ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಬಾಲಭಾರತಿ ನಾಲ್ಕನೆಯ ಇಯತ್ತೆ ಪಾಠ 11. ಅತಿ ಆಸೆ ಗತಿಗೇಡು Chapter 11 ATI ASE GATI GEDU

  ಬಾಲಭಾರತಿ ನಾಲ್ಕನೆಯ ಇಯತ್ತೆ ಪಾಠ 11. ಅತಿ ಆಸೆ ಗತಿಗೇಡು Chapter 11 ATI ASE GATI GEDU



11. ಅತಿ ಆಸೆ ಗತಿಗೇಡು

ಶಬ್ದಗಳ ಅರ್ಥ

ಪ್ರಾಮಾಣಿಕ - ನಂಬಲರ್ಹವಾದ; ಶುಭಚಿಂತಕ -ಒಳ್ಳೆಯದನ್ನು ಬಯಸುವವ; ಚತುರ - ಬುದ್ದಿವಂತ; ಸ್ವರ್ಣನಾಣ್ಯ - ಬಂಗಾರದ ನಾಣ್ಯ; ಗುಪ್ತಚಾರ - ಗುಟ್ಟಾಗಿ ಸುದ್ದಿ ಮುಟ್ಟಿಸುವವ;  ಚಿಕಿತ್ಸೆ - ಉಪಚಾರ

ಪಡೆನುಡಿ

ಬಾಯಲ್ಲಿ ನೀರೂರು - ಅತಿಯಾಸೆಯಾಗು ; ಕೈ ಕೈ ಹಿಚುಕಿಕೊಳ್ಳು - ಪಶ್ಚಾತ್ತಾಪ ಪಡು

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ವಿಕ್ರಮಾದಿತ್ಯ ಅರಸನು ಯಾರ ಹಿತವನ್ನು ಬಯಸುತ್ತಿದ್ದನು?

ಉತ್ತರ: ವಿಕ್ರಮಾದಿತ್ಯ ಅರಸನು ತನ್ನ ಸಾಮ್ರಾಜ್ಯದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಹಿತವನ್ನು ಬಯಸುತ್ತಿದ್ದನು

ಆ) ಅರಸನು ರಾತ್ರಿ ವೇಷ ಬದಲಿಸಿ ಎಲ್ಲಿಗೆ ಹೋಗುತ್ತಿದ್ದನು?

ಉತ್ತರ:ಅರಸನು ರಾತ್ರಿ ವೇಷ ಬದಲಿಸಿ ಪಟ್ಟಣದಲ್ಲಿ ತಿರುಗಾಡಲು ಹೋಗುತ್ತಿದ್ದನು.

ಇ) ನೆರೆಮನೆಯವನ ಬಾಯಲ್ಲಿ ಏಕೆ ನೀರೂರಿತು?

ಉತ್ತರ:ರಾಜನು ಹೇಳಿದ ಸ್ವರ್ಣನಾಣ್ಯಗಳ ಚೀಲದ ಮಾತು ಕೇಳಿ ನೆರೆಮನೆಯವನ ಬಾಯಲ್ಲಿ ನೀರೂರಿತು.

ಈ) ರಾಜಾ ವಿಕ್ರಮಾದಿತ್ಯನಿಗೆ ಸುದ್ದಿಯನ್ನು ತಿಳಿಸಿದವರಾರು?

ಉತ್ತರ: ರಾಜಾ ವಿಕ್ರಮಾದಿತ್ಯನಿಗೆ ಗುಪ್ತಚಾರರು ಸುದ್ದಿಯನ್ನು ತಿಳಿಸಿದರು.

ಉ) ಮಂತ್ರಿಯು ರಾಜನಿಗೆ ಏನೆಂದು ಹೇಳಿದನು?

ಉತ್ತರ: ಮಹಾರಾಜರೇ, ಈ ಅಜ್ಜನಿಗೆ ೧೦ ಸಾವಿರ ರೂಪಾಯಿಗಳು ಮುಂಜಾನೆಯೇ ದೊರೆತಿವೆ. ಅವನ ಬಡತನ ದುರಾಗಲು ಮತ್ತು ಜೀವನ ಸಾಗಿಸಿಕೊಂಡು ಹೋಗಲು ಅಷ್ಟು ಸಾಕು, ಎಂದು ಮಂತ್ರಿಯು ರಾಜನಿಗೆ ಹೇಳಿದನು.

ಪ್ರಶ್ನೆ ೨) ಕೆಳಗಿನ ಮಾತುಗಳನ್ನು ಯಾರು, ಯಾರಿಗೆ ಹೇಳಿದರು?

ಅ) 'ನಿನಗೇನು ತೊಂದರೆಯಾಗಿದೆ?'

ಉತ್ತರ: ವಿಕ್ರಮಾದಿತ್ಯ ರಾಜನು ಹುಡುಗನಿಗೆ ಹೇಳಿದರು.

ಆ) 'ಇವರ ಬಡತನವಾದರೂ ದೂರಾಗಲಿ'

ಉತ್ತರ: ವಿಕಮಾದಿತ್ಯ ರಾಜ ತನ್ನ ಮಂತ್ರಿಗೆ ಹೇಳಿದನು.

ಇ) 'ಅಜ್ಜ, ಈ ಗುಡಿಸಲನ್ನು ನನಗೆ ಮಾರಿದರೆ ನಿನಗೆ ಎರಡು ಸಾವಿರ ರೂಪಾಯಿಗಳನ್ನು ಕೊಡುವೆ' ಎಂದನು.

ಉತ್ತರ: ನೆರೆಮನೆಯವನು ಮುದುಕನಿಗೆ ಹೇಳಿದನು.

ಈ) 'ಸ್ವರ್ಣ ನಾಣ್ಯಗಳ ಚೀಲ ತಂದಿದ್ದೀರಾ ?'

ಉತ್ತರ: ವಿಕಮಾದಿತ್ಯ ರಾಜ ತನ್ನ ಮಂತ್ರಿಗೆ ಹೇಳಿದನು.

ಪ್ರಶ್ನೆ ೩) ಕೆಳಗಿನ ಶಬ್ದಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಉಪಯೋಗಿಸಿರಿ.

ಬಯಸು: ನಾನು ಇಂಜಿನಿಯರ್ ಆಗಲು ಬಯಸುತ್ತೇನೆ.

ಬಳಲು: ಮುದುಕ ಬಡತನದಿಂದ ಬಳಲುತ್ತಿದ್ದನು.

ಆಸೆಬುರುಕ: ಆಸೆಬುರುಕ ನಾಯಿ ಎರಡು ರೊಟ್ಟಿ ತಿನ್ನುವ ಆಸೆ ಮಾಡಿತು.

ಗುಪ್ತಚಾರ: ರಾಜನಿಗೆ ಗುಪ್ತಚಾರರು ಸುದ್ದಿ ಮಟ್ಟಿಸಿದರು.

ಪ್ರಶ್ನೆ ೪) ಅಕ್ಷರಗಳನ್ನು ಸರಿಪಡಿಸಿ ಯೋಗ್ಯ ಶಬ್ದ ರಚಿಸಿರಿ.

ಅ) ನ ಳು ವ ರ  - ನರಳುವ          ಆ) ಕ ಪ್ರಾ ಣಿ ಮಾ – ಪ್ರಮಾಣಿಕ

ಇ) ಸೆ ಬು ಆ ಕ ರು – ಆಸೆಬುರುಕ    ಈ) ರ ವ್ಯ ಹಾ ವ – ವ್ಯವಹಾರ

ಉ) ಚಾ ಗು ರ ಪ್ತ - ಗುಪ್ತಚಾರ

ನುಡಿಮುತ್ತು

ನಿರಾಸೆ ಕೆಲವರನ್ನು ಮಾತ್ರ ಹಾಳು ಮಾಡಿದರೆ,

ಅತಿ ಆಸೆ ಅನೇಕರನ್ನು ಹಾಳು ಮಾಡುತ್ತದೆ.

ಆಸೆಯು ದು:ಖಕ್ಕೆ ಮೂಲ

ಗಮನಿಸಿರಿ

ಕ್ರಿಯಾಪದ : ಕ್ರಿಯೆಯನ್ನು ಸೂಚಿಸುವ ಪದಗಳಿಗೆ ಕ್ರಿಯಾಪದ ಎನ್ನುವರು.

ಹೋಗು, ಹಾಡು, ಕುಣಿ, ಮಾಡು ಇತ್ಯಾದಿ

ಉದಾ. :

೧) ಕುಮಾರನು ಶಾಲೆಗೆ ಹೋಗುತ್ತಾನೆ.

೨) ಶಾರದೆ ಇಂಪಾಗಿ ಹಾಡು ಹಾಡುತ್ತಾಳೆ.

೩) ನವಿಲು ಸುಂದರವಾಗಿ ಕುಣಿಯುತ್ತದೆ.

೪) ಗಿರಿಜೆಯು ಕಾಗದದಿಂದ ವಿಮಾನು ಮಾಡಿದಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು