ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಪರಿಸರ ಅಭ್ಯಾಸ (ಭಾಗ ೧) ನಾಲ್ಕನೆಯ ಇಯತ್ತೆ 2. ಸಜೀವಿಗಳಲ್ಲಿ ಪರಸ್ಪರ ಇರುವ ಸಂಬಂಧ

 ಪರಿಸರ ಅಭ್ಯಾಸ (ಭಾಗ ೧) ನಾಲ್ಕನೆಯ ಇಯತ್ತೆ

 


2. ಸಜೀವಿಗಳಲ್ಲಿ ಪರಸ್ಪರ ಇರುವ ಸಂಬಂಧ

ಪ್ರ. (ಅ) ಏನು ಮಾಡಬಲ್ಲೆವು ?

ಗುರುಪ್ರೀತ ಕೌರ ಬೇಸಿಗೆಯಲ್ಲಿಯ ಮಟ ಮಟ ಮಧ್ಯಾಹ್ನದಲ್ಲಿ ಸೂಟಿಯಲ್ಲಿ ಛಂದ ವರ್ಗಕ್ಕೆ ಹೋಗಬೇಕಾಗಿದೆ. ಬಿಸಿಲಿನ ತೊಂದರೆಯಾಗದಂತೆ ಅವಳಿಗೆ ಯೋಗ್ಯವಾದ ಸೂಚನೆಗಳನ್ನು ಕೊಡಬೇಕಾಗಿದೆ.

ಸೂಚನೆ: ಬಿಸಿಲಿನಿಂದ ರಕ್ಷಣೆ ಪಡೆಯಲು ಛತ್ರಿ ಹಿಡಿದುಕೊಂಡು ಹೋಗಬಹುದು.

ಪ್ರ. (ಆ) ವಿಚಾರ ಮಾಡಿರಿ.

೧. ಹೊಲದಲ್ಲಿ ಪೈರು ಬೆಳೆದು ನಿಂತಿದೆ. ಜೋರಾದ ಮಳೆಯಿಂದ ಹೊಲದಲ್ಲಿ ನೀರು ನಿಂತು ಪೈರು ಕೊಳೆತು ಹೋಗುವ ಸಂಭವವಿರುತ್ತದೆ. ಅದಕ್ಕೆ ಕಾರಣ ಏನಿರಬಹುದು ?

೨. ಯಾವುದಾದರೂ ಒಂದು ವರ್ಷದಲ್ಲಿ ಕಡಿಮೆ ಮಳೆ ಬೀಳುವುದು, ಆ ವರ್ಷದಲ್ಲಿ ಬೆಳೆಗಳು ಏಕೆ ಬೆಳೆಯುವುದಿಲ್ಲ?

೩. ಧಾಮಣಿ ಇದು ಹಾವಿನ ಒಂದು ಜಾತಿಯಾಗಿದೆ. ಅದು ಹೊಲದ ಅಕ್ಕಪಕ್ಕದಲ್ಲಿ ಏಕೆ ವಾಸಿಸುತ್ತಿರಬಹುದು ?

೪. ಹಿಮ ಪ್ರದೇಶದಲ್ಲಿ ಮೈ ಮೇಲೆ ಕೂದಲು ಇರುವ ಪ್ರಾಣಿಗಳು ಇರುವವು, ಅವುಗಳ ಕೂದಲು ದಟ್ಟ ವಾಗಿರಬಹುದೋ ಅಥವಾ ವಿರಳವಾಗಿರಬಹುದು ? ಇದರ ಕಾರಣವೇನಿರಬಹುದು ?

ಪ್ರ. () ಮಾಹಿತಿ ಪಡೆಯಿರಿ.

೧. ಮಹಾರಾಷ್ಟ್ರದಲ್ಲಿ ಮುಂದೆ ಹೇಳಿದ ಯಾವ ಊರುಗಳು ಹಣ್ಣಿಗಾಗಿ ಪ್ರಸಿದ್ಧವಾಗಿವೆ ?

 (ಕ) ನಾಗಪೂರ  (ಖ) ಘೋಲವಡ  () ಸಾನವಡ (ಘ) ದೇವಗಡ (ಚ) ಜಳಗಾವ

ಪ್ರ. (ಈ) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಹೇಳಿರಿ.

೧. ವನಸ್ಪತಿಗಳಿಂದ ನಮಗೆ ಯಾವ ಯಾವ ಉಪಯೋಗಗಳು ಆಗುವವು?

ಉತ್ತರ: ವನಸ್ಪತಿಗಳಿಂದ ನಮಗೆ ಕಟ್ಟಿಗೆ, ಹೂವು, ಹಣ್ಣು, ನೆರಳು ದೊರೆಯುತ್ತದೆ. ವನಸ್ಪತಿಗಳಿಂದಾಗಿ ನಮಗೆ ಉಸಿರಾಡಲು ಶುದ್ಧ ಗಾಳಿ ಸಿಗುತ್ತದೆ.

೨. ವೃಕ್ಷವಾಸಿ ಪ್ರಾಣಿಗಳು ಎಂದು ಯಾರಿಗೆ ಅನ್ನುವರು?

ಉತ್ತರ: ತಮ್ಮ ಬದುಕಿನ ಹೆಚ್ಚಿನ ಸಮಯವನ್ನು ಗಿಡಗಳ ಮೇಲೆ ಕಳೆಯುವ ಪ್ರಾಣಿಗಳಿಗೆ ವೃಕ್ಷವಾಸಿ ಎನ್ನುವರು.

೩. ಮಾರ್ಚ ತಿಂಗಳು ಆರಂಭವಾದಾಗ ಗಿಡಗಳಲ್ಲಿ ಯಾವ ಬದಲಾವಣೆಗಳು ಆಗುವವು?

ಉತ್ತರ: ಮಾರ್ಚ ತಿಂಗಳು ಆರಂಭವಾದಾಗ ಉಷ್ಣತೆಯ ಅನುಭವವಾಗುತ್ತದೆ. ಚಳಿಗಾಲ ಮುಗಿದು ಆರಂಭವಾಗುವುದು. ಗಿಡಗಳ ಎಲೆಗಳು ಉದುರುತ್ತವೆ. ಹೊಸದಾಗಿ ಎಲೆಗಳು ಚಿಗುರುತ್ತವೆ. ಚಿಗುರೆಲೆಗಳ ಮೇಲೆ ಕೆಲವೆಡೆ ಕೋಗಿಲೆಗಳ ಮಧುರ ಧ್ವನಿ ಕೇಳಿಬರುತ್ತದೆ.  

ಪ್ರ. (ಉ) ಬಿಟ್ಟ ಸ್ಥಳಗಳಲ್ಲಿ ಯೋಗ್ಯವಾದ ಶಬ್ದತುಂಬಿರಿ.

. ………..ಮುಗಿದ ನಂತರ ಪುನ: ಚಳಿಗಾಲ ಬರುವುದು.

ಉತ್ತರ: ಮಳೆಗಾಲ

೨. ತನ್ನ ಕೆಲವು ...............ಪೂರೈಸಿಕೊಳ್ಳಲು ಮಾನವನು ವಿವಿಧ ಪ್ರಾಣಿಗಳನ್ನು ಸಾಕುವನು.

ಉತ್ತರ: ಆವಶ್ಯಕತೆಗಳನ್ನು

೩. ವನಸ್ಪತಿಗಳಿಗೆ ಹುಳ ಹತ್ತಬಾರವೆಂದು ನಾವು ........ ಸಿಂಪಡಿಸುವೆವು.

ಉತ್ತರ: ಕೀಟನಾಶಕ

೪. ಚಳಿಗಾಲವನ್ನು .......... ಋತು ಎಂದೂ ಕರೆಯುವರು.

ಉತ್ತರ: ಎಲೆ ಉದುರುವ ಋತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು