ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಪಾಠ ೪ ಶಿವಪೂರ್ವಕಾಲದ ಮಹಾರಾಷ್ಟ್ರ 7ನೇ ಇಯತ್ತೆ 7th Std History Chpater 4 Shivapurv Kalada Maharashtra

 

ಪಾಠ ೪ ಶಿವಪೂರ್ವಕಾಲದ ಮಹಾರಾಷ್ಟ್ರ



ಪ್ರಶ್ನೆ೧ :- ಕೆಳಗಿನ ಕೋಷ್ಟಕವನ್ನು ಪೂರ್ಣಮಾಡಿರಿ.

 

ಊರು(ಮೌಜಾ)

ಕಸಬಾ

ಪರಗಣಾ

ಎಂದರೇನು

ಕಸಬಾಕ್ಕಿಂತ ಸಣ್ಣ ಊರು

ದೊಡ್ಡ ಹಳ್ಳಿ

ಅನೇಕ ಊರುಗಳು ಕೋಡಿ ಪರಗಣಾ.

ಪದಾಧಿಕಾರಿಗಳು

ಪಾಟೀಲ, ಕುಲಕರ್ಣಿ

ಶೇಟೆ, ಮಹಾಜನ

ದೇಶಮುಖ,ದೇಶಪಾಂಡೆ

 

ಉದಾಹರಣೆ

ಶೀರೂರ

ಇಂದಾಪೂರ

ಪುಣೆ, ಚಾಕಣ

  ಪ್ರಶ್ನೆ೨:- ಎಂದರೇನು?

೧) ಬುದ್ರುಕ್

ಉತ್ತರ:- ಮೂಲ ಊರಿಗೆ ಬುದ್ರುಕ್ ಅನ್ನುತ್ತಿದ್ದರು.

೨) ಬಲೂತೆ

ಉತ್ತರ:- ಊರಲ್ಲಿ ಕೆಲಸಗಾರರು ಸಲ್ಲಿಸುವ ಸೇವೆಗಾಗಿ ಭೂಹಿಡುವಳಿದಾರರಿಂದ ಅವರಿಗೆ ಕೃಷಿ ಉತ್ಪನ್ನದ ಸ್ವಲ್ಪ ಭಾಗವು ದೊರೆಯುತ್ತಿತ್ತು.ಅದಕ್ಕೆ ಬಲೂತೆ ಎನ್ನುತ್ತಿದ್ದರು.

೩) ವತನ

ಉತ್ತರ:- ಮಹಾರಾಷ್ಟ್ರದಲ್ಲಿ ವಂಶಪರಂಪರೆಯಿಂದ ಮತ್ತು ಶಾಶ್ವತರೂಪದಲ್ಲಿ ಉಪಯೋಗಿಸಲಾಗುವ ಕಂದಾಯಮುಕ್ತ ಭೂಮಿ ಎಂದರೆ ವತನ.

ಪ್ರಶ್ನೆ೩:-ಹುಡುಕಿ ಬರೆಯಿರಿ.

೧) ಕೊಂಕಣದ ಕರಾವಳಿ ತೀರದಲ್ಲಿ ಆಫ್ರಿಕೆಯಿಂದ ಬಂದ ಜನರು - ಸಿದ್ದಿ

೨) “ಅಮೃತಾನುಭವ ಗ್ರಂಥದ ಲೇಖಕರು-ಸಂತ ಜ್ಞಾನೇಶ್ವರ

೩) ಸಂತ ತುಕಾರಾಮರ ಊರು ದೇಹು

೪) ಭಾರೂಡದ ರಚನಕಾರರು -ಸಂತ ಏಕನಾಥ

೫) ಬಲೋಪಾಸನೆಯ ಮಹತ್ವವನ್ನು ತಿಳಿಸಿದವರು ರಾಮದಾಸ ಸ್ವಾಮಿ

೬) ಸ್ತ್ರೀ ಸಂತರ ಹೆಸರುಗಳು ಬರೆಯಿರಿ- ಸಂತ ಸೊಯರಾಬಾಯಿ, ಸಂತ ನಿರ್ಮಳಾಬಾಯಿ, ಸಂತ ಮುಕ್ತಾಬಾಯಿ, ಸಂತ ಜನಾಬಾಯಿ, ಸಂತ ಕನ್ಹೊಪಾತ್ರಾ, ಸಂತ ಬಹೀಣಾಬಾಯಿ ಸಿರೂರಕರ.

ಪ್ರಶ್ನೆ೪:- ನಿಮ್ಮ ಶಬ್ದಗಳಲ್ಲಿ ಮಾಹಿತಿ ಮತ್ತು ಕಾರ್ಯಗಳನ್ನು ಬರೆಯಿರಿ.

೧) ಸಂತ ನಾಮದೇವ

ಉತ್ತರ:- ಇವರು ವಾರಕರಿ ಸಂಪ್ರದಾಯದಲ್ಲಿಯ ಒಬ್ಬ ಶ್ರೇಷ್ಠ ಸಂತರಾಗಿದ್ದರು. ಅವರು ಕುಶಲ ಸಂಘಟಿಕರಾಗಿದ್ದು ಉತ್ತಮ ಕೀರ್ತನಕಾರರೂ ಆಗಿದ್ದರು. ಕೀರ್ತನೆಯ ಮೂಲಕ ಅವರು ಎಲ್ಲ ಜಾತಿ ಪಂಗಡಗಳಲ್ಲಿಯ ಸ್ತ್ರೀ- ಪುರುಷರನ್ನು ಒಂದುಗೂಡಿಸಿ ಸಮತೆಯ ಭಾವನೆಯನ್ನು ಜಾಗೃತಗೊಳಿಸಿದರು. ಅನೇಕ ಸಂತರು ಹಾಗೂ ಸರ್ವಸಾಮಾನ್ಯ ಜನರ ಮೇಲೆ ಅವರ ಉಪದೇಶಗಳ ಪ್ರಭಾವವುಂಟಾಯಿತು. ಅವರು ಪಂಢರಪೂರದಲ್ಲಿ ವಿಟ್ಟಲ ಮಂದಿರದ ಮಹಾದ್ವಾರದಮುಂದೆ ಸಂತ ಚೋಖಾಮೇಳಾ ಇವರ ಸಮಾಧಿಯನ್ನು ನಿರ್ಮಿಸಿದರು. ಅವರ ಕಾರ್ಯವು ಅವಿಸ್ಮರಣೀಯವಾಗಿದೆ.

೨) ಸಂತ ಜ್ಞಾನೇಶ್ವರ

ಉತ್ತರ:- ಇವರು ವಾರಕರಿ ಸಂಪ್ರದಾಯದಲ್ಲಿಯ ಒಬ್ಬ ವಿಖ್ಯಾತ ಸಂತರಾಗಿದ್ದರು.ಅವರು ಭಗವದ್ಗೀತಾಈ ಸಂಸ್ಕೃತ ಗ್ರಂಥದ ಅರ್ಥವನ್ನು ಮರಾಠಿಯಲ್ಲಿ ಸ್ಪಷ್ಟಪಡಿಸುವ ಭಾವಾರ್ಥದೀಪಿಕಾಅರ್ಥಾತ ಜ್ಞಾನೇಶ್ವರಿಎಂಬ ಗ್ರಂಥವನ್ನು ರಚಿಸಿದರು. ಅದರಂತೆಯೇ ಅವರು ಅಮೃತಾನುಭವಎಂಬ ಗ್ರಂಥವನ್ನು ರಚಿಸಿದರು. ಅವರು ತಮ್ಮ ಗ್ರಂಥಗಳಲ್ಲಿ ಮತ್ತು ಅಭಂಗಗಳಲ್ಲಿ ಭಕ್ತಿಮಾರ್ಗದ ಮಹತ್ವವನ್ನು ವಿವರಿಸಿದ್ದಾರೆ.ಜನಸಾಮಾನ್ಯರಿಗೆ ಆಚರಿಸಲು ಸುಲಭವಾದ ಆಚಾರಧರ್ಮವನ್ನು ಅವರು ತಿಳಿಸಿದರು.ಅವರು ವಾರಕರಿ ಸಂಪ್ರದಾಯಕ್ಕೆ ಧರ್ಮದ ಪ್ರತಿಷ್ಠೆಯನ್ನು ದೊರಕಿಸಿಕೊಟ್ಟರು.ಅತ್ಯಂತ ಪ್ರತಿಕೋಲಪರಿಸ್ಥಿತಿಯಲ್ಲಿ ಜೀವನವನ್ನು ಸಾಗಿಸುವ ಪ್ರಸಂಗ ಬಂದರೂ ಅವರು ತಮ್ಮ ಮನಸ್ಸಿನ ಸಮತೋಲನವನ್ನು ಕಳೆದುಕೊಳ್ಳಲಿಲ್ಲ. ಹಾಗೂ ಯಾರನ್ನೂ ದ್ವೇಷಿಸಲೂ ಇಲ್ಲಾ. ಜ್ಞಾನೇಶ್ವರೀಯಲ್ಲಿಯ ಪಸಾಯದಾನವೂಉದಾತ್ತವಾದ ಸಂಸ್ಕಾರ ಮಾಡುವಂತಹದಾಗಿದೆ.

೩) ಸಂತ ಏಕನಾಥ

ಉತ್ತರ:- ಇವರು ಮಹಾರಾಷ್ಟ್ರದ ಭಕ್ತಿ ಚಳುವಳಿಯಲ್ಲಿಯ ಮಹಾನ ಸಂತರಾಗಿದ್ದರು.ಅವರ ಸಾಹಿತ್ಯವು ವಿಪುಲವಾಗಿದ್ದು ಅದು ವಿವಿಧ ಪ್ರಕಾರದ್ದಾಗಿದೆ.ಅದರಲ್ಲಿ ಅಭಂಗ,ಗೌಳನಿ,ಭಾರೂಡ ಮುಂತಾದವುಗಳ ಸಮಾವೇಶವಾಗುತ್ತದೆ.ಅವರು ಭಾಗವತ ಧರ್ಮದ ರಚನೆಯನ್ನು ಸುಲಭವಾಗಿ ಮತ್ತು ಸವಿಸ್ತಾರವಾಗಿ ಮಾಡಿದ್ದಾರೆ. ಅವರು ನಿಜವಾದ ಅರ್ಥದಲ್ಲಿ ಜನತೆಯ ಶಿಕ್ಷಕರಾಗಿದ್ದರು.ನಮ್ಮ ಮರಾಠಿ ಭಾಷೆಯು ಯಾವುದೇ ಭಾಷೆಗಿಂತ ಕಡಿಮೆಯಿಲ್ಲ ಎಂದು ಅವರು ತಿಳಿಯುತಿದ್ದರು.

೪) ಸಂತ ತುಕಾರಾಮ

ಉತ್ತರ:-ಇವರ ಅಭಂಗಗಳು ಶ್ರೇಷ್ಠ ಕಾವ್ಯದ ದರ್ಜೆ ಲಭಿಸಿದೆ.ಸಂತ ತುಕಾರಾಮರ ಗಾಥಾಇದು ಮರಾಠಿ ಭಾಷೆಯ ಅಮೂಲ್ಯ ಸಂಪತ್ತಾಗಿದೆ.ಅವರು ದುಖಿಃತರಲ್ಲಿ,ಪೀಡಿತರಲ್ಲಿ ದೇವತ್ವವನ್ನು ಕಾಣಬೆಕೆಂದು ಹೇಳುವಾಗ ಹಿಗೆ ಹೇಳುತ್ತಾರೆ,’ಜೆಕಾ ರಂಜಲೆ ಗಾಂಜಲೆ,ತಾಚಿ ಮ್ಹಣೆ ಜೋ ಆಪುಲೆ,ತೋಚಿ ಸಾಧು ಓಳಖಾವಾ,ದೇವ ತೇಥೇಚ ಜಾಣಾವಾಅವರ ಈ ದೃಷ್ಠಿಕೋನದಿಂದಲೇ ಅವರು ಜನರಿಗೆ ನೀಡಿದ ಸಾಲದ ಕಾಗದ ಪತ್ರವನ್ನು ಇಂದ್ರಾಯಣಿ ನದಿಯ ಮಡುವಿನಲ್ಲಿ ಮುಳುಗಿಸಿ ಅನೇಕ ಕುಂಟುಂಬಗಳನ್ನು ಸಾಲಮುಕ್ತರನ್ನಾಗಿ ಮಾಡಿದರು. ಅವರು ಸಮಾಜದಲ್ಲಿಯ ಡಾಂಬಿಕತೆ ಮತ್ತು ಅಂಧರ್ಶರದ್ಧೆಗಳನ್ನು ಕಟುವಾಗಿ ಟೀಕಿಸಿದರು.ಭಕ್ತಿಯ ಜೊತೆ ನೀತಿಗೆ ಅವರು ಮಹತ್ವ ನೀಡಿದರು.ತುಕಾರಾಮರೂ ಮಾಡುತಿದ್ದ ಜನಜಾಗೃತಿಯ ಕಾರ್ಯವನ್ನು ವಿರೋಧಿಸಿದರು.ಅವರ ಅಭಂಗಗಳ ಪುಸ್ತಕವನ್ನು ಇಂದ್ರಯಾಣಿ ನದಿಯಲ್ಲಿ ಮುಳುಗಿಸಿದರು.ಇವರೆಲ್ಲರ ವಿರೊದ್ಧವನ್ನು ತುಕಾರಾಮರೂ ಧೈರ್ಯದಿಂದ ಏದುರಿಸಿದರು.

ಪ್ರಶ್ನೆ೫:- ಬರಗಾಲವು ಜನರಿಗೆ ಬಹುದೊಡ್ಡ ಸಂಕಟವೆಂದು ಏಕೆ ಅನಿಸುತಿತ್ತು?

ಉತ್ತರ:- ಆಗಿನ ಕಾಲದಲ್ಲಿ ಒಕ್ಕಲುತನ ಮಳೆಯಮೇಲೆ ಅವಲಂಬಿಸಿರುತಿತ್ತು.ಮಳೆ ಬರದಿದ್ದರೆ ಬೇಳೆ ಬರುತ್ತಿರಲಿಲ್ಲ.ನಂತರ ಅನ್ನಧಾನ್ಯದ ಬೆಲೆ ಹೆಚ್ಚಾಗುತ್ತಿದ್ದವು.ಜನರಿಗೆ ಅನ್ನಧಾನ್ಯದೊರೆಯುವದು ಕಷ್ಟವಾಗುತ್ತಿತ್ತು. ದನಗಳಿಗೆ ಮೇವು ಕುಡಿಯಲು ನೀರು ದೊರೆಯದಂತಾಗಿತ್ತಿತ್ತು.ಜನರಿಗೆ ಊರಿನಲ್ಲಿ ಇರುವದು ಕಷ್ಟವಾಗುತ್ತಿತ್ತು.ಆದ್ದರಿಂದ ಜನರು ಹೊಟ್ಟೆಪಾಡಿಗಾಗಿ ಹೊರಹೊಗಬೇಕಾಗುತ್ತಿತ್ತು.ಆದ್ದರಿಂದ ಬರಗಾಲವು ಜನರಿಗೆ ಬಹುದೊಡ್ಡ ಸಂಕಟವೆಂದು ಅನಿಸುತ್ತಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು