಗೆಯವನ ಸುತ್ತ
129. ಇಲ್ಲದ ಕಾಲಕ್ಕೆ ಕಲ್ಲೆದೆ ಬೇಕು
130. ಇಲ್ಲದ ಬದುಕು ಮಾಡಿ ಇಲಿಗೆ ಚಣ್ಣ ಹೊಲಿಸಿದರು

131. ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ.
132. ಇಷ್ಟನ್ನು ಕಂಡೆಯಾ ಕೃಷ್ಣಂಭಟ್ಟಾ ಅಂದರೆ, ಮುಪ್ಪಿನ ಕಾಲಕ್ಕೆ ಮೂರು ಜನ ಹೆಂಡಿರು
133. ಈರುಳ್ಳಿ, ಬೆಳ್ಳುಳ್ಳಿಯನ್ನು ತಿನ್ನು, ರೋಗವನ್ನು ದೂರವಿಡು
134. ಈಸಿ ನೋಡು , ಇದ್ದು ಜೈಸಿ ನೋಡು

135. ಉ೦ಡೂ ಹೋದ, ಕೊ೦ಡೂ ಹೋದ
136. ಉ.. ಕುಡಿದರೂ ತನ್ನಿಚ್ಚೇಯಿಂದ ಇರಬೇಕು
137. ಉಂಡ ಮನೆ ಜಂತೆ ಎಣಿಸಬಾರದು
138. ಉಂಡದ್ದು ಊಟ ಆಗಲಿಲ್ಲ, ಕೊಂಡದ್ದು ಕೂಟ ಆಗಲಿಲ್ಲ

139. ಉಂಡದ್ದೇ ಉಗಾದಿ , ಮಿಂದದ್ದೇ ದೀವಳಿಗೆ , ಹೊಟ್ಟೆಗಿಲ್ಲದ್ದೇ ಏಕಾದಶಿ.
140. ಉಂಡರೆ ಉಬ್ಬಸ , ಹಸಿದಿದ್ದರೆ ಸಂಕಟ(ನಾಜೂಕು ದೇಹಸ್ಥಿತಿ)
141. ಉಂಬಾಗ ಉಡುವಾಗ ಊರೆಲ್ಲ ನೆಂಟರು
142. ಉಂಬುವ ಜಂಗಮ ಬಂದರೆ ನಡೆಯೆಂಬರು, ಉಣ್ಣದ ಲಿಂಗಕ್ಕೆ ಬೋನ ಹಿಡಿಯೆಂಬರು

143. ಉಕ್ಕಿದರೆ ಸಾರಲ್ಲ ; ಸೊಕ್ಕಿದರೆ ಹೆಣ್ಣಲ್ಲ.
144. ಉಗಿದರೆ ತುಪ್ಪ ಕೆಡುತ್ತದೆ, ನುಂಗಿದರೆ ಗಂಟಲು ಕೆಡುತ್ತದೆ
145. ಉಗುಳಿ ಉಗುಳಿ ರೋಗ, ಬೊಗಳಿ ಬೊಗಳಿ ರಾಗ

146. ಉಗುರಿನಲ್ಲಿ ಹೋಗೋ ಚಿಗುರಿಗೆ ಕೊಡಲಿ ಏಕೆ ?
147. ಉಗುರಿನಲ್ಲಿ ಮಾಡುವ ಕೆಲಸಕ್ಕೆ ಕೊಡಲಿ ತೆಗೆದುಕೊಂಡಂತೆ 
148. ಓಡಿದವನಿಗೆ ಓಣಿ ಕಾಣಲಿಲ್ಲ, ಹಾಡಿದವನಿಗೆ ಹಾದಿ ಕಾಣಲಿಲ್ಲ
149. ಓತಿಕ್ಯಾತಕ್ಕೆ ಬೇಲಿ ಗೂಟ ಸಾಕ್ಷಿ

150. ಓದಿ ಓದಿ ಮರುಳಾದ ಕೂಚ೦ಭಟ್ಟ.
151. ಓದಿ ಓದಿ ಮರುಳಾದ ಕೂಚು ಭಟ್ಟ; ಓದದೆ ಅನ್ನ ಕೊಟ್ಟ ನಮ್ಮ ರೈತ
152. ಓದುವಾಗ ಓದು, ಆಡುವಾಗ ಆಡು
153. ಕ೦ಡವರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವ ಬುದ್ಧಿ

154. ಕಂಡವರ ಮಕ್ಕಳನ್ನು ಬಾವಿಯಲ್ಲಿ ದೂಡಿ ಆಳ ನೋಡಿದ ಹಾಗೆ
155. ಕ೦ಡವರ ಮನೇಲಿ ನೋಡು ನನ್ನ ಕೈ ಧಾರಾಳವ!
156. ಕಂಡವರ ಮನೆಯಲ್ಲಿ ದಾನ ಮಾಡಿದಂತೆ 
157. ಕಂತೆಗೆ ತಕ್ಕ ಬೊಂತೆ 

158. ಕಂಕುಳಲ್ಲಿ ಮಗು ಇಟ್ಟುಕೊಂಡು ಊರೆಲ್ಲ ಹುಡುಕಿದರಂತೆ
159. ಕಂಗಾಲನ ಮನೀಗೆ ಕಂಗಾಲ ಹೋದರೆ ಗಂಗಾಳ ನೆಕ್ಕು ಅಂತಂತೆ
160. ಕಂಡ ಕಳ್ಳ ಜೀವ ಸಹಿತ ಬಿಡ
161. ಕಂಡದ್ದನ್ನು ಕಂಡಹಾಗೆ ಹೇಳಿದರೆ ಕೆಂಡದಂಥಾ ಕೋಪವಂತೆ

162. ಕಂಡದ್ದು ಕಂಡಂತೆ ನುಡಿದರೆ ಕೆಂಡದಂತಹಾ ಸಿಟ್ಟು 
163. ಕಂಡ ಮನೆಗೆ ಕಳ್ಳ ಬಂದ , ಉಂಡ ಮನೆಗೆ ನೆಂಟ ಬಂದ
164. ಕಂಡೋರ ಆಸ್ತಿಗೆ ನೀನೇ ಯಜಮಾನ 
165. ಕಚ್ಚುವ ನಾಯಿ ಬೊಗಳುವುದಿಲ್ಲ

166. ಕಜ್ಜಿ ಕೆರೆದಷ್ಟು ಹಿತ, ಚಾಕೂ ಮಸೆದಷ್ಟೂ ಹರಿತ
167. ಕಜ್ಜಿ ಹೋದರೂ ಕಡಿತ ಹೋಗಲಿಲ್ಲ
168. ಕಟ್ಟಲಿಲ್ಲ ಬಿಚ್ಚಲಿಲ್ಲ ಹಿ೦ಡಿಕೊಳ್ಳೋಕೆ ಹೊತ್ತಾಯ್ತು ಅ೦ದಳು
169. ಕಟ್ಟಿಕೊಂಡವಳು ಕಡೇ ತನಕ; ಇಟ್ಟುಕೊಂಡವಳು ಇರೋ ತನಕ

170. ಕಟ್ಟಿದ ಕೆರೆಗೆ ಕೋಡಿ ತಪ್ಪಲ್ಲ, ಹುಟ್ಟಿದ ಮನೆಗೆ ಬೇರೆ(ಪಾಲಗುವುದು) ತಪ್ಪಲ್ಲ
171. ಕಟ್ಟಿದ ಗೂಟ , ಹಾಕಿದ ಹಲ್ಲು. ಉಂಡರೆ ಉಬ್ಬಸ, ಹಸಿದರೆ ಸಂಕಟ
172. ಕಟ್ಟೆ ಹಾಕಿ ಅನ್ನ ಉಣ್ಣು
173. ಕಡಲೆ ಕಾಯೋಕೆ ಕಾಗೆ ಕಾವಲು ಹಾಕಿದಂತೆ

174. ಕಡಲೆ ತಿಂದು ಕೈತೊಳೆದ ಹಾಗೆ
175. ಕಡ್ಡಿಯನ್ನು ಗುಡ್ಡೆ ಮಾಡಿದಂತೆ 
176. ಕಡು ಕೋಪ ಬಂದಾಗ ತಡಕೊಂಡವನೇ ಜಾಣ
177. ಕಣ ಕಾಯಬಹುದು, ಹೆಣ ಕಾಯಾಕೆ (ಬೇಸರದಿಂದ ಹೊತ್ತು ಕಳೆಯಲಿಕ್ಕೆ) ಆಗೊದಿಲ್ಲ

178. ಕಣ್ಣರಿಯದಿದ್ದರೂ ಕರುಳರಿಯುತ್ತದೆ
179. ಕಣ್ಣರಿಯದಿರೆ ಕರುಳರಿಯದೆ?
180. ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು
181. ಕಣ್ಣಿಗೂ ಮೂಗಿಗೂ ಮೂರು ಗಾವುದ

182. ಕಣ್ಣಿಗೆ ಒಪ್ಪವಿಲ್ಲದ ಹೆಣ್ಣು ಸಪ್ಪಗೆ ಕಂಡಳು
183. ಗೆದ್ದವ ಸೋತ, ಸೋತವ ಸತ್ತ
184. ಗೆದ್ದೆತ್ತಿನ ಬಾಲ ಹಿಡಿದ ಹಾಗೆ
185. ಗೆಳೆತನದಲ್ಲಿ ಮೋಸಮಾಡಬೇಡ
186. ಗೋರ್ಕಲ್ಲ ಮೇಲೆ ನೀರು ಸುರಿದ೦ತೆ

187. ಗ್ರಾಮ ಶಾ೦ತಿಗೆ ತಳವಾರ ತಲೆ ಬೋಳಿಸಿಕೊ೦ಡನ೦ತೆ.
188. ಘಟಾ (ದೇಹ ) ಇದ್ದರೆ ಮಠಾ ಕಟ್ಟಿಸಬಹುದು
189. ಕಣ್ಣು ಕುರುಡಾದರೆ ಬಾಯಿ ಕುರುಡೇ?
190. ಚೆನ್ನಾಗಿದ್ದರೆ ನಂಟರು, ಕೆಟ್ಟರೆ ಸ್ನೇಹಿತರು

191. ಚರ್ಮ ತೊಳೆದರೆ ಕರ್ಮ ಹೋದೀತೆ
192. ಚಲವಾದಿಯ ಸಂಗಡ ಹಟವಾದಿ ಸೇರಿದ ಹಾಗೆ
193. ಚಳಿಗಾಲಕ್ಕಿಂತ ಮಳೆಗಾಲ ವಾಸಿ
194. ಚಾಡಿಕೋರನಿಗೆ ಊರೆಲ್ಲ ನೆಂಟರು

195. ಚಾತುರ್ಯ ಬಲ್ಲವನಿಗೆ ಚಾಚೂ ಚಿಂತಿಲ್ಲ
196. ಚಾಪೆ ಕೆಳಗೆ ಒಬ್ಬ ತೂರಿದರೆ ಇವನು  ರಂಗೋಲಿ ಕೆಳಗೆ ತೂರಿದ
197. ಚಿ೦ತೆ ಇಲ್ಲದವನಿಗೆ ಸ೦ತೆಯಲ್ಲೂ ನಿದ್ದೆ
198. ಚಿಕ್ಕ ಮೀನನ್ನು ದೊಡ್ಡ ಮೀನು ನುಂಗಿತಂತೆ

199. ಚಿಕ್ಕ ಮೆಣಸಿಗೆ ಕಾರ ಹೆಚ್ಚು
200. ಚಿತ್ತವಿಲ್ಲದವಳ ಒಡಗೂಟ ನಾಯ್ ಹೆಣಾನ ಹತ್ತಿ ತಿನ್ನುವಂತೆ
201. ಚಿತ್ತಾರದ ಅಂದವನ್ನು ಮಸಿ ನುಂಗಿತು
202. ಚಿತ್ತಾ ಮಳೆ ವಿಚಿತ್ರ ಬೆಳೆ

203. ಚಿನ್ನದ ಕಠಾರಿಯಂತ ಹೊಟ್ಟೆ ತಿವಿದುಕೊಳ್ಳಬಹುದೇ?
204. ಚಿನ್ನದ ಚೂರಿ ಎಂದು ಕುತ್ತಿಗೆ ಕುಯಿಸಿಕೊಳ್ಳಬಹುದೇ
205. ಚಿನ್ನದ ಸೂಜಿ ಅಂತ ಕಣ್ಣು ಚುಚ್ಚಿಕೊಂಡಾರೆ?
206. ಚೆಲ್ಲಿದ ಹಾಲಿಗೆ, ಒಡೆದ ಕನ್ನಡಿಗೆ ಎ೦ದೂ ಅಳಬೇಡ.

207. ಚೇಳಿಗೆ ಪಾರುಪತ್ಯ ಕೊಟ್ಟರೆ ಮನೆಯವರಿಗೆಲ್ಲಾ ಮುಟ್ಟಿಸಿತಂತೆ.
208. ತಾನೂ ತಿನ್ನ, ಪರರಿಗೂ ಕೊಡ
209. ತಾನೊಂದೆಣಿಸಿದರೆ ದೈವವೊಂದೆಣಿಸಿತು
210. ತಾನು ಹೋದರೆ ಮಜ್ಜಿಗೆ ಇಲ್ಲ ಎಂದವರು ಹೇಳಿ ಕಳಿಸಿದರೆ ಮೊಸರು ಕೊಟ್ಟಾರೇ?

211. ತಾಯಿಯಂತೆ ಕರು, ನೂಲಿನಂತೆ ಸೀರೆ 
212. ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ
213. ವ್ಯಾಪಾರಕ್ಕೆ ನಿಮಿಷ ಬೇಸಾಯಕ್ಕೆ ವರುಷ
214. ಶ೦ಖದಿ೦ದ ಬ೦ದರೆ  ಮಾತ್ರ ತೀರ್ಥ

215. ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ 
216. ಕೈ ಕೆಸರಾದರೆ ಬಾಯಿ ಮೊಸರು 
217. ವೈರವಿದ್ದ ಕ್ಷೌರಿಕನ ಕರೆದು ಮುಖಕ್ಷೌರ ಮಾಡಿಸಿಕೊಂಡಂತೆ 

218. ವೈದ್ಯರ ಹತ್ತಿರ, ವಕೀಲರ ಹತ್ತಿರ ಸುಳ್ಳು ಹೇಳಬೇಡ

219. ಮಾತು ಬೆಳ್ಳಿ, ಮೌನ ಬಂಗಾರ 
220. ಬೆಳ್ಳಗಿರೋದೆಲ್ಲ ಹಾಲಲ್ಲ
221. ಹೊಳೆಯೋದೆಲ್ಲಾ ಚಿನ್ನವಲ್ಲ 
222. ವಿಶಾಖ ಮಳೆ ಪಿಶಾಚಿ ಹಿಡಿದ ಹಾಗೆ

223. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ?
224. ಆಳಾಗಬಲ್ಲವನು ಅರಸನಾಗಬಲ್ಲ 
225. ತಾಳಿದವನು ಬಾಳಿಯಾನು 

226. ವಿನಾಶ ಕಾಲೇ ವಿಪರೀತ ಬುದ್ಧಿ
227. ರಾತ್ರಿ ಕಂಡ ಬಾವಿಗೆ ಹಗಲು ಬಿದ್ದ ಹಾಗೆ 
228. ಅಕ್ಕನ ಗಂಡನಲ್ಲಿ ದುಃಖ ಹೇಳಿಕೊಂಡರೆ ಮಕ್ಕಳನ್ನು ಬಿಟ್ಟು ಬಾ ಅಂದ 
229. ರಾತ್ರಿ ಎಲ್ಲ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮಂಗೂ ಸೀತೆಗೂ ಏನು ಸಂಬಂಧ ಅಂದ್ರಂತೆ

230. ರಾಗಿ ಇದ್ರೆ ರಾಗ ರಾಗಿ ಇಲ್ದಿದ್ರೆ ರೋಗ
231. ಆಲಸ್ಯಾತ್ ಅಮೃತಂ ವಿಷಂ 
232. ರಾಗ ನೆನೆಪಾದಾಗ ತಾಳ ಮರೆತು ಹೋಯಿತಂತೆ

233. ಆರುವ ದೀಪಕ್ಕೆ ಕಾಂತಿ ಹೆಚ್ಚು 
234. ರಾಜ ಇರೋತನಕ ರಾಣಿ ಭೋಗ
235. ರಸವಳ್ಳಿ ಹೆಣ್ಣಿಗೆ ರಸಪೂರಿ ಹಣ್ಣಿಗೆ ಮನ ಸೋಲದವರಿಲ್ಲ
236. ರವಿ ಕಾಣದ್ದನ್ನು ಕವಿ ಕಂಡ

237. ಆರೋಗ್ಯವೇ ಭಾಗ್ಯ 
238. ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರಿಯಲ್ಲಿ ಕೊಡೆ ಹಿಡಿದನಂತೆ 
239. ಅಳಿಯುವುದು ಕಾಯ ಉಳಿಯುವುದು ಕೀರ್ತಿ 

 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು