ನಾಗರಿಕ ಶಾಸ್ತ್ರ Civics ೭ ನೇ ಇಯತ್ತೆ
ಅನುಕ್ರಮಣಿಕೆ
ಪಾಠಗಳ ಹೆಸರು
1.
ನಮ್ಮ ಸಂವಿಧಾನದ ಪರಿಚಯ
2.
ಸಂವಿಧಾನ ಉದ್ದೇಶ ಪತ್ರಿಕೆ
3.
ಸಂವಿಧಾನದ ವೈಶಿಷ್ಟ್ಯೆಗಳು
4.
ಮೂಲಭೂತ ಹಕ್ಕುಗಳು ಭಾಗ -1
5.
ಮೂಲಭೂತ ಹಕ್ಕುಗಳು ಭಾಗ -2
6.
ನಿರ್ದೇಶಕ ತತ್ವಗಳು ಮತ್ತು
ಮೂಲಭೂತ ಕರ್ತವ್ಯಗಳು
ಪಾಠ ೧
ನಮ್ಮ ಸಂವಿಧಾನದ ಪರಿಚಯ
ಪ್ರಶ್ನೆ೧ :- ಕೆಳಗಿನ ಕಲ್ಪನೆಗಳನ್ನು ಸ್ಪಷ್ಟಪಡಿಸಿರಿ.
೧) ಸಂವಿಧಾನದಲ್ಲಿಯ ನಿಯಮಗಳು
ಉತ್ತರ:- ಸಂವಿಧಾನದಲ್ಲಿಯ ನಿಯಮಗಳು ಮುಂದಿನಂತಿವೆ. ನಾಗರಿಕತ್ವ, ನಾಗರಿಕರ ಹಕ್ಕುಗಳು, ನಾಗರಿಕ ಮತ್ತು
ಸರಕಾರನಡುವಣ ಸಂಬಂಧ, ಸರಕಾರವು ಮಾಡುವ
ಕಾನೂನುಗಳ ವಿಷಯ,ಚುನಾವಣೆಗಳು, ಸರಕಾರದ ಮೇಲಿನ
ನಿರ್ಭಂಧಗಳು ಹಾಗೂ ರಾಜ್ಯದ ಅಧಿಕಾರ ಕ್ಷೆತ್ರ ಇತ್ಯಾದಿ ನಿಯಮಗಳು ಇವೆ.
೨) ಸಂವಿಧಾನ ದಿನ
ಉತ್ತರ:- ಸಂವಿಧಾನ ಬರೆದನಂತರ ಸಂವಿಧಾನ ಸಭೆಯು ಅದಕ್ಕೆ ಮಾನ್ಯತೆ
ಕೊಟ್ಟಿತು. ಅದರ ಸ್ವಿಕಾರ ೨೬ ನವ್ಹಂಬರ ೧೯೪೯ ರಂದು ಮಾಡಿತು.ಆದ್ದರಿಂದ ೨೬ ನವ್ಹಂಬರ ಈ
ದಿನವನ್ನು ‘ಸಂವಿಧಾನ ದಿನ ‘ ವೆಂದು
ಆಚರಿಸಲಾಗುತ್ತದೆ.
ಪ್ರಶ್ನೆ೨:- ಚರ್ಚೆ ಮಾಡಿರಿ.
೧) ಸಂವಿಧಾನ ಸಮಿತಿಯನ್ನು ಸ್ಥಾಪಿಸಲಾಯಿತು.
ಉತ್ತರ:- ಭಾರತದ ಸಂವಿಧಾನ ರಚನೆಯು ಕ್ರಿ.ಶ. ೧೯೪೬ ರಿಂದ
ಆರಂಭವಾಯಿತು. ‘ಸ್ವತಂತ್ರ ಭಾರತದ
ರಾಜ್ಯಾಡಳಿತವು ಬ್ರಿಟಿಷರು ಕಾನೂನಿಗನುಗನುಸಾರವಾಗಿ ನಡೆಯಲಾರದು. ಅದು ಭಾರತೀಯರೇ ತಯಾರಿಸಿದ
ಕಾನೂನಿಗಣವಾಗಿ ನಡೆಯಬೇಕು’ ಎಂಬುದು ಸ್ವಾತಂತ್ರö್ಯ ಚಳುವಳಿಯಲ್ಲಿಯ
ಮುಖಂಡರ ಆಗ್ರಹವಾಗಿತ್ತು. ಅದಕ್ಕನುಸಾರವಾಗಿ ಭಾರತದ ಸಣವಿಧಾನವನ್ನು ತಯಾರಿಸುವ ಸಲುವಾಗಿ ಒಂದು
ಸಮಿತಿಯನ್ನು ಸ್ಥಾಪಿಸಲಾಯಿತು. ಆ ಸಮಿತಿಯು ‘ಸಂವಿಧಾನ ಸಭೆ ‘ ಎಂದು ಗುರುತಿಸಲ್ಪಡುತ್ತದೆ.
೨) ಡಾ.ಬಾಬಾಸಾಹೆಬ ಅಂಬೇಡಕರ ಅವರಿಗೆ ಭಾರತೀಯ ಸಂವಿಧಾನ ಶಿಲ್ಪಿ ಎಂದು
ಕರೆಯುತ್ತಾರೆ.
ಉತ್ತರ:- ಡಾ.ಬಾಬಾಸಾಹೇಬ ಅಂಬೇಡಕರರು ಕರುಡು ಸಮಿತಿಯ
ಅಧ್ಯಕ್ಷರಾಗಿದ್ದು ಅವರು ವಿವಿಧ ದೇಶಗಳ ಸಂವಿಧಾನಗಳನ್ನು ಆಳವಾಗಿ ಅಧ್ಯಯನ ಮಾಡಿ ಹಗಲು –ರಾತ್ರಿ ಶ್ರಮವಹಿಸಿ
ಕರುಡನ್ನು ತಯಾರಿಸಿ ಸಂವಿಧಾನ ಸಭೆಯಮುಂದೆ ಮಂಡಿಸಿದರು. ಅದರ ಮೇಲೆ ವಿಧಿವಾಗಿ ಚರ್ಚೆಯಾಗಿ ಅನೇಕ
ತಿದ್ದು ಪಡಿಗಳನ್ನು ಸೂಚಿಸಲಾಯಿತು.ಸಂವಿಧಾನದ ಕರುಡನ್ನು ಸಂವಿಧಾನ ಸಭೆಮುಂದೆ ಮಂಡಿಸುವ, ಅದರ ಬಗ್ಗೆ ಕೇಳಲಾದ
ಪ್ರಶ್ನೆಗಳಿಗೆ ಉತ್ತರ ಕೊಡುವ,
ಸಂವಿಧಾನ ಸಭೆಯ
ಸೂಚನೆಯ ಪ್ರಕಾರ ಮೂಲ ಕರುಡಿನಲ್ಲಿ ಬದಲಾವಣೆಗಳನ್ನು ಮಾಡುವ, ಪ್ರತಿಯೊಂದು ನಿಯಮವನ್ನು ದೋಷರಹಿತವನ್ನಾಗಿ ಮಾಡುವ
ಕಾರ್ಯವನ್ನು ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಮಾಡಿದರು. ಭರತದ ಸಂವಿಧಾನ ರಚನೆಯಲ್ಲಿಯ ಈ
ಕೊಡುಗಡಯಿಂದಾಗಿ ಅವರಿಗೆ ‘ ಭಾರತೀಯ ಸಂವಿಧಾನದ
ಶಿಲ್ಪಿ’ ಎಂದು ಅವರಿಗೆ
ಕರೆಯುತ್ತಾರೆ.
೩) ದೇಶದ ರಾಜ್ಯಾಡಳಿತದಲ್ಲಿ ಅಡಕವಾದ ವಿಷಯಗಳು.
ಉತ್ತರ:- * ನಿಯಮಗಳ ಚೌಕಟ್ಟನಲ್ಲಿದ್ದುಕೊಂಡೇ ಸರಕಾರವು ರಾಜ್ಯಾಡಳಿತ
ಮಾಡಬೇಕಾಗುತ್ತದೆ. ಅದರಿಂದಾಗಿ ಅವರಿಗೆ ದೊರೆತ
ಅಧಿಕಾರದ ಅಥವಾ ಆಡಳಿತದ ದುರುಪಯೋಗವಾಗುವ ಸಾಧ್ಯತೆ ಕಡಿಮೆ ಇರುತ್ತದೆ.
• ಸಂವಿಧಾನದಲ್ಲಿ ನಾಗರಿಕರ
ಹಕ್ಕುಗಳು ಮತ್ತು ಅವರ ಸ್ವಾತಂತ್ರö್ಯದ ಉಲ್ಲೆಖವಿರುತ್ತದೆ. ಸರಕಾರವು ಆ ಹಕ್ಕುಗಳನ್ನು ಕಸಿದುಕೊಳ್ಳಲು
ಬರುವದಿಲ್ಲ. ಹೀಗಾಗಿ ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳಲು ಬರುವದಿಲ್ಲ. ಹೀಗಾಗಿ ನಾಗರಿಕರ
ಹಕ್ಕು ಮತ್ತು ಸ್ವಾತಂತ್ರö್ಯಗಳು
ಸುರಕ್ಷಿತವಾಗಿ ಉಳಿಯುತ್ತವೆ.
• ಸಂವಿಧಾನದಲ್ಲಿಯ
ನಿಯಮಗಳಿಗನುಸಾರವಾಗಿ ರಾಜ್ಯಾಡಳಿತ ಮಾಡುವದೆಂದರೆ ಕಾನೂನಿನ ರಾಜ್ಯವನ್ನು ಸ್ಥಾಪಿಸುವದು.ಏಕೆಂದರೆ
ಅದರಲ್ಲಿ ಅಧಿಕಾರದ ದುರುಪಯೋಗಕ್ಕೆ ಅಥವಾ ಸ್ವೇಚ್ಛಾಚಾರ ಆಡಳಿತಕ್ಕೆ ಅವಕಾಶವಿರುವದಿಲ್ಲ.
• ಸಂವಿಧಾನಕ್ಕನುಸಾರವಾಗಿ
ರಾಜ್ಯಾಡಳಿತ ನಡೆಯುತ್ತಿರುವದನ್ನು ನೊಡಿ ಸರಕಾರದ ಮೇಲಿನ ಸಾಮಾನ್ಯ ಜನರ ವಿಶ್ವಾಸ ಹೆಚ್ಚುತ್ತದೆ.
ಅದರಿಂದ ಅವರು ಭಾಗವಹಿಸಲು ಉತ್ಸುಕರಾಗುತ್ತಾರೆ. ಆನಸಾಮಾನ್ಯರ ಹೆಚ್ಚುತ್ತಿರುವ ಸಹಭಾಗದಿಂದಾಗಿ
ಪ್ರಜಾಪ್ರಭುತ್ವವು ಹೆಚ್ಚು ದೃಢವಾಗುತ್ತದೆ.
• ಸಂವಿಧಾನವು ಆಯಾ ದೇಶಗಳ
ಮುಂದೆ ಕೆಲವು ರಾಜಕೀಯ ಆದರ್ಶಗಳನ್ನು ಇಡುತ್ತದೆ. ಆ ದಿಶೆಯಲ್ಲಿ ಮುನ್ನಡೆಯುವ ಬಂಧನವು ಆ
ರಾಷ್ಟ್ರದ ಮೇಲಿರುತ್ತದೆ.ಅದರಿಂದಾಗಿ ಜಾಗತಿಕ ಶಾಂತಿ ಮತ್ತು ಸುರಕ್ಷಿತತೆ ,ಮಾನವೀ ಹಕ್ಕುಗಳ
ರಕ್ಷಣೆಯಾಗಲು ಪೋಷಕವಾದ ವಾತಾವರಣ ನಿರ್ಮಾಣವಾಗುತ್ತದೆ.
• ಸಂವಿಧಾನದಲ್ಲಿಯ ನಾಗರಿಕರ
ಕರ್ತವ್ಯಗಳ ಉಲ್ಲೇಖವಿರುವದರಿಂದ ನಾಗರಿಕರ
ಹೊಣೆಗಾರಿಕೆಯೂ ನಿಶ್ಚಿತವಾಗುತ್ತದೆ.
ಪ್ರಶ್ನೆ೩:- ಯೋಗ್ಯ ಪರ್ಯಾಯವನ್ನು ಆಯ್ಕೆ ಮಾಡಿರಿ.
೧) ಯಾವ ದೇಶದ ಸಂವಿಧಾನವು ಸಂಪೂರ್ಣವಾಗಿ ಲಿಖೀತವಾಗಿರುವದಿಲ್ಲ.
ಅ) ಅಮೇರಿಕಾ ಬ)
ಭಾರತ ಕ) ಇಂಗ್ಲಂಡ ಡ) ಇದರಲ್ಲಿ ಯಾವದೂ ಇಲ್ಲ.
ಉತ್ತರ:- ಇಂಗ್ಲಂಡ
೨) ಸಂವಿಧಾನ ಸಭೆಯ ಅಧ್ಯಕ್ಷರು ಯಾರು?
ಅ) ಡಾ.ಬಾಬಾಸಾಹೇಬ ಅಂಬೇಡ್ಕರ
ಬ) ಡಾ. ರಾಜೇಂದ್ರ ಪ್ರಸಾದ
ಕ) ದುರ್ಗಾಬಾಯಿ ದೇಶಮುಖ
ಡ) ಬಿ.ಎನ್.ರಾವ
ಉತ್ತರ:- ಡಾ. ರಾಜೇಂದ್ರ ಪ್ರಸಾದ
೩) ಕೆಳಗಿನವರಲ್ಲಿ ಯಾರು ಸಂವಿಧಾನ ಸಭೆಯ ಸದಸ್ಯರಾಗಿರಲಿಲ್ಲ.
ಅ) ಮಹಾತ್ಮಾ ಗಾಂಧಿ
ಬ) ಮೌಲಾನಾ ಆಝಾದ
ಕ) ರಾಜಕುಮಾರಿ ಅಮೃತಾ ಕೌರ
ಡ) ಹಂಸಾಬೇನ್ ಮೆಹತಾ
ಉತ್ತರ:- ಮಹಾತ್ಮಾ ಗಾಂಧಿ
೪) ಕರಡು ಸಮಿತಿಯ
ಅಧ್ಯಕ್ಷರು ಯಾರು?
ಅ) ಡಾ. ರಾಜೇಂದ್ರ ಪ್ರಸಾದ
ಬ) ಸರದಾರ ವಲ್ಲಭಭಾಯಿ ಪಟೇಲ
ಕ) ಡಾ.ಬಾಬಾಸಾಹೇಬ ಅಂಬೇಡಕರ
ಡ) ಜೆ.ಬಿ.ಕೃಪಲಾನಿ
ಉತ್ತರ:- ಡಾ.ಬಾಬಾಸಾಹೇಬ ಅಂಬೇಡಕರ
ಪ್ರಶ್ನೆ ೪:- ನಿಮ್ಮ ಅಭಿಪ್ರಾಯವನ್ನು ಬರೆಯಿರಿ.
೧) ಸರಕಾರಕ್ಕೆ ಯಾವಯಾವ ವಿಷಯಗಳನ್ನು ಕುರಿತು ಕಾನೂನು
ಮಾಡಬೇಕಾಗುತ್ತದೆ?
ಉತ್ತರ:- ದೇಶದ ಗಡಿರೇಖೆಗಳ ಸಂರಕ್ಷಣೆ ಮಾಡುವದು, ಪರಕೀಯ
ಆಕ್ರಮಣಗಳಿಂದ ಜನತೆಯ ರಕ್ಷಣೆ ಮಾಡುವದನ್ನು ಹಿಡಿದು ದಾರಿದ್ರ ನಿರ್ಮೂಲನೆ,ರೋಜಗಾರು ನಿರ್ಮಿತಿ,ಶಿಕ್ಷಣ ಮತ್ತು
ಆರೋಗ್ಯ ಸೇವೆ ,ಉದ್ಯೋಗ
ವ್ಯವಸಾಯಗಳಿಗಾಗಿ ಪ್ರೋತ್ಸಾಹ ದುರ್ಬಲ ಘಟಕಗಳ ರಕ್ಷಣೆ,ಮಹಿಳೆಯರ,ಮಕ್ಕಳ ಮತ್ತು ಆದಿವಾಸಿಗಳ ಪ್ರಗತಿಗಾಗಿ ಉಪಾಯಯೋಜನೆ ಇತ್ಯಾದಿ ಅನೇಕ
ವಿಷಯ ಕುರಿತು ಸರಕಾರಕ್ಕೆ ಕಾನೂನು ಮಾಡಬೇಕಾಗುತ್ತದೆ.
೨) ೨೬ ಜಾನೇವಾರಿ ಈ ದಿನವನ್ನು ನಾವು ಗಣರಾಜ್ಯದಿನವೆಂದು ಏಕೆ
ಆಚರಿಸುತ್ತೆವೆ?
ಉತ್ತರ:- ೨೬ ಜನೇವರಿ ೧೯೫೦ ರಿಂದ ಸಂವಿಧಾನದಲ್ಲಿಯ
ನಿಯಮಗಳಿಗನುಸಾರವಾಗಿ ದೇಶದ ರಾಜ್ಯಾಡಳಿತನ್ನು ನಡೆಸಲು ಆರಂಭಿಸಲಾಯಿತು. ಈ ದಿನದಿಂದ ಭಾರತದ
ಪ್ರಜಾಸತ್ತಾತ್ಮಕ ರಾಜ್ಯವು ಅಸ್ತಿತ್ವದಲ್ಲಿ ಬಂದಿತು.ಆದ್ದರಿಂದಲೇ ೨೬ ಜನೇವರಿ ಈ ದಿನವನ್ನು
ನಾವು ‘ಗಣರಾಜ್ಯದಿನ’ ವೆಂದು
ಆಚರಿಸುತ್ತೆವೆ.
೩) ಸಂವಿಧಾನದಲ್ಲಿಯ ನಿಯಮಗಳಿಗನುಸಾರವಾಗಿ ರಾಜ್ಯಾಡಳಿತವನ್ನು ಮಾಡುವ
ಲಾಭಗಳು.
ಉತ್ತರ:- ಜನರಿಂದ ಆರಿಸಿಬಂದ ಪ್ರತಿನಿಧಿ ಸರಕಾರ ಸ್ಥಾಪನೆ
ಮಾಡುತ್ತಾರೆ.ಸಂವಿಧಾನದಲ್ಲಿಯ ನಿಯಮಗಳಿಗನುಸಾರವಾಗಿ ರಾಜ್ಯಾಡಳಿತ ಮಾಡಬೆಕೆಂಬ ಬಂಧನವು ಸರಕಾರದ
ಮೇಲಿರುತ್ತದೆ.
ಪ್ರಶ್ನೆ೫:- ಬಿಟ್ಟ ಸ್ಥಳ ತುಂಬಿರಿ.
೧) ಸಂವಿಧಾನ ಅನುಸಾರ ರಾಜ್ಯಕಾರಭಾರ ಮಾಡುವದರಿಂದ ಪ್ರಜಾಪ್ರಭುತ್ವ ಪ್ರಬಲವಾಗುವದು.
೨) ಸಂವಿಧಾನ ಸಭೆಯು ಸಂಪೂರ್ಣ ಸಂವಿಧಾನದ ಸ್ವಿಕಾರ ೨೬ ನವ್ಹೆಂಬರ1949 ಈ ದಿನ ಮಾಡಿತು.
೩) ಸಂವಿಧಾನಕ್ಕೆ ದೇಶದ ಮೂಲಭೂತ ಕಾಯ್ದೆ ಎಂದು ಅನ್ನುತ್ತಾರೆ.
೪) ವ್ಯಕ್ತಿಗೆ ತನ್ನ ವಿಚಾರ ಮನಸೊಕ್ತವಾಗಿ ಮಂಡಿಸಲು ಬರಬೆಕು ಅದರ
ಸಲುವಾಗಿ ವಿಚಾರ ಸ್ವಾತಂತ್ರ ಆವಶ್ಯಕವಿದೆ.
ಪ್ರಶ್ನೆ ೬:- ಹೊಂದಿಸಿ ಬರೆಯಿರಿ.
‘ಅ’ ಗುಂಪು ಉತ್ತರ ‘ ಬ ‘ ಗುಂಪು
೧) ಡಾ. ರಾಜೇಂದ್ರ ಪ್ರಸಾದ
= ಸಂವಿಧಾನ ಸಭೆಯ ಅಧ್ಯಕ್ಷ
೨)ಡಾ. ಬಾಬಾಸಾಹೆಬ ಅಂಬೆಡ್ಕರ =
ಮಸೂದೆ ಸಮಿತಿಯ ಅಧ್ಯಕ್ಷ
೩) ಬಿ.ಎನ್.ರಾವ = ಸಂವಿಧಾನ ಸಭೆಯ ಕಾಯದೆ ವಿಷಯಕ
ಸಲ್ಲಾಗಾರ
ಪಾಠ ೨
ಸಂವಿಧಾನ ಉದ್ದೇಶಪತ್ರಿಕೆ
ಪ್ರಶ್ನೆ ೧:- ಹುಡುಕಿರಿ ಮತ್ತು
ಬರೆಯಿರಿ.
ಧ |
ರ್ಮ |
ನಿ |
ರ |
ಪೇ |
ಕ್ಷ |
ತೆ |
ಪ್ರ |
ಭು |
ಕ |
ನೆ |
ಷ್ಟ |
ರ |
ಭ್ರಾ |
ಮಾ |
ನ |
ವ |
ಸು |
ಖ |
ಕ |
ತೃ |
ಜಾ |
ಸ್ತಾ |
ಪ್ರ |
ಜಾ |
ಪ್ರ |
ಭು |
ತ್ವ |
ಪ್ರ |
ತ್ಪ |
ಭ್ರಾ |
ನೆ |
ಪ |
ಪೇ |
ರು |
೧) ದೇಶದಲ್ಲಿಯ ಎಲ್ಲ ನಾಗರಿಕರ ಬಗ್ಗೆ ಮತ್ತು ಪರಸ್ಪರರ ಬಗ್ಗೆ
ಆತ್ಮೀಯತೆಯ ಭಾವನೆ.
ಉತ್ತರ:- ಭ್ರಾತೃತ್ವ
೨) ರಾಜ್ಯಾದಳಿತದ ಅಧಿಕಾರವು ಜನರ ಕೈಯಲ್ಲಿ ಇರುವುದು.
ಉತ್ತರ:- ಪ್ರಜಾಪ್ರಭುತ್ವ
೩) ಉದ್ದೇಶಪತ್ರಿಕೆಯನ್ನು ಈ ಹೆಸರಿನಿಂದಲೂ ಕರೆಯುತ್ತಾರೆ.
ಉತ್ತರ:- ಪ್ರಸ್ತಾವನೆ
೪) ಎಲ್ಲ ಧರ್ಮಗಳನ್ನು ಸಮಾನವೆಂದು ತಿಳಿಯುವದು.
ಉತ್ತರ:- ಧರ್ಮನಿರಪೆಕ್ಷತೆ
ಪ್ರಶ್ನೆ೨:-
ಬರೆಯುತ್ತಾ ಇರೋಣ.
೧) ಧರ್ಮನಿರಪೇಕ್ಷ ರಾಜ್ಯದಲ್ಲಿ ಯಾವ ಏರ್ಪಾಟುಗಳಿರುತ್ತವೆ?
ಉತ್ತರ:- ಧರ್ಮನಿರಪೇಕ್ಷಿತ
ರಾಜ್ಯದಲ್ಲಿ ಯಾವುದೇ ನಿರ್ದಿಷ್ಟಧರ್ಮಕ್ಕೆ ರಾಜ್ಯದ ಧರ್ಮವೆಂದು ತಿಳಿಯುವಲಾಗುವದಿಲ್ಲ.
ನಾಗರಿಕರಿಗೆ ತಮ್ಮ ತಮ್ಮ ಧರ್ಮವನ್ನು ಪಾಲಿಸುವ ಸ್ವಾತಂತ್ರö್ಯ ವಿರುತ್ತದೆ. ಧರ್ಮದ ಆದಾರದ ಮೇಲೆ ನಾಗರಿಕರಲ್ಲಿ
ಭೇದ ಭಾವ ಮಾಡಲು ಬರುವದಿಲ್ಲ.
೨) ಪ್ರೌಢ ಮತದಾನ ಪದ್ದತಿ ಎಂದರೆನು?
ಉತ್ತರ:-
ರಾಜ್ಯಕಾರಭಾರದಲ್ಲಿ ಭಾಗ ತಗೆದುಕೊಳ್ಳಲು ಎಲ್ಲರಿಗೂ ಸಮಾನ ಹಕ್ಕು ಇರಬೆಕೆಂದು ನಾವು ಪ್ರೌಢ
ಮತದಾನ ಪದ್ದತಿ ಸ್ವೀಕರಿಸಿದ್ದೆವೆ. ಅದರನುಸಾರವಾಗಿ ವಯಸ್ಸಿನ ೧೮ ವರ್ಷ ಪೂರ್ಣವಾದ ಎಲ್ಲ
ನಾಗರಿಕರಿಗೆ ಮತದಾನ ಮಾಡುವ ಅಧಿಕಾರವಿದೆ.
೩) ಆರ್ಥಿಕ ನ್ಯಾಯದಿಂದಾಗಿ ನಾಗರಿಕರಿಗೆ ಯಾವ ಹಕ್ಕು ದೊರೆಯುತ್ತದೆ?
ಉತ್ತರ:- ಹಸಿವು
ಹೊಟ್ಟೆಗಿಲ್ಲದೆ ನರಳುವಿಕೆ ಕುಪೋಷಣೆ,ಇವು ಬಡತನ ಇಲ್ಲವೆ ದಾರಿದ್ರö್ಯದಿಂದಾಗಿ ನಿರ್ಮಾಣವಾಗುತ್ತವೆ. ಬಡತನವನ್ನು
ಹೋಗಲಾಡಿಸಲು ಪ್ರತಿಯೊಬ್ಬನಿಗೆ ತನ್ನ ಮತ್ತು ತನ್ನ ಕುಟುಂಬದ ಪಾಲನೆ-ಪೋಷಣೆ ಮಾಡುವ ಸಲುವಾಗಿ
ಉಪಜೀವನದ ಸಾಧನವನ್ನು ದೊರಕಿಸುವ ಹಕ್ಕು ಇದೆ.ನಮ್ಮ ಸಂವಿಧಾನವು ಯಾವುದೇ ಭೇದ-ಭಾವವಿಲ್ಲದೆ
ಪ್ರತಿಯೊಬ್ಬ ನಾಗರಿಕನಿಗೆ ಈ ಹಕ್ಕನ್ನು ನೀಡಿದೆ.
೪) ಸಮಾಜದಲ್ಲಿ ವ್ಯಕ್ತಿಗೌರವ ಹೇಗೆ ನಿರ್ಮಾಣವಾಗುವದು?
ಉತ್ತರ:- ಪ್ರತಿಯೊಬ್ಬ
ವ್ಯಕ್ತಿಗೆ ಮನುಷ್ಯನೆಂದು ಸನ್ಮಾನ ಕೊಡಬೆಕು ಜಾತಿ,ಧರ್ಮ,ವಂಶ,ಲಿಂಗ,ಜನ್ಮಸ್ಥಳ ಮುಂತಾದ
ಭೇದ-ಭಾವ ಮಾಡದೆ ಎಲ್ಲರಿಗೂ ಸಮಾನ ದರ್ಜೆಯನ್ನು ನೀಡಲಾಗಿದೆ.ಉಚ್ಚ-ನೀಚ,ಶ್ರೇಷ್ಠ-ಕನಿಷ್ಠ
ಎಂಬ ಭೇದವನ್ನು ಮಾಡದೆ ಇರುವುದು ಎಂದರೆ ಸಮಾನ ದರ್ಜೆಯನ್ನು ನೀಡುವದು ಎಂದರ್ಥ.
ಪ್ರಶ್ನೆ೩:- ನಮಗೆ ದೊರೆತ
ಸ್ವಾತಂತ್ರö್ಯದ ಉಪಯೋಗವನ್ನು
ನಾವು ಯಾವರೀತಿ ಮಾಡಬೇಕು? ನಮ್ಮ
ಅಭಿಪ್ರಾಯವನ್ನು ಬರೆಯಿರಿ/ಹೇಳಿರಿ.
ಉತ್ತರ:- ನಾವು ಸಮಾಜದಲ್ಲಿ
ಬೊಧು-ಭಾವ ನಿರ್ಮಾಣಮಾಡಬೆಕು,ಅನ್ಯಾಯ ಹೊಗಲಾಡಿಸಿ
ಎಲ್ಲರಿಗೂ ಪ್ರಗತಿಯ ಸಂಧಿ ಒದಗಿಸಬೇಕು,ಜಾತಿ,ಭಾಷೆ,ಪ್ರದೇಶ ಇದರಮೇಲಿಂದ ಭೇದ-ಭಾವ ಮಾಡದೇ ಎಲ್ಲರೂ ಕೂಡಿ ಮನುಷ್ಯರೆಂದು
ಒಂದೇ ತರನಾಗಿ ನಡೆಯಬೆಕು.ಪ್ರತಿಯೊಬ್ಬರಿಗೂ ತಮ್ಮ ಉಪಜೀವಕೆಯ ಸಾಧನ ದೊರೆಯಬೇಕು.ಪ್ರತಿಯೊಬ್ಬರಿಗೂ
ಧಾರ್ಮಿಕ ಸ್ವಾತಂತ್ರö್ಯ ದೊರೆಯಬೆಕು,ಎಲ್ಲರಿಗೂ ಸಮಾನತೆಯ
ಅವಕಾಶ ಒದಗಿಸಬೆಕು.ಪ್ರತಿಯೊಬ್ಬರಿಗೂ ಸ್ವತಃ ವಿಚಾರ ಮಾಡುವ ಸಂಧಿ ದೊರೆಯಬೆಕು.ಅದರಂತೆ
ಪ್ರತಿಯೊಬ್ಬರು ಸ್ವಾತಂತ್ರದೊಂದಿಗೆ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.
ಪ್ರಶ್ನೆ೪:- ಕಲ್ಪನೆಗಳು
ಸ್ಪಷ್ಟ ಪಡಿಸಿರಿ.
೧) ಸಮಾಜವಾದಿ ರಾಜ್ಯ – ಯಾವರಾಜ್ಯದಲ್ಲಿ ಬಡವ ಮತ್ತು ಶ್ರೀಮಂತರಲ್ಲಿ ಹೆಚ್ಚು ಅಂತರ
ಇರುವದಿಲ್ಲವೋ ಅದು ಸಮಾಜವಾದಿ ರಾಜ್ಯ ಹೌದು.ಸಮಾಜವಾದಿ ರಾಜ್ಯದಲ್ಲಿ ದೇಶದ ಸಂಪತ್ತಿನ ಮೇಲೆ
ಎಲ್ಲರ ಹಕ್ಕು ಇರುತ್ತದೆ. ಕೆಲವೇ ಜನರ ಕೈಯಲ್ಲಿ ಸಂಪತ್ತಿನ ಕೇಂದ್ರೀಕರಣವಾಗಲಾರದಂತೆ ಕಾಳಜಿ
ವಹಿಸಲಾಗುತ್ತದೆ.
೨) ಸಮಾನತೆ – ಜಾತಿ ,ಧರ್ಮ, ವಂಶ,
ಲಿಂಗ ,ಜನ್ಮಸ್ಥಳ
ಮುಂತಾದವುಗಳ ಆಧಾರದ ಮೇಲೆ ವ್ಯಕ್ತಿಯಲ್ಲಿ ಭೇದ-ಭಾವ ಮಾಡದೆ ಎಲ್ಲರಿಗೂ ಸಮಾನ ದರ್ಜೆಯನ್ನು
ನೀಡಲಾಗಿದೆ.ಉಚ್ಚ-ನೀಚ, ಶ್ರೇಷ್ಠ-ಕನಿಷ್ಠ
ಎಂಬ ಭೇದವನ್ನು ಮಾಡದೆ ಇರುವದು ಎಂದರೆ ಸಮಾನ ದರ್ಜೆಯನ್ನು ನಿಡುವದು ಎಂದರ್ಥ.
೩)ಸಾರ್ವ ಭೌಮತ್ವ -- ನಮ್ಮ ದೇಶವು ಸ್ವತಂತ್ರವಾಯಿತು. ಭಾರತಕ್ಕೆ
ಸಾರ್ವಭೌಮತ್ವ ಪ್ರಾಪ್ತವಾಯಿತು.ನಾವು ನಮ್ಮ ದೇಶದಲ್ಲಿ ನಮಗೆ ಯೋಗ್ಯವೆನಿಸಿದ ನಿರ್ಣಯಗಳನ್ನು
ಕೈಕೊಳ್ಳಲು ಸ್ವತಂತ್ರರಾಗಿದ್ದೆವೆ. ಯಾವುದಾದರೊಂದು ದೇಶವು ಪರಕೀಯ ನಿಯಂತ್ರಣದಲ್ಲಿ ಇಲ್ಲದಿರುವದು-
ಎಂಬುದು ಸಾರ್ವಭೌಮತ್ವ ಈ ಶಬ್ದದ ಆರ್ಥವಾಗಿದೆ.
೪) ಅವಕಾಶದ ಸಮಾನತೆ – ಉದ್ದೇಶ ಪತ್ರಿಕೆಯು ‘ಅವಕಾಶ ಸಮಾನತೆ ‘ ಯನ್ನು ಮಹತ್ವದ್ದೆಂದು ತಿಳಿದಿದೆ. ಎಲ್ಲರಿಗೂ ತಮ್ಮ ವಿಕಾಸದ
ಅವಕಾಶಗಳು ದೊರಕುವವು.ಅವುಗಳನ್ನು ಉಪಲಬ್ದ ಮಾಡಿಕೊಡುವಾಗ ಯಾವುದೇ ಭೇದಭಾವ ಮಾಡಲಾಗುವದಿಲ್ಲ.
ಪ್ರಶ್ನೆ೫:- ಭಾರತೀಯ ಸಂವಿಧಾನದ
ಉದ್ದೇಶಪತ್ರಿಕೆಯಲ್ಲಿ ಯಾವ ಯಾವ ಮಹತ್ವದ ಸಂಗತಿಗಳನ್ನು ಉಲ್ಲೇಖಿಸಲಾಗಿದೆ?
ಉತ್ತರ:- ಉದ್ದೇಶ
ಪತ್ರಿಕೆಯಲ್ಲಿ ಎಲ್ಲ ಭಾರತೀಯ ನಾಗರಿಕರಿಗೆ ನ್ಯಾಯ,ಸ್ವಾತಂತ್ರ,ಸಮಾನತೆ ಈ ಮುರು ಮೌಲ್ಯದ ಮತ್ತು ಅದರಂತೆ ವ್ಯವಹಾರ ಮಾಡುವ ಕಾಯದೆಮಾಡಿ
,ಕಾಯದೆ ಮೇಲಿಂದ ಆ
ಮೌಲ್ಯಗಳನ್ನು ಪ್ರತ್ಯಕ್ಷವ್ಯವಹಾರದಲ್ಲಿ ತರುವ ಭರವಸೆ ಕೊಡಲಾಗಿದೆ.ಅನ್ಯಾಯ ದೂರುಮಾಡಿ ಎಲ್ಲರಿಗೂ
ಪ್ರಗತಿಯ ಸಂಧಿ ಒದಗಿಸಿಕೊಡುವದೆಂದರೆ ನ್ಯಾಯ ಹೌದು. ಬಡತನ ದೂರಮಾಡುವದಿದ್ದರೆ ಪ್ರತಿಯೊಬ್ಬರಿಗೆ
ನಮ್ಮ ಮತ್ತು ಕುಟುಂಬದ ಪಾಲನೆ ಪೋಷಣೆ ಮಾಡುವ ಉಪಜೀವಿಕೆಯ ಸಾಧನೆ ಇದಾಗಿದೆ.ವಿಚಾರ ಅಭಿವ್ಯಕ್ತಿ
ಸ್ವಾತಂತ್ರ್ಯದ ಹಕ್ಕು ಕೊಡಲಾಗಿದೆ. ಪ್ರತಿಯೊಬ್ಬರಿಗೂ ತಮ್ಮ ಅನಿಸಿಕೆ
ಮತ್ತು ವಿಚಾರ ವ್ಯಕ್ತಮಾಡುವ ಸ್ವಾತಂತ್ರ್ಯದ ಕೊಡಲಾಗಿದೆ. ಸಮತೆ ಮತ್ತು ಬಂಧುತ್ವ ಇವುಗಳ ಭರವಸೆ ಕೊಡಲಾಗಿದೆ.
ಪ್ರಶ್ನೆ೬:- ಬಿಟ್ಟ ಸ್ಥಳದಲ್ಲಿ
ಯೋಗ್ಯ ಶಬ್ದ ತುಂಬಿರಿ.
೧) ಸಂವಿಧಾನದ ಪ್ರಸ್ಥಾವನೆಗೆ ಪ್ರಸ್ಥಾವಿಕೆ ಅಥವಾ ಉದ್ದೇಶ ಪತ್ರಿಕೆ
ಎನ್ನುವರು.
೨) ಭಾರತೀಯ ಸಂವಿಧಾನವು ಸಮಾನತೆಯ ಮುಲ್ಯ ಸ್ವಿಕರಿಸಿದೆ.
ಪ್ರಶ್ನೆ೭:- ಒಂದೇ ವಾಕ್ಯದಲ್ಲಿ
ಉತ್ತರಿಸಿರಿ.
೧) ಭಾರತದ ಸಂವಿಧಾನದ ಪ್ರಸ್ಥಾವಿಕೆಯ ಪ್ರಾರಂಭ ಯಾವ ಶ್ಬದದಿಂದ
ಮಾಡಿದೆ?
ಉತ್ತರ:- ಭಾರತದ ಸಂವಿಧಾನದ
ಪ್ರಸ್ತಾವಿಕೆಯ ಪ್ರಾರಂಭ ‘ನಾವು ಭಾರತದ
ನಾಗರಿಕರು’ ಈ ಶಬ್ದದಿಂದ
ಆಗಿದೆ.
೨) ಸ್ವಾತಂತ್ರ್ಯದಿಂದ ನಾಗರಿಕರಿಗೆ
ಯಾವ ಸಂಧಿ ಪ್ರಪ್ತವಾದವು?
ಉತ್ತರ:- ಸ್ವಾತಂತ್ರ್ಯದಿಂದ ನಾಗರಿಕರಿಗೆ ಸ್ವತಃದ ಮತ್ತು ಸಮಾಜದ ವಿಕಾಸ
ಮಾಡುವ ಅವಕಾಶ ಪ್ರಾಪ್ತವಾಯಿತು.
ಪಾಠ ೩
ಸಂವಿಧಾನದ ವೈಶಿಷ್ಟ್ಯಗಳು
ಪ್ರಶ್ನೆ೧:-
ಒಕ್ಕೂಟ ರಾಜ್ಯಪದ್ದತಿಯಲ್ಲಿ ಅಧಿಕಾರಗಳ ವಿಭಜನೆಯನ್ನು ಯಾವ ರೀತಿ ಮಾಡಲಾಗಿದೆಯೆಂಬುದರ
ಸೂಚಿಯನ್ನು ಕೆಳಗಿನ ಕೋಷ್ಟಕದಲ್ಲಿ ತಯಾರಿಸಿರಿ.
ಕೇಂದ್ರ ಸರಕಾರ |
ರಾಜ್ಯ ಸರಕಾರ |
ಎರಡೂ ಸರಕಾರಗಳ ಕಡೆಗೆ ಇರುವ
ವಿಷಯಗಳು. |
೧)ಸಂರಕ್ಷಣ |
೧) ಒಕ್ಕಲುತನ |
೧) ರೋಜಗಾರ |
೨) ಪರರಾಷ್ಟ್ರ
ವ್ಯವಹಾರ |
೨) ಕಾಯದೆ ಮತ್ತು
ಸೂವ್ಯವಸ್ಥೆ |
೨) ಪರ್ಯಾವರಣ |
೩)
ಅಂತರರಾಷ್ಟ್ರೀಯ ವ್ಯಾಪಾರ |
೩)ಆರೋಗ್ಯ |
೩) ಆರ್ಥಿಕ
ಮತ್ತು ಸಾಮಾಜಿಕ ನಿಯೋಜನೆ |
ಪ್ರಶ್ನೆ೨ :- ಯೋಗ್ಯ
ಶಬ್ದವನ್ನು ಬರೆಯಿರಿ.
೧) ಸಂಪೂರ್ಣ ದೇಶದ ಆಡಳಿತವನ್ನು ನೋಡಿಕೊಳ್ಳುವ ಸರಕಾರ – ಒಕ್ಕೂಟ ಸರಕಾರ
೨) ಚುಣಾವಣೆಯನ್ನು ನಡೆಸುವ ಆಯೋಗ --- ಚುಣಾವಣಾ ಆಯೋಗ
೩) ಎರಡು ಪಟ್ಟಿಗಳಲ್ಲದೆ ಇರುವ ಇನ್ನೊಂದು ಪಟ್ಟಿ --- ಸಮವರ್ತಿ ಸೂಚಿ
ಪ್ರಶ್ನೆ೩:-
ಬರೆಯುತ್ತಾ ಇರಿ.
೧) ಒಕ್ಕೂಟ ರಾಜ್ಯದಲ್ಲಿ ಎರಡು ಮಟ್ಟಗಳಲ್ಲಿ ಸರಕಾರಗಳಿರುತ್ತವೆ.
ಉತ್ತರ:- ವಿಸ್ತಾರವಾದ
ಭೂಪ್ರದೇಶವಿದ್ದರೆ ಒಂದೇ ಸ್ಥಳದಿಂದ ಆಡಳಿತನಡೆಸುವದು ಕಠಿಣವಾಗುತ್ತದೆ. ದೂರದ ಪ್ರದೇಶಗಳ ಕಡೆಗೆ
ದುರ್ಲಕ್ಷವಾಗುತ್ತದೆ.ಅಲ್ಲಿಯ ಜನರಿಗೆ ರಾಜ್ಯಾಡಳಿತದಲ್ಲಿ ಭಾಗವಹಿಸುವ ಅವಕಾಶ
ದೊರೆಯುವದಿಲ್ಲ.ಆದ್ದರಿಂದ ಒಕ್ಕೂಟ ರಾಜ್ಯದಲ್ಲಿ ಎರಡು ಮಟ್ಟಗಳ ಸರಕಾರಗಳಿರುತ್ತವೆ.
೨) ಶೇಷಾಧಿಕಾರ ಎಂದರೇನು?
ಉತ್ತರ:- ಕೇಂದ್ರಪಟ್ಟಿ
ಮತ್ತು ರಾಜ್ಯಪಟ್ಟಿ,ಸಮವರ್ತಿಪಟ್ಟಿ ಈ ಮೂರು ಪಟ್ಟಿಗಳಲ್ಲಿಯ ವಿಷಯಬಿಟ್ಟು ಯಾವುದಾದರೊಂದು
ವಿಷಯವು ನಿರ್ಮಾಣವಾದರೆ ಅದರ ಮೇಲೆ ಕಾಯ್ದೆ ಮಾಡುವಅಧಿಕಾರ ಕೇಂದ್ರಸರಕಾರಕ್ಕೆ ಇರುತ್ತದೆ ಈ
ಅಧಿಕಾರವು ‘ಶೇಷಾಧಿಕಾರ’ ವಾಗಿದೆ.
೩) ಸಂವಿಧಾನವು ಸ್ವತಂತ್ರ ನ್ಯಾಯಾಂಗದ ವ್ಯವಸ್ಥೆಯನ್ನು ನಿರ್ಮಿಸಿದೆ.
ಉತ್ತರ:- ನ್ಯಾಯಾಲಯದ ಮೇಲೆ
ಯಾವುದೇ ರೀತಿಯ ಒತ್ತಡ ಬರಬಾರದೆಂದು ಸಂವಿಧಾನವು ನ್ಯಾಯಾಂಗವನ್ನು ಹೆಚ್ಚಿಗೆ ಹೆಚ್ಚು
ಸ್ವತಂತ್ರವಾಗಿಡುವ ಸಲುವಾಗಿ ಅನೇಕ ಏರ್ಪಾಟುಗಳನ್ನು ಮಾಡಿದೆ ಆದ್ದರಿಂದ ಸಂವಿಧಾವು ಸ್ವತಂತ್ರ
ನ್ಯಾಯಾಂಗದ ವ್ಯವಸ್ಥೆಯನ್ನು ನಿರ್ಮಿಸಿದೆ.
ಪ್ರಶ್ನೆ ೪:-
ಸ್ವತಂತ್ರ ನ್ಯಾಯಾಂಗವ್ಯವಸ್ಥೆಯ ಲಾಭ ಮತ್ತು ಹಾನಿಗಳು ಎಂಬ ವಿಷಯದ ಮೇಲೆ ವರ್ಗದಲ್ಲಿ ಗುಂಪು
ಚರ್ಚೆಯನ್ನು ಏರ್ಪಡಿಸಿರಿ.
ಉತ್ತರ:-ಸ್ವತಂತ್ರ್ಯ
ನ್ಯಾಯಾಂಗ ವ್ಯವಸ್ಥೆಯಿಂದ ಮ್ಯಾಯ ನಿಪಕ್ಷಪಾತದಿಂದ ಆಗುವದು. ಅದರಂತೆ ನ್ಯಾಯಾಧೀಶರ ನೇಮಕವನ್ನು
ಸರಕಾರವು ಮಾಡದೇ ರಾಷ್ಟ್ರಪತಿಗಳು ಮಾಡುತ್ತಾರೆ. ನ್ಯಾಯಾಧೀಶರನ್ನು ಸಹಜವಾಗಿ ಅವರ ಸ್ಥಾನದಿಂದ
ತಗೆಯಲು ಬರುವದಿಲ್ಲ.
ಪ್ರಶ್ನೆ೫:-
ಇಲೆಕ್ಟ್ರಾನಿಕ್ ಮತದಾನಯಂತ್ರದ (EVM)
ಉಪಯೋಗದಿಂದ ಯಾವ ಲಾಭಗಳಾಗುತ್ತವೆಯೆಂಬುದರ ಮಾಹಿತಿ ಪಡೆಯಿರಿ.
ಉತ್ತರ:- ಇಲೆಕ್ಟ್ರಾನಿಕ
ಮತದಾನಯಂತ್ರದಿಂದ ಚುಣಾವಣೆ ಜಾರಿಯಲ್ಲಿ ತರುವದು ಸುಲಭವಾಗಿದೆ. ಚುಣಾವಣೆ ಫಲಿತಾಂಶ ಬೇಗನೆ ಕಡಿಮೆ
ಶ್ರಮದಲ್ಲಿ ಘೊಶಿಷಲು ಸಾಧ್ಯವಾಗಿದೆ.ಮತಪಡಟ್ಟಿಗೆಗಳ ಸಂರಕ್ಷಣೆ ಸುಲಭವಾಗಿ ಮಾಡಬಹುದು.
0 ಕಾಮೆಂಟ್‌ಗಳು
ಧನ್ಯವಾದಗಳು