ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಪಾಠ 5. ಸ್ವರಾಜ್ಯ ಸ್ಥಾಪನೆ 7ನೇ ಇಯತ್ತೆ ಇತಿಹಾಸ std 7th History Chapter 5. Swarajya Sthapane

 ಪಾಠ 5. ಸ್ವರಾಜ್ಯ ಸ್ಥಾಪನೆ 7ನೇ ಇಯತ್ತೆ ಇತಿಹಾಸ


 


ಪಾಠ ೫ ಸ್ವರಾಜ್ಯ ಸ್ಥಾಪನೆ

ಪ್ರಶ್ನೆ೧:- ಗುಂಪಿಗೆ ಸೇರದ ಶಬ್ದವನ್ನು ಹುಡುಕಿರಿ.

೧) ಪುಣೆ, ಸುಪೆ, ಚಾಕಣ, ಬೆಂಗಳೂರು

ಉತ್ತರ:- ಬೆಂಗಳೂರು

೨) ಫಲಟಣದ ಜಾಧವ, ಜಾವಳಿಯ ಮೋರೆ, ಮುಧೋಳದ ಘೋರ್ಪಡೆ,ಸಾವಂತವಾಡಿಯ ಸಾವಂತ

ಉತ್ತರ:- ಫಲಟಣದ ಜಾಧವ

೩) ತೋರಣಾ,ಮುರುಂಬದೇವ,ಸಿಂಹಗಡ, ಸಿಂಧುದುರ್ಗ

ಉತ್ತರ:-ಸಿಂಧುದುರ್ಗ

ಪ್ರಶ್ನೆ೨:-ಬನ್ನಿ,ಉತ್ತರ ಬರೆಯೋಣ!

೧) ಶಿವಾಜಿಮಹಾರಾಜರ ಮೇಲೆ ವೀರಮಾತೆ ಜಿಜಾಬಾಯಿಯವರು ಮಾಡಿದ ವಿವಿಧ ಸಂಸ್ಕಾರಗಳು ಬರೆಯಿರಿ.

ಉತ್ತರ:- ವೀರಮಾತೆ ಜೀಜಾಬಾಯಿ ಯವರು ಶಿವಾಜಿ ಮಹಾರಾಜರ ಮೇಲೆ ಶೀಲತಾ, ಸತ್ಯಪ್ರೀಯತಾ, ವಾಕ್ ಚಾತುರ್ಯ, ದಕ್ಷತಾ,ಧೈರ್ಯ, ನಿರ್ಭಯತಾ,ಶಸ್ತ್ರ ಪ್ರಯೋಗ, ವಿಜಯಾಕಾಂಕ್ಷಾ,ಸ್ವರಾಜ್ಯ ಸ್ವಪ್ನ ಮುಂತಾದವುಗಳ ಸಂಸ್ಕಾರಗಳು ಮಾಡಿದರು.

೨) ಶಿವಾಜಿ ಮಹಾರಾಜರು ಸ್ವರಾಜ್ಯ ಸ್ಥಾಪನೆಯ ಆರಂಭವನ್ನು ಮಾವಳ ಪ್ರದೇಶದಲ್ಲಿ ಮಾಡಿದರು.

ಉತ್ತರ:- ಶಿವಾಜಿಮಹಾಜರ ಜಾಹಗಿರದ ಕೋಟೆಗಳು ಅವರ ಆಧಿನದಲ್ಲಿ ಇರಲಿಲ್ಲ. ಅವು ಆದಿಲಶಾಹನ ಕೈಯಲ್ಲಿ ಇದ್ದವು. ಆ ಕಾಲದಲ್ಲಿ ಕೋಟೆಗೆ ವಿಶೇಷ ಮಹತ್ವವಿತ್ತು. ಕೋಟೆಗಳು ತಮ್ಮ ಆಧಿನದಲ್ಲಿ ತಗೆದುಕೊಳ್ಳಲು ನಿರ್ಧರಿಸಿದರು. ಕೋಟೆ ತಮ್ಮ ಆಧಿನದಲ್ಲಿ ತಗೆದುಕೊಳ್ಳುವದೆಂದರೆ ಆದೀಲಶಾಹನ ಅಧಿಕಾರಕ್ಕೆ ಆವ್ಹಾನ ಕೊಡುವಂತಹದಾಗಿತ್ತು.ಅವರು ತೋರಣಾ, ಮುರುಂಬದೇವ,ಕೊಂಢಾಣಾ,ಪುರಂದರ ಈ ಕೋಟೆಯನ್ನು ತಮ್ಮ ಆಧಿನದಲ್ಲಿ ತಗೆದುಕೊಂಡರು ಮತ್ತು ಸ್ವರಾಜ್ಯದ ಮೂಹುರ್ತ ಪ್ರಾರಂಭಮಾಡಿದರು.

ಪ್ರಶ್ನೆ೩:- ಶಿವಾಜಿಮಹಾರಾಜರ ಒಡನಾಡಿಗಳು ಹಾಗೂ ಸಹಕಾರಿಗಳ ಪಟ್ಟಿಯನ್ನು ಮಾಡಿರಿ.

ಉತ್ತರ:- ಶಿವಾಜಿ ಮಹಾರಾಜರಿಗೆ ಸ್ವರಾಜ್ಯ ಸ್ಥಾಪನೆಯ ಕಾರ್ಯದಲ್ಲಿ ಒಳ್ಳೆಯ ಸಹಕಾರಿಗಳು ಹಾಗೂ ಒಡನಾಡಿಗಳಿದ್ದರು ಅವರು- ಯೇಸಾಜಿ ಕಂಕ, ಬಾಜಿ ಪಾಸಲಕರ, ಬಾಪುಜಿ ಮುದಗಲ, ರ‍್ಹೆಕರ ದೇಶಪಾಂಡೆ ಬಂಧುಗಳು, ಕಾವಜಿ ಕೊಂಢಾಕರ, ಜೀವಾ ಮಹಾಲಾ, ತಾನಾಜಿ ಮಾಲಸೂರೆ, ಕಾನ್ಹೊಜಿ ಜೇಧೆ, ಬಾಜಿಪ್ರಭು ದೇಶಪಾಂಡೆ, ದಾದಾಜಿ ನರಸಪ್ರಭು, ದೇಶಪಾಂಡೆ ಇವರು ಒಡನಾಡಿಗಳು ಮತ್ತು ಸಹಕಾರಿಗಳು ಆಗಿದ್ರು.

ಪ್ರಶ್ನೆ ೪:- ಹುಡುಕಿರಿ ಮತ್ತು ಬರೆಯಿರಿ.

೧) ಶಹಾಜಿ ರಾಜರಿಗೆ ಸ್ವರಾಜ್ಯದ ಸಂಕಲ್ಪಕ ಎಂದು ಏಕೆ ಕರೆಯುತ್ತಾರೆ?

ಉತ್ತರ:- ಶಹಾಜಿರಾಜರು ಪರಕ್ರಮಿ, ಧೈರ್ಯಶೀಲ, ಬುದ್ಧಿಮಾನ ಮತ್ತು ಶ್ರೇಷ್ಠ ಇದ್ದರು.ಶಿವರಾಯ ಮತ್ತು ಜೀಜಾಬಾಯಿಬೆಂಗಳುರಿನಲ್ಲಿ ಇದ್ದಾಗ ಅವರು ಶಿವರಾಯರಿಗೆ ರಾಜನನ್ನಾಗಿ ಮಾಡುವಸಲುವಾಗಿ ಯೋಗ್ಯ ಉತ್ತಮವಾದ ಶಿಕ್ಷಣದ ವ್ಯವಸ್ಥೆ ಮಾಡಿದರು.ಪರಕೀಯ ಜನರ ಆಡಳಿತ ಉರುಳಿಸಿ ಸ್ವರಾಜ್ಯ ಸ್ಥಾಪನೆ ಮಾಡುವದು ಇದು ಅವರ ತೀವ್ರ ಆಕಾಂಕ್ಷೆ ಇವರದಾಗಿತ್ತು. ಆದ್ದರಿಂದ ಅವರಿಗೆ ಸ್ವರಾಜ್ಯ ಸ್ಥಾಪನೆಯ ಸಂಪಲ್ಪಕ ಎಂದು ಕರೆಯುತ್ತಾರೆ.

೨) ಶಿವಾಜಿಮಹಾರಾಜರು ನೌಕಾಪಡೆಯನ್ನು ಕಟ್ಟುವುದರ ಕಡೆಗೆ ಕೆ ಲಕ್ಷ್ಯ ವಹಿಸಿದರು?

ಉತ್ತರ:- ಶಿವಾಜಿ ಮಹಾರಾಜರು ಕಲ್ಯಾಣ ಮತ್ತು ಭಿವಂಡಿ ಗೆದ್ದನಂತರ ಪಶ್ಚಿಮ ಕಿನಾರಪಟ್ಟಿಯಲ್ಲಿಯ ಸಿದ್ದಿ ಮತ್ತು ಪೊರ್ತುಗೀಜ ,ಇಂಗ್ಲಿಷರ ಆಡಳಿತದ ಸಂಬಂದ ಬಂದಿತು.ಆ ಆಡಳಿತದೊಂದಿಗೆ ಸಂಘರ್ಷ ಮಾಡುವದಿದ್ದರೆ ನಮಗೆ ಪ್ರಭಲವಾದ ನೌಕಾಪಡೆ ನಿಲ್ಲಿಸಬೇಕು ಇದು ಅವರ ಲಕ್ಷಕ್ಕೆ ಬಂದಿತು ಆದ್ದರಿಂದ ಶಿವಾಜಿಮಹಾರಾಜರು ನೌಕಾಪಡೆಯನ್ನು ಕಟ್ಟುವದರಕಡೆ ಲಕ್ಷ ವಹಿಸಿದರು.

೩) ಶಿವಾಜಿಮಹಾರಾಜರು ಆದಿಲಶಾಹನ ಜೊತೆ ಏಕೆ ಒಪ್ಪಂದ ಮಾಡಿಕೊಂಡರು?

ಉತ್ತರ:- ಮಹಾರಾಜರು ಪನ್ಹಾಳಾ ಕೋಟೆಯಲ್ಲಿ ಶಿಲುಕಿದರು ಅದೇ ವೆಳೆಗೆ ದಿಲ್ಲಿಯ ಗದ್ದುಗೆಯ  ಮೆಲೆ ಇರುವ ಔರಂಗಜೇಬ ಬಾದಶಾಹನು ಮುಘಲ ಸರದಾರ ಶಾಹಿಸ್ತಾಖಾನನನ್ನು ದಕ್ಷಿಣಕ್ಕೆ ಕಳುಹಿಸಿದನು.ಅವನು ಪುಣೆ ಪ್ರಾಂತದ ಮೇಲೆ ದಾಳಿ ಮಾಡಿದನು.ಆ ವೇಳೆಗೆ ಶಿವಾಜಿಮಹಾರಾಜರು ಆದಿಲಶಾಹಿಯೊಂದಿಗೆ ಸಂಘರ್ಶ ಪ್ರಾರಂಭವಿತ್ತು . ಇಂಥ ಪರಿಸ್ಥಿತಿಯಲ್ಲಿ ಎರಡು ಶತ್ರುವಿನೊಂದಿಗೆ ಒಂದೇ ವೇಳೆ ಯುದ್ದಮಾಡುವದು ಸರಿಯಲ್ಲ ವೆಂದು ತಿಳಿದು ವಿಚಾರಮಾಡಿದರು ಮತ್ತು ವಿಶಾಲಗಡದ ಮೇಲೆ ಸುಖರೂಪವಾಗಿ ಮುಟ್ಟಿದನಂತರ ಅವರು ಆದಿಲಶಾಹನೊಂದಿಗೆ ಒಪ್ಪಂದ ಮಾಡಿಕೊಂಡರು. ಒಪ್ಪಂದದ ಪ್ರಕಾರ ಅವರಿಗೆ ಪನ್ಹಾಳಾ ಕೋಟೆ ಮರಳಿ ಕೊಡಬೇಕಾಯಿತು.

೪) ಶಿವಾಜಿ ಮಹಾರಾಜರು ಪನ್ಹಾಳಾ ಕೋಟೆಯಿಂದ ಹೇಗೆ ಪಾರಾದರು?

ಉತ್ತರ:- ಶಿವಾಜಿ ಮಹಾರಾಜರು ಪನ್ಹಾಳಾ ಕೋಟೆಯಿಂದ ಪಾರಾಗಲು ಶಿವಾ ಕಾಶಿದ ಈ ಬಾಹದೂರ ತರುಣನು ಮುಂದಾಳುತನ ವಹಿಸಿದನು.ಅವನು ನೊಡಲು ಶಿವರಾಯರಂತೆ ಇದ್ದನು. ಅವನು ಶಿವರಾಯರ ವೇಶಭೂಷಧರಿಸಿ ಪಲ್ಲಕ್ಕಿಯಲ್ಲಿ ಕುಳಿತನು. ಪಲ್ಲಕ್ಕಿರು ರಾಜದಂಡ ಬಾಗಿಲಿನಿಂದ ಹೊರಗೆ ನಡೆಯಿತು. ಸಿದ್ದಿಯ ಸೈನಿಕರು ಆ ಪಲ್ಲಕ್ಕಿಯನ್ನು ತಡೆದರು. ಶಿವಾ ಕಾಶಿದನು ಈ ಪ್ರಸಂಗದಲ್ಲಿ ಸ್ವರಾಜ್ಯದ ಸಲುವಾಗಿ ಬಲಿದಾನವಾದನು. ಈ ಮಧ್ಯೆ ಶಿವಾಜಿ ಮಹಾರಾಜರು ಎರಡನೆಯ ದುರ್ಗಮ ಮಾರ್ಗದಿಂದ ಕೋಟೆಯ ಹೊರಗೆ ಬಂದರು. ಅವರ ಜೋತೆ ಬಾಜೀಪ್ರಭು ದೇಶಪಾಂಡೆ ಹಾಗೂ ಬಾಂದಲ ದೇಶಮುಖರೊಂದಿಗೆ ಆಯ್ದ ಸೈನಿಕರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು