ಬಾಲಭಾರತಿ ನಾಲ್ಕನೆಯ ಇಯತ್ತೆ ಪಾಠ ೧೦ ದೇಶ ಕಟ್ಟೋಣ ಬಾ
Chapter 10. Desh Kattona Ba
೧೦. ದೇಶ ಕಟ್ಟೋಣಬಾ
-ಜಯವಂತ ಕಾಡದೇವರ
ಶಬ್ದಗಳ ಅರ್ಥ
ತೃಪ್ತಿ - ಸಮಾಧಾನ; ಅಭಿಮಾನ - ಹೆಮ್ಮೆ ; ಅನುದಿನ – ಪ್ರತಿದಿನ, ದಿನಾಲೂ; ವೈರಿ - ಹಗೆ, ಶತ್ರು
ಮತ್ಸರ- ಹೊಟ್ಟೆಕಿಚ್ಚು, ದ್ವೇಷ; ವಂದಿಸು - ನಮಸ್ಕಾರ ಮಾಡು
ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ಅ) ಯಾವುದರಲ್ಲಿ ಸಂತಸ ಪಡಬೇಕು?
ಉತ್ತರ: ದುಡಿಯುವುದರಲ್ಲಿ ಸಂತಸ
ಪಡಬೇಕು.
ಆ) ವಿದ್ಯುತ್ತನ್ನು ಹೇಗೆ ಉರಿಸಬೇಕು?
ಉತ್ತರ: ವಿದ್ಯುತನ್ನು ಲೆಕ್ಕಾಚಾರದಲ್ಲಿ
ಬಳಸಬೇಕು.
ಇ) ಅನುದಿನವು ಯಾರಿಗೆ ನಮಿಸಬೇಕು?
ಉತ್ತರ: ಮಾತಾ-ಪಿತರಿಗೆ ಅನುದಿನವೂ
ನಮಿಸಬೇಕು.
ಈ) ಮನದಿಂದ ಏನನ್ನು ಅಳಿಸಬೇಕು?
ಉತ್ತರ: ನಾವು ನಮ್ಮ ಮನದಿಂದ ವೈರ, ಮತ್ಸರ ಅಳಿಸಬೇಕು.
ಉ) ರಾಷ್ಟ್ರ ರಕ್ಷಣೆಗೆ ಯಾವುದನ್ನು ಅರ್ಪಿಸಬೇಕು?
ಉತ್ತರ: ರಾಷ್ಟ್ರ ರಕ್ಷಣೆಗೆ ತನುಮನ
ಅರ್ಪಿಸಬೇಕು.
ಪ್ರಶ್ನೆ ೨) ಉದಾಹರಣೆಯಲ್ಲಿ ತೋರಿಸಿದಂತೆ ಕೆಳಗಿನ
ಶಬ್ದಗಳನ್ನು ಬರೆಯಿರಿ.
ಉದಾ. : ಬೆಳೆಸಿ - ಬೆಳೆಸುವದು
ಉರಿಸಿ –ಉರಿಸುವುದು
ಹರಿಸಿ – ಹರಿಸುವುದು
ವಂದಿಸಿ – ವಂದಿಸುವುದು
ಬಳಸಿ – ಬಳಸುವುದು
ಮೊಳಗಿಸಿ – ಮೊಲಗಿಸುವುದು
ಪ್ರಶ್ನೆ ೩) ಪಾಠದಲ್ಲಿ ಬಂದಂತಹ ಜೋಡು ಶಬ್ದಗಳನ್ನು
ಬರೆಯಿರಿ.
ಉದಾ. ನೆರೆ – ಹೊರೆ
ಗಿಡ - ಮರ
ಮಾತಾ – ಪೀತಾ
ತನು – ಮನ
ಹಿತ – ಮಿತ
ಗುರು – ಹಿರಿಯರು
ಪ್ರಶ್ನೆ ೪) ಕೆಳಗಿನ ಪದ್ಯದ ಸಾಲುಗಳನ್ನು
ಪೂರ್ಣಗೊಳಿಸಿರಿ.
ರಾಷ್ಟ್ರ ಧ್ವಜವನು ಗಗನಕ್ಕೇರಿಸಿ
ಅಭಿಮಾನದಿ ಎಲ್ಲರೂ ವಂದಿಸಿ
ರಾಷ್ಟ್ರಗೀತೆ ಎಲ್ಲೆಡೆ ಮೊಳಗಿಸಿ
ರಾಷ್ಟ್ರ ರಕ್ಷಣೆಗೆ ತನುಮನ ಅರ್ಪಿಸಿ
ಕಟ್ಟೋಣ ಬಾ, ದೇಶ ಕಟ್ಟೋಣ ಬಾ.
ಪ್ರಶ್ನೆ ೫) ಈ ಕವಿತೆಯನ್ನು ಕಂಠಪಾಠ ಮಾಡಿರಿ.
ಉಪಕ್ರಮ
ನಿಮ್ಮ ಶಿಕ್ಷಕರ / ಪಾಲಕರ ಸಹಾಯದಿಂದ ದೇಶಪ್ರೇಮದ ಸುವಿಚಾರಗಳನ್ನು
ಸಂಗ್ರಹಿಸಿ ಬರೆಯಿರಿ.
•
ನುಡಿಮುತ್ತು
•
·
ಜನರನ್ನು ಒಲಿಸುವುದು ಸುಲಭ, ಆದರೆ ಒಳ್ಳೆಯತನವನ್ನು ಗಳಿಸುವುದು ಕಷ್ಟ.
·
ದೇಶಸೇವೆಯೇ ಈಶಸೇವೆ
0 ಕಾಮೆಂಟ್‌ಗಳು
ಧನ್ಯವಾದಗಳು