ನಾಗರಿಕ ಶಾಸ್ತ್ರ ೭ ನೇ ಇಯತ್ತೆ
ಅನುಕ್ರಮಣಿಕೆ
ಪಾಠಗಳ ಹೆಸರು
1. 4. ಮೂಲಭೂತ ಹಕ್ಕುಗಳು ಭಾಗ -1
5.
ಮೂಲಭೂತ ಹಕ್ಕುಗಳು ಭಾಗ -2
6.
ನಿರ್ದೇಶಕ ತತ್ವಗಳು ಮತ್ತು
ಮೂಲಭೂತ ಕರ್ತವ್ಯಗಳು
ಪಾಠ ೪
ಮೂಲಭೂತ ಹಕ್ಕುಗಳು ಭಾಗ -೧
ಪ್ರಶ್ನೆ ೧ :-
ಕೇಳಗಿನ ಪ್ರಶ್ನೆಗಳಿಗೆ ಸ್ವಲ್ಪದರಲ್ಲಿ ಉತ್ತರ ಬರೆಯಿರಿ.
೧ ) ಮೂಲಭೂತ ಹಕ್ಕು ಎಂದರೇನು?
ಉತ್ತರ:- ನಮಗೆ ಜನ್ಮತ:
ಕೆಲವು ಹಕ್ಕುಗಳು ಪ್ರಾಪ್ತವಾಗುತ್ತವೆ. ಅವು
ನಮಗೆ ಒಳ್ಳೆಯ ಜೀವನ ನಡೆಸುವಸಲುವಾಗಿ ಅವಶ್ಯಕ ಇರುತ್ತವೆ ಮತ್ತು ಹಕ್ಕುಗಳಿಗೆ ಕಾಯ್ದೆಯಲ್ಲಿ
ರೂಪಾಮತರ ಆಗಿರುವದರಿಂದ ಅವು ಸರಕಾರಕ್ಕೆ ಸಹಜವಾಗಿ ತಗೆಯಲು ಬರುವದಿಲ್ಲ.ಇಂಥ ಹಕ್ಕುಗಳು ಎಂದರೆ
ಮೂಲಭೂತ ಹಕ್ಕುಗಳಾಗಿವೆ.
೨ )ವಿವಿಧ ಕ್ಷೆತ್ರಗಳಲ್ಲಿ ಗೌರವಾಸ್ಪದ ಕಾರ್ಯ ಮಾಡುವವರಿಗೆ ಸರಕಾರವು
ಯಾವ ಯಾವ ಪದವಿ/ಪದಕಗಳನ್ನು ನೀಡುತ್ತದೆ?
ಉತ್ತರ :- ವಿವಿಧ
ಕ್ಷೆತ್ರಗಳಲ್ಲಿ ಗೌರವಾಸ್ಪದ ಕಾರ್ಯ ಮಾಡುವವರಿಗೆ ಸರಕಾರವು ಪದ್ಮಶ್ರೀ, ಪದ್ಮಭೂಷಣ,ಪದ್ಮವಿಭೂಷಣ ಇಂಥ ಪದವಿಗಳನ್ನು ಕೊಡುತ್ತದೆ. ಸಂರಕ್ಷಣ ದಳದಲ್ಲಿ
ಉತ್ಕೃಷ್ಟ ಕಾರ್ಯಕ್ಕಾಗಿ ಪರಮವೀರ ಚಕ್ರ, ಅಶೋಕಚಕ್ರ, ಶೌರ್ಯಚಕ್ರ ಸನ್ಮಾನದ ಪದವಿಗಳನ್ನು ನೀಡಲಾಗುತ್ತದೆ.
೩ )೧೪ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಅಪಾಯಕಾರಿ
ಸ್ಥಳಗಳಲ್ಲಿ ದುಡಿಮೆಗೆ ಇಟ್ಟುಕೊಳ್ಳಲು ಏಕೆ ನಿರ್ಭಂಧಿಸಿದೆ?
ಉತ್ತರ:- ಸಂವಿಧಾನವು
ಒಂದೆಡೆ ಶೋಷಣೆಯ ವಿರುದ್ಧದ ಹಕ್ಕಿನಿಂದ ಶೋಷಣೆ ಮಾಡುವ ಎಲ್ಲ ಪ್ರಕಾರಗಳನ್ನು
ನಿಷೇಧಿಸಿದೆ.ಅದಕ್ಕನುಸಾರವಾಗಿ ೧೪ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಅಪಾಯಕಾರಿ
ಸ್ಥಳಗಳಲ್ಲಿ ದುಡಿಮೆಗೆ ಇಟ್ಟುಕೊಳ್ಳಲು ಏಕೆ ನಿರ್ಭಂಧಿಸಿದೆ
೪ ) ಸಂವಿಧಾನವು ಭಾರತದಲ್ಲಿಯ ಸರ್ವನಾಗರಿಕರಿಕೆ ಸಮಾನ ಹಕ್ಕುಗಳು ಏಕೆ
ನೀಡಿದೆ?
ಉತ್ತರ:-ಭಾರತೀಯ
ನಾಗರಿಕರಲ್ಲಿ ಉಚ್ಚ-ನೀಚ,ಶ್ರೇಷ್ಠ-ಕನಿಷ್ಠ,ಸ್ತ್ರೀ-ಪುರುಷ,ಎಂಬ ಭೇದಭಾವ ಮಾಡಿ
ಅವರನ್ನು ಬೇರೆರಿತಿಯಿಂದ ನಡೆಸಿಕೋಳ್ಳಲು ಬರುವದಿಲ್ಲ.ಕಾನೂನು ಸರ್ವರಿಗಾಗಿ
ಸಮಾನವಾಗಿರುತ್ತದೆ.ಕಾನೂನಿನಿಂದ ನಮಗೆ ಸಂರಕ್ಷಣೆ ದೊರೆಯುತ್ತದೆ.
ಪ್ರಶ್ನೆ ೨:- ‘ಸ್ವಾತಂತ್ರ್ಯದ
ಹಕ್ಕು’ ಈ
ವಿಷಯದ ಮೇಲೆ ಒಂದು ಚಿತ್ರಪಟ್ಟಿ ತಯಾರಿಸಿರಿ.
ಉತ್ತರ:- ಸಮಾನತೆ ಹಕ್ಕು.
ಸ್ವತಂತ್ರ್ಯದ ಹಕ್ಕು ಶೋಷಣೆ ವಿರುದ್ಧದ ಹಕ್ಕು
ಪ್ರಶ್ನೆ ೩:-
ಕೆಳಗಿನ ವಾಕ್ಯಗಳನ್ನು ತಿದ್ದಿ ಬರೆಯಿರಿ.
೧) ಯಾವುದೇ ವ್ಯಕ್ತಿಗೆ ಹಕ್ಕುಗಳು ಜನ್ಮತ: ಪ್ರಾಪ್ತವಾಗುವದಿಲ್ಲ.
ಉತ್ತರ:- ಸಂವಿಧಾನವು
ಭಾರತದಲ್ಲಿಯ ಎಲ್ಲ ನಾಗರಿಕರಿಗೆ ಜನ್ಮತ: ಹಕ್ಕು ಪ್ರಾಪ್ತವಾಗುತ್ತವೆ.
೨) ಸರಕಾರ ನೌಕರಿಗಳನ್ನು ನೀಡುವಾಗ ಸರಕಾರವು ಧರ್ಮ, ಲಿಂಗ ಜನ್ಮಸ್ಥಳ
ಇವುಗಳ ಮೇಲೆ ಆಧಾರಿತ ಭೇದಭಾವ ಮಾಡಿ ನಿಮ್ಮನ್ನು ನೌಕರಿಯಿಂದ ದೂರವಿರಿಸಬಹುದು.
೨ ಉತ್ತರ:- ಸರಕಾರ
ನೌಕರಿಗಳನ್ನು ನೀಡುವಾಗ ಸರಕಾರವು ಧರ್ಮ, ಲಿಂಗ ಜನ್ಮಸ್ಥಳ ಇವುಗಳ ಮೇಲೆ ಆಧಾರಿತ ಭೇದಭಾವ ಮಾಡಿ ನಿಮ್ಮನ್ನು
ನೌಕರಿಯಿಂದ ದೂರವಿರಿಸಲು ಬರುವದಿಲ್ಲ.
ಪ್ರಶ್ನೆ೪) ಕೆಳಗಿನ ಕಲ್ಪನಾಚಿತ್ರ ಪೂರ್ಣಮಾಡಿರಿ.
ಸ್ವಾತಂತ್ರ್ಯದ ಹಕ್ಕ
ಭಾಷಣ ಸ್ವಾತಂತ್ರ್ಯ ಸಭೆ ಸಂಘಟನೆ ಸಂಚಾರಸ್ವತಂತ್ರ್ಯ
ನೆಲೆಸುವ ಸ್ವಾತಂತ್ರ್ಯ ಉದ್ಯೋಗ
ಸ್ವತಂತ್ರ್ಯ
ಪ್ರಶ್ನೆ ೫ )
ಬಿಟ್ಟಸ್ಥಳದಲ್ಲಿ ಯೋಗ್ಯಶಬ್ದ ತುಂಬಿರಿ.
೧) ಸಂವಿಧಾನದಲ್ಲಿ
ಸಮಾವಿಷ್ಟಮಾಡಿದ ನಾಗರಿಕರ ಹಕ್ಕುಗಳಿಗೆ ಮೂಲಭುತ ಹಕ್ಕು ಎನ್ನುತ್ತಾರೆ.
೨) ಭಾರತೀಯ ನಾಗರಿಕರಿಗೆ ತಮಗೆ ಬೇಕಾದ ಕಾಯ್ದೆ ಅನುಸಾರ ವ್ಯವಸಾಯ ಮಾಡಲು
ಬರುವದು.
೩) ಒತ್ತಾಯ, ಅನ್ಯಾಯ ಮಾಡುವದು ಶೋಷಣೆ ಆಗಿದೆ.
೪) ಪ್ರತಿಯೋಬ್ಬ ನಾಗರಿಕನಿಗೆ ಸ್ವಾತಂತ್ರಯದ ಹಕ್ಕು ಇದೆ.
ಪಾಠ ೫
ಮೂಲಭೂತ ಹಕ್ಕುಗಳು ಭಾಗ -೨
ಪ್ರಶ್ನೆ :-೧
ಉತ್ತರ ಬರೆಯಿರಿ.
೧ ) ಧಾರ್ಮಿಕ ತೆರಿಗೆಯನ್ನು ಹೇರಲು ಸಂವಿಧಾನವು ಏಕೆ ಪ್ರತಿಬಂಧಿಸುತ್ತದೆ?
ಉತ್ತರ:- ವಿಶಿಷ್ಟ
ಧರ್ಮಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಯಾವ ತೆರಿಗೇಯ ಉಪಯೋಗ ಮಾಡಲಾಗುವುದೋ ಅಂಥ ತೆರಿಗೆಯನ್ನು
ಸರಕಾರಕ್ಕೆ ಹೇರಲು ಬರುವದಿಲ್ಲ.
೨ ) ಸಂವಿಧಾನಾತ್ಮಕ ಉಪಾಯಯೋಜನೆಗಳ ಹಕ್ಕು ಎಂದರೇನು?
ಉತ್ತರ:- ಹಕ್ಕುಗಳು
ಭಂಗವಾದರೆ ನ್ಯಾಯಾಲಯದಿಂದ ಪರಿಹಾರ ಪಡೆಯುವ ಹಕ್ಕಿದೆ. ಈ ಹಕ್ಕಿಗೆ ಸಂವಿಧಾನಾತ್ಮಕ ಉಪಾಯಯೋಜನೆಗಳ
ಹಕ್ಕು ಎನ್ನುವರು.
ಪ್ರಶ್ನೆ ೨:- ಯೋಗ್ಯ
ಶಬ್ದವನ್ನು ಬರೆಯಿರಿ.
೧) ಕಾನೂನು ವಿರುದ್ಧ ಬಂಧನ ಮತ್ತು ಸ್ಥಾನಬದ್ಧತೆ ಇವುಗಳಿಂದ
ಸಂರಕ್ಷಣೆ
ಉತ್ತರ:-
ಬಂಧೀಪ್ರತ್ಯಕ್ಷಿಕರಣ
೨) ಯಾವ ಸರಕಾರಿ
ಅಧಿಕಾರಿಯೂ ಈ ಕೃತಿ ಮಾಡಿದನೋ ಈ ಸರಕಾರಿ ಅಧಿಕಾರಿ ಕಡೆಯ ಸ್ಪಷ್ಟಿಕರಣ ಬೇಡುವ ನ್ಯಾಯಾಲಯದ ಆದೇಶ.
ಉತ್ತರ:- ಅಧಿಕಾರ ಪೃಚ್ಛಾ
೩) ಜನಹಿತಕ್ಕಾಗಿ ಯಾವುದೇ ಕೃತಿಯನ್ನು ಮಾಡುವ ಸಲುವಾಗಿ ನೀಡಲಾಗುವ
ನ್ಯಾಯಾಲಯದ ಆಜ್ಞೆ
ಉತ್ತರ:- ಪರಮಾದೇಶ
೪) ಕನಿಷ್ಠ
ನ್ಯಾಯಾಲಯವು ತನ್ನ ಅಧಿಕಾರ ಕ್ಷೆತ್ರವನ್ನು ಬಿಟ್ಟು ವರ್ತಿಸದಂತೆ ನೀಡುವ ಆಜ್ಞೆ
ಉತ್ತರ:- ಪ್ರತಿಭಂದಕಾಜ್ಞೆ
ಪ್ರಶ್ನೆ ೩:- ನಾವು
ಇದನ್ನು ಮಾಡಬಹುದು, ಇದರ ಕಾರಣವನ್ನು ಮುಂದೆ ಬರೆಯಿರಿ.
೧ ) ಸರ್ವ ಭಾರತೀಯ ನಾಗರಿಕರಿಗೆ ಎಲ್ಲ ಹಬ್ಬಗಳನ್ನು ಆನಂದದಿಂದ
ಆಚರಿಸಲು ಬರುತ್ತದೆ ಏಕೆಂದರೆ---
ಉತ್ತರ:- ಕಾರಭ ಧಾರ್ಮಿಕ
ಸ್ವಾತಂತ್ರö್ಯಅನುಸಾರ
ಭಾರತದಲ್ಲಿಯ ಪ್ರತಿಯೋಬ್ಬ ನಾಗರಿಕನಿಗೆ ಯಾವುದೇ ಧರ್ಮದ ಉಪಾಸನೆ ಮಾಡುವ ಮತ್ತು ಧಾರ್ಮಿಕ ಸಂಸ್ಥೆ
ತಗೆಯುವ ಅಧಿಕಾರ ವಿದೆ.
೨) ನನಗೆ ಕನ್ನಡ ಭಾಷೆಯಲ್ಲಿ ಶಿಕ್ಷಣ ಪಡೆಯಲು
ಬರುತ್ತದೆ.ಕಾರಣ..........
ಉತ್ತರ:- ಕಾರಣ ಸಾಂಸ್ಕೃತಿಕ
ಮತ್ತು ಶೌಕ್ಷಣಿಕ ಹಕ್ಕು ಅನುಸಾರವಾಗಿ ಭಾಷೆ ,ಲಿಪಿ, ಸಾಹಿತ್ಯ ಇವುಗಳನ್ನು ಕಾಪಾಡಲು ಬರುತ್ತದಷ್ಟೇ ಅಲ್ಲದೇ
ಸಂವರ್ಧನೆಯನ್ನು ಮಾಡಲು ಬರುತ್ತದೆ. ಭಾಷೆಯ ವಿಕಾಸಕ್ಕಾಗಿ ಸಂಸ್ಥೆಗಳನ್ನು ಸ್ಥಾಪನೆ ಮಾಡಲು
ಬರುತ್ತದೆ.
ಪ್ರಶ್ನೆ ೪ ) ಬಿಟ್ಟ ಸ್ಥಳಗಳಲ್ಲಿ ಯಾವ ಶಬ್ದ ಬರೆಯಬೇಕು?
೧ ) ಹಕ್ಕುಭಂಗ ವಿಷಯದ ನಮ್ಮ ದೂರನ್ನು ನ್ಯಾಯಾಲಯ
ಗಮನಿಸುತ್ತದೆ.
೨ ) ಸರಕಾರದ ಆರ್ಥಿಕ ನೆರವನ್ನು ಪಡೆಯುವ ಶಾಲೆಗಳಲ್ಲಿ ಧಾರ್ಮಿಕ ಶಿಕ್ಷಣ ವನ್ನು ಮಾಡಲು ಬರುವದಿಲ್ಲ.
ಪ್ರಶ್ನೆ ೫:-
ಶೋಧಿಸಿರಿ ಮತ್ತು ಬರೆಯಿರಿ.
೧ ) ಸಂವಿಧಾನವು ಏಷ್ಟು ಭಾಷೆಗಳಿಗೆ ಮಾನ್ಯತೆ ಕೊಟ್ಟಿದೆ?
ಉತ್ತರ:- ಸಂವಿಧಾನವು ೨೨
ಭಾಷೆಗಳಿಗೆ ಮಾನ್ಯತೆ ಕೊಟ್ಟಿದೆ.
೨ ) ಕನ್ನಡ ಭಾಷೆ ಸಂವರ್ಧನೆ ಸಲುವಾಗಿ ಸರಕಾವು ಯಾವ ಸಂಸ್ಥೆ ನಿರ್ಮಾಣ
ಮಾಡಿದೆ?
ಕನ್ನಡ ಭಾಷೆ ಸಂವರ್ಧನೆ ಸಲುವಾಗಿ ಸರಕಾರವು ಕನ್ನಡ ಭಾಷಾ ಸಂವರ್ಧನ
ಸಂಸ್ಥೆ ಸ್ಥಾಪಿಸಿದೆ.
ಪಾಠ ೬
ನಿರ್ದೆಶಕ ತತ್ವಗಳು ಮತ್ತು ಮೂಲಭೂತ ಕರ್ತವ್ಯಗಳು
ಪ್ರಶ್ನೆ ೧:-
ಸರಕಾರದ ಮೇಲೆ ಯಾವ ನಿರ್ಬಂಧಗಳಿರುತ್ತವೆಯೆಂಬುದರ ಬಗ್ಗೆ ಕೆಳಗಿನ ಚೌಕಟ್ಟಿನಲ್ಲಿ ಕೋಷ್ಟಕವನ್ನು
ತಯಾರಿಸಿರಿ.
ಉತ್ತರ:-
• ಸರಕಾರವು ನಾಗರಿಕರಲ್ಲಿ ಜಾತಿ,ಧರ್ಮ,ವಂಶ,ಭಾಷೆ ಮತ್ತು ಲಿಂಗ
ಇವುಗಳ ಆಧಾರದ ಮೇಲೆ ಭೇದ ಮದಾಡಬಾರದು.
• ಕಾನೂನಿನ ಎದುರಿಗೆ ಸಮಾನತೆ
ಮತ್ತು ಕಾನೂನಿನ ಸಮಾನ ಸಂರಕ್ಷಣೆಯನ್ನು ಯಾರಿಗೂ ನಿರಾಕರಿಸಬಾರದು.
• ಯಾವುದೇ ವ್ಯಕ್ತಿಯ
ಜೀವನವನ್ನು ಕಸಿದುಕೊಳ್ಳಬಾರದು.
• ಧಾರ್ಮಿಕ ತೆರಿಗೆಯನ್ನು
ಹೇರಬಾರದು.
ಪ್ರಶ್ನೆ ೨:-
ಕೆಳಗಿನ ವಾಕ್ಯಗಳನ್ನು ಓದಿರಿ ಹಾಗೂ ಹೌದು/ಇಲ್ಲ ಎಂದು ಉತ್ತರ ಬರೆಯಿರಿ.
೧) ವರ್ತಮಾನ ಪತ್ರದಲ್ಲಿ
ಕೊಟ್ಟ ನೌಕರಿಯ ಜಾಹಿರಾತಿನಲ್ಲಿ ಮಹಿಳಾ ಮತ್ತು ಪುರುಷರಿಬ್ಬರಿಗಾಗಿ ಜಾಗೆಗಳು
ಇರುತ್ತವೆ.
ಉತ್ತರ:- ಹೌದು
೨) ಒಂದೇ ಕಾರ್ಖಾನೆಯಲ್ಲಿ ಒಂದೇ ಕೆಲಸ ಮಾಡುವ ಸ್ತ್ರೀ-ಪುರುಷರಿಗೆ
ಬೇರೆ ಬೇರೆ ವೇತನ ದೊರೆಯುತ್ತದೆ…………
ಉತ್ತರ:- ಇಲ್ಲ.
೩) ಸರಕಾರದ ವತಿಯಿಂದ ಆರೋಗ್ಯ ಸುಧಾರಣೆಗಾಗಿ ವಿವಿಧ ಉಪಾಯ
ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಉತ್ತರ:- ಹೌದು
೪) ರಾಷ್ಟ್ರದ ದೃಷ್ಟಿಯಿಂದ ಮಹತ್ವದ ಕಟ್ಟಡ ಮತ್ತು ಸ್ಮಾರಕಗಳು
ಸಂರಕ್ಷಣೆ ಮಾಡಬೇಕು……………………….
ಉತ್ತರ:- ಹೌದು
ಪ್ರಶ್ನೆ೨:- ಏಕೆ
ಎಂಬುದನ್ನು ಬರೆಯಿರಿ.
೧ ) ಐತಿಹಾಸಿಕ ಕಟ್ಟಡಗಳು ಮತ್ತು ಸ್ಮಾರಕಗಳ ಸಂರಕ್ಷಣೆ ಮಾಡಬೆಕು.
ಉತ್ತರ:- ಕಾರಣ ಅವು
ನಿರ್ದೆಶಕ ತತ್ವಗಳಿವೆ.
೨ ) ವೃದ್ಧರಿಗಾಗಿ ನಿವೃತ್ತಿವೇತನ ಯೋಜನೆಯನ್ನು ನಡೆಸಲಾಗುತ್ತದೆ.
ಉತ್ತರ:- ಸಂವಿಧಾನ
ನಿರ್ದೇಶಕ ತತ್ವದಲ್ಲಿ ಸಮಾವೇಶವಿದೆ.
೩ ) ೬ ರಿಂದ ೧೪ ವರ್ಷ ವಯೋಮಾನದಲ್ಲಿಯ ಮಕ್ಕಳಿಗೆ ಶಿಕ್ಷಣದ
ಅವಕಾಶವನ್ನು ಉಪಲಬ್ದಮಾಡಿಕೊಡಲಾಗಿದೆ.
ಉತ್ತರ:- ಇದು ಭಾರತಿಯ
ನಾಗರಿಕರ ಮೂಲಭೂತ ಕರ್ತವ್ಯವಾಗಿದೆ.
ಪ್ರಶ್ನೆ೪:-
ಯೋಗ್ಯವೋ, ಅಯೋಗ್ಯವೊ
ಎಂಬುದನ್ನು ಹೇಳಿರಿ.ಅಯೋಗ್ಯ ವಿಧಾನವನ್ನು ತಿದ್ದಿ ಬರೆಯಿರಿ.
೧ ) ರಾಷ್ಟ್ರಧ್ವಜವನ್ನು ನೆಲದ ಮೇಲೆ ಬೀಳಗೊಡದಿರುವುದು.
ಉತ್ತರ:- ಯೋಗ್ಯ
೨ ) ರಾಷ್ಟ್ರಗೀತೆಯು ನಡೆದಿರುವಾಗ ಸಾವಧಾನ ಸ್ಥಿತಿಯಲ್ಲಿ ಎದ್ದು
ನಿಲ್ಲುವದು.
ಉತ್ತರ:- ಯೋಗ್ಯ
೩ ) ನಮ್ಮ ಐತಿಹಾಸಿಕ ಕಟ್ಟಡಗಳ ಮೇಲೆ ನಮ್ಮ ಹೆಸರನ್ನು ಬರೆಯುವುದು, ಕೊರೆಯುವದು.
ಉತ್ತರ:- ನಮ್ಮ ಐತಿಹಾಸಿಕ
ಕಟ್ಟಡಗಳ ಮೇಲೆ ನಮ್ಮ ಹೆಸರನ್ನು ಬರೆಯುವುದು, ಕೊರೆಯುವದು ಅಯೋಗ್ಯವಿದೆ.
೪ ) ಸಮಾನ ಕೆಲಸಕ್ಕಾಗಿ ಪುರುಷರಿಗಿಂತ ಸ್ತ್ರೀಯರಿಗೆ ಕಡಿಮೆ
ವೇತನವನ್ನು ಕೊಡುವುದು.
ಉತ್ತರ:-ಅಯೋಗ್ಯ, ಸಮಾನ ಕೆಲಸಕ್ಕಾಗಿ
ಪುರುಷರಿಗಿಂತ ಸ್ತ್ರೀಯರಿಗೆ ಸಮಾನ ವೇತನವನ್ನು ಕೊಡುವುದು.
೫ )ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವದು.
ಉತ್ತರ:- ಯೋಗ್ಯ
ಪ್ರಶ್ನೆ೫:-ಉತ್ತರ
ಬರೆಯಿರಿ.
೧ ) ಸಂವಿಧಾನದಲ್ಲಿಯ ಕೆಲವು ನಿರ್ದೆಶಕ ತತ್ವಗಳನ್ನು
ಪಠ್ಯಪುಸ್ತಕದಲ್ಲಿ ಕೊಡಲಾಗಿದೆ, ಅವು ಯಾವವು?
ಉತ್ತರ:- ೧) ಸರಕಾರವು
ಸಾರ್ವಜನಿಕರಿಗೆ ಉಪಜೀವನದ ಸಾಧನವನ್ನು ದೊರಕಿಸಿಕೊಡಬೆಕು. ಆ ವಿಷಯದಲ್ಲಿ ಸ್ತ್ರೀ ಮತ್ತು ಪುರುಷ
ಎಂಬ ಭೇದವನ್ನು ಮಾಡಬಾರದು.
೨ ) ಸ್ತ್ರೀ ಮತ್ತು ಪುರುಷರಿಬ್ಬರಿಗೂ ಸಮಾನ ಕೆಲಸಕ್ಕೆ ಸಮಾನ ವೇತನ
ನೀಡಬೇಕು.
೩ ) ಜನತೆಯ ಆರೋಗ್ಯವನ್ನು ಸುಧಾರಿಸುವ ಸಲುವಾಗಿ ಉಪಾಯ ಯೋಜನೆ
ಮಾಡಬೇಕು.
೪ ) ಪರಿಸರದ ರಕ್ಷಣೆ ಮಾಡಬೇಕು.
೫ ) ರಾಷ್ಟ್ರದ ದೃಷ್ಟಿಯಿಂದ ಮಹತ್ವದ ಸ್ಥಲಗಳ ಅಂದರೆ ಸ್ಮಾರಕಗಳ
ಮತ್ತು ಕಟ್ಟಡಗಳ ಸಂರಕ್ಷಣೆ ಮಾಡಬೇಕು.
೬ ) ಸಮಾಜದಲ್ಲಿಯ ದುರ್ಬಲ ಘಟಕಗಳಿಗೆ ವಿಶೇಷ ಸಂರಕ್ಷಣೆ ನೀಡಿ ಅವರಿಗೆ
ವಿಕಾಸದ ಅವಕಾಶಗಳನ್ನು ಉಪಲಬ್ದ ಮಾಡಿ ಕೊಡಬೇಕು.
೭ ) ವೃದ್ಧಾಪ, ದೌರ್ಬಲ್ಯ, ನಿರುದ್ಯೋಗ ಇತ್ಯಾದಿಗಳಿಂದ ನಾಗರಿಕರ ಸಂರಕ್ಷಣೆ ಮಾಡುವುದು.
೮ ) ಭಾರತದಲ್ಲಿಯ ಸರ್ವ ನಾಗರಿಕರಿಗಾಗಿ ಸಮಾನ ನಾಗರಿಕ ಕಾನೂನ್ನು
ಮಾಡಬೇಕು.
೨ ) ಭಾರತೀಯ ಸಂವಿಧಾನದಲ್ಲಿಯ ನಿರ್ದೆಶಕ ತತ್ವಗಳಲ್ಲಿ
ಸರ್ವನಾಗರಿಗಾಗಿ ಸಮಾನ ನಾಗರಿಕ ಕಾನೂನಿನ ಏರ್ಪಾಟನ್ನು ಏಕೆ ಮಾಡಿರಬೇಕು.
ಉತ್ತರ:- ಯಾವುದೇ
ವ್ಯಕ್ತಿಯಲ್ಲಿ ಜಾತಿ,ಧರ್ಮ,ಲಿಂಗ,ಜನ್ಮಸ್ಥಾನ
ಇದರಮೇಲೆ ಭೇದ ಭವ ಮಾಡದೇ ಸರಕಾರದ ಕಡೆಯಿಂದ ಉಪಜೀವಿಕೆಯ ಸಾಧನೆ,ಆರೋಗ್ಯ ಸುವಿಧೆ,ಸ್ತ್ರೀ ಪುರುಷರಿಗೆ
ಸಮಾನ ವೇತನ,ಆರೋಗ್ಯದ
ಉಪಾಯಯೋಜನೆ,ವೃದ್ಧಾವಸ್ತೆ,ಅಪಂಗತ್ವ ಇದರ ಮೇಲೆ
ನಾಗರಿಕರಿಕೆ ಸಮಾನ ಸಂರಕ್ಷಣೆ ಇರಬೆಕು.ಇದರಲ್ಲಿ ಯಾವುದೇ ಭೇದ ಭಾವ ಮಾಡಬಾರದು.ಇದರ ಸಲುವಾಗಿ
ಸಮಾನನಾಗರಿಕ ಕಾಯದೆ ಆಯ್ಕೆ ಮಾಡಲಾಗಿದೆ.
೩ ) ನಿರ್ದೆಶಕ ತತ್ವಗಳು ಮತ್ತು ಮೂಲಭೂತ ಹಕ್ಕುಗಳು ಒಂದೇ ನಾಣ್ಯದ
ಎರಡು ಬದಿಗಳಾಗಿವೆ,ಎಂದು ಏಕೆ
ಹೇಳಲಾಗುತ್ತದೆ?
ಉತರ:- ಮಾರ್ಗದರ್ಶಕ
ತತ್ವಗಳು ಮತ್ತು ಮೂಲಭೂತ ಹಕ್ಕುಗಳು ಒಂದೇ ನಾಣ್ಯದ ಎರಡು ಬದಿಗಳಾಗಿವೆ.ಮೂಲಭೂತ ಹಕ್ಕುಗಳಿಂದಾಗಿ
ನಾಗರಿಕರಿಗೆ ಅತ್ಯಾವಶ್ಯಕವಾದ ಸ್ವಾತಂತ್ರö್ಯ ದೊರೆಯುತ್ತದೆ.ಆದರೆ ನಿರ್ದೆಶಕ ತತ್ವಗಳು ಪ್ರಜಾಪ್ರಭುತ್ವ
ವೃದ್ಧಿಹೊಂದಲು ಪೋಷಕ ವಾತಾವರಣವನ್ನು ನಿರ್ಮಿಸುತ್ತವೆ.ಇದರರ್ಥ ಯಾವುದಾದರೊಂದು ನಿರ್ದೇಶಕ
ತತ್ವವನ್ನು ಸರಕಾರವು ಜಾರಿಗೊಳಿಸಿದ್ದರೆ ಅದರ ವಿರುದ್ಧ ನಮಗೆ ನ್ಯಾಯಾಲಯಕ್ಕೆ ಹೋಗಲು
ಬರುವದಿಲ್ಲ. ಆದರೆ ವಿವಿಧ ಮಾರ್ಗಗಳಿಂದ ಸರಕಾರದ
ಮೇಲೆ ಒತ್ತಡ ತಂದು ನೀತಿಯನ್ನು ರೂಪಿಸುವ ಆಗ್ರಹವನ್ನು ನಾವು ಮಾಡಬಹುದು.
ಪ್ರಶ್ನೆ೬:-
ಪರಿಸರದ ಪಾಲನೆ ಮತ್ತು ಸಂರಕ್ಷಣೆಯನ್ನು ನಾಗರಿಕರು ಯಾವ ಪ್ರಕಾರದಿಂದ ಮಾಡಬಹುದುದೆಂಬುದನ್ನು
ಉದಾಹರಣೆ ಸಹಿತ ಬರೆಯಿರಿ.
ಉತ್ತರ:-ಪರಿಸರದ ಪಾಲನೆ
ಮತ್ತು ಸಂರಕ್ಷಣೆ ಮಾಡುವಾಗ ನಾವು ನಮ್ಮ ಪರಿಸರದಲ್ಲಿಯ ಗಿಡ ಕಡಿಯುತ್ತಿದ್ದರೆ,ಅದರ ವಿರುದ್ಧ
ತಕರಾರು ಮಾಡಿ ಕೆಲಸ ನಿಲ್ಲಿಸುವದು. ನದಿ ಪ್ರದೂಷಣೆ ನಿಲ್ಲಿಸಲು ನಾವು ಮತ್ತು ಶಾಲೆಯ
ವಿದ್ಯಾರ್ಥಿಯೋಂದಿಗೆ ಸ್ವಚ್ಛತಾಮೊಹಿಮ ಹಮ್ಮಿಕೊಳ್ಳುವದು.ನಾವು ನಮ್ಮ ಮನೆಯಲ್ಲಿ ಗಿಡ ನೆಡುವದು
ಮತ್ತು ಪ್ರವಾಸದಲ್ಲಿ ಹೋದಾಗ ಯಾವಸ್ಥಳದಲ್ಲಿ ಗಿಡ ಹಚ್ಚಲು ಅನುಕೂಲವಿರುವಲ್ಲಿ ಬೀಜ ಬಿತ್ತುವದು.
ಹಿಗೆ ನಾವು ಪರಿಸರ ಪಾಲನೆ ಮತ್ತು ಸಂರಕ್ಷಣೆ ಮಾಡಬಹುದು.
0 ಕಾಮೆಂಟ್‌ಗಳು
ಧನ್ಯವಾದಗಳು