ಪರಿಸರ ಅಭ್ಯಾಸ (ಭಾಗ ೧) ನಾಲ್ಕನೆಯ ಇಯತ್ತೆ
೧. ಪ್ರಾಣಿಗಳ
ಜೀವನಕ್ರಮ
ಪ್ರ. (ಅ) ಸ್ವಲ್ಪದರಲ್ಲಿ ಉತ್ತರ ಬರೆಯಿರಿ.
(೧) ಕೋಳಿಗೆ, ಮೊಟ್ಟೆಗಳಿಗೆ ಕಾವು
ಏಕೆ ಕೊಡಬೇಕಾಗುವುದು?
ಉತ್ತರ:- ಕೋಳಿ ಮೊಟ್ಟೆಯಲ್ಲಿ
ಮರಿಗಳು ಸರಿಯಾಗಿ ಬೆಳವಣಿಗೆಯಾಗಿ ಹೊರ ಬರಲು ಅವುಗಳಿಗೆ ಕೋಳಿಯು ಕಾವು ಕೊಡಬೇಕಾಗುತ್ತದೆ.
(೨) ಮೊಟ್ಟೆಗೆ ಕಾವು
ಕೊಡುವಾಗ ಕೋಳಿ ಏಕೆ ಆಕ್ರಮಕವಾಗುವುದು?
ಉತ್ತರ: ಕೋಳಿ ತನ್ನ
ಮೊಟ್ಟೆಗಳಿಗೆ ಕಾವು ಕೊಡುವಾಗ ಯಾರಾದರೂ ಹತ್ತಿರಕ್ಕೆ ಬಂದರೆ ಕಾಳಜಿಯಿಂದಾಗಿ ಆಕ್ರಮಕವಾಗುತ್ತದೆ.
(೩) ಪಾತರಗಿತ್ತಿಯ ಬೆಳವಣಿಗೆಯ
ನಾಲ್ಕು ಅವಸ್ಥೆಗಳು ಯಾವವು?
ಉತ್ತರ: ಪಾತರಗಿತ್ತಿಗಳ
ಬೆಳವಣಿಗೆ ಆಗುವಾಗ ಅದರಲ್ಲಿ ಮೊಟ್ಟೆ, ಹುಳ, ಕೋಶ ಹಾಗೂ ಪ್ರೌಢಾವಸ್ಥೆ ಎಂಬ ನಾಲ್ಕು ಅವಸ್ಥೆಗಳು ಇರುತ್ತವೆ.
(೪) ಕೋಶದ ಹಂತದಲ್ಲಿ
ಬಿಬಳ್ಯಾಕಡವಾ ಈ ಪಾತರಗಿತ್ತಿ ಶರೀರದಲ್ಲಿ ಯಾವ ಯಾವ ಬದಲಾವಣೆಗಳು ಆಗುವವು?
ಉತ್ತರ: ಬಿಬಳ್ಯಾ ಕಡವಾ ಇದು
ಕೋಶದಲ್ಲಿ ಸುಮಾರು ಹನ್ನೊಂದು ಅಥವಾ ಹನ್ನೆರಡು ದಿನ ಇರುವುದು. ಈ ಅವಸ್ಥೆಯಲ್ಲಿ ಅದು ಏನನ್ನೂ
ತಿನ್ನುವುದಿಲ್ಲ. ಅದರ ಶರೀರದಲ್ಲಿ ಮಹತ್ವದ ಬದಲಾವಣೆಗಳು ಆಗುತ್ತವೆ.
ಪ್ರ. (ಆ) ಸರಿಯೋ, ತಪ್ಪೋ
ಎಂಬುದನ್ನು ಹೇಳಿರಿ.
(೧) ಆಡಿನ ಮರಿ
ಮೊಟ್ಟೆಯಿಂದ ಹೊರಬರುತ್ತದೆ. = ತಪ್ಪು
(೨) ಇರುವೆಯ ಮೊಟ್ಟೆ
ತೀರ ಚಿಕ್ಕವಿರುವುದರಿಂದ ಸಹಜವಾಗಿ ಕಣ್ಣಿಗೆ ಕಾಣಿಸುವುದಿಲ್ಲ. =ಸರಿ
(೩) ಮೊಟ್ಟೆಯಿಂದ
ಕೋರೆಹುಳ ಹೊರಬಿದ್ದಾಗ ಅದಕ್ಕೆ ಹೆಚ್ಚು ಹಸಿವು ಇರುವುದಿಲ್ಲ. =ತಪ್ಪು
ಪ್ರ. (ಇ) ಬಿಟ್ಟ ಸ್ಥಳ
ತುಂಬಿರಿ.
(೧) ಹೆಣ್ಣು
ಪಾತರಗಿತ್ತಿಯ ವನಸ್ಪತಿಯ ಎಲೆಗಳ ಮೇಲೆ........ ಹಾಕುವುದು.
ಉತ್ತರ: ತತ್ತಿ/ಮೊಟ್ಟೆ
(೨) ಪಾತರಗಿತ್ತಿಯ ...........ಕೋರೆಹುಳ ಎನ್ನುವರು.
ಉತ್ತರ: ಮೊಟ್ಟೆಯಲ್ಲಿಯ ಹೂಳಗಳಿಗೆ
ಉಪಕ್ರಮ
ಬಿಬಳ್ಯಾ ಕಡವಾ ಈ ಪಾತರಗಿತ್ತಿಯ ಚಿತ್ರ ತೆಗೆದು ಅದಕ್ಕೆ ಬಣ್ಣ
ಹಚ್ಚಿರಿ.
ಇತರ ಪಾತರಗಿತ್ತಿ ಬಣ್ಣದ ಚಿತ್ರಗಳನ್ನು ಸಂಗ್ರಹಿಸಿರಿ ಹಾಗೂ
ಅವುಗಳನ್ನು ನಿಮ್ಮ ವಹಿಯಲ್ಲಿ ಅಂಟಿಸಿರಿ.
0 ಕಾಮೆಂಟ್‌ಗಳು
ಧನ್ಯವಾದಗಳು