ಬಾಲಭಾರತಿ ನಾಲ್ಕನೆಯ ಇಯತ್ತೆ ಪಾಠ. ೮ ಮಾ. ಶುಭಾಷ ಕಣ್ಸೆ Chapter 8. SUBHASH KANSE
·
೮ ಮಾ. ಶುಭಾಷರಾವ ಕಣ್ಸೆ
ಶಬ್ದಗಳ ಅರ್ಥ
ಕಿರುಚು - ಚೀರು, ಕೂಗು : ತಕ್ಷಣ - ಕೂಡಲೇ; ಅಪಾಯ - ತೊಂದರೆ; ಧುಮುಕು - ಮೇಲಿನಿಂದ ಕೆಳಗೆ ಜಿಗಿಯುವುದು; ಪ್ರಶಂಸೆ - ಹೊಗಳಿಕೆ; ಸಾಹಸ - ಧೈರ್ಯ
ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಒಂದೇ ವಾಕ್ಯದಲ್ಲಿ
ಉತ್ತರ ಬರೆಯಿರಿ.
ಅ) ಸುಭಾಷನು ಯಾವ ಶಾಲೆಯಲ್ಲಿ ಓದುತ್ತಿದ್ದನು?
ಉತ್ತರ: ಸುಭಾಷನು ಸಾತಾರಾ ಜಿಲ್ಲೆಯ ವಾಯಿ ತಾಲೂಕಿನ ಕಿಸಾನ್ ವೀರ್ ಮಹಾವಿದ್ಯಾಲಯದಲ್ಲಿ ಓದುತ್ತಿದ್ದನು
ಆ) ಸುಭಾಷನ ತಂದೆ-ತಾಯಿಯ ಹೆಸರು ಏನಿತ್ತು?
ಉತ್ತರ: ಸುಭಾಷನ
ತಂದೆ-ತಾಯಿಯ ಹೆಸರು ಶ್ರೀ ಚಿಟ್ಟಾಸರಾವ ಕಣ್ಸೆ
ಮತ್ತು ಶ್ರೀಮತಿ ಅಂಜಿರಾ ಚಿಟ್ಟಾಸರಾವ ಕಣ್ಸೆ ಇತ್ತು .
ಇ) ಬಾವಿ ಎಲ್ಲಿ ಇತ್ತು?
ಉತ್ತರ: ಶ್ರೀ ಚಿಟ್ಟಾಸರಾವ
ಕಣ್ಸೆಯವರ ಮನೆಯ ಆವರಣದಲ್ಲಿ ನೀರಿನ ಬಾವಿ ಇತ್ತು.
ಈ) ಬಾವಿಯ ಸುತ್ತ ಜನರು ಏಕೆ ನೆರೆದಿದ್ದರು?
ಉತ್ತರ: ಕಣ್ಸೆಯವರ
ಬಾವಿಯಲ್ಲಿ ವಿಕ್ರಾಂತ ಎಂಬ ಮಗು ನಾಯಿಗಳಿಂದ ಅಂಜುತ್ತಾ ಬಿದ್ದು ಬಿಟ್ಟಿತು. ಆದನು ನೋದನು ಜನರು
ನೆರೆದಿದ್ದರು.
ಉ) ಸುಭಾಷನು ತಕ್ಷಣ ಏನು ತಂದನು?
ಉತ್ತರ: ಶುಭಾಷನು ತಕ್ಷಣ
ಮೇನೆಗೆ ಓಡಿ ಒಂದು ಹಗ್ಗ ತಂದನು.
ಊ) ಸುಭಾಷನಿಗೆ ಸಾಹಸಿ ಪ್ರಶಸ್ತಿಯನ್ನು ಯಾರು ಕೊಟ್ಟರು?
ಉತ್ತರ: ಭಾರತದ ಮಕ್ಕಳ
ಕಲ್ಯಾಣ ಮಂಡಳಿಯವರು ಶುಭಾಷನ ಸಮಯ ಪ್ರಜ್ಞೆ, ಸಾಹಸವನ್ನು ಮೆಚ್ಚಿ ‘ಸಾಹಸೀ ಬಾಲಕ ಪ್ರಶಸ್ತಿ’ಯನ್ನು ಕೊಟ್ಟರು.
ಪ್ರಶ್ನೆ ೨) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ಅ) ಮಗು ಬಾವಿಯಲ್ಲಿ ಬೀಳಲು ಕಾರಣವೇನು?
ಉತ್ತರ: ಚಿಟ್ಟಾಸರಾವ
ಕಣ್ಸೆಯವರ ನೆರೆಮನೆಯಲ್ಲಿದ್ದ ವಿಕ್ರಾಂತ ಎಂಬ ಮಗು ಆಟವಾಡುತ್ತಿತ್ತು. ಕೆಲವು ಬೀದಿ ನಾಯಿಗಳು
ಕಚ್ಚಾಡುತ್ತಾ ಮನೆಯ ಅವರಣದೊಳಕ್ಕೆ ಬಂದವು. ಮಗುವಿನತ್ತ ಬರುವ ನಾಯಿಗಳನ್ನು ಕಂಡು ವಿಕ್ರಾಂತ
ಭಯದಿಂದ ಕಿರುಚುತ್ತಾ ಹಿಂದೆ ಸರಿದನು. ಹಿಂದೆ ಎತ್ತರವಿಲ್ಲದ ಬಾವಿ ಇತ್ತು ಅದನ್ನು ಎಡವಿಕೊಂಡು
ಮಗು ಬಾವಿಯಲ್ಲಿ ಬಿದ್ದು ಬಿಟ್ಟಿತು.
ಆ) ಸುಭಾಷನು ಮಗುವನ್ನು ಹೇಗೆ ಕಾಪಾಡಿದನು?
ಉತ್ತರ: ವಿಕ್ರಾಂತನಿಗೆ
ಮುಳುಗಿತ್ತಿರುವಾಗ ನೋಡುತ್ತಿದ್ದ ಜನರು ಅವನನ್ನು ರಕ್ಷಿಸಬೇಕು ಎಂದು ಯೋಚಿಸುತ್ತ ನಿಂತಿದ್ದರು.
ಯೋಚಿಸುತ್ತ ನಿಂತರೆ ಮಗು ಮೇಲಕ್ಕೆ ಬಂದಿತೇ ? ಜನರ ಮಧ್ಯದಲ್ಲಿದ್ದ ಶುಭಾಷ ತಕ್ಷಣವೇ ಮನೆಗೆ ಓಡಿದನು. ಹಗ್ಗ ತಂದು ಒಂದು ತುದಿ
ರಾಟೆಗೆ ಕಟ್ಟಿದನು. ಇನ್ನೊಂದು ತುದಿಯನ್ನು ಬಾವಿಗೆ ಇಳಿಬಿಟ್ಟನು. ಇಳಿಬಿಟ್ಟ ಹಗ್ಗವನ್ನು
ಹಿಡಿದು ತಾನೇ ಬಾವಿಗೆ ಇಳಿದನು. ಆದರೆ ಹಗ್ಗ ನೀರನ್ನು ಮುಟ್ಟುವಷ್ಟು ಉದ್ದವಿರಲಿಲ್ಲ. ಆದರೂ
ಹದಿನೈದು ಅಡಿಯಷ್ಟು ಆಳದಲ್ಲಿ ನೀರಿಗೆ ಧುಮುಕಿದನು. ಮುಳುಗುತ್ತಿದ್ದ ಮಗುವನ್ನು ಹಿಡಿದು
ಮೇಲೆತ್ತಿದನು. ಕೈ ಸೋಲುತ್ತಿದ್ದರೂ ಮಗು ಒಂದು ಕೈಯಿಂದ ಮತ್ತು ಇನ್ನೊಂದು ಕೈಯಿಂದ ಗೋಡೆಯನ್ನು
ಹಿಡಿದು ಕಷ್ಟದಿಂದ ಮೇಲಿನಿಂದ ಜನರು ಇಳಿಬಿಟ್ಟ ಕಾಂಗಡಿಯಲ್ಲಿ ಮಗುವಿಗೆ ಕೂಡ್ರಿಸಿ ಆತನ ಜೀವ
ಉಳಿಸಿದನು.
ಇ) ನೆರೆದ ಜನರು ಯಾವ ರೀತಿ ಸುಭಾಷನನ್ನು ಹೊಗಳಿದರು?
ಉತ್ತರ: ತನ್ನ ಪ್ರಾಣಕ್ಕೆ
ಅಪಾಯವಾಗುವುದನ್ನು ಲೆಕ್ಕಿಸದೆ ಆಳವಾದ ನೀರಿನಲ್ಲಿ ಧುಮುಕಿ ತಮ್ಮ ಮಗುವನ್ನು ಬದುಕಿಸಿದ
ಶುಭಾಷನನ್ನು ಮಗುವಿನ ತಾಯಿ-ತಂದೆ ಬಾಯ್ತುಂಬ ಹೊಗಳಿದರು. “ಬಹಳ ಕಾಲ ಸುಖವಾಗಿ ಬಾಳು” ಎಂದು
ಆತನನ್ನು ಹರಿಸಿದರು. ನೆರೆದಿದ್ದ ಜನ ಶುಭಾಷನ ಸಮಯಪ್ರಜ್ಞೆ, ಚಟುವಟಿಕೆ, ಜಾಣತನ ಹಾಗೂ ಧೈರ್ಯ ಸಾಹಸಗಳನ್ನು
ಮೆಚ್ಚಿದರು. ಪತ್ರಿಕೆಗಳು ಅವನ ಸಾಹಸವನ್ನು ಪ್ರಶಂಸಿಸಿ ಬರೆದವು. ಭಾರತದ ಮಕ್ಕಳ ಕಲ್ಯಾಣ
ಮಂಡಳಿಯವರು ಶುಭಾಷನಿಗೆ “ಸಾಹಸೀ ಬಾಲಕ ಪ್ರಶಸ್ತಿ” ನೀಡಿ ಗೌರವಿಸಿದರು.
ಪ್ರಶ್ನೆ ೩) ಬಿಟ್ಟ ಸ್ಥಳ ತುಂಬಿರಿ.
3) ವಾಯಿ ಎಂಬುದು ತಾಲೂಕು ಕೇಂದ್ರವಿದೆ.
3) ವಿಕ್ರಾಂತ ಮನೆಯ ಆವರಣದಲ್ಲಿ ಆಟವಾಡುತ್ತಿದ್ದನು.
ಇ) ಹಗ್ಗಗಳಿಗೆ ಕಾಂಗಡಿಯನ್ನು ಕಟ್ಟಿ ಬಾವಿಯಲ್ಲಿ
ಇಳಿಸಿದರು.
ಈ) ಪತ್ರಿಕೆಗಳು ಸುಭಾಷನ ಸಾಹಸವನ್ನು ಪ್ರಶಂಸಿಸಿ ಬರೆದವು.
ಪ್ರಶ್ನೆ ೪) ಕೆಳಗಿನ ಹಸ್ತಲಿಖಿತ ಭಾಗವನ್ನು ಓದಿರಿ.
ಪ್ರಶ್ನೆ ೫) ಕೆಳಗಿನ ವಾಕ್ಯಗಳಲ್ಲಿ ನಾಮಪದ ಮತ್ತು
ಸರ್ವನಾಮಗಳನ್ನು ಗುರುತಿಸಿರಿ.
ಅ) ಸುಭಾಷನು ಮಗುವಿನ ಪ್ರಾಣವನ್ನು ಕಾಪಾಡಿದನು. =ಶುಭಾಷ – ನಾಮಪದ
ಆ) ಅವನು ದಿನಾಲು ತಪ್ಪದೇ ವ್ಯಾಯಾಮ ಮಾಡುವನು. =ಅವನು –
ಸರ್ವನಾಮ
ಇ) ಸ್ವಾತಂತ್ರ್ಯ ಹಬ್ಬದ ದಿನ ನಮಗೆಲ್ಲ ಸಡಗರವೇ ಸಡಗರ. = ನಮಗೆ –ಸರ್ವನಾಮ
ಈ) ವನಭೋಜನಕ್ಕೆ ಹೋದಾಗ ಅವರು ಸಂತಸದಿ ನಲಿದರು. = ಅವರು – ಸರ್ವನಾಮ
ಉ) ಸೀತೆಯು ಕವನ ಬರೆದಳು. =
ಸೀತೆ – ನಾಮಪದ
ಉಪಕ್ರಮ
ವೃತ್ತಪತ್ರಿಕೆಯಲ್ಲಿ ಬರುವ ಬೇರೆ ಬೇರೆ ಸಾಹಸದ ಕಥೆಗಳನ್ನು
ಸಂಗ್ರಹಿಸಿರಿ.
ಗಗನಯಾತ್ರಿ ಕಲ್ಪನಾ ಚಾವ್ಹಲಾ ಮತ್ತು ಪರ್ವತಾರೋಹಿ ತೇನಸಿಂಗ ಇವರ
ಸಾಹಸಗಳ ಬಗ್ಗೆ ಶಿಕ್ಷಕರಿಂದ / ಪಾಲಕರಿಂದ ತಿಳಿದುಕೊಳ್ಳಿರಿ.
• ನುಡಿಮುತ್ತು •
- Ø ಆನಂದದಿಂದ ಬಾಳು. ಆದರೆ ಸಾಹಸಿಯಾಗಿ ಸಾವನ್ನೆದುರಿಸು
- Ø ಧೈರ್ಯಂ ಸರ್ವತ್ರ ಸಾಧನಂ
ಗಮನಿಸಿರಿ
ವಿಶೇಷಣ : ಯಾವುದೊಂದು ವಸ್ತು, ವ್ಯಕ್ತಿ ಮೊದಲಾದವುಗಳ ಗುಣ, ಬಣ್ಣ, ಗಾತ್ರ, ಆಕಾರ ಇವುಗಳನ್ನು
ವರ್ಣಿಸುವ ಪದಗಳಿಗೆ 'ವಿಶೇಷಣ' ಎನ್ನುವರು.
ಒಳ್ಳೆಯ, ಕೆಂಪು, ದೊಡ್ಡ, ಅಗಲ,
ಉದ್ದ ಇತ್ಯಾದಿ
ಉದಾ. :
೧) ಸಚಿನನು ಒಳ್ಳೆಯ ಹುಡುಗನಿರುವನು.
೨) ಗಿಳಿಯ ಚುಂಚು ಕೆಂಪಾಗಿದೆ.
೩) ಆಲದ ಮರವು ಬಹಳ ದೊಡ್ಡದಾಗಿದೆ.
೪) ಆಕಳ ಬಾಲ ಬಹಳ ಉದ್ದ ಇರುವದು.
೫) ಆ ಕೆರೆಯು ಅಗಲವಾಗಿದೆ.
0 ಕಾಮೆಂಟ್‌ಗಳು
ಧನ್ಯವಾದಗಳು