ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಪಾಠ 12. ಸಾಮ್ರಾಜ್ಯದ ಮುನ್ನಡೆ 7ನೇ ಇಯತ್ತೆ Std 7th Chapter 12. SAMRAJYAD Munnade

 ಪಾಠ 12. ಸಾಮ್ರಾಜ್ಯದ ಮುನ್ನಡೆ 7ನೇ ಇಯತ್ತೆ Std 7th Chapter 12. SAMRAJYAD Munnade



೧೨   ಸಾಮ್ರಾಜ್ಯದ ಮುನ್ನಡೆ

ಪ್ರಶ್ನೆ೧:- ಒಂದೊಂದು ಶಬ್ದದಲ್ಲಿ ಉತ್ತರ ಬರೆಯಿರಿ.

೧)ಇಂದೌರಿನ ಆಡಳಿತ ಸೂತ್ರಗಳನ್ನು ನಿರ್ವಹಿಸಿದವರು      = ಪೂಣ್ಯಸ್ಲೋಕ ಆಹಿಲ್ಯಾಬಾಯಿ ಹೋಳಕರ

೨) ನಾಗಪೂರದ ಭೊಸಲೆ ಮನೆತನದಲ್ಲಿಯ ಅತ್ಯಂತ ಸಾಮರ್ಥಶಾಲಿ ಮತ್ತು ಪರಾಕ್ರಮಿ ವ್ಯಕ್ತಿ      = ರಘುಜಿ ಭೋಸಲೆ

೩) ದಲ್ಲಿಯ ಸಿಂಹಾಸನದ ಮೇಲೆ ಬಾದಶಾಹನನ್ನು ಪುನರ್ ಸ್ಥಾಪನೆ ಮಾಡಿದವರು. = ಮಹಾದಜಿ ಶಿಂದೆ

೪)ಅಕ್ಷಿಣದಲ್ಲಿಯ ರಾಜಕಾರಣದ ಸೂತ್ರಗಳನ್ನು ನಿರ್ವಹಿಸದವರು     = ನಾನಾ ಫಡವಿಸ

ಪ್ರಶ್ನೆ೨:- ಕೆಳಗಿನ ಘಟನೆಗಳನ್ನು ಕಾಲಾನುಕ್ರಮವಾಗಿ ಬರೆಯಿರಿ.

೧)ಆಷ್ಟಿಯ ಯುದ್ಧ ೨)ಓಡಿಶಾ ಮೇಲೆ ಮರಾಠರ ಪ್ರಭುತ್ವ ೩)ಇಂಗ್ಲಿಷರು ಪುಣೆಯಲ್ಲಿ ಯಿನಿಯನ್ ಜಾಕ್ಹಾರಿಸಿದರು.

ಉತ್ತರ:- ೧) ಓಡಿಶಾ ಮೇಲೆ ಮರಾಠರ ಪ್ರಭುತ್ವ

       ೨) ಇಂಗ್ಲಿಷರು ಪುಣೆಯಲ್ಲಿ ಯಿನಿಯನ್ ಜಾಕ್ಹಾರಿಸಿದರು

       ೩) ಆಷ್ಟಿಯ ಯುದ್ಧ

ಪ್ರಶ್ನೆ ೩:- ಉತ್ತರ ಬರೆಯಿರಿ.

೧) ಅಹಿಲ್ಯಾಬಾಯಿ ಹೋಳಕರ ಇವರು ಮಾಡಿದ ಕಾರ್ಯಗಳು

ಉತ್ತರ:-ಅಹಿಲ್ಯಾಬಾಯಿ ಹೋಳಕರರು ಒಬ್ಬ ಮಹಾನ ,ಮುತ್ಸದ್ಧ ಮತ್ತು ಉತ್ಕೃಷ್ಟ ಆಡಳಿತಗಾರರಾಗಿದ್ದರು.ಅವರು ಹೊಸ ಕಾಯ್ದೆಗಳನ್ನು ಮಾಡಿ ಭೂ ಕಂದಾಯ,ಕರ ವಸೂಲಿ ಮುಂತಾದ ಸಂಗತಿಗಳನ್ನು ಸುಸಜ್ಜಿತಗೊಳಸಿದರು.ಬೀಳುಭೂಮಿಯನ್ನು ಸಾಗುವಳಿಯಲ್ಲಿ ತರುವುದು,ರೈತರಿಗೆ ಬಾವಿಗಳನ್ನು ತೋಡಿಸಿ ಕೊಡುವದು,ವ್ಯಾಪಾರ-ಉದ್ಯೋಗಗಳಿಗೆ ಪ್ರೋತ್ಸಾಹನ ನೀಡುವದು,ಕೆರೆ -ಹೊಂಡಗಳನ್ನು ನಿರ್ಮಿಸುವದು ಇತ್ಯಾದಿಗಳಿಗಾಗಿ ಅವರು ಶ್ರಮಿಸಿದರು.ಭಾರತದ ನಾಲ್ಕುದಿಕ್ಕುಗಳಲ್ಲಿರುವ ಮಹತ್ವದ ಧಾರ್ಮಿಕ ಸ್ಥಳಗಳಲ್ಲಿ ಅವರು ಮಂದಿರ,ಘಟ್ಟ,ಮಠ,ಧರ್ಮಶಾಲೆ,ಅರವಟ್ಟಿಗೆ ಮುಂತಾದವುಗಳನ್ನು ನಿರ್ಮಿಸಿದರು. ದೇಶದ ಸಾಂಸ್ಕೃತಿಕ ಐಕ್ಯತೆಯ ಅವರ ಈ ಪ್ರಯತ್ನವು ತುಂಬಾ ಮಹತ್ವದ್ದಾಗಿದೆ.ಅವರು ಸ್ವತ: ನ್ಯಾಯ-ನಿರ್ಣಯ ಮಾಡುತ್ತಿದ್ದರು. ಅವರು ದಾನಿಯೂ ಗ್ರಂಥ ಪ್ರೇಮಿಯೂ ಆಗಿದ್ದರು.ಅವರು ಸುಮಾರು ಇಪ್ಪತ್ತೆಂಟು ವರ್ಷ ಸಮರ್ಥವಾಗಿ ರಾಜ್ಯಾಡಳಿತ ಮಾಡಿ ಉತ್ತರದಲ್ಲಿ ಮರಾಠರ ಆಡಳಿತದ ಪ್ರಭುತ್ವ ಹೆಚ್ಚಿಸಿದರು.ರಾಜ್ಯದಲ್ಲಿ ಶಾಂತತೆ ಮತ್ತು ಸುವ್ಯವಸ್ಥೆಯನ್ನು ನಿರ್ಮಿಸಿ ಪ್ರಜೆಗಳಿಗೆ ಸುಖ ನೀಡಿದರು.

೨) ಮಹಾದಜಿ ಶಿಂದೆಯ ಪರಾಕ್ರಮ

ಉತ್ತರ:-ಉತ್ತರ ಭಾರತದ ಸಪಾಟಾದ ಪ್ರದೇಶದಲ್ಲಿ ಗೆರಿಲ್ಲಾ ಯುದ್ಧ ತಂತ್ರವು ಉಪಯುಕ್ತವಾಗಲಾರದು ಎಂಬುದನ್ನು ಅವರು  ಗುರುತಿಸಿದರು.ಅವರು ಡಿಬಾಯಿನ ಫ್ರೆಂಚ ಸೈನ್ಯದ ತಜ್ಞನ ಮಾರ್ಗದರ್ಶನದಲ್ಲಿ ತಮ್ಮ ಸೈನ್ಯವನ್ನು ತರಬೆತುಗೊಳಿಸಿದರು. ಮತ್ತು ತೋಪುಖಾನೆಯನ್ನು ಸುಸಜ್ಜಿತ ಗೋಳಿಸಿದರು. ಈ ತರಬೇತಿ ಹೊಂದಿದ ಸೈನ್ಯದ ಬಲದಿಂದ ಅವರು ರೋಹಿಲೆ,ಜಾಟ,ರಾಜಪೂತ,ಬುಂದೇಲೆ ಮುಂತಾದವರನ್ನು ಮಣಿಸಿದರು.

೩) ಗುಜರಾತದಲ್ಲಿಯ ಮರಾಠರ ಆಡಳಿತ

ಉತ್ತರ:-ಸೇನಾಪತಿ ಖಂಡೇರಾವ ದಾಭಾಡೆ ಮತ್ತು ಅವನ ಮಗ ತ್ರಿಂಬಕರಾವ ಇವರು ಗುಜರಾತದಲ್ಲಿ ಮರಾಠಾ ರಾಜ್ಯದ ಅಡಿಪಾಯ ಹಾಕಿದರು.ಖಂಡೇರಾವನ ಮರಣದ ನಂತರ ಅವನ ಪತ್ನಿಯಾದ ಉಮಾಬಾಯಿ ಇವಳು ಅಹಮದಾಬಾದಿನ  ಮುಘಲ ಸರದಾರನನ್ನು ಸೋಲಿಸಿದಳು.ಅಲ್ಲಿಯ ಕೋಟೆಯಯನ್ನು ಗೆದ್ದುಕೊಂಡಳು.ಮುಂದೆ ಗಾಯಕವಾಡರು ಗುಜರಾತದಲ್ಲಿಯ ವಡೋದರಾವನ್ನು ತಮ್ಮ ಆಡಳಿತ ಕೇಂದ್ರವನ್ನಾಗಿ ಮಾಡಿದರು.

ಪ್ರಶ್ನೆ೪:- ಮರಾಠರ ಪ್ರಭುತ್ವವು ಕೊನೆಗೊಳ್ಳಲು ಕಾರಣಗಳು ಚರ್ಚಿಸಿರಿ.

ಉತ್ತರ:- ಉತ್ತರ ಮತ್ತು ದಕ್ಷಿಣ ಭರತದಲ್ಲಿ ಮರಾಠರ ಸತ್ತೆಯ ಪ್ರಭುತ್ವ ನಿರ್ಮಾಣಮಾಡಲು ಮರಾಠಾ ಸರದಾರರು ಉಶಸ್ವಿ ಯಾದರು.ಮಹಾದಜಿ ಶಿಂದೆ ಮತ್ತು ನಾನಾ ಫಡಣವೀಸ ಇವರ ಮೃತ್ಯು ನಂತರ ಮರಾಠರ ಇಳಿಗಾಲ ಪ್ರಾರಂಭವಾಯಿತು.ಆ ಕಾಲದಲ್ಲಿ ರಘುನಾಥರಾವನ ಮಗ ಎರಡನೆಯ ಬಾಜಿರಾವ ಪೇಶವೆ ಇದ್ದನು.ಆದರೆ ಅವನ ಹತ್ತಿರ ನೆತ್ರುತ್ವದ ಗುಣ ವಿರಲಿಲ್ಲ. ಅವನಲ್ಲಿ ಅನೇಕ ದೋಷಗಳಿದ್ದವು.ಅವನು ಮರಾಠಾ ಸರದಾರರಲ್ಲಿ ಐಕ್ಯತೆ ನಿರ್ಮಾಣ ಮಾಡಲಿಲ್ಲ.ಮರಾಠಾ ಸರದಾರರ ಐಕ್ಯತೆ ಇರಲಾರದಿಂದ ಮರಾಠರ ಆಡಲಿತ ಒಳಗಿನಿಂದ ಪೊಳ್ಳಾಯಿತು.ಹೀಗೆ ಅನೇಕ ಕಾರಣದಿಂದ ಎರಡನೇಯ ಬಾಜಿರಾವನ ಕಾಲದಲ್ಲಿ ಮರಾಠರ ದಕ್ಷಿಣ ಮತ್ತು ಉತ್ತರ ಭಾರತದಲ್ಲಿ ಮರಾಠರ ಪ್ರಭುತ್ವ ಕಡಿಮೆ ಆಗಿ ಮರಾಠರ ಸ್ಥಳ ಇಂಗ್ಲೀಷರು ತಗೆದುಕೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು