ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಬಾಲಭಾರತಿ ನಾಲ್ಕನೆಯ ಇಯತ್ತೆ ಪಾಠ 12 ಚದುರಂಗ Chapter 12 . CHADURANG std 4rth

 ಬಾಲಭಾರತಿ ನಾಲ್ಕನೆಯ ಇಯತ್ತೆ ಪಾಠ 12 ಚದುರಂಗ 

Chapter 12 . CHADURANG std 4rth

 


12. ಚದುರಂಗ

ಶಬ್ದಗಳ ಅರ್ಥ

ಅಂಗ - ಭಾಗ; ಹಾಸಲು - ಆಟದ ಮಣೆ ; ಸರತಿ - ಪಾಳಿ ; ಮುದ - ಆನಂದ; ವೃದ್ಧಿ - ಬೆಳವಣಿಗೆ

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ಚದುರಂಗ ಎಂದರೇನು?

ಉತ್ತರ: ಚದುರಂಗ ಎಂದರೆ ಚೆಸ್. ಇದನ್ನು ಎರಡು ಕಾಲ್ಪನಿಕ ಸೈನ್ಯಗಳ ನಡುವೆ ನಡೆಯುವ ಯುದ್ಧದ ಆಟ ಎಂದು ಕರೆಯುವರು.

ಆ) ಚದುರಂಗದ ನಾಲ್ಕು ಅಂಗಗಳು ಯಾವವು?

ಉತ್ತರ: ಚದುರಂಗದ ನಾಲ್ಕು ಅಂಗಗಳು : 1) ಒಂಟೆ 2) ಕುದುರೆ 3) ಆನೆ ಮತ್ತು 4) ಪದಾತಿಗಳು

ಇ) ಹಾಸಲಿನಲ್ಲಿ ಮಂತ್ರಿ ಯಾವ ರೀತಿ ಚಲಿಸುತ್ತಾನೆ?

ಉತ್ತರ:ಹಾಸಲಿನಲ್ಲಿ ಮಂತ್ರಿ ಇದ್ದರೆ ಆಟಗಾರನಿಗೆ ಸಾಕಷ್ಟು ಬಲವಿದ್ದಂತೆ. ಮಂತ್ರಿ ಉದ್ದಕ್ಕೆ, ಅಗಳಕ್ಕೆ, ಮೇಲಕ್ಕೆ, ಕೆಳಕ್ಕೆ ಯಾವುದೇ ಮ್ಯೂಲ್ಗೆ ಹೋಗಬಹುದು. ಎಷ್ಟು ಮನೆಗಳನ್ನಾದರೂ ದಾಟಿ ಹೋಗಬಹುದು.

ಈ) ಚದುರಂಗದಲ್ಲಿ ಪದಾತಿಯ ಪಾತ್ರವೇನು?

ಉತ್ತರ:ಚದುರಂಗದಾಟದಲ್ಲಿ ಪದಾತಿಗಳು ಎಂದರೆ ಎಂಟು ಸೈನಿಕರು. ಒಂದು ಪದಾತಿ ತನ್ನ ಮುಂದಿನ ಖಾಲಿ ಇರುವ ಒಂದು ಮನೆಗೆ ಮಾತ್ರ ಚಲಿಸಬಲ್ಲದು. ಎದುರು ಪಂಗಡದ ಕಾಯಿಗಳನ್ನು ಉರುಳಿಸಲು ಒಂದು ಮನೆ ಪಕ್ಕದ ಮೂಲೆಗೆ ಚಲಿಸಬಲ್ಲದು. ಒಬ್ಬ ಆಟಗಾರನ ಪದಾತಿ ಚಲಿಸುತ್ತ ಎದುರಾಳಿ ಆಟಗಾರನ ಮೊದಲ ಸಾಲಿನ ಮನೆಗೆ ಹೋಗಿ ಕುಳಿತರೆ ಅದರ ಬದಲು ಮಂತ್ರಿಯನ್ನೋ ಅಥವಾ ಇನ್ನಾವುದೋ ಬಲವನ್ನೋ ಅಂಥ ಆಟಗಾರನು ಪಡೆದುಕೊಳ್ಳುವನು.

ಉ) ಎದುರಾಳಿ ಚೆಕ್ ಎಂದಾಗ ಆಟಗಾರನು ತನ್ನ ರಾಜನನ್ನು ಯಾವ ರೀತಿ ಉಳಿಸಿಕೊಳ್ಳುವನು?

ಉತ್ತರ: ಎದುರಾಳಿ ಚೆಕ್ ಎಂದಾಗ ಆಟಗಾರನು ತನ್ನ ಎಲ್ಲ ಉಪಾಯಗಳನ್ನೂ ಕೂಟ ರಚನೆಯ ಆಲೋಚನೆಗಳನ್ನು ಬದಿಗಿಟ್ಟು ತನ್ನ ರಾಜನನ್ನು ಉಳಿಸಿಕೊಳ್ಳಬೇಕು. ಅಂತ ಸಂದರ್ಭದಲ್ಲಿ ರಾಜನನ್ನು ಬದಿಗೆ ಸರಿಸಿಯಾಗಲಿ ಅಥವಾ ಮಾರ್ಗ ಮಧ್ಯದಲ್ಲಿ ತಡೆಯನ್ನು ನಿರ್ಮಿಸಿಯಾಗಲಿ ತನ್ನ ರಾಜನನ್ನು ಉಳಿಸಿಕೊಳ್ಳಬೇಕು. 

ಪ್ರಶ್ನೆ ೨) ಬಿಟ್ಟ ಸ್ಥಳ ತುಂಬಿರಿ.

ಅ) ಚದುರಂಗದ ಮಣೆಯೇ ಒಂದ ಯುದ್ಧರಂಗ.

ಆ) ಕಾಯಿಗಳಲ್ಲೆಲ್ಲ ರಾಜನ ಪಾತ್ರವು ಅತ್ಯಂತ ಮಹತ್ವವಾದುದು.

3) ಪದಾತಿಗಳು ಎಂದರೆ ಸೈನಿಕರು.

ಈ) ಪ್ರತಿಯೊಂದು ಗುಂಪಿನಲ್ಲಿ ಎಂಟು ಪದಾತಿಗಳು ಇರುತ್ತವೆ.

ಉ) ಇದೊಂದು ಒಳಾಂಗಣ ಆಟ.

ಪ್ರಶ್ನೆ ೩) ಸರಿ, ತಪ್ಪು ಹೇಳಿರಿ. ತಪ್ಪಿದ್ದರೆ ತಿದ್ದಿ ಬರೆಯಿರಿ.

ಅ) ಯಾವ ರಾಜನು ಸೋಲುವನೋ ಆ ಆಟಗಾರನು ಸೋತಂತೆ.  

ಉತ್ತರ:  ಸರಿ

ಆ) ಚದುರಂಗದಾಟದ ಹಾಸಲಿನಲ್ಲಿ ನಲವತ್ತಾರು ಮನೆಗಳಿರುತ್ತವೆ.

ಉತ್ತರ: ತಪ್ಪು, ಚದುರಂಗದಾಟದ ಹಾಸಲಿನಲ್ಲಿ ಅರವತ್ನಾಲ್ಕು ಮನೆಗಳಿರುತ್ತವೆ

ಇ) ಚದುರಂಗದಾಟದಲ್ಲಿ ವಿಶಿಷ್ಟ ಚಲನ ಶಕ್ತಿಯನ್ನು ಹೊಂದಿರುವ ಕಾಯಿ ಆನೆ.

ಉತ್ತರ: ತಪ್ಪು, ಚದುರಂಗದಾಟದಲ್ಲಿ ವಿಶಿಷ್ಟ ಚಲನ ಶಕ್ತಿಯನ್ನು ಹೊಂದಿರುವ ಕಾಯಿ ಕುದುರೆ.

ಈ) ಆನೆಯು ಮೂಲೆಯಿಂದ ಮೂಲೆಗೆ ಚಲಿಸುತ್ತದೆ.

ಉತ್ತರ: ತಪ್ಪು, ಒಂಟೆಗಳು ಮೂಲೆಯಿಂದ ಮೂಲೆಗೆ ಚಲಿಸುತ್ತವೆ.

ಉ) ಈ ಆಟವು ಮಕ್ಕಳ ಮನಸ್ಸಿಗೆ ಮುದ ನೀಡುತ್ತದೆ.

ಉತ್ತರ: ಸರಿ.

ಪ್ರಶ್ನೆ ೪) ಕೆಳಗಿನ ವಾಕ್ಯಗಳಲ್ಲಿಯ ಕ್ರಿಯಾಪದ ಗುರುತಿಸಿರಿ.

ಅ) ಕನ್ನಡಿ ಲಕ ಲಕ ಹೊಳೆಯುತ್ತದೆ.          = ಹೊಳೆಯುತ್ತದೆ

ಆ) ಲತಾ ಇಂಪಾಗಿ ಹಾಡಿದಳು.               = ಹಾಡಿದಳು

ಇ) ಬೆಕ್ಕು ಹಾಲು ಕುಡಿಯಿತು.                 = ಕುಡಿಯಿತು

ಈ) ರೈತನು ಹೊಲದಲ್ಲಿ ರಾಶಿಯನ್ನು ಮಾಡಿದನು.   = ಮಾಡಿದನು

ಉ) ಎಡಿಸನ್‌ರು ವಿದ್ಯುತ್ತನ್ನು ಶೋಧಿಸಿದರು.         = ಶೋಧಿಸಿದರು

ಉಪಕ್ರಮ

ಪಠ್ಯಪುಸ್ತಕದಲ್ಲಿ ತೋರಿಸಿರುವ ಹಾವು-ಏಣಿ ಚಿತ್ರದ ಮೇಲೆ ಚದುರಂಗದ ಆಟವನ್ನು ಶಿಕ್ಷಕರಿಂದ/ಪಾಲಕರಿಂದ ಕೇಳಿ ತಿಳಿದುಕೊಳ್ಳಿರಿ. ಬಿಡುವಿನ ಸಮಯದಲ್ಲಿ ಆಟ ಆಡಿರಿ.


ನುಡಿಮುತ್ತು

·        ಅನುಭವಕ್ಕಿಂತಲೂ ಹಿರಿದಾದ ಸತ್ಯವಿಲ್ಲ

·        ಸಮಯಕ್ಕೊದಗುವ ಬುದ್ಧಿ, ನಿಜವಾದ ಬುದ್ಧಿ

ಗಮನಿಸಿರಿ

ವಚನಗಳು : ವ್ಯಕ್ತಿ, ವಸ್ತು ಮೊದಲಾದವುಗಳ ಸಂಖ್ಯೆ ಸೂಚಿಸುವ ಪದಗಳಿಗೆ ವಚನಗಳೆನ್ನುವರು. ವಚನಗಳಲ್ಲಿ ಏಕವಚನ ಮತ್ತು ಬಹುವಚನಗಳೆಂದು ಎರಡು ಪ್ರಕಾರಗಳಿವೆ.

ಏಕವಚನ : ಒಂದೇ ವಸ್ತು, ವ್ಯಕ್ತಿ, ಪ್ರಾಣಿ, ಪಕ್ಷಿ, ಸ್ಥಳ ಸೂಚಿಸುವ ಪದಕ್ಕೆ 'ಏಕವಚನ' ಎನ್ನುತ್ತಾರೆ.

ಉದಾ. : ರೈತ, ಕುದುರೆ, ಗುಬ್ಬಿ ಭೀಮಾನದಿ, ಪಟ್ಟಣ ಇತ್ಯಾದಿ.

ಬಹುವಚನ : ಒಂದಕ್ಕಿಂತ ಹೆಚ್ಚು ವಸ್ತು, ವ್ಯಕ್ತಿ, ಪ್ರಾಣಿ, ಪಕ್ಷಿ, ಸ್ಥಳಗಳನ್ನು ಸೂಚಿಸುವ ಪದಗಳಿಗೆ 'ಬಹುವಚನ' ಎನ್ನುವರು.

ಉದಾ. : ಪುಸ್ತಕಗಳು, ಸಂಗಣಕಗಳು, ಜನರು, ಎಮ್ಮೆಗಳು, ಗಿಳಿಗಳು, ಊರುಗಳು ಇತ್ಯಾದಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು