ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಪಾಠ ೭ ಸ್ವರಾಜ್ಯದ ಆಡಳಿತ 7 ನೇ ಇತಿಹಾಸ 7th History Chapter 7. Swarajyada Adalit

 ಪಾಠ ೭ ಸ್ವರಾಜ್ಯದ ಆಡಳಿತ 7 ನೇ ಇತಿಹಾಸ 7th History Chapter 7. Swarajyada Adalit 



ಪಾಠ ೭ ಸ್ವರಾಜ್ಯದ ಆಡಳಿತ

ಪ್ರಶ್ನೆ೧:- ಗುರುತಿಸಿ ನೋಡೋಣ.

೧) ಎಂಟು ಖಾತೆಗಳ ಮಂಡಳ _____ ಅಷ್ಟಪ್ರಧಾನ ಮಂಡಳ

೨) ಬಹಿರ್ಜಿ ನಾಯಿಕ ಈ ಖಾತೆಯ ಪ್ರಮುಖ ನಾಗಿದ್ದನು. _________ ಗುಪ್ತಚರ ಖಾತೆಯ

೩) ಮಹಾರಾಜರು ಕಟ್ಟಿದ ಮಾಲವಣ ಹತ್ತಿರದ ಸಾಗರ ಕೋಟೆ ______ ಸಿಂಧುದುರ್ಗ

೪) ಕೋಟೆಯಲ್ಲಿ ಯುದ್ಧ ಸಾಮಗ್ರಿಗಳ ವ್ಯವಸ್ಥೆಯನ್ನು ನೋಡಿಕೊಳ್ಳುವವ ___ ಕಾರಖಾನಿಸ

ಪ್ರಶ್ನೆ೨:- ನಿಮ್ಮ ಶಬ್ದಗಳಲ್ಲಿ ಬರೆಯಿರಿ.

೧) ಶಿವಾಜಿ ಮಹಾರಾಜರ ಕೃಷಿ ವಿಷಯದ ಧೋರಣೆ

ಉತ್ತರ:- ಕೃಷಿಯು ಹಳ್ಳಿಗಳಲ್ಲಿಯ ಮುಖ್ಯ ಉದ್ಯೋಗವಾಗಿತ್ತು.ಮಹಾರಾಜರು ಕೃಷಿಯ ಮಹತ್ವವನ್ನು ಅರಿತು ರೈತದ ಹಿತದ ಕಡೆಗೆ ಲಕ್ಷವಹಿಸಿದರು. ಅವರು ಅಣ್ಣಜಿ ದತ್ತೋ ಎಂಬ ಕರ್ತವ್ಯನಿಷ್ಠ ಮತ್ತು ಅನುಭವಿ ಅಧಿಕಾರಿಯ ಮೇಲೆ ಭೂಕಂದಾಯ ವ್ಯವಸ್ಥೆಯ ಜವಾಬ್ದಾರಿ ಹೊರಿಸಿದರು.ನಿರ್ಧರಿಸಿಕೊಟ್ಟ ಹಣಕ್ಕಿಂತ ಹೆಚ್ಚು ಕಂದಾಯವನ್ನು ಸಂಗ್ರಹಿಸಬಾರದೆಂದು ಎಚ್ಚರಿಕೆಯನ್ನು ನೀಡಿದರು.ಬೀಳು ಭೂಮಿಯನ್ನು ಸಾಗುವಳಿ ಮಾಡುವ ಸಲುವಾಗಿ ಉತ್ತೇಜನ ನೀಡಿದರು.ಅತಿವೃಷ್ಟಿಯಾದರೆ ಇಲ್ಲವೇ ಬರಗಾಲ ಬಿದ್ದರೆ ಮತ್ತು ಶತ್ರುಸೈನ್ಯ ಊರಿನ ಪ್ರದೇಶನಾಶ ಮಾಡಿದರೆ ಸರಕಾರದ ವತಿಯಿಂದ ಭೂಕಂದಾಯ ಮತ್ತು ಇತರ ಕರಗಳಲ್ಲಿ ಸವಲತ್ತು ನೀಡಬೆಕೆಂಬ ಆಜ್ಞೆ ಅವರದಾಗಿತ್ತು. ಅದರಂತೆ ಇಂಥ ಪ್ರಸಂಗದಲ್ಲಿ ರೈತರಿಗೆ ಜೋಡು ಎತ್ತುಗಳು,ನೇಗಿಲು ಮತ್ತು ಬಿತ್ತನೆಗಾಗಿ ಉತ್ತಮಬೀಜಗಳನ್ನು ಒದಗೀಸಬೇಕು ಎಂದು ಮಹಾರಾಜರು ಅಧಿಕಾರಿಗಳಿಗೆ ಆಜ್ಞೆ ಮಾಡಿದ್ದರು.

೨) ಶಿವರಾಯರು ಒಬ್ಬ ಪ್ರಜಾಹಿತ ದಕ್ಷ ಆಡಳಿತಗಾರರು.

ಉತ್ತರ:- ಶಿವರಾಯರು ಇತರ ರಾಜರಹಾಗೆ ಶತ್ರುಗಳ ಆಧಿನದಲ್ಲಿ ಇದ್ದ ಪ್ರದೇಶಗಳು ಗೆದೆಯಬೇಕು ಮತ್ತು ತಮ್ಮ ವರ್ಚಸ್ವವನ್ನು ನಿರ್ಮಾಣಮಾಡಬೆಕು ಇಂಥ ಮರ್ಯಾದಿತ ಅಪೆಕ್ಷೆಗಳು ಇಟ್ಟುಕೊಂಡು ಕಾರ್ಯ ಮಾಡಲಿಲ್ಲ. ಪ್ರಜೆಗಳಿಗೆ ಸ್ವತಂತ್ರವನ್ನಾಗಿ ಮಾಡಬೆಕು ಎಂಬುದು ಅವರ ಮುಖ್ಯ ಉದ್ದೇಶವಿತ್ತು.ಪ್ರಜೆಗಳಿಗೆ ನಿಜವಾದ ಆನಂದ ದೊರೆಯಬೆಕೆಂದರೆ ರಾಜ್ಯಕಾರಭಾರ ಶಿಸ್ತುಬದ್ಧವಾಗಿ ಇರಬೆಕು,ಪ್ರಜೆಗಳಹಿತದ ಸರ್ವಾಂಗಿಣ ಕಾಳಜಿ ತಗೆದುಕೊಳ್ಳಬೆಕು  ಇದರ ಅರಿವು ಅವರಿಗಿತ್ತು.ಮಹಾರಾಜರು ಕೇವಲ ಸತ್ತಾಧೀಶ ಇರದೇ ಪ್ರಜಾಹಿತದಕ್ಷ ರಾಜರಾಗಿದ್ದರು.

ಪ್ರಶ್ನೆ೩:- ಏಕೆ ಎಂಬುದನ್ನು ಹೇಳಿರಿ.

೧) ಶಿವಾಜಿ ಮಹಾರಾಜರು ಅಷ್ಟಪ್ರಧಾನ ಮಂಡಳವನ್ನು ಸ್ಥಾಪಿಸಿದರು.

ಉತ್ತರ:- ಮಹಾರಾಜರು ರಾಜ್ಯಾಭಿಷೇಕದ ಪ್ರಸಂಗದಲ್ಲಿ ಅಷ್ಟಪ್ರಧಾನ ಮಂಡಳಿ ಸ್ಥಾಪಿಸಿ ರಾಜ್ಯಾಡಳಿತ ಸೌಕರ್ಯಕ್ಕಾಗಿ ಅದನ್ನು ಎಂಟು ಖಾತೆಯಲ್ಲಿ ವಿಭಾಗಿಸಿದರು. ಪ್ರತಿಯೊಂದು ಖಾತೆಗೆ ಒಬ್ಬ ಪ್ರಮುಖನ ನೇಮಕ ಮಾಡಿದರು. ಎಂಟು ಖಾತೆಗಳ ಎಂಟು ಪ್ರಮುಖರು ಕೂಡಿ ಅಷ್ಟಪ್ರಧಾನ ಮಂಡಳವಾಯಿತು. ಈ ಪ್ರಮುಖರ ನೇಮಕಾತಿ ಮಾಡುವುದು ಇಲ್ಲವೆ ಅವರನ್ನು ಮಂತ್ರಿಯ ಸ್ಥಾನದಿಂದ ತೆಗೆದು ಹಾಕುವದು ಮಹಾರಾಜರ ಅಧಿಕಾರವಾಗಿತ್ತು.

೨) ಶಿವಾಜಿ ಮಹಾರಾಜರು ನೌಕಾಪಡೆಯನ್ನು ಸ್ಥಾಪಿಸಿದರು.

ಭಾರತದ ಪಶ್ಚಿಮ ಕರಾವಳಿಯಲ್ಲಿ ಗೋವಾದ ಪೋರ್ತಗೀಜರು,ಜಂಜಿರಾದ ಸಿದ್ದಿ ಅದರಂತೆ ಸೂರತ ಮತ್ತು ರಾಜಾಪೂರದಲ್ಲಿಯ ಇಂಗ್ಲೀಷ ವ್ಯಾಪಾರಿಗಳು ಸ್ವರಾಜ್ಯ ವಿಸ್ಥಾರದ ಕಾರ್ಯದಲ್ಲಿ ಅಡೆತಡೆಗಳನ್ನು ತರುತಿದ್ದರು. ಈ ಅಡೆತಡೆಗಳನ್ನು ತಡೆಗಟ್ಟುವದು ಮತ್ತು ಪಶ್ಚಿಮಕರಾವಳಿ ತೀರದ ರಕ್ಷಣೆ ಮಾಡುವುವುದು ಅವಶ್ಯಕವಾಗಿತ್ತು.ಅದಕ್ಕಾಗಿ ಮಹಾರಾಜರು ನೌಕಾಪಡೆಯನ್ನು ಸ್ಥಾಪಿಸಿದರು.

ಪ್ರಶ್ನೆ೪ :- ಕೆಳಗಿನ ಫ್ಲೋ ಚಾರ್ಟ ಪೂರ್ಣ ಮಾಡಿರಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು