ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಪಾಠ 6. ಮುಘಲರೊಡನೆ ಹೋರಾಟ 7ನೇ ಇಯತ್ತೆ ಇತಿಹಾಸ std 7th History Chapter 6. Mughalarodane Horat

 ಪಾಠ 6. ಮುಘಲರೊಡನೆ ಹೋರಾಟ   7ನೇ ಇಯತ್ತೆ ಇತಿಹಾಸ std 7th History Chapter 6. Mughalarodane Horat

 


ಪಾಠ ೬ ಮುಘಲರೊಡನೆ ಹೋರಾಟ

ಪ್ರಶ್ನೆ೧: ಕೆಳಗಿನ ಘಟನೆಗಳನ್ನು ಕಾಲಾನುಕ್ರಮವಾಗಿ ಬರೆಯಿರಿ.        

                                                        ಉತ್ತರ.

೧) ಶಿವಾಜಿ ಮಹಾರಾಜರ ದಕ್ಷಿಣ ದಂಡ ಯಾತ್ರೆ.   ೧) ಶಾಹಿಸ್ತಾಖಾನನ ದಾಳಿ

೨) ಲಾಲ ಮಹಲದ ಮೇಲೆ ದಾಳಿ.            ೨) ಲಾಲ ಮಹಲದ ಮೇಲೆ ದಾಳಿ.

೩) ಆಗ್ರಾದಿಂದ ಬಿಡುಗಡೆ.                   ೩) ಪುರಂದರ ಒಪ್ಪಂದ

೪) ರಾಜ್ಯಾಭಿಷೇಕ                        ೪) ಆಗ್ರಾದಿಂದ ಬಿಡುಗಡೆ.

೫) ಪುರಂದರ ಒಪ್ಪಂದ                   ೫) ಶಿವಾಜಿ ಮಹಾರಾಜರ ದಕ್ಷಿಣ ದಂಡ ಯಾತ್ರೆ

೬) ಶಾಹಿಸ್ತಾಖಾನನ ದಾಳಿ               ೬) ರಾಜ್ಯಾಭಿಷೇಕ

ಪ್ರಶ್ನೆ೨:- ಹುಡುಕಿದರೆ ಸಿಗುತ್ತದೆ.

೧) ಸಂಸ್ಕೃತ ಶಬ್ದಗಳಿರುವ ಕೋಶ ---  ರಾಜ್ಯ ವ್ಯವಹಾರ ಕೋಶ

೨) ತ್ರ್ಯಂಯಂಬಕಗಡವನ್ನು ಗೆದ್ದುಕೊಂಡವರು --- ಮೋರೊಪಂತ ಪಿಂಗಳೆ

೩) ವಣಿ- ದಿಂಡೋರಿಯಲ್ಲಿ ಸೋತ ಸರದಾರರು.--- ದಾವುದಖಾನ

೪) ಇಂಗ್ಲಷ್, ಡಚ್ ಮತ್ತು ಫ್ರೆಂಚರ ಇವರ ಮಳಿಗೆಗಳಿದ್ದ ಸ್ಥಳ --- ಸುರತ

ಪ್ರಶ್ನೆ೩:- ನಿಮ್ಮ ಶಬ್ದಗಳಲ್ಲಿ ಬರೆಯಿರಿ.

೧) ಶಿವಾಜಿ ಮಹಾರಾಜರ ರಾಜ್ಯಾಭಿಷೇಕ

ಉತ್ತರ:- ಸತತ ಮೂವತ್ತು ವರ್ಷಗಳ ಅವಿರತ ಪರಿಶ್ರಮದಿಂದ ಮರಾಠರ ಸ್ವರಾಜ್ಯವು ಸಾಕಾರಗೊಂಡಿತು. ಹಾಗಿದ್ದರೂ ಸ್ವರಾಜ್ಯದ ಅಸ್ಥಿತ್ವವು ಸ್ವತಂತ್ರö ಮತ್ತು ಸಾರ್ವಭೌಮವಾಗಿದೆಯೆಂಬುದನ್ನು ಸ್ಪಷ್ಟಪಡಿಸುವದಕ್ಕಾಗಿ ಸ್ವರಾಜ್ಯದ ಅಧಿಕೃತತೆ ಮತ್ತು ಸಾರ್ವತ್ರಿಕ ಮನ್ನಣೆ ಪ್ರಾಪ್ತವಾಗುವಸಲುವಾಗಿ ರಾಜ್ಯಾಭಿಷೇಕದ ಅವಶ್ಯಕತೆಇದೆ ಎಂಬುದು ಅರಿತು ಅವರು ೬ ಜೂನ ೧೬೭೪ ರಂದು ಪ್ರಸಿದ್ಧ ವಿಧ್ವಾಂಸರಾದ ಪಂಡಿತ ಗಾಗಾಭಟ್ಟರ ಹಸ್ತಗಳಿಂದ ರಾಯಗಡದಲ್ಲಿ ರಾಜ್ಯಾಭಿಷಢಕ ಮಾಡಿಕೊಂಡರು.ರಾಜ್ಯಾಭಿಷೇಕ ಮೂಲಕ ಈಗ ಸ್ವರಾಜ್ಯದ ಛತ್ರಪತಿಗಳಾಗಿ ಸಾರ್ವಭೌಮತ್ವದ ಪ್ರತಿಕವೆಂದು ಅವರು ರಾಜ್ಯಾಭಿಷೇಕ ಶಕ ಎಂಬ ಹೊಸ ಕಾಲಗಣನೆ ಆರಂಭಿಸಿದರು.ರಾಜ್ಯಾಭಿಷೇಕ ಪ್ರಸಂಗದಲ್ಲಿ ಅವರು ಬಂಗಾರದ ಹೋನಮತ್ತು ತಾಮ್ರದ ಶಿವರಾಯಿಎಂಬ ಹೊಸ ನಾಣ್ಯಗಳನ್ನು ಟಂಕಿಸಿದರು. ರಾಜ್ಯಾಭಿಷೇಕನಂತರ ಅವರು ಪಾರ್ಶಿ ಶಬ್ದಗಳಿಗೆ ಪರ್ಯಾಯ ಸಂಸ್ಕೃತ ಶಬ್ದಗಳಿರುವ ಒಂದು ಕೋಶವನ್ನು ತಯಾರಿಸಿಕೊಂಡು ಅದಕ್ಕೆ ರಾಜ್ಯ ವ್ಯವಹಾರ ಕೋಶಎಂದು ಕರೆಯುವರು.

೨) ಆಗ್ರಾದಿಂದ ಬಿಡುಗಡೆ

ಉತ್ತರ:- ಮಹಾರಾಜರನ್ನು ಕೆಲವು ಕಾಲವಾದರೂ ದಕ್ಷಿಣದ ರಾಜಕಾಎಣದಿಂದ ದುರವಿಡಬೆಕೆಂಬ ವಿಚಾರವನ್ನು ಜಯಸಿಂಹ ಮತ್ತು ಔರಂಗಜೇಬ ಬಾದಶಾಹರು ಮಾಡಿದರು.ಈ ವಿಚಾರಕ್ಕನುಸರಿಸಿ ಮಹಾರಾಜರು ಬಾದಶಾಹನ ಭೇಟಿಗೆ ಬರಬೇಕು ಎಂಬ ಸೂಚನೆಯನ್ನು ಜಯಸಿಂಹನು ಮಹಾರಾಜರಿಗೆ ಮಾಡಿದನು.ಅವನು ಅವರ ಸುರಕ್ಷಿತತೆಯ ಭರವಸೆಯನ್ನೂ ನೀಡಿದನು.ಅದಕ್ಕನುಸಾರವಾಗಿ ಶಿವಾಜಿ ಮಹಾರಾಜರು ಆಗ್ರಾಕ್ಕೆಹೊರಟರು. ಮಹಾಜಾಜರು ಆಗ್ರಾಕ್ಕೆ ತಲುಪಿದನಂತರ ಔರಂಗಜೇಬ ಬಾದಶಾಹನು ಯೋಗ್ಯ ಮಾನ-ಸನ್ಮಾನಗಳನ್ನು ನೀಡಲಿಲ್ಲ.ಹೀಗಾಗಿ ಅವರು ರೋಷವನ್ನು ವ್ಯಕ್ತಪಡಿಸಿದರು.ಆನಂತರ ಬಾದಶಾಹನು ಅವರನ್ನು ಕಣ್ಗಾವಲಿನಲ್ಲಿ ಇರಿಸಿದನು. ಬಾದಶಾಹನ ಈ ಕೃತ್ಯದಿಂದ ಎದೆಗುಂದದೆ ಮಹಾರಾಜರು ಕಣ್ಗಾವಲಿನಿಂದ ಪಾರಾಗಲೂ ಯೋಜನೆಯನ್ನು ರೂಪಿಸಿ ಆಗ್ರಾದಿಂದ ಅತ್ಯಂತ ಚಾಣಾಕ್ಷತನದಿಂದ ಪಾರಾದರು ಹಾಗೂ ಕೆಲವುದಿವಸಗಳ ನಂತರ ಮಹಾರಾಷ್ಟ್ರಕ್ಕೆ ತಲುಪಿದರು.

೩) ಶಿವಾಜಿ ಮಹಾರಾಜರ ದಕ್ಷಿಣದ ದಂಡಯಾತ್ರೆ

ಉತ್ತರ:-ರಾಜ್ಯಾಭಿಷೇಕದ ಸುಮಾರು ಮೂರು ವರ್ಷಗಳ ನಂತರ ಅಕ್ಟೋಬರ ೧೬೭೭ ರಲ್ಲಿ ಮಹಾರಾಜರು ದಕ್ಷಿಣದ ದಂಡಯಾತರೆಯನ್ನು ಕೈಗೊಂಡರು.ಗೋವಳಕಕೊಂಡಾದಲ್ಲಿ ಕುತುಬಶಾಹನಿಗೆ. ಭೇಟಿಯಾದರು ಮಹಾರಾಜರು ಕರ್ನಾಟಕದಲ್ಲಿಯ ಬೆಂಗಳೂರು,ಹೊಸಕೋಟೆ ಅದರಂತೆ ಈಗಿನ ತಮಿಳುನಾಡಿನಲ್ಲಿಯ ಜಿಂಜಿ,ವೆಲ್ಲೊರ ಮುಂತಾದ ಕೋಟೆಗಳನ್ನು ಹಾಗು ಆದಿಲಶಾಹಿಯ ಕೆಲವು ಪ್ರದೇಶಗಳನ್ನು ಗೆದ್ದುಕೊಂಡರು.ಅವರ ಸೈನಿಕರು ಅಲ್ಲಿಯ ಪ್ರಜೆಗಳ ಮೇಲೆ ಯಾವುದೇ ರೀತಿಯ ತೊಂದರೆ ಕೊಡಲಿಲ್ಲ.

೪) ಶಿವಾಜಿ ಮಹಾರಾಜರು ರಾಜ್ಯಾಭಿಷೇಕಕ್ಕಾಗಿ ಮಾಡಿದ ಸಿದ್ಧತೆಗಳು.

ಉತ್ತರ:-ಶಿವಾಜಿ ಮಹಾರಾಜರು ಗಾಗಾಭಟ್ಟರಿಂದ ರಾಜ್ಯಾಭಿಷೇಕ ಮಾಡಿಕೊಂಡನಂತರ ಸಾರ್ವಭೌಮತ್ವದ ಪ್ರತೀಕವೆಂದು ರಾಜ್ಯಾಭಿಷೇಕ ಶಕಎಂಬ ಹೊಸ ಕಾಲಗಣನೆಯನ್ನು ಆರಂಭಿಸಿದರು.ರಾಜ್ಯಾಭಿಷೇಕದ ಪ್ರಸಂಗದಲ್ಲಿ ಅವರು ಬಂಗಾರದ ಹೋನಮತ್ತು ತಾಮ್ರದ ಶಿವರಾಯಿಎಂಬ ಹೊಸನಾಣ್ಯಗಳನ್ನು ಟಣಕಿಸಿದರು. ಈ ನಾಣ್ಯಗಳಮೇಲೆ ಶ್ರೀ ರಾಜಾ ಶಿವಛತ್ರಪತಿ ಎಂಬ ಸಕ್ಷರಗಳನ್ನು ಕೊರೆಯಲಾಯಿತು. ಅಲ್ಲಿಂದ ಮುಂದೆ ರಾಜಪತ್ರದಲ್ಲಿ ಕ್ಷತ್ರೀಯ ಕುಲಾವಂತಸ ಶ್ರೀ ರಾಜಾ ಶಿವಛತ್ರಪತಿಎಂಬ. ಉಲ್ಲೇಖವಾಗತೊಡಗಿತು .

ಪ್ರಶ್ನೆ೪:- ಕಾರಣಗಳನ್ನು ಬರೆಯಿರಿ.

೧) ಶಿವಾಜಿ ಮಹಾರಾಜರು ಪುರಂದರ ಒಪ್ಪಂದ ಮಾಡಿಕೊಂಡರು.

ಉತ್ತರ:- ಮಿರ್ಜೆರಾಜೆ ಜಯಸಿಂಗ ಮತ್ತು ದಿಲೇರಖಾನ ಇವರು ಪುರಂದರ ಕೋಟೆಯ ಮೇಲೆ ಮುತ್ತಿಗೆ ಹಾಕಿದರು. ಪುರಂದರಮುತ್ತಿಗೆ ಸಮಯದಲ್ಲಿ ಮುರಾರಬಾಜಿ ದೇಶಪಾಂಡೆ ಇವನು ತನ್ನ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದನು. ಆದರೆ ಅವನಿಗೆ ವೀರಮರಣ ಪ್ರಾಪ್ತವಾಯಿತು.ಪರಿಸ್ಥಿತಿಯ ಗಾಂಭೀರ್ಯವನ್ನು ಗಮನಿಸಿ ಮಹಾರಾಜರು ಜರಸಿಂಗನಿಗೆ ಭೇಟಿಯಾಗಿ ಜೂನ ೧೬೬೫ ರಲ್ಲಿ ಒಪ್ಪಂದಮಾಡಿಕೊಂಡರು . ಈ ಒಪ್ಪಂದಕ್ಕೆ ಪುರಂದರ ಒಪ್ಪಂದ ವೆಂದು ಅನ್ನುತ್ತಾರೆ.

೨) ಶಿವಾಜಿ ಮಹಾರಾಜರು ಮುಘಲರ ವಿರುದ್ಧ ಆಕ್ರಮಣಕಾರಿ ಹೆಜ್ಜೆಯನ್ನಿಟ್ಟರು.

ಉತ್ತರ:- ಮಹಾರಾಜರಿಗೆ ಮುಘಲರೊಡನೆ ಕೂಡಲೇ ಸಂಘರ್ಷ ಬೇಕಾಗಿರದಿದ್ದರೂ ಪುರಂದರದ ಒಪ್ಪಂದದಲ್ಲಿ ಕೊಡಲ್ಪಟ್ಟ ಕೋಟೆ ಹಾಗೂ ಪ್ರದೇಶಗಳನ್ನು ಮರಳಿ ಪಡೆಯುವ ಉದ್ಧೇಶ ಮಹಾರಾಜರದಾಗಿತ್ತು ಆದ್ಧರಿಂದ ಶಿವಾಜಿ ಮಹಾರಾಜರು ಮುಘಲರ ವಿರುದ್ಧ ಆಕ್ರಮಣಕಾರಿ ಹೆಜ್ಜೆಯನ್ನಿಟ್ಟರು.

ಪ್ರಶ್ನೆ೫:- ಒಂದೇ ವಾಕ್ಯದಲ್ಲಿ ಉತ್ತರ ಬರೆಯಿರಿ.

೧) ಜಯಶಿಂಗನ ದಾಳಿಯ ಉದ್ದೇಶ ಯಾವುದಾಗಿತ್ತು?

ಉತ್ತರ:- ಮೊದಲು ಶಿವಾಜಿ ಮಹಾರಾಜರ ಬಂದೋಬಸ್ತಮಾಡುವದು ನಂತರ ಆದೀಲಶಾಹನ ಕಡೆಗೆ ತಿರುಗುವದು  ಇದು ಜಯಶಿಂಗನ ದಾಳಿಯ ಉದ್ದೇಶ ವಾಗಿತ್ತು.

೨) ಚಾಕಣ ಕೋಟೆಯ ಯಾವಕಿಲ್ಲೇದಾರ ಶಾಹಿಸ್ತಾಖಾನನ ಸೈನ್ಯಕ್ಕೆ ತಿರ್ವ ಪ್ರತಿಕಾರಮಾಡಿದನು?

ಉತ್ತರ:-ಫಿರಂಗೋಜಿ ನರಸಾಳಾ ಈ ಚಾಕಣ ಕೋಟೆಯ ಕಿಲ್ಲೇದಾರ ಶಾಹಿಸ್ತಾಖಾನನ ಸೈನ್ಯಕ್ಕೆ ತಿರ್ವ ಪ್ರತಿಕಾರಮಾಡಿದನು.

೩) ಸಾರ್ವಭೌಮತ್ವದ ಪ್ರತೀಕವೆಂದು ಯಾವ ಹೊಸ ಕಾಲಗಣನೆ ಪ್ರಾರಂಭವಾಯಿತು?

ಉತ್ತರ:- ರಾಜ್ಯಾಭಿಷೇಕ ಶಕ ಎಂಬ ಕಾಲಗಣನೆ ಸಾರ್ವಭೌಮತ್ವದ ಪ್ರತೀಕವೆಂದು ಪ್ರಾರಂಭವಾಯಿತು.

ಪ್ರಶ್ನೆ೬:- ಸಂಬಂಧ ಬರೆಯಿರಿ.

೧) ಜೀಜಾಬಾಯಿ -------  ವೀರಮಾತೆ.

೨) ಸಂಭಾಜಿ ---------- ರಾಜಪುತ್ರ ( ಶಿವಾಜಿರಾಜರ ಮಗ)

೩) ಶಹಾಜಿರಾಜ ------- ಶಿವಾಜಿ ಮಹಾರಾಜರ ತಂದೆ

೪) ವ್ಯಂಕೋಜಿ -------  ಚುಲತ ಅಣ್ಣ ( ಶಿವಾಜಿಮಹಾರಾಜರ)

ಪ್ರಶ್ನೆ ೭:-ಬಿಟ್ಟ ಸ್ಥಳ ತುಂಬಿರಿ.

೧) ಶಿವಾಜಿಮಹಾರಾಜರು ಸ್ವರಾಜ್ಯದ ವಿಸ್ತಾರ ಮಾಡುವಾಗ ಮುಘಲರೋಂದಿಗೆ ಹೊರಾಡುವದು ಅನಿವಾರ್ಯವಾಗಿತ್ತು.

೨) ಸುರತದಲ್ಲಿ ಇನಾಯತಖಾನ ಈ ಸುಭೆದಾರ ಇದ್ದನು.

೩) ಮಿರ್ಝಾರಾಜೆ ಜಯಸಿಂಗ ಮತ್ತು ದಿಲೇರಖಾ  ಇವರು ಪುರಂದರ ಕೋಟೆಯ ಮೇಲೆ ದಾಳಿ ಮಾಡಿದರು.

೪) ಮೊರೊಪಂತ ಪಿಂಗಳೆ  ಇವರು ನಾಶಿಕದ ಹತ್ತಿರದ ತ್ರಂಬಕಗಡ ಗೆದ್ದರು.

೫) ಸಂಭಾಜಿರಾಜರು ಬುಧಬೂಷಣ  ಈ ಗ್ರಂಥದಲ್ಲಿ ರಾಜ್ಯಾಭಿಷೇಕದ ವರ್ಣನೆ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು