ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಪಾಠ 10. ಮರಾಠರ ಆಡಳಿತ ವಿಸ್ತಾರ 7ನೇ ಇಯತ್ತೆ STD 7Th Marathara Adalit Vistar

 ಪಾಠ 10. ಮರಾಠರ ಆಡಳಿತ ವಿಸ್ತಾರ 7ನೇ ಇಯತ್ತೆ STD 7Th Marathara Adalit Vistar

 

೧೦ ಮರಾಠರ ಆಡಳಿತ ವಿಸ್ತಾರ

ಪ್ರಶ್ನೆ ೧:- ಎಂದರೇನು?

    ೧ ) ಚೌಥಾಯಿ

ಉತ್ತರ:- ಚೌಥಾಯಿ ಅಂದರೆ ಉತ್ಪನ್ನದ ಒಂದು ನಾಲ್ಕಾಂಶ ಭಾಗ.

    ೨ ) ಸರದೇಶಮುಖಿ

ಉತ್ತರ:- ಸರದೇಶಮುಖಿ ಅಂದರೆ ಉತ್ಪನ್ನದ ಒಂದು ಹತ್ತಾಂಶ ಭಾಗ ಹೌದು.

ಪ್ರಶ್ನೆ ೨:- ಒಂದು ಶಬ್ದದಲ್ಲಿ ಉತ್ತರ ಬರೆಯಿರಿ.

    ೧ ) ಬಾಳಾಜಿಯು ಮೂಲತ: ಕೊಂಕಣದಲ್ಲಿಯ ಈ ಗ್ರಾಮದವನು. ………………… ಶ್ರೀವರ್ಧನ

    ೨ ) ಬುಂದೇಲಖಂಡದಲ್ಲಿ ಇವನ ರಾಜ್ಯವಿತ್ತು……………………. ಛತ್ರಸಾಲ

   ೩ ) ಈ ಸ್ಥಳದಲ್ಲಿ ಬಾಜೀರಾವನು ಮರಣಹೊಂದಿದನು………………… ತೆರಖೆಡ

   ೪ ) ಇವನು ಪೋರ್ತಗೀಜರನ್ನು ಸೋಲಿಸಿದನು ……………… ಚಿಮಾಜಿ ಅಪ್ಪಾ

ಪ್ರಶ್ನೆ ೩ :- ಉತ್ತರ ಬರೆಯಿರಿ.

   ೧ )  ಕಾನ್ಹೊಜಿ ಆಂಗ್ರೆ

ಉತ್ತರ:- ಕಾನ್ಹೊಜಿ ಆಂಗ್ರಯು ಮರಾಠಾನೌಕಾಪಡೆಯ ಪ್ರಮುಖನಾಗಿದ್ದನು.ಅವನು ತಾರಾಬಾಯಿಯಪಕ್ಷವಹಿಸಿದ್ದನು.ಅವನು ಶಾಹೂಮಾಹಾರಾಜರ ಪ್ರಾಂತಗಳ ಮೇಲೆ ದಾಳಿಮಾಡಿದನು.ಅದರಿಂದಾಗಿ ಶಾಹೂಮಾಹಾರಾಜರ ಮುಂದೆ ಕಠಿಣ ಪ್ರಸಂಗ ನಿರ್ಮಾಣವಾಯಿತು.ಈ ಪರಿಸ್ಥಿತಿಯಲ್ಲಿ ಅವರು ಬಾರ್ಳಆಜಿಯನ್ನು ಕಾನ್ಹೋಜಿ ಆಂಗ್ರಯ ವಿರುದ್ಧ ಕಳಿಹಿಸಿದರು. ಬಾಳಾಜಿಯು ಯುದ್ಧವನ್ನು ತಪ್ಪಿಸಿ ಮುತ್ಸದ್ದಿತನದಿಂದ ಕಾನ್ಕೊಜಿಯನ್ನು ಶಾಹೂ ಮಹಾರಾಜರ ಕಡೆಗೆ ಒಲಿಸಿಕೊಂಡನು.

  ೨ ) ಪಾಲಖೆಡದ ಯುದ್ಧ

ಉತ್ತರ:- ಮುಘಲ ಬಾದಶಾಹಾನಾದ ರ‍್ರುಖಸಿಯರ ಇವನು ನಿಜಾಮ-ಉಲ್-ಮುಲ್ಕ ಇವನನ್ನು ದಕ್ಷಣಸುಭೆದಾರನನ್ನಾಗಿ ನೇಮಕ ಮಾಡಿ ಕ್ರಿ.ಶ.೧೭೭೩ ರಲ್ಲಿ ನಿಜಾಮನು ಹೈದ್ರಾಬಾದಿನಲ್ಲಿ ತನ್ನ ಸ್ವತಂತ್ರ ಅಸ್ತಿತ್ವವನ್ನು ನಿರ್ಮಿಸುವ ಪ್ರಯತ್ನಮಾಡಿದನು.ಬಾದಶಾಹನು ಮರಾಠರಿಗೆ ದಕ್ಷಿಣದಲ್ಲಿಯ ಮುಘಲಪ್ರಾಂತಗಳಿಂದ ಚೌಥಾಯಿ-ಸರದೇಶಮುಖಿ ವಸೂಲು ಮಾಡುವ ಅಧಿಕಾರ ನಿಡಿದ್ದನು.ಇದಕ್ಕೆ ನಿಜಾಮನ ವಿರೋಧವಿತ್ತು. ಅವನು ಪುಣೆ ಪರಗಣಿಯ ಕೆಲವುಭಾಗ ಗೆದ್ದುಕೊಂಡನು. ಬಾಜಿರಾವನು  ನಿಜಾಮನಿಗೆ ಒಳ್ಳೆಯ ಪಾಠಕಲಿಸಬೆಕೆಂದು ನಿರ್ಧರಿಸಿ ಔರಂಗಾಬಾದದ ಹತ್ತಿರದ ಪಾಲಘರ ಎಂಬಲ್ಲಿ ಅವನನ್ನು ಸೋಲಿಸಿ ಚೌಥಾಯಿ-ಸರದೇಶಮುಖಿ ವಸೂಲು ಮಾಡುವ ಮರಾಠರ ಹಕ್ಕನ್ನು ಮಾನ್ಯ ಮಾಡಿದನು.

  ೩ ) ಬಾಳಾಜಿ ವಿಶ್ವನಾಥ

ಉತ್ತರ:- ಮುಘಲರ ಬಂಧನದಿಂದ ಶಾಹುಮಾಹಾರಾಜರ ಬಿಡುಗಡೆಯಾದನಂತರ ಅವರು ಬಾಳಾಜಿ ವಿಶ್ವನಾಥ ಭಟ್ಟರನ್ನು ಪೇಸವೆಯನ್ನಾಗಿ ಮಾಡಿದರು. ಅವರು ಕತೃತ್ವಶಾಲಿಯೂ ಅನುಭವಿಯೂ ಆಗಿದ್ದರು. ಶಾಹೂ ಮಹಾರಾಜರೆ ಮರಾಠಾ ರಾಜ್ಯದ ನಿಜವಾದ ಉತ್ತರಾಧಕಾರಿಯೆಂಬುದನ್ನು ತಿಳಿಸಿಕೊಡುತ್ತ ಇವನು ಮರಾಠಾ ಸರದಾರರನ್ನು ಶಾಹೂ ಮಹಾರಾಜರ ಕಡೆಗೆ ಒಲಿಸಿಕೊಂಡನು.

 ೪ ) ಮೊದಲನೆಯ ಬಾಜಿರಾವ

ಉತ್ತರ:- ಬಾಲಾಜಿ ವಿಶ್ವನಾಥರ ಮರಣದ ನಂತರ ಅವನ ಮಗನಾದ ಮೊದಲನೆಯ ಬಾಜಿರಾವನನ್ನು ಕ್ರಿ.ಶ.೧೭೨೦ ರಲ್ಲಿ ಶಾಹೂ ಮಹಾರಾಜರು ಪೇಶ್ವಿಯನ್ನಾಗಿ ನೇಮಕ ಮಾಡಿದರು.ಪೇಶ್ವೆಪದದ ಇಪ್ಪತ್ತು ವರ್ಷಗಳ ಕಾಲಾವಧಿಯಲ್ಲಿ ಅವನು ಮರಾಠಾ ರಾಜ್ಯವನ್ನು ವಿಸ್ತರಿಸಿದನು.

ಪ್ರಶ್ನೆ ೪ ಕಾರಣವನ್ನು ಬರೆಯಿರಿ.

 ೧ ) ಮರಾಠಾಶಾಹಿಯಲ್ಲಿ ಎರಡು ಸ್ವತಂತ್ರರಾಜ್ಯಹಳು ನಿರ್ಮಾಣವಾದವು.

ಉತ್ತರ:- ಔರಂಗಜೆಬನ ಬಂಧನದಿಂದ ಬಿಡುಗಡೆಯಾಗಿ ಶಾಹೂ ಮಹಾರಾಜರು ಮಹಾರಾಷ್ಟ್ರಕ್ಕೆ ಬಂದನಂತರ ಮರಾಠಾಸರದಾರರು ಅವರನ್ನು ಕೋಡಿಕೊಂಡರು.ಮಹಾರಾಣಿ ತಾರಾಬಾಯಿಯವರು  ಶಾಹೂಮಹಾರಾಜರನ್ನು ಛತ್ರಪತಿ ಸ್ಥಾನದಮೆಲಿನ ಹಕ್ಕನ್ನು ಮನ್ನಿಸಲಿಲ್ಲ. ಇದರಿಂದ ಪುಣೆಜಿಲ್ಲೆಯ ಭೀಮಾನದಿತಿರದ ಖೇಡ ಎಂಬಸ್ಥಳದಲ್ಲಿ ಶಾಹೂ ಮಹಾರಾಜರು ಮತ್ತು ತಾರಾಬಾಯಿ ಸೈನ್ಯಗಳ ನಡುವೆ ಯುದ್ಧವಾಗಿ ಅದರಲ್ಲಿ ಶಾಹೂಮಹಾರಾಜರು ಜಯ ಗಳಿಸಿದರು.ಅವರು ಸಾತಾರಾವನ್ನು ಗೆದ್ದು ಸ್ವತ: ರಾಜ್ಯಾಭಿಷೆಕ ಮಾಡಿಸಿಕೊಂಡು ಸಾತಾರಾ ಮರಾಠಾ ರಾಜ್ಯದ ರಾಜಧಾನಿಮಾಡಿದರು. ಕ್ರಿ.ಸ. ೧೭೧೦ ರಲ್ಲಿ ಮಹಾರಾಣಿ ತಾರಾಬಾಯಿಯವರು ಪನ್ಹಾಳಾದಲ್ಲಿ ತಮ್ಮ ಚಿಕ್ಕ ವಯಸ್ಸಿನ ಮಗನಾದ ಶಿವಾಜಿಯನ್ನು ಎರಡನೆಯ ಛತ್ರಪತಿಯನ್ನಾಗಿ ಮಾಡಿದರು.ಅಂದಿನಿಂದ ಮರಾಠಾಶಾಹಿಯಲ್ಲಿ ಎರಡು ಸ್ವತಂತ್ರರಾಜ್ಯಗಳು ನಿರ್ಮಾಣವಾದವು.

೨ ) ಆಝಮಶಾಹನು ಛತ್ರಪತಿ ಶಾಹೂ ಮಹಾರಾಜರನ್ನು ಬಂಧನದಿಂದ ಬಿಡುಗಡೆ ಮಾಡಿದನು.

ಉತ್ತರ:- ಶಾಹೂಮಹಾರಾಜರನ್ನು ಬಂಧನದಿಂದ ಮುಕ್ತಗೊಳಿಸಿದರೆ ಮಹಾರಾಣಿ ತಾರಾಬಾಯಿ ಮತ್ತು ಶಾಹೂ ಮಹಾರಾಜರಲ್ಲಿ  ಛತ್ರಪತಿ ಗದ್ದುಗೆಗಾಗಿ ಕಲಹಗಳಾಗಬಹುದು ಇದರಿಂದ ಮರಾಠರ ಶಕ್ತಿ ಕುಗ್ಗಬಹುದು ಎಂದು ಭಾವಿಸಿ ಆಝಮಶಾಹನು ಛತ್ರಪತಿ ಶಾಹೂ ಮಹಾರಾಜರನ್ನು ಬಂಧನದಿಂದ ಬಿಡುಗಡೆ ಮಾಡಿದನು.

 ೩ ) ದಿಲ್ಲಿ ದರಬಾರಿಗೆ ಮರಾಠರ ಸಹಾಯದ ಅವಶ್ಯಕತೆ ಇತ್ತು.

ಉತ್ತರ:- ಮುಘಲಸಾಮ್ರಾಜ್ಯಕ್ಕೆ ವಾಯವ್ಯಕಡೆಯಿಂದ ಇರಾಣಿ,ಅಫಘಾಣಿಸ್ಥಾನಗಳಿಂದ ಆಕ್ರಮಣದ ಭೀತಿಇದ್ದಂತೆ ಸುತ್ತಮುತ್ತಲಿನ ಪಠಾಣ,ರಜಪೂತ,ಜಾಟ,ರೋಹಿಲೆ ಇವರಂತಹ ಸ್ಥಳೀಯ ರಾಜರಿಂದಲೂ ಗಂಡಾಂತರವಿತ್ತು.ಅಲ್ಲದೆ ದರಬಾರಿನಲ್ಲಿ ನಡೆಯುವ ಸ್ಪರ್ದೆ ಮತ್ತು ಸಂಘರ್ಷಗಳಿಂದಾಗಿಯೂ ಮುಘಲಸಾಮ್ರಾಜ್ಯ ಒಳಗಿನಿಂದ ಪದೊಳ್ಳಾಗಿತ್ತು.ಇದರಿಂದಾಗಿ ದಿಲ್ಲಿ ದರಬಾರಿಗೆ ಮರಾಠರ ಸಹಾಯದ ಅವಶ್ಯಕತೆ ಇತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು