ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಪಾಠ 9. ಮರಾಠರ ಸ್ವಾತಂತ್ರ್ಯ ಸಂಗ್ರಾಮ 7ನೇ ಇಯತ್ತೆ Std 7th, Chapter 9, Independence Movement Of Maratha's

 ಪಾಠ 9. ಮರಾಠರ ಸ್ವಾತಂತ್ರ್ಯ ಸಂಗ್ರಾಮ 7ನೇ ಇಯತ್ತೆ Std 7th, Chapter 9, Independence Movement Of Maratha's

 


೯ ಮರಾಠರ ಸ್ವಾತಂತ್ರ್ಯ ಸಂಗ್ರಾಮ

ಪ್ರಶ್ನೆ ೧:- ಯೋಗ್ಯ ಪರ್ಯಾಯವನ್ನು ಆಯ್ಕೆ ಮಾಡಿರಿ.

೧ ) ಇವರ ಪರಾಕ್ರಮದಿಂದ ಔರಂಗಜೇಬನು ಹತಬಲನಾಗಿದ್ದನು.

ಅ) ಶಹಾಜಾದಾ ಅಕಬರ   ಬ)ಛತ್ರಪತಿ ಸಂಭಾಜಿ ಮಹಾರಾಜ    ಕ) ಛತ್ರಪತಿ ರಾಜಾರಾಮ ಮಹಾರಾಜ

ಉತ್ತರ:- ಛತ್ರಪತಿ ಸಂಭಾಜಿ ಮಹಾರಾಜ

೨ ) ಬಾದಶಾಹನ ಡೇರೆಯ ಮೇಲಿನ ಬಂಗಾರದ ಕಳಸನ್ನು ಕತ್ತರಿಸಿದವರು.

ಅ) ಸಂತಾಜಿ ಮತ್ತು ಧನಾಜಿ ಬ) ಸಂತಾಜಿ ಘೋರ್ಪಡೆ ಮತ್ತು ವಿಠೋಜಿ ಚವ್ಹಾನ ಕ)ಖಂಡೊಬಲ್ಲಾಳ ಮತ್ತು ರೂಪಾಜಿ ಭೋಸಲೆ

ಉತ್ತರ:- ಸಂತಾಜಿ ಘೋರ್ಪಡೆ ಮತ್ತು ವಿಠೋಜಿ

ಕ) ಗೋವಾದ ಯುದ್ಧದಲ್ಲಿ ಪ್ರಾಣವನ್ನು ಪಣಕಿಟ್ಟು ಹೋರಾಡುವವರು

ಅ)ಯೇಸಾಜಿ ಕಂಕ ಬ)ನೇಮಾಜಿ ಶಿಂದೆ ಕ)ಪ್ರಲ್ಹಾದ ನಿಳಾಜಿ

ಉತ್ತರ:- ಯೇಸಾಜಿ ಕಂಕ

ಪ್ರಶ್ನೆ೨ :- ಪಾಠದಲ್ಲಿ ಹುಡುಕಿ ಬರೆಯಿರಿ.

೧) ಜಂಜಿರಾದ ದಾಳಿಯನ್ನು ಅರ್ಧಕ್ಕೆ ನಿಲ್ಲಿಸಿ ಸಂಭಾಜಿ ಮಹಾರಾಜರು ಏಕೆ ಹಿಂದಿರುಗಬೇಕಾಯಿತು?

ಉತ್ತರ:- ಮುಘಲರ ಸೈನ್ಯ ದಕ್ಷಿಣಕೊಂಕಣದ ಮೇಲೆ ದಾಳಿಮಾಡಿದ ಸುದ್ದಿ ಸಂಭಾಜಿ ಮಹಾರಾಜರಿಗೆ ತಿಳಿಯಿತು. ಅದಕ್ಕಾಗಿ ಕೈಗೆ ಬಂದ ಗೋವಾದ ವಿಜಯವನ್ನು ಬಿಟ್ಟುಕೊಟ್ಟು ಅವರು ಮುಘಲರನ್ನು ಎದಿರಿಸಲು ಹಿಂದಿರುಗಬೆಕಾಯಿತು.

೨)ಸಂಭಾಜಿಮಹಾರಾಜರು ಪೋರ್ಥಗೀಜರಿಗೆ ಪಾಠಕಲಿಸಬೆಕೆಂದು ಏಕೆ ನಿರ್ಧರಿಸಿದರು?

ಉತ್ತರ:- ಗೋವಾದಪೋರ್ತಗೀಜರು ಸಂಭಾಜಿಮಹಾರಾಜರ ವಿರುದ್ಧ ಬಾದಶಾಹನೊಂದಿಗೆ ಕೈಗೂಡಿಸಿದ್ದರು.ಆದ್ದರಿಂದ ಅವರು ಪೋರ್ತಗೀಜರಿಗೆ ಪಾಠಕಲಿಸಬೇಕೆಂದು ನಿರ್ಧರಿಸಿದರು.

೩)ಜಿಂಜೀಗೆ ಹೋಗುವಾಗ ರಾಜರಾಮ ಮಹಾರಾಜರು ಸ್ವರಾಜ್ಯದ ರಕ್ಷಣೆಯ ಜವಾಬ್ದಾರಿಯನ್ನು ಯಾರಿಗೆ ಒಪ್ಪಿಸಿದರು?

ಉತ್ತರ:- ಜಿಂಜೀಗೆ ಹೋಗುವಾಗ ರಾಜರಾಮ ಮಹಾರಾಜರು ಸ್ವರಾಜ್ಯದ ರಕ್ಷಣೆಯ ಜವಾಬ್ದಾರಿಯನ್ನು ರಾಮಚಂದ್ರ ಅಮಾತ್ಯ,ಶಮಕರಜಿ ನಾರಾಯಣ ಸಚಿವ,ಸಂತಾಜಿ ಘೊರಪಡೆ ಮತ್ತು ಧನಾಜಿ ಜಾಧವ ಇವರಿಗೆ ಒಪ್ಪಿಸಿದರು.

೪) ಮಹಾರಾಣಿ ತಾರಾಬಾಯಿಯವರ ಕತೃತ್ವದ ವರ್ಣನೆಯನ್ನು ದೇವದತ್ತ ಕವಿಯು ಯಾವ ಶಬ್ದಗಳಲ್ಲಿ ಮಾಡಿದ್ದಾನೆ?

ಉತ್ತರ:- ರಾಜಾರಾಮನ ರಾಣಿ ತಾರಾಬಾಯಿ ಭಧ್ರಕಾಲಿಯ ರೋಪಧರಿಸಿದ್ಧು ಅವಳು ಕೋಪಿತಳಾಗಿದ್ದಾಳೆ. ಮುಗಲರ ದಿಲ್ಲಿ ದೀನವಾಗಿದ್ದು,ಬಾದಶಾಹ ಹತಬಲನಾಗಿದ್ದಾನೆ.ಅವಳು ಯುದ್ಧಭೂಮಿಯಲ್ಲಿ ವೀರಾವೇಶದಿಂದ ಹೋರಾಡುತ್ತಿದ್ದು ಅತ್ಯಂತ ಕ್ರುದ್ಧಳಾಗಿದ್ದಾಳೆ,ಮುಗಲರೇ ನಿಮ್ಮನು ನೀವು ರಕ್ಷಿಸಿಕೋಳ್ಳಿ.

ಪ್ರಶ್ನೆ ೩ ಏಕೆ ಎಂಬುದನ್ನು ಬರೆಯಿರಿ.

೧) ಔರಂಗಜೇಬನು ತನ್ನ ದಾಳಿಯನ್ನು ಆದಿಲಶಾಹಿ ಮತ್ತು ಕುತುಬಶಾಹಿ ರಾಜ್ಯಗಳ ಕಡೆಗೆ ತಿರುಗಿಸಿದನು.

ಉತ್ತರ:- ಔರಂಗಜೇಬನಿಗೆ ಮರಾಠರ ವಿರುದ್ಧದದಾಳಿಯಲ್ಲಿ ಯಶಸ್ಸು ದೊರೆತಿರಲಿಲ್ಲ.ಹಿಗಾಗಿ ಆ ದಾಳಿಯನ್ನು ನಿಲ್ಲಿಸಿ ಆದಿಲಶಾಹಿ ಮತ್ತು ಕುತುಬಶಾಹಿ ರಾಜ್ಯಗಳ ಕಡೆಗೆ ತಿರುಗಿಸಿದನು.

೨) ಸಂಭಾಜಿ ಮಹಾರಾರನಂತರ ಮರಾಠರು ಮುಘಲರವಿದ್ಧದ ಸಂಘರ್ಷವನ್ನು ಅಧಿಕತೀರ್ವಗೊಳಿಸಿದರು.

ಉತ್ತರ:- ಛತ್ರಪತಿ ಸಂಭಾಜಿಮಹಾರಾಜರುಸ್ವಾಭಿಮಾನಬೀಡದೆ ಅತ್ಯಂತ ಧೀರೊದಾತ್ತರಾಗಿ ಸಾವನಪ್ಪಿದರು.ಅವರ ಬಲಿದಾನದಿಂದ ಪ್ರೇರಣೆಯನ್ನು ಪಡೆದು ಛತ್ರಪತಿ ರಾಜಾರಾಮರು ಮತ್ತು ಮರಾಠರು ಮುಘಲರ ವಿರುದ್ಧದ ಸಂಘರ್ಷವನ್ನು ಅಧಿಕ ತೀರ್ವಗೊಳಿಸಿದರು.

೩) ತಮ್ಮ ನೇತೃತ್ವದಲ್ಲಿಯು ಮಹಾರಾಣಿ ಯೇಸೂಬಾಯಿಯವರು ರಾಯಗಡ ಕೋಟೆಗಾಗಿ ಹೋರಾಡಬೇಕು ಎಂಬ ಧೋರಣೆಯನ್ನು ನಿಶ್ಚಯಿಸಲಾಯಿತು.

ಉತ್ತರ:- ಬಾದಶಾಹನು ರಾಯಗಡದ ಮೇಲೆ ಆಕ್ರಮಣಮಾಡಲು ಝುಲ್ಫಿಖಾನನನ್ನು ಕಳುಹಿಸಿದನು.ಆ ಸಮಯದಲ್ಲಿ ರಾಜಾರಾಮ ಮಹಾರಾಜರು ಮತ್ತು ಅವರ ಪತ್ನಿ ತಾರಾಬಾಯಿ ಅದರಂತೆ ಸಂಭಾಜಿಮಹಾರಾಜರ ಪತ್ನಿ ಯೇಸುಬಾಯಿ ಮತ್ತು ಅವರ ಪುತ್ರ ಶಾಹೂ ಇವರು ರಾಯಗಡದಲ್ಲಿ ಇದ್ದರು. ಇವರೆಲ್ಲರು ಒಂದೇಸ್ಥಳದಲ್ಲಿ ಇರುವದು ಗಂಡಾಂತರಕಾರಿ ಯಾಗಿದ್ದು ಮುಘಲರಿಗೆ ಶರಣು ಹೋಗಬಾರದು ಎಂದು ನಿಶ್ಚಯಿಸಿ ರಾಜಾರಾಮ ಮಹಾರಾಜರು ರಾಯಗಡದಿಂದ ಪಾರಾಗಬೇಕು ಪ್ರಸಂಗಬಿದ್ದರೆ ಜಿಂಜಿಗೆ ಹೋಗಬೇಕು ತಮ್ಮ ನೇತ್ರುತ್ವದಲ್ಲಿಯು ಮಹಾರಾಣಿ ಯೇಸೂಬಾಯಿಯವರು ರಾಯಗಡ ಕೋಟೆಗಾಗಿ ಹೋರಾಡಬೇಕು ಎಂಬ ಧೋರಣೆಯನ್ನು ನಿಶ್ಚಯಿಸಲಾಯಿತು.

ಪ್ರಶ್ನೆ೪:- ಬಿಟ್ಟ ಸ್ಥಳತುಂಬಿರಿ.

೧) ಔರಂಗಜೇಬನು ಮರ‍್ರಬ ಖಾನ  ಇವನ ನೇಮಿಸಿದನು.

೨) ಜೀಂಜಿರಾದ ಸಿದ್ಧಿ ಮರಾಠಾ ಮುಘಲರಿಗೆ ಉಪದ್ರವ ಕೋಡುತ್ತಿದ್ದನು.

೩) ಸಂಭಾಜಿನಹಾರಾಜರು ಬುಧಭೋಷಣ ಈ ರಾಜನೀತಿಯ ಮೇಲೆ ಗ್ರಂಥ ರಚಿಸಿದರು.

೪) ಸಂಭಾಜಿ ಹಾರಾಜರು ಪೋರ್ತಗೀಜರ ರೇವದಂಡ  ಬಂದರದ ಮೇಲೆ ದಾಳಿ ಮಾಡಿದರು.

೫) ಔರಂಗಜೇಬನು ಮೊದಲು ನಾಶಿಕದ ಹತ್ತಿರದ  ರಾಮಸೆಜ  ಕೋಟೆಯಮೇಲೆ ದಾಳಿಮಾಡಿದನು.

ಪ್ರಶ್ನೆ ೫ ಕೇವಲ ಸಂಭಂದ ಬರೆಯಿರಿ.

೧) ಶಹಾಜಿರಾಜ ಮತ್ತು ಜೀಜಾಬಾಯಿ  ------ ಪತಿ ಪತ್ನಿ

೨) ಶಹಾಜಿ ರಾಜ ಮತ್ತು ಶಿವಾಜಿ ಮಹಾರಾಜ _____ ತಂದೆ ಮಗ

೩) ಜೀಜಾಬಾಯಿ ಮತ್ತು ಶಿವಾಜಿ ಮಹಾರಾಜ ------ ತಾಯಿ ಮಗ

೪) ಶಿವಾಜಿ ಮಹಾರಾಜ ಮತ್ತು ಸಂಭಾಜಿ ಮಹಾರಾಜ _______ ತಂದೆ ಮಗ

೫) ಸಂಭಾಜಿ ಮಹಾರಾಜ ಮತ್ತು ರಾಜಾರಾಮ ಮಹಾರಾಜ ______ ಅಣ್ಣ  ತಮ್ಮ

೬) ಸಂಭಾಜಿ ಮಹಾರಾಜ ಮತ್ತು ಮಹಾರಾಣಿ ಯೇಸೂಬಾಯಿ _______ಪತಿ ಪತ್ನಿ

೭)  ರಾಜಾರಾಮ ಮಹಾರಾಜ ಮತ್ತು ಮಹಾರಾಣಿ ತಾರಾಬಾಯಿ _______ಪತಿ ಪತ್ನಿ

೮) ಸಂಭಾಜಿ ಮಹಾರಾಜ ಮತ್ತು ಶಾಹೂ ________ ತಂದೆ ಮಗ

೯) ಮಹಾರಾಣಿ ಯೇಸೂಬಾಯಿ ಮತ್ತು ಶಾಹೂ _______ ತಾಯಿ ಮಗ

೧೦) ಶಿವಾಜಿ ಮಹಾರಾಜ ಮತ್ತು ವ್ಯಂಕೋಜಿ _______ ತಂದೆ ಮಗ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು