ಮಹಾರಾಷ್ಟ್ರ ರಾಜ್ಯದ ಶಾಲೆಯ ಪಠ್ಯಪುಸ್ತಕಗಳಲ್ಲಿ
ಬರೆಯಲು ಬಿಳಿಯ ಹಾಳೆಗಳನ್ನು ಸೇರಿಸುವ ಪ್ರಯೋಗ
ರಾಜ್ಯ
ಪಠ್ಯಪುಸ್ತಕ ನಿರ್ಮಿತಿ ಮತ್ತು ಪಠ್ಯಕ್ರಮ ಸಂಶೋಧನಾ ಮಂಡಳ, ಪುಣೆ ಅಂದರೆ 'ಬಾಲಭಾರತಿ' ಈ ವರ್ಷ ಪಠ್ಯಪುಸ್ತಕಗಳಲ್ಲಿ 'ನನ್ನ ಟಿಪ್ಪಣಿ' ಎಂಬ ಶೀರ್ಷಿಕೆಯ ನೋಟ್‌ಬುಕ್ ಪುಟಗಳನ್ನು ಸೇರಿಸಿದೆ.
ಬಾಲಭಾರತಿ ಅವರು ಪಠ್ಯಪುಸ್ತಕದ ನೋಟ್‌ಬುಕ್ ಪುಟಗಳಲ್ಲಿ ಮಾಡಬಹುದಾದ 21 ಸಂಗತಿಗಳ ಪಟ್ಟಿಯನ್ನು ಶಿಕ್ಷಕರಿಗೆ ಕಳುಹಿಸಿದ್ದಾರೆ. ಈ ಬಿಳಿಯ ಹಳೆಗಳ ಮೇಲೆ ಬರೆಯಬಹುದಾದ 15 ಪ್ರಯೋಜನಗಳನ್ನು
ಸಹ ಉಲ್ಲೇಖಿಸಲಾಗಿದೆ.
'ಬಾಲಭಾರತಿ ಅವರು
ಪಠ್ಯಪುಸ್ತಕಗಳ ರಚನೆಯನ್ನು ಬದಲಾಯಿಸಿದ್ದಾರೆ, ಪಠ್ಯಪುಸ್ತಕಗಳಿಗೆ ಲಗತ್ತಿಸಲಾದ ಸುತ್ತೋಲೆಗಳನ್ನು
ತೆಗೆದುಹಾಕಿದ್ದಾರೆ. ಬಿಳಿಯ ಹಳೆಗಳಿಂದ ದಫ್ತರ್ ತೂಕ ಹೆಚ್ಚಾಗಬಾರದೆಂದು I ರಿಂದ VIII ನೇ
ತರಗತಿವರೆಗಿನ ಸಮಗ್ರ ಪಠ್ಯಪುಸ್ತಕಗಳನ್ನು ನಾಲ್ಕು ವಿಭಾಗಗಳಲ್ಲಿ ನೀಡಲಾಗುತ್ತದೆ.
ಶಿಕ್ಷಕರು ಅಧ್ಯಾಪನೆ ಮಾಡುವಾಗ ವಿದ್ಯಾರ್ಥಿಗಳು ಮುಂದಿನ ಘಟಕಗಳನ್ನು ಟಿಪ್ಪಣಿ
ಪುಸ್ತಕದಲ್ಲಿ ಬರೆದುಕೊಳ್ಳಬಹುದು.
■ ಎಲ್ಲ ವಿದ್ಯಾರ್ಥಿಯ ಪುಸ್ತಕದಲ್ಲಿ ಒಂದೇ ತರಹದ ನೋಂದಣಿಗಳ
ಅಪೇಕ್ಷೆ ಶಿಕ್ಷಕರು ಮಾಡಬಾರದು. ಮುಕ್ತವಾಗಿ ಸ್ವಯಂ ವಿಚಾರಗಳನ್ನು ಬರೆಯುವ ಅವಕಾಶ ಕೊಡಿ.
■ ವಿದ್ಯಾರ್ಥಿಗಳು ದಿನಾಂಕವಾರು ನೊಂದಿಗಳನ್ನು ಮಾಡಬೇಕು.
■ ತರಗತಿಯ ಪಾಠ ಹೇಳುವಾಗ ಆಗುವ ಚರ್ಚೆಯ ಅಂಶಗಳನ್ನು ಬರೆಯಲು
ಬಳಸಿ.
■ ಬೋಧನೆ ಮಾಡುವಾಗ ಅಧ್ಯಯನದ ಪ್ರಮುಖ ಅಂಶಗಳನ್ನು
ದಾಖಲಿಸಬಹುದು.
■ ಶಿಕ್ಷಕರು ಸೂಚಿಸಿದ ಹೆಚ್ಚುವರಿ ಪ್ರಶ್ನೆಗಳನ್ನು
ದಾಖಲಿಸಲು ಹಾಳೆಗಳನ್ನು ಬಳಸಬಹುದು.
■ ಪತ್ರಿಕೆಗಳಲ್ಲಿ ಕಂಡುಬರುವ ಕೆಲವು ಉಲ್ಲೇಖಗಳು, ವಿವಿಧ ರೀತಿಯ
ಮಾಹಿತಿ / ಸಾಮಗ್ರಿಗಳನ್ನು ದಾಖಲಿಸಬೇಕು.
■ ಪತ್ರಿಕೆಗಳು, ಮಾಧ್ಯಮಗಳು ಇತ್ಯಾದಿಗಳು ಪ್ರಕಟಿಸುವ ಹೆಚ್ಚುವರಿ
ಮಾಹಿತಿಯನ್ನು ಪಾಠದ ಜೊತೆಗೆ ಬರೆಯಬೇಕು.
■ ಪಠ್ಯಪುಸ್ತಕಗಳ ಹೊರಗಿನ ಆದರೆ ವಿಷಯಕ್ಕೆ ಪೂರಕವಾದ
ಮಾಹಿತಿಯನ್ನು ದಾಖಲಿಸಬೇಕು.
■ ರೇಖಾಚಿತ್ರಗಳು, ಚಿತ್ರಗಳು, ಆಲೇಖಗಳನ್ನು ಬರೆಯಿರಿ.
■ ಪಾಠಕ್ಕೆ ಪೂರಕವಾದ ಅಂಶಗಳನ್ನು ಸಹ ಅದರ ಮೇಲೆ
ಬರೆಯಬಹುದು.
■ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಸೂಚಿಸಿದ
ಸ್ವಂತ ಉದಾಹರಣೆಗಳನ್ನು ದಾಖಲು ಮಾಡಿ.
■ ವಿಷಯವನ್ನು ಕಲಿಯುವಾಗ ಇತರ ವಿಷಯಗಳೊಂದಿಗೆ ಪರಸ್ಪರ
ಸಂಬಂಧಗಳ ದಾಖಲೆ.
■ ಮನೆಕೆಲಸವನ್ನು ಬರೆಯಲು.(Home Work)
■ ಚರ್ಚೆ ಅಥವಾ ಚಿಂತನಶೀಲ ಅಂಶಗಳನ್ನು ದಾಖಲಿಸಲು.
■ ಅಧ್ಯಯನ ಮಾಡುವಾಗ ಉಂಟಾಗುವ ಅನುಮಾನಗಳನ್ನು ಬರೆಯಲು.
■ ಅಧ್ಯಯನ-ಅಧ್ಯಾಪನ ಪ್ರಕ್ರಿಯೆಯಲ್ಲಿ ಉದ್ಭವಿಸುವ
ಪ್ರಶ್ನೆಗಳನ್ನು ಬರೆಯಬೇಕು.
■ ಕಚ್ಚಾ ಕೆಲಸ (ಪೆನ್ಸಿಲ್‌ನೊಂದಿಗೆ), ಸೂತ್ರಗಳನ್ನು
ಬರೆಯುವುದು, ಪ್ರಮುಖ ಅಭಿವ್ಯಕ್ತಿಗಳು, ಗಣಿತ ಬಿಡಿಸುವ ವಿಭಿನ್ನ ಟ್ರಿಕ್ಸ್ /ವಿಧಾನಗಳು, ಮಾಪಕಗಳನ್ನು
ರಚಿಸುವುದು, ಪರಿಶೀಲನೆ ಮುಂತಾದ ವಿವಿಧ ಕಾರ್ಯಗಳಿಗೆ ಪೇಪರ್‌ಗಳನ್ನು ಬಳಸಬೇಕು.
■ ಪರಸ್ಪರ
ಸಂಬಂಧಗಳನ್ನು ಮಾಡಲು, ವಿಸ್ತೃತ ಅರ್ಥವನ್ನು ದಾಖಲಿಸಲು ಪ್ರಮುಖ ಪರಿಕಲ್ಪನೆಗಳನ್ನು ಹೊರತೆಗೆಯಲು.
■ ಡ್ರಾಯಿಂಗ್, ಪ್ರಿಂಟಿಂಗ್, ಪೇಂಟಿಂಗ್ (ವರ್ಗ I ರಿಂದ V ವರೆಗೆ)
■ ನಿಯಮಗಳು, ಸೂತ್ರಗಳು, ಘಟನೆಗಳು, ರೇಖಾಚಿತ್ರಗಳು, ವ್ಯಾಖ್ಯಾನಗಳು, ಪರಿಕಲ್ಪನೆಯ ಚಿತ್ರಗಳು, ಮುಕ್ತ ಪ್ರಶ್ನೆಗಳ
ದಾಖಲೆ, ತುಲನಾತ್ಮಕ
ದಾಖಲೆಗಳು, ಪ್ರಪಂಚದ
ಪ್ರಾಯೋಗಿಕ ಅನುಭವದ ಉದಾಹರಣೆಗಳು, ನವೀನ ಚಟುವಟಿಕೆಗಳ ದಾಖಲೆ, ಸ್ವಯಂ-ರಚಿಸಿದ ಉದಾಹರಣೆಗಳನ್ನು ಇದರಲ್ಲಿ ದಾಖಲಿಸಬೇಕು.
■ ಸಮಾನಾರ್ಥಕ ಶಬ್ದಗಳು, ವಿರುದ್ಧ ಶಬ್ದಗಳು, ಪಡೆನುಡಿಗಳು, ಪರಿಕಲ್ಪನೆಗಳು, ಬಹುಪರ್ಯಾಯ ಪದಗಳು, ನುಡಿಗಟ್ಟುಗಳು, ಭಾಷಾವೈಶಿಷ್ಟ್ಯಗಳು, ಗಾದೆಗಳು, ಭಾಷಾ ಆಟಗಳು, ಭಾಷಾ ಸೌಂದರ್ಯ
ವಾಕ್ಯಗಳು, ವ್ಯಾಕರಣ
ವ್ಯಾಖ್ಯಾನಗಳು ಮತ್ತು ಉದಾಹರಣೆಗಳು, ಪ್ರಮುಖ ಭಾಷಾವೈಶಿಷ್ಟ್ಯಗಳು, ಬುದ್ಧಿವಂತಗೆ ಚಾಲನೆ ನೀಡುವ ಧ್ಯೇಯವಾಕ್ಯಗಳು, ಇಂಗ್ಲಿಷ್ ಶಬ್ದಗಳ
ಅರ್ಥ ಮಾತೃಭಾಷೆಯಲ್ಲಿ ಉಚ್ಛಾರಣೆಯೊಂದಿಗೆ ಬರೆಯುವುದು.
■ ಪರಸ್ಪರ ಸಂಬಂಧಗಳನ್ನು ಮಾಡಲು, ವಿಸ್ತೃತ
ಅರ್ಥವನ್ನು ದಾಖಲಿಸಲು ಪ್ರಮುಖ ಪರಿಕಲ್ಪನೆಗಳನ್ನು ಸೆಳೆಯಲು.
ಸದರಿ
ಪರಿಕಲ್ಪನೆಯು ಸನ್2023-24ರಲ್ಲಿ ಪ್ರಯೋಗಿಕ ತತ್ವದ ಮೇಲೆ ಮಾಡಲಾಗುತ್ತಿದ್ದು ಇದರ ಯಶಸ್ಸಿನ ಮೇಲೆ
ಮುಂದಿನ ಶೈಕ್ಷಣಿಕ ವರ್ಷದಿಂದ ದೊಡ್ಡ ಪ್ರಮಾಣದಲ್ಲಿ ಎಲ್ಲ ತರಗತಿಯ ಎಲ್ಲ ವಿಷಯಗಳ ಪುಸ್ತಕಗಳಿಗೆ ಹಳೆಗಳನ್ನು
ಸೇರಿಸಲಾಗುವುದು. ಶಿಕ್ಷಣ ಮತ್ತು ಶಿಕ್ಷಣದ ಸಾಹಿತ್ಯಗಳು ಪ್ರತಿಯೊಬ್ಬ ಬಾಲಕನಿಗೆ ತಲುಪುವುದು ಅವಶ್ಯಕವಾಗಿದೆ.
ಆದ್ದರಿಂದ ಬಾಲಭಾರತಿಯು ತಜ್ಞರ, ಶಿಕ್ಷಕರ, ಪಾಲಕರ ಜೊತೆಗೆ ಬೃಹತ ಚರ್ಚೆ ಮಾಡಿ ಪಠ್ಯಪುಸ್ತಕಗಳಿಗೆ ಬಿಳಿಯ ಹಳೆಗಳನ್ನು ಜೋಡಿಸುವ ಸಕರಾತ್ಮಕ
ವಿಷಯಕ್ಕೆ ಕೈ ಹಾಕಿದೆ. ಈ ಉಪಕ್ರಮವನ್ನು ಯಶಸ್ಸಿನ ಮಾರ್ಗಕ್ಕೆ ಒಯ್ಯುವ ಕಾರ್ಯ ಎಲ್ಲ ಶಿಕ್ಷಕರ ಹಾಗೂ
ವಿದ್ಯಾರ್ಥಿಗಳ ಕೈಯಲ್ಲಿದೆ.
0 ಕಾಮೆಂಟ್‌ಗಳು
ಧನ್ಯವಾದಗಳು