೫ ನೆಯ ತರಗತಿಯ ಶಿಷ್ಯವೃತ್ತಿ ಪರೀಕ್ಷೆಯ ತಯಾರಿ
ಸಲುವಾಗಿ ಅತ್ಯಂತ ಉಪಯುಕ್ತವಾದ ಮಾಸ್ಟರ್
ಗೈಡ್ ಮಾರ್ಗದರ್ಶಿಕೆ
ಮಹಾರಾಷ್ಟ್ರದ ರಾಜ್ಯದ ಗಡಿನಾಡ ಹಾಗೂ ಹೊರನಾಡ ಕನ್ನಡಿಗರಿಗೆ ನನ್ನ
ನಮಸ್ಕಾರಗಳು
ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನಲ್ಲಿ
ಪ್ರಾಥಮಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಉಪಕ್ರಮಶೀಲ ಶಿಕ್ಷಕರು ಶ್ರೀ. ಚಂದ್ರಕಾಂತ ಮಹಾದೇವ
ಕಾರಕಲ್(M. A. B.Ed.) ಮಹಾರಾಷ್ಟ್ರ ರಾಜ್ಯದಲ್ಲಿ ಕನ್ನಡ ಶಾಲೆಗಳು
ಹಾಗೂ ಕನ್ನಡತನವನ್ನು ಉಳಿಸುವುದಕ್ಕಾಗಿ ಅವಿರತ ಪ್ರಯತ್ನ ಮಾಡುತ್ತಿರುತ್ತಾರೆ. ಸಂಘಟನಾತ್ಮಕವಾಗಿಯೂ
ಕನ್ನಡಿಗರ ವಿವಿಧ ಸಮಸ್ಯೆಗಳನ್ನು ಮಹಾರಾಷ್ಟ್ರ ಸರಕಾರಕ್ಕಾಗಲಿ ಅಥವಾ ಕರ್ನಾಟಕ ಸರಕಾರಕ್ಕಾಗಲಿ
ತಿಳಿಸಲು ಲೇಖನ, ಕವಿತೆಗಳ ಮೂಲಕ ತಿಳಿಸುತ್ತಾರೆ. ಮಹಾರಾಷ್ಟ್ರದ ಕನ್ನಡಿಗರಿಗಾಗಿ
‘ಮಹಾಗುರು’ ಮಾಸಪತ್ರಿಕೆಯನ್ನು ಸಂಪಾದನೆ ಮಾಡುತ್ತಿದ್ದಾರೆ.
ಪ್ರಸ್ತುತ ಲೇಖನ ಪ್ರಪಂಚವು ಅವರ ಮಾಸ್ಟರ್ ಗೈಡ್ ಬಗ್ಗೆ ಅವಲೋಕನ ಮಾಡುವುದಾಗಿದೆ. ಮಾಸ್ಟರ್ ಗೈಡ್
ಇದು ಮಹಾರಾಷ್ಟ್ರದ ರಾಜ್ಯದ ೫ ನೆಯ ತರಗತಿಯ ಶಿಷ್ಯವೃತ್ತಿ ಪರೀಕ್ಷೆಯ ತಯಾರಿ ಸಲುವಾಗಿ ಅತ್ಯಂತ ಉಪಯುಕ್ತವಾಗಿದೆ. ಈಗ ಈ ಪುಸ್ತಕದ ದ್ವಿತೀಯ ಮುದ್ರಣ ಪ್ರಕಾಶನವಾಗಿದ್ದು ಆತ್ಮೀಯ ಕನ್ನಡ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು
ಈ ಮಾರ್ಗದರ್ಶಿಕೆಯ ಲಾಭ ಪಡೆದುಕೊಳ್ಳಬೇಕೆಂದು ಅವ್ಹನಿಸಲಾಗುತ್ತದೆ. ಮಹಾರಾಷ್ಟ್ರ ರಾಜ್ಯದಲ್ಲಿ ಅಲ್ಪಸಂಖ್ಯಾತ
ಕನ್ನಡ ಮಾಧ್ಯಮದ ಕೆಲವೇ ಶಾಲೆಗಳು ಉಳಿದಿದ್ದು ಕನ್ನಡಿಗರಿಗೆ ಯಾವುದೇ ಶೈಕ್ಷಣಿಕ ಸಾಧನಗಳಾಗಲಿ, ಪೂರಕ ಸಾಹಿತ್ಯಗಳಾಗಲಿ ರಾಜ್ಯ
ಸರಕಾರದಿಂದ ದೊರೆಯುತ್ತಿಲ್ಲ. ಹಾಗಾಗಿ ಶ್ರೀ ಕಾರಕಲ ಗುರುಗಳಂತಹ ಕೆಲವು ತಂತ್ರಸ್ನೇಹಿ ಶಿಕ್ಷಕರು, ಮಕ್ಕಳ ಬಗ್ಗೆ ಕಾಳಜಿವುಳ್ಳ ಗುರುಗಳು ಮಾತ್ರ ಸ್ವಖರ್ಚಿನಲ್ಲಿ ಶೈಕ್ಷಣಿಕ ಸಾಹಿತ್ಯಗಳನ್ನು
ತಯಾರಿಸಿ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಸಹಕರಿಯಾಗುತ್ತಿದ್ದಾರೆ. ಮಾಸ್ಟರ್ ಗೈಡ್ ಇದು ಪೂರ್ವ ಉಚ್ಚ
ಪ್ರಾಥಮಿಕ ಶಿಷ್ಯವೃತ್ತಿ ಪರೀಕ್ಷೆ 5ನೇ ತರಗತಿಗಾಗಿ ಒಳ್ಳೆಯ ಮಾರ್ಗದರ್ಶಿಯಾಗಿದೆ. ಈ ಪುಸ್ತಕದಲ್ಲಿ
ನಮಗೆಪ್ರಥಮ ಭಾಷೆ(ಕನ್ನಡ) ಮತ್ತು ಗಣಿತ ಹಾಗೂ ಇಂಗ್ಲೀಷ ಮತ್ತು ಬುದ್ದಿಮತ್ತೆ ಪರೀಕ್ಷೆಯ ಮಾದರಿ ಪ್ರಶ್ನೆಗಳ
ಸ್ವರೂಪ ಅದರಂತೆ ಕಠಿಣ ಪ್ರಶ್ನೆಗಳ ಸ್ಪಷ್ಟಿಕರಣದೊಂದಿಗೆ ಉತ್ತರ ಕೊಡಲಾಗಿದೆ. ಎಲ್ಲ ಕನ್ನಡಿಗರ ಆಶೀರ್ವಾದದಿಂದ ಐದನೆಯ ತರಗತಿಯ ಶಿಷ್ಯವೃತ್ತಿ
ಮಾರ್ಗದರ್ಶಿಕೆ ಪುಸ್ತಕ ಮಾಸ್ಟರ್ ಗೈಡ್ ದ್ವಿತೀಯ ಮುದ್ರಣ ಬದಲಾದ ಮಾದರಿಯಲ್ಲಿ ಪರಿಷ್ಕೃತ
ಆವೃತ್ತಿಯಲ್ಲಿ ಬೇಗನೆ ನಮ್ಮ ಕೈ
ಸೇರುತ್ತಿರುವು ಅಭಿಮಾನದ ಸಂಗತಿಯಾಗಿದೆ. ಒಂದು
ಪುಸ್ತಕವನ್ನು ಬರೆದು, ಪರಿಷ್ಕರಿಸಿ ಮುದ್ರಣ ಮಾಡುವುದು ಅಷ್ಟೇನೂ
ಸುಲಭದ ಮಾತಲ್ಲ. ಅದೂ ನಮ್ಮ ತೀರ ಕಡಿಮೆ ಸಂಖ್ಯೆ ಇರುವ ಕನ್ನಡ ವಿದ್ಯಾರ್ಥಿಗಳಿಗೆ ಒದಗಿಸುವುದು
ಸುಲಭದ ಮಾತಲ್ಲ. ಯಾರೂ ಬರವಣಿಗೆಯ, ಮುದ್ರಣದ ಗೋಜಿಗೂ ಹೋಗುವುದಿಲ್ಲ. ಅಂತಹದರಲ್ಲಿ ಕಾರಕಲ್ ಗುರುಗಳು ಧೈರ್ಯದಿಂದ ಈ ಸಾಹಸ ಮಾಡಿರುವುದು
ಅವರಿಗೆ ಕನ್ನಡ ಮಕ್ಕಳ ಮೇಲೆ ಇರುವ ಕಾಳಜಿ, ಮಮತೆ, ಸ್ನೇಹಕ್ಕಾಗಿ ಮಾತ್ರ.
ಮಹಾರಾಷ್ಟ್ರ ರಾಜ್ಯ
ಪರೀಕ್ಷೆ ಪರಿಷದ ಪುಣೆ ತೆಗೆದುಕೊಳ್ಳುವ ೫ ನೆಯ ತರಗತಿಯ ಶಿಷ್ಯವೃತ್ತಿ ಪರೀಕ್ಷೆಯ ತಯಾರಿ ಸಲುವಾಗಿ ಅತ್ಯಂತ ಉಪಯುಕ್ತವಾದ ಶಿಷ್ಯವೃತ್ತಿ
ಮಾರ್ಗದರ್ಶಿಕೆ ಬದಲಾದ A4 ಆಕಾರದಲ್ಲಿ ಒಟ್ಟು 352 ಪುಟಗಳ' ಕನ್ನಡ, ಗಣಿತ,ಇಂಗ್ಲೀಷ್ ಹಾಗೂ ಬುದ್ಧಿಮತ್ತೆ ಪರೀಕ್ಷೆ ಹೀಗೆ ನಾಲ್ಕೂ ವಿಷಯಗಳು ಒಂದರಲ್ಲಿಯೇ ಇರುವ
ಏಕೈಕ ಪುಸ್ತಕ ಇದಾಗಿದೆ. ಈ ಪುಸ್ತಕವು 4,5,6 ಮತ್ತು 7ನೆಯ ತರಗತಿಯ
ವಿದ್ಯಾರ್ಥಿಗಳಿಗೂ ಸಹ ಉಪಯೋಗವಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಲು ಅತ್ಯಂತ
ಉಪಯುಕ್ತವಾದ ಮಾಸ್ಟರ್ ಗೈಡ್ ಈಗಾಗಲೇ ಗಡಿನಾಡಿನಲ್ಲಿ ಹೆಸರು ಮಾಡಿದೆ. ಕಳೆದ ಮುದ್ರಣಕ್ಕಿಂತ ವಿಭಿನ್ನ ಶೈಲಿಯಲ್ಲಿ
ಪುಸ್ತಕವು ಹೊರಬರುತ್ತಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿಯಾಗಿದೆ. ವಿದ್ಯಾರ್ಥಿಗಳ ಆರ್ಥಿಕ
ಪರಿಸ್ಥಿತಿಯನ್ನು ಅವಲೋಕಿಸಿ ಪುಸ್ತಕದ ಮುಖಬೆಲೆ 320 ರೂ. ಇದ್ದರೂ ಅದನ್ನು *250 ರೂ* ಗಳಿಗೆ ಮಾರಾಟ ಮಾಡಲಾಗುತ್ತಿದೆ. ಪುಸ್ತಕದ ಬೆಲೆ ಕಡಿಮೆ ಮಾಡಿರುವ
ಉದ್ದೇಶ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಮಾಡುವ ಎಲ್ಲ ಮಕ್ಕಳಿಗೆ ಸುಲಭವಾಗಿ ಕೊಂಡುಕೊಳ್ಳಲು
ಸಹಾಯವಾಗಬೇಕು ಎಂಬುದಾಗಿದೆ. ಎಲ್ಲ ಗಡಿನಾಡು ಹಾಗೂ
ಹೊರನಾಡಿನ ಮಹಾರಾಷ್ಟ್ರ ಕನ್ನಡಿಗರು ತಮ್ಮ ವಿದ್ಯಾರ್ಥಿಗಳ ಮತ್ತು ಮಕ್ಕಳ ಏಳಿಗ್ಗೆಯನ್ನು
ಬಯಸುವವರು ಒಂದೊಮ್ಮೆ ಈ ಪುಸ್ತಕವನ್ನು ಕೊಂಡು ಮಕ್ಕಳ ಕೈಗೆ ನೀಡಿರಿ. ಎಲ್ಲ ಕನ್ನಡ ಶಾಲೆಯ
ಶಿಕ್ಷಕರು ಈ ಸಂದೇಶವನ್ನು ತಮ್ಮ ಮಕ್ಕಳವರೆಗೆ, ಪಾಲಕರವರೆಗೆ ತಲುಪಿಸಿರಿ. ತಾವೂ ಸಹ ಸ್ವತಃ ಮಕ್ಕಳಿಗೆ ಪುಸ್ತಕ
ಖರೀದಿಸಲು ಪ್ರೇರಣೆ ನೀಡಬೇಕೆಂದು ವಿನಂತಿ. ನಿಮಗೆ ಪುಸ್ತಕಗಳು ಬೇಕಾದಲ್ಲಿ 9730815548 ಈ ನಂಬರಿಗೆ SMS ಅಥವಾ Whatsapp ಮಾಡಿ ತಮ್ಮ ವಿದ್ಯಾರ್ಥಿಗಳ ಸಂಖ್ಯೆ ಮತ್ತು ವಿಳಾಸ
ತಿಳಿಸಿದಲ್ಲಿ ತಮಗೆ ಪುಸ್ತಕಗಳು ತಾವಿರುವ ಸ್ಥಳಕ್ಕೆ ಬಂದು ತಲುಪುತ್ತವೆ. ಪುಸ್ತಕ ಪ್ರತಿಗಳು
ಕೆಲವೇ ಇರುವುದರಿಂದ ಬೇಗ ಬೇಗನೆ ಸಂಖ್ಯೆಗಳನ್ನು ತಿಳಿಸಿರಿ. ವಂದನೆಗಳೊಂದಿಗೆ.
ಸಂಪರ್ಕಿಸಿರಿ:
ಶ್ರೀ. ಚಂದ್ರಕಾಂತ ಮಹಾದೇವ ಕಾರಕಲ್(M. A. B.Ed.)
ತಾ. ಜತ್ತ ಜಿ. ಸಾಂಗಲಿ
ಮಹಾರಾಷ್ಟ್ರ ರಾಜ್ಯ
ಮೋ. ನಂ. 9730815548
0 ಕಾಮೆಂಟ್‌ಗಳು
ಧನ್ಯವಾದಗಳು