ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಪಾಠ 8. ಆದರ್ಶ ರಾಜ 7ನೇ ಇಯತ್ತೆ 7th std Chapter 8. Adarsh Raj

 ಪಾಠ 8. ಆದರ್ಶ ರಾಜ 7ನೇ ಇಯತ್ತೆ 7th std Chapter 8. Adarsh Raj


  
೮ ಆದರ್ಶ ರಾಜ

ಪ್ರಶ್ನೆ ೧ ಪಾಠದಲ್ಲಿ ಹುಡುಕಿ ಬರೆಯಿರಿ.

೧ ಶಿವಾಜಿ ಮಹಾರಾಜರ ಆಯುಷ್ಯದಲ್ಲಿಯ ಗಂಡಾಂತರದ ಪ್ರಸಂಗಗಳು ಯಾವವು?

ಉತ್ತರ:- ಸ್ವರಾಜ್ಯ ಸ್ಥಾಪನೆಯ ಸಲುವಾಗಿ ಹೋರಾಡುವಾಗ ಮಹಾರಾಜರು ಅನೇಕ ಗಂಡಾಂತರಗಳನ್ನು ಎದುರಿಸಿದರು.ಅಫಜಲಖಾನನ ಭೇಟೀಯ ಪ್ರಸಂಗ,ಪನ್ಹಾಳಾದ ಮುತ್ತಿಗೆ,ಶಾಹಿಸ್ತಾಖಾನನಮೇಲಿನ ದಾಳಿ,ಆಗ್ರಾದಿಂದ ಮಾಡಿಕೊಂಡ ಬಿಡುಗಡೆ ಈ ಎಲ್ಲ ಪ್ರಸಂಗಗಳು ಬಹಳಷ್ಟು ಗಂಡಾಂತರದ್ದಾಗಿದ್ದವು.

೨ ) ಶಿವಾಜಿ ಮಹಾರಾಜರುಆಗ್ರಾದಿಂದ ಬಿಡುಗಡೆಯಾಗುವಾಗ ತನ್ನ ಜೀವವನ್ನು ಗಂಡಾಂತರದಲ್ಲಿ ಸಿಲುಕಿಸುವ ವ್ಯಕ್ತಿ ಯಾರು?

ಉತ್ತರ :- ಶಿವಾಜಿ ಮಹಾರಾಜರು ಆಗ್ರಾದಿಂದ ಬಿಡುಗಡೆಯಾಗುವಾಗ ತನ್ನ ಜೀವವನ್ನು ಗಂಡಾಂತರದಲ್ಲಿ  ಸಿಲುಕಿಸುವ ವ್ಯಕ್ತಿ ಹೀರೊಜಿ ಫರ್ಜಂದ ಮತ್ತು ಮದಾರಿ ಮೆಹೆತರ ಇವರು ಆಗಿದ್ದರು.

೩ ) ರೋಹಿಡಕೋರಾದ ದೇಶಮುಖನಿಗೆ ಶಿವಾಜಿಮಹಾರಾಜರು ಯಾವ ಎಚ್ಚರಿಕೆ ನೀಡಿದ್ದರು?

ಉತ್ತರ:- ಶಿವಾಜಿ ಮಹಾರಾಜರು ಶಾಹಿಸ್ತಾಖಾನನ ದಾಳಿಯ ಸಮಯದಲ್ಲಿ ಪ್ರಜೆಗಳಬಗೆಗಿನ ತಮ್ಮ ಕರ್ತವ್ಯವನ್ನು ನಿರ್ವಹಿಸುವಂತೆ ದೇಶಮುಖನಿಗೆ ಎಚ್ಚರಿಕೆ ನೀಡಿದರು.ಊರೂರು ಸಂಚರಿಸಿ ಘಟ್ಟದ ಕೆಳಗೆ ಎಲ್ಲೆಲ್ಲಿ ಸುರಕ್ಷಿತ ಸ್ಥಳವಿದೆಯೋ ಅಲ್ಲಲ್ಲಿ ಜನರನ್ನು ಕರೆದೋಯ್ಯಲು ಹೆಳಿದರು.

೪ ) ಶಿವಾಜಿ ಮಹಾರಾಜರು ಯಾವ ಪ್ರೇರಣೆಯು ಭಾವೀ ಪೀಳಿಗೆಗೆ ಆದರ್ಶವಾಗಲಿದೆ?

ಉತ್ತರ:- ಶಿವಾಜಿಮಹಾರಾಜರ ಸ್ವರಾಜ್ಯ ಕಾರ್ಯದ ಮತ್ತು ಅವರ ಸೂರಾಜ್ಯದಲ್ಲಿ ರೂಪಾಂತರ ಮಾಡುವ ಪ್ರೇರಣೆ ಭಾವೀ ಪಿಳಿಗೆಗೆ ಆದರ್ಶವಾಗಲಿದೆ.

ಪ್ರಶ್ನೆ ೨:- ಉತ್ತರ ಬರೆಯಿರಿ.

೧ ) ಪ್ರಜೆಗಳಿಗೆ ಹಾನಿಯಾಬಾರದೆಂದು ಶಿವರಾಯರು ಸೈನಿಕರಿಗೆ ಯಾವ ಎಚ್ಚರಿಕೆ ನೀಡಿದರು?

ಉತ್ತರ:- ಒಂದುವೇಳೆ ಪ್ರಜೆಗಳ ಕಾಳಜಿ ವಹಿಸದಿದ್ದರೆ ಮುಘಲ ಸೈನ್ಯಬಂದು ಜನರನ್ನು ಬಂಧಿಸಬಹುದು ಹಾಗೂ ಅದರ ಪಾಪವು ನಿಮಗೆ ತಗುಲುವದು ಎಂಬ ಕಠೋರ ಎಚ್ಚರಿಕೆ ನೀಡಿದರು.

೨ ) ಶಿವಾಜಿ ಮಹಾರಾಜರು ಪರಧರ್ಮ ಸಹಿಷ್ಣುತೆಯ ನೀತಿಯನ್ನು ಹೊಂದಿದ್ದರು ಎಂಬುದು ಯಾವ ಸಂಗತಿಯಿಂದ ತಿಳಿದುಬರುತ್ತದೆ?

೨ಉತ್ತರ:- ಶತ್ರುಗಳಿಂದ ಯಾವದೋಂದು ಪ್ರದೇಶವನ್ನು ಗೆದ್ದು ಕೊಂಡಾಗ ಅಲ್ಲಿಯ ಮುಸ್ಲಿಂ ಧರ್ಮಸ್ಥಳಗಳಿಗೆ ಇರುವ ಹಿಂದಿನ ಸವಲತ್ತುಗಳನ್ನು ಹಾಗೆಯೇ ಮುಂದುವರೆಸುತ್ತಿದ್ದರು.

೩) ಶಿವಾಜಿಮಹಾರಾಜರ ಸೈನ್ಯ ವಿಷಯದ ನೀತಿಯನ್ನು ಸ್ಪಷ್ಟಪಡಿಸಿರಿ?

ಉತ್ತರ:- ಮಹಾರಾಜರ ಸೈನ್ಯದ ಶಿಸ್ತು ಕಠೋರವಾಗಿತ್ತು. ಸೈನಿಕರಿಗೆ ನಿಯಮಿತ ವೇಳೆಗೆ ಸರಿಯಾಗಿ ವೇತನವನ್ನು ಕೊಡಬೇಕು ಎಂಬುದರ ಕಡೆಗೆ ವಿಶೇಷ ಗಮನ ಹರಿಸುತ್ತಿದ್ದರು.ಅವರು ಸೈನಿಕರಿಗೆ ನಗದು ರೂಪದಲ್ಲಿ ಸಂಬಳವನ್ನು ಕೊಡುವ ವ್ಯವಸ್ಥೆ ಮಾಡಿದರು.ಸೈನ್ಯವು ಯಾವಾಗ ಶತ್ರುಗಳ ಪ್ರದೇಶದಲ್ಲಿ ಹೋಗುತ್ತಿತ್ತು ಆಗ ಸೈನಿಕರು ತಮಗೆ ದೊರೆತಿದೆಲ್ಲವನ್ನು ಸರಕಾರಕ್ಕೆ ಒಪ್ಪಿಸುವಂತೆ ಸೈನಿಕರಿಗೆ ಎಚ್ಚರಿಕೆ ನೀಡಲಾಗಿತ್ತು.ಯುದ್ದದಲ್ಲಿ ವೀರಮರಣವನ್ನು ಹೊಂದಿದ ಸೈನಿಕರ ಕುಟುಂಬದವರ ಉದರ ನಿರ್ವಹದ ಕಾಳಜಿಯನ್ನು ಅವರು ವಹಿಸುತ್ತಿದ್ದರು. ಗಾಯಗೊಂಡ ಸೈನಿಕರ ಕಾಳಜಿಯನ್ನೂ ಅವರು ವಹಿಸುತ್ತಿದ್ದರು.ಯುದ್ದದಲಿ ಶರಣಾತರಾದ ಸೈನಿಕರನ್ನು ಅಥವಾ ಸೆರೆಸಿಕ್ಕ ಸೈನಿಕರನ್ನು ಪಳ್ಳೆಯರಿತಿಯಿಂದ ನೋಡಿಕೊಳ್ಳಲಾಗುತ್ತಿತ್ತು.

ಪ್ರಶ್ನೆ೩ :- ಒಂದು ಶಬ್ದದಲ್ಲಿ ಉತ್ತರ ಬರೆಯಿರಿ.

೧ ) ಸ್ವರಾಜ್ಯದ ನೌಕಾಪಡೆಯಲ್ಲಿ ಮಹತ್ವದ ಅಧಿಕಾರಿ ----- ದೌಲತಖಾನ

೨ ) ಶಿವಾಜಿಮಹಾರಾಜರ ಮೇಲೆ ಕಾವ್ಯವನ್ನು ರಚಿಸಿದ ತಮಿಳು ಕವಿ --- ಸುಬ್ರಮಣ್ಯಂ ಭಾರತಿ.

೩ )ಬುಂದೇಲಖಂಡದಲ್ಲಿ ಸ್ವತಂತ್ರ ರಾಜ್ಯವನ್ನು ನಿರ್ಮಿಸಿದವ ಛತ್ರಸಾಲ ಮಹಾತ್ಮಾ

೪ )ಲಾವಣಿಯ ಮುಖಾಂತರ ಶಿವಾಜಿ ಮಹಾರಾಜರ ಮಾಹಿತಿಯನ್ನು ಹೇಳಿದವರು ಜ್ಯೋತಿರಾವ ಫುಲೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು