ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಬಾಲಭಾರತಿ ನಾಲ್ಕನೆಯ ಇಯತ್ತೆ ಸ್ವಾಧ್ಯಾಯ ಮಾಲೆ ಪಾಠ 6. ಜ್ಞಾನ ವೃದ್ಧೆ Chapter 6. Dnyanvruddhe

 ಬಾಲಭಾರತಿ ನಾಲ್ಕನೆಯ ಇಯತ್ತೆ ಸ್ವಾಧ್ಯಾಯ ಮಾಲೆ ಪಾಠ 6. ಜ್ಞಾನ ವೃದ್ಧೆ Chapter 6. Dnyanvruddhe 

 


೬. ಜ್ಞಾನವೃದ್ಧೆ

ಶಬ್ದಗಳ ಅರ್ಥ

ವೃದ್ಧೆ- ಅಜ್ಜಿ; ಕ್ಷಣ ಭಂಗುರ - ಸ್ವಲ್ಪ ಕಾಲ ಉಳಿಯುವ ; ಪಾಂಡಿತ್ಯ - ಬುದ್ದಿವಂತಿಕೆ ; ತೋರ್ಪಡಿಸು - ತೋರಿಸು ; ನಾರಿ - ಸ್ತ್ರೀ

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ರಾಜ ಮತ್ತು ಕವಿ ವೇಷ ಬದಲಿಸಿಕೊಂಡು ಎಲ್ಲಿಗೆ ಹೋದರು ?

ಉತ್ತರ: ಭೋಜರಾಜ ಮತ್ತು ಕವಿ ಕಾಳಿದಾಸ ವೇಷ ಬದಲಿಸಿಕೊಂಡು ಉಜ್ಜಯಿನಿಯ ಪ್ರಜೆಗಳ ಕಷ್ಟಸುಖ ತಿಳಿದುಕೊಳ್ಳಲು ದೂರ ದೂರ ಹಳ್ಳಿಗಳಿಗೆ ಹೋದರು.

ಆ) ಪ್ರಪಂಚದಲ್ಲಿರುವ ಯಾತ್ರಿಕರು ಯಾರು?

ಉತ್ತರ:ಪ್ರಪಂಚದಲ್ಲಿರುವ ಯಾತ್ರಿಕರು ಸೂರ್ಯ ಮತ್ತು ಚಂದ್ರ.

ಇ) ಕ್ಷಣ ಭಂಗುರ ವಸ್ತುಗಳು ಯಾವವು ?

ಉತ್ತರ: ಒಂದು ಯೌವ್ವನ ಮತ್ತು ಮತ್ತೊಂದು ಹಣ ಇವೆರಡೂ ವಸ್ತುಗಳು ಕ್ಷಣ ಭಂಗುರವಾಗಿವೆ. 

ಈ) ಯಾರನ್ನು ಸಹನಶೀಲರು ಎಂದು ಅಜ್ಜಿ ಹೇಳಿದಳು ?

ಉತ್ತರ: ಅಜ್ಜಿಯು ನಾರಿ ಮತ್ತು ಭೂಮಿ ತಾಯಿ ಇವರನ್ನು ಮಾತ್ರ ಸಹನಶೀಲರು ಎಂದು ಹೇಳಿದಳು.

ಉ) ಅಜ್ಜಿಯು ರಾಜ ಮತ್ತು ಕವಿಗಳನ್ನು ಯಾವ ಆಧಾರದಿಂದ ಗುರುತಿಸಿದಳು?

ಉತ್ತರ: ರಾಜ ಮತ್ತು ಕವಿಗಳನ್ನು ಅಜ್ಜಿಯು ಅವರ ಪಾಂಡಿತ್ಯದ ಮೇಲಿಂದ ಗುರುತಿಸಿದಳು.

ಪ್ರಶ್ನೆ ೨) ಕೆಳಗಿನ ಮಾತುಗಳನ್ನು ಯಾರು, ಯಾರಿಗೆ ಹೇಳಿದರು?

ಅ) ಈ ರಸ್ತೆ ಎಲ್ಲಿಗೂ ಹೋಗುವುದಿಲ್ಲ.

ಉತ್ತರ:  ಈ ಮಾತು ಅಜ್ಜಿಯು ರಾಜ ಮತ್ತು ಕವಿಗೆ ಹೇಳಿದಳು.

ಆ) ಅಜ್ಜಿ, ನಾವು ಪರದೇಶಿಗಳು.

ಉತ್ತರ: ರಾಜ ಮತ್ತು ಕವಿಗಳು ಅಜ್ಜಿಗೆ ಹೇಳಿದರು.

ಇ) ಅಜ್ಜಿ, ನಮ್ಮನ್ನು ನೀನು ಹೇಗೆ ಗುರುತಿಸಿದೆ ?

ಉತ್ತರ:ರಾಜನು ಅಜ್ಜಿಗೆ ಹೇಳಿದನು.

ಈ) ನೋಡಿ, ಈ ಕಡೆಯಿಂದ ನೇರವಾಗಿ ಹೋಗಿ.

ಉತ್ತರ:ಅಜ್ಜಿ ರಾಜ ಮತ್ತು ಕವಿಗಳಿಗೆ ಹೇಳಿದಳು.

ಪ್ರಶ್ನೆ ೩) ಬಿಟ್ಟ ಸ್ಥಳಗಳನ್ನು ತುಂಬಿರಿ.

ಅ) ಒಂದು ಗುಡಿಸಲಲ್ಲಿ ಒಬ್ಬ ಅಜ್ಜಿ ಕಾಣಿಸಿದಳು.

ಆ) ಮಹಾರಾಜರೆ, ನಿಮ್ಮಿಬ್ಬರ ಪಾಂಡಿತ್ಯದ ಕೀರ್ತಿ ಎಲ್ಲೆಡೆಗೂ ಹರಡಿದೆ.

ಇ) ಪಾಂಡಿತ್ಯವುಳ್ಳ ಪ್ರಜೆಗಳು ನಮ್ಮ ರಾಜ್ಯದಲ್ಲಿ ಇದ್ದಾರಲ್ಲಾ ಎಂದು ಹೆಮ್ಮೆ ಪಟ್ಟನು.

) ಅಜ್ಜಿಯು ಅವರನ್ನು ಚಾಪೆಯ ಮೇಲೆ ಕುಳ್ಳಿರಿಸಿದಳು.

ಉ) ಅಜ್ಜಿಯ ಅತಿಥಿ ಸತ್ಕಾರಕ್ಕೆ ಸಂತೃಪ್ತಗೊಂಡರು.

ಪ್ರಶ್ನೆ ೪) ವಿರುದ್ಧಾರ್ಥಕ ಶಬ್ದಗಳನ್ನು ಬರೆಯಿರಿ.

ಅ) ಕಷ್ಟ X ಸುಖ       ಆ) ಸತ್ಯ X ಅಸತ್ಯ            ಇ) ಕೀರ್ತಿ X ಅಪಕೀರ್ತಿ

ಈ) ತೃಪ್ತಿ X ಅತೃಪ್ತಿ   ಉ) ಮುನ್ನಡೆ X ಹಿನ್ನಡೆ

ಪ್ರಶ್ನೆ ೫) ಉದಾಹರಣೆಯಲ್ಲಿ ತೋರಿಸಿದಂತೆ ಕೆಳಗಿನ ಶಬ್ದಗಳನ್ನು ಬರೆಯಿರಿ.

ಉದಾ. : ಯೋಗ್ಯ ಅಯೋಗ್ಯ

) ಯೋಗ್ಯ – ಅಯೋಗ್ಯ             ಆ) ಸಮಾನ – ಅಸಮಾನ

ಇ) ಗೌರವ – ಅಗೌರವ                ಈ) ಧೀರ – ಅಧೀರ

ಉ) ಶುಭ – ಅಶುಭ                   ಊ) ಪವಿತ್ರ – ಅಪವಿತ್ರ

ಉಪಕ್ರಮ

Ø ಪಾಠಕ್ಕೆ ಅನುಸರಿಸಿ ಕೆಳಗಿನ ವಾಕ್ಯಗಳನ್ನು ಅನುಕ್ರಮವಾಗಿ ಬರೆಯಿರಿ.

ಅ) ಅಜ್ಜಿಯ ಹೇಳಿಕೆಯ ಪ್ರಕಾರ ಮುನ್ನಡೆದು ನಗರವನ್ನು ತಲುಪಿದರು.

ಆ) ಅವರನ್ನು ಚಾಪೆಯ ಮೇಲೆ ಕೂಡ್ರಿಸಿದಳು.

ಇ) ಅಜ್ಜಿ ನಮ್ಮನ್ನು ಹೇಗೆ ಗುರುತಿಸಿದೆ ?

ಈ) ಉಜ್ಜಯಿನಿಯ ಅರಮನೆಯಿಂದ ಹೊರಟರು.

ಉ) ಅಜ್ಜಿ, ನಾವು ಪರದೇಶಿಗಳು.

ಉತ್ತರ: 1) ಉಜ್ಜಯಿನಿಯ ಅರಮನೆಯಿಂದ ಹೊರಟರು.

2) ಅಜ್ಜಿ, ನಾವು ಪರದೇಶಿಗಳು.

3) ಅಜ್ಜಿ ನಮ್ಮನ್ನು ಹೇಗೆ ಗುರುತಿಸಿದೆ ?

4) ಅವರನ್ನು ಚಾಪೆಯ ಮೇಲೆ ಕೂಡ್ರಿಸಿದಳು.

5) ಅಜ್ಜಿಯ ಹೇಳಿಕೆಯ ಪ್ರಕಾರ ಮುನ್ನಡೆದು ನಗರವನ್ನು ತಲುಪಿದರು.

ಕವಿರತ್ನ ಕಾಳಿದಾಸನ ಜೀವನಚರಿತ್ರೆಯನ್ನು ಶಿಕ್ಷಕರಿಂದ/ಪಾಲಕರಿಂದ ಕೇಳಿ ತಿಳಿದುಕೊಳ್ಳಿರಿ.

ನುಡಿಮುತ್ತು

·        ಅನುಭವವೇ ಬುದ್ದಿವಂತಿಕೆಯ ಆಪ್ತ ಸ್ನೇಹಿತ

·        ಓದು ಒಕ್ಕಾಲು ಬುದ್ಧಿ ಮುಕ್ಕಾಲು

 

ಗಮನಿಸಿರಿ

ಸರ್ವನಾಮ : ನಾಮಪದದ ಬದಲಾಗಿ ಉಪಯೋಗಿಸುವ ಶಬ್ದಗಳಿಗೆ 'ಸರ್ವನಾಮ' ಎನ್ನುವರು.

ಉದಾ. : ನಾನು, ನೀನು, ಅವನು, ಅವಳು, ಅದು ಇತ್ಯಾದಿ

೧) ಸರಳೆಯು ಶಾಲೆಗೆ ಹೋಗುತ್ತಾಳೆ. ಅವಳು ದಿನಾಲು ಅಭ್ಯಾಸ ಮಾಡುತ್ತಾಳೆ.

೨) ನೀನು ಏನು ಮಾಡುತ್ತಿರುವಿ ?

೩) ಆಕಳು ಹಾಲು ಕೊಡುತ್ತದೆ. ಅದು ಹುಲ್ಲು ತಿನ್ನುತ್ತದೆ.

೪) ರಮೇಶನು ಚಂಡಿನಾಟ ಆಡುತ್ತಾನೆ. ಅವನು ಸದೃಢ ಬಾಲಕನಾಗಿದ್ದಾನೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು