ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಬಾಲಭಾರತಿ ೪ ನೇ ಇಯತ್ತೆ ಪಾಠ 9. ದೀಪಗಳ ಮೇಲಾಟ Chapter 9 DIPAGALA MELAT

 ಬಾಲಭಾರತಿ ೪ ನೇ ಇಯತ್ತೆ ಪಾಠ 9. ದೀಪಗಳ ಮೇಲಾಟ Chapter 9 DIPAGALA MELAT

 


೯. ದೀಪಗಳ ಮೇಲಾಟ

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ಯಾವ ದೀಪದ ಬೆಳಕು ಝಗ-ಝಗಿಸುತ್ತದೆ ?

ಉತ್ತರ: ವಿದ್ಯುತ್ ದೀಪದ ಬೆಳಕು ಝಗ-ಝಗಿಸುತ್ತದೆ

ಆ) ಮೇಣಬತ್ತಿಯು ಎಲ್ಲಿಯವರೆಗೆ ಬೆಳಕು ಕೊಡುವುದು ?

ಉತ್ತರ: ಮೇಣಬತ್ತಿಯ ಬದುಕು ಅರಗಳಿಗೆಯವಿದ್ದರೂ ಅದು ತನ್ನ ಕೊನೆಯ ಉಸಿರಿನವರೆಗೆ ಬೆಳಕು ಕೊಡುವುದು.

ಇ) ವಿದ್ಯುತ್ ದೀಪ ಯಾವಾಗ ಕೈಕೊಡುತ್ತದೆ ?

ಉತ್ತರ: ವಿದ್ಯುತ್ ದೀಪ ಯಾವಾಗ ಕೈಕೊಡುತ್ತದೆ ಎಂಬುದು ಒಂದು ಶಂಕೆಯೇ ಆಗಿದೆ. ಅದರ ಭರವಸೆ ಹೇಳಲು ಬರುವುದಿಲ್ಲ.

ಈ) ಯಾವ ದೀಪವು ಬಡವರ ಬಂಧುವಾಗಿದೆ ?

ಉತ್ತರ: ಚಿಮಣಿ ದೀಪವು ಬಡವರ ಬಂಧುವಾಗಿದೆ

ಉ) ನಾವು ಯಾವ ಗುಣವನ್ನು ಬೆಳೆಸಿಕೊಳ್ಳಬೇಕೆಂದು ಸೂರ್ಯನು ಹೇಳುವನು ?

ಉತ್ತರ: ನಮ್ಮನ್ನು ನಾವೇ ಹೊಗಳುವುದಕ್ಕಿಂತ ಇತರರು ನಮ್ಮನ್ನು ಹೊಗಳುವಂತಾಗಬೇಕು ಅಂತಹ ಗುಣವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಸೂರ್ಯನು ಎಲ್ಲ ದೀಪಗಳಿಗೆ ಹೇಳುವನು.

ಪ್ರಶ್ನೆ ೨) ಬಿಟ್ಟ ಸ್ಥಳ ತುಂಬಿ ವಾಕ್ಯ ಪೂರ್ಣಗೊಳಿಸಿರಿ.

ಅ) ಮೇಣಬತ್ತಿಗಳು ಶಿಸ್ತಿನ ಶಿಪಾಯಿಗಳಂತೆ ಸಾಲಾಗಿ ನಿಂತಿದ್ದವು.

3) ಅಧಿಕಾರ ಬಂದಾಗ ಅಹಂಕಾರ ಬಂದಂತೆ ಅರಚಿಕೊಳ್ಳಬೇಡ.

ಇ) 'ಅಲ್ಪರ ಸಂಗ ಅಭಿಮಾನ ಭಂಗ'

ಈ) ನಾನು ಏಕಾಗ್ರತೆಯಿಂದ ದೇವರ ಸೇವೆ ಮಾಡುವೆನು.

ಉ) ನಾನು ಸಮಯ ಬಂದಾಗ ಸಂಜೀವಿನಿ.

ಪ್ರಶ್ನೆ ೩) ಹೊಂದಿಸಿ ಬರೆಯಿರಿ.

ಅ) ವಿದ್ಯುತ್ ದೀಪ                     ೧) ಅರಗಳಿಗೆಯ ಬದುಕು            

ಆ) ಬ್ಯಾಟರಿ                            ೨) ಸ್ವಯಂ ಪ್ರಕಾಶಿತ

ಇ) ಚಿಮಣಿ                             ೩) ಝಗ-ಝಗಿಸುವ ಬೆಳಕು

ಈ) ಮೇಣಬತ್ತಿ                        ೪) ಅಳಿಲು ಸೇವೆ

ಉ) ಸೂರ್ಯ                          ೫) ದೀನರ ದೀಪ

ಉತ್ತರ:  ಅ) ವಿದ್ಯುತ್ ದೀಪ  -  ಝಗ-ಝಗಿಸುವ ಬೆಳಕು 

          ಆ) ಬ್ಯಾಟರಿ       -     ಅಳಿಲು ಸೇವೆ             

          ಇ) ಚಿಮಣಿ       -      ದೀನರ ದೀಪ

          ಈ) ಮೇಣಬತ್ತಿ      -  ಅರಗಳಿಗೆಯ ಬದುಕು                      ೪) ಅಳಿಲು ಸೇವೆ

           ಉ) ಸೂರ್ಯ       -  ಸ್ವಯಂ ಪ್ರಕಾಶಿತ

ಪ್ರಶ್ನೆ ೪) ಕೆಳಗಿನ ಮಾತುಗಳನ್ನು ಯಾರು-ಯಾರಿಗೆ ಹೇಳಿದರು.

ಅ) ಅಬ್ಬಾ! ಈ ಅಲ್ಪಾಯುಷಿಗಳಿಗೆ ಅದೆಂಥ ಆಲೋಚನೆ ? ಅದೆಂಥ ಅವಿವೇಕ !

ಉತ್ತರ: ವಿದ್ಯುತ್ ದೀಪವು ಮೇಣಬತ್ತಿಗೆ ಹೇಳಿತು.

ಆ) ಆಯಿತೇ, ನಿನ್ನ ಮುಖಕ್ಕೆ ಮಂಗಳಾರತಿ.

ಉತ್ತರ: ಪಣತಿ ವಿದ್ಯುತ್ ದೀಪಕ್ಕೆ ಹೇಳಿತು.

ಇ) ನನ್ನ ಮೋಹಕ್ಕೆ ಮಣಿಯದ ಮಾನವರೇ ಇಲ್ಲ.

ಉತ್ತರ: ವಿದ್ಯುತ್ ದೀಪವು ಇತರ ದೀಪಗಳಿಗೆ ಹೇಳಿತು.

ಈ) ನನ್ನ ಬೆಲೆ ಬಲ್ಲವರೇ ಬಲ್ಲರು.

ಉತ್ತರ: ಬ್ಯಾಟರಿಯು ಇತರ ದೀಪಗಳಿಗೆ ಹೇಳಿತು.

ಉ) ನಾನು ಇಡೀ ಸೃಷ್ಟಿಯನ್ನೇ ಬೆಳಗುತ್ತೇನೆ.

ಉತ್ತರ: ಸೂರ್ಯನು ಇತರ ದೀಪಗಳಿಗೆ ತಿಳಿಸಿ ಹೇಳಿತು.

ಪ್ರಶ್ನೆ ೫) ಕೆಳಗಿನ ವಾಕ್ಯಗಳಲ್ಲಿಯ ವಿಶೇಷಣ ಗುರುತಿಸಿರಿ.

ಅ) ವಿಜಯನಗರ ಸಾಮ್ರಾಜ್ಯವು ವಿಶಾಲವಾಗಿತ್ತು.    = ವಿಶಾಲ

ಆ) ಮಾವಿನ ಹಣ್ಣುಗಳು ಸಿಹಿಯಾಗಿರುತ್ತವೆ.           = ಸಿಹಿ

ಇ) ಕೋಗಿಲೆಯ ಕಂಠ ಮಧುರವಾಗಿದೆ.              = ಮಧುರ

ಈ) ಜಿರಾಫೆಯ ಕುತ್ತಿಗೆಯು ಉದ್ದವಾಗಿರುತ್ತದೆ.       = ಉದ್ದ

ಉ) ವಿಮಲೆಯು ಬಿಳಿಮಲ್ಲಿಗೆ ಮುಡಿದಿದ್ದಳು.          = ಬಿಳಿ

ಉಪಕ್ರಮ

ನಿಮ್ಮ ಶಾಲೆಯ ವಿಶೇಷ ಸಮಾರಂಭಗಳಲ್ಲಿ ಈ ದೀಪಗಳ ಮೇಲಾಟವನ್ನು ಅಭಿನಯಿಸಿರಿ.

ಈ ಪಾಠದಲ್ಲಿ ಬಂದಿರುವ ಗಾದೆಮಾತುಗಳನ್ನು ಬರೆಯಿರಿ.

೧) ಅಲ್ಪರ ಸಂಗ ಅಭಿಮಾನ ಭಂಗ

೨) ಅಧಿಕಾರ ಬಂದಾಗ ಅಹಂಕಾರ ಬಂದಂತೆ ಅರಚಿಕೊಳ್ಳಬಾರದು.

೩) ಮುಖಕ್ಕೆ ಮಂಗಳಾರತಿ ಮಾಡು.

೪) ಸಮಯ ಬಂದಾಗ ಸಂಜೀವಿನಿ.

೫) ನಮ್ಮನ್ನು ನಾವೇ ಹೊಗಳುವುದಕ್ಕಿಂತ ಇತರರು ನಮನ್ನು ಹೊಗಳುವಂತೆ ಕೆಲಸ ಮಾಬೇಕು.

ನುಡಿಮುತ್ತು

ಒಳ್ಳೆಯವರ ಜೊತೆ ಇದಷ್ಟು ನಾವು ಒಳ್ಳೆಯವರಾಗುತ್ತೇವೆ.

ದೀಪದಿಂದ ದೀಪ ಬೆಳಗಲಿ, ಎಲ್ಲರ ಮನ ಅರಳಲಿ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು