ಬಾಲಭಾರತಿ ನಾಲ್ಕನೆಯ ಇಯತ್ತೆ ಸ್ವಾಧ್ಯಾಯ ಮಾಲೆ ಪಾಠ 7. ಹಿತನುಡಿ Chapter 7. Hitanudi
೭ ಹಿತನುಡಿ
ಶಬ್ದಗಳ ಅರ್ಥ
ಮುದ್ದು – ಪ್ರೀತಿ; ಸ್ಮರಣೆ – ನೆನಪು;
ಬುದ್ಧಿ – ತಿಳುವಳಿಕೆ; ಚಿತ್ತ – ಮನಸ್ಸು; ಹಂಗು
–ಋಣ; ಪರರ – ಬೇರೆಯವರ
ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ಅ) ನೀವು ಕಲಿಯಬೇಕಾದದ್ದು ಏನು?
ಉತ್ತರ: ನೀವು
ಕಲಿಯಬೇಕಾದದ್ದು ಬುದ್ದಿಮಾತು.
ಆ) ಸವಿ ಮಾತು ಹೇಗೆ ಇರುತ್ತದೆ?
ಉತ್ತರ: ಮಾತು ಸಕ್ಕರೆಯ
ಕಡ್ಡಿಯಂಥ ಸವಿ ಇರುತ್ತದೆ.
ಇ) ಹೊತ್ತು ಮೀರಿ
ಎಲ್ಲಿಗೆ ಬರಬಾರದು?
ಉತ್ತರ: ಹೊತ್ತು ಮೀರಿ
ಶಾಲೆಗೆ ಎಂದಿಗೂ ಬರಲುಬಾರದು.
ಈ) ಎಂಥ ಮಾತು ಆಡಬಾರದು?
ಉತ್ತರ: ಚಿತ್ತ ಕೆಡಿಸುವಂತಹ
ಮಾತು ಆಡಬಾರದು.
ಉ) ಯಾರ ಕೃಪೆಯನ್ನು ಪಡೆಯಬೇಕು?
ಉತ್ತರ: ಜ್ಞಾನ ದಾತ ಗುರುವಿನ
ಕೃಪೆಯನ್ನು ಪಡೆಯಬೇಕು.
ಪ್ರಶ್ನೆ ೨) ಕೆಳಗಿನ ಕವಿತೆಯ ಸಾಲುಗಳನ್ನು ಪೂರ್ಣ
ಮಾಡಿರಿ.
ಪರರ ಒಡವೆಗೆಂದೂ ಆಶೆ ಪಡಲುಬಾರದು
ಪರರ ಹಂಗಿನಲ್ಲಿ ಎಂದೂ
ಬದುಕಬಾರದು
ನಿರುತ ದೇವ ಸ್ಮರಣೆಯನ್ನು
ಬಿಡಲೆಬಾರದು
ಗುರುವ ಜ್ಞಾನದಾತ ಅವರ ಕೃಪೆಯ ಪಡೆಯುವುದು
ಉಪಕ್ರಮ
ಕೆಳಗಿನ ಚಿತ್ರಗಳನ್ನು ನೋಡಿ ಐದು ಸಾಲು ಬರೆಯಿರಿ.
•
ನುಡಿಮುತ್ತು
•
·
ಮೊದಲು ನೀವು
ಒಳ್ಳೆಯವರಾಗದೆ ಇತರರನ್ನು ಸನ್ಮಾರ್ಗಕ್ಕೆ ತರಲು ಸಾಧ್ಯವಿಲ್ಲ
0 ಕಾಮೆಂಟ್‌ಗಳು
ಧನ್ಯವಾದಗಳು