ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಬಾಲಭಾರತಿ ನಾಲ್ಕನೆಯ ಇಯತ್ತೆ ಪಾಠ 14 ಬಸವಣ್ಣನವರು Chapter 14 . BASAVANNA std 4rth

  ಬಾಲಭಾರತಿ ನಾಲ್ಕನೆಯ ಇಯತ್ತೆ ಪಾಠ 14 ಬಸವಣ್ಣನವರು  

Chapter 14 . BASAVANNA std 4rth

 


೧೪. ಬಸವಣ್ಣನವರು

ಶಬ್ದಗಳ ಅರ್ಥ

ಉನ್ನತಿ – ಏಳಿಗೆ; ಗಣ್ಯ –ಪ್ರಮುಖ; ಜಾಣ್ಮೆ – ಜಾಣತನ; ತನು – ಶರೀರ; ಧನ – ಹಣ; ವಿನಿಯೋಗಿಸು –ಖರ್ಚು ಮಾಡು; ನಾಮ – ಹೆಸರು

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ಬಸವಣ್ಣನವರ ತಂದೆ ತಾಯಿಯರ ಹೆಸರು ಬರೆಯಿರಿ.

ಉತ್ತರ: ಬಸವಣ್ಣನವರ ತಾಯಿ ಹೆಸರು ಮಾದಲಾಂಬಿಕೆ ಮತ್ತು ತಂದೆಯ ಹೆಸರು ಮಾದರಸ

ಆ) ಬಸವಣ್ಣನವರು ಎಲ್ಲಿ ವಿದ್ಯಾಭ್ಯಾಸ ಮಾಡಿದರು?

ಉತ್ತರ: ಬಸವಣ್ಣನವರು ಕಪ್ಪಡಿ ಸಂಗಮದಲ್ಲಿರುವ ಸಂಗಮೇಶ್ವರ ದೇವಲಯದಲ್ಲಿ ವಿದ್ಯಾಭ್ಯಾಸ ಮಾಡಿದರು.

ಇ) ಯಾರ ಜೊತೆಗೆ ಬಸವಣ್ಣನವರ ಮದುವೆ ಆಯಿತು ?

ಉತ್ತರ: ತನ್ನ ಸೋದರ ಮಾವ ಬಲದೇವನ ಮಗಳು ಗಂಗಾಂಬಿಕೆಯನ್ನು ಬಸವಣ್ಣನವರು ಮದುವೆಯಾದರು.

ಈ) ಬಸವಣ್ಣನವರು ಏನೆಂದು ಬೋಧಿಸಿದರು ?

ಉತ್ತರ: ಬಸವಣ್ಣನವರು ಒಬ್ಬ ಧಾರ್ಮಿಕ ಮಹಾಪುರುಷರೆಂದು ಹೆಸರುವಾಸಿಯಾದರು. ದಯವೇ ಧರ್ಮದ ಮೂಲವಯ್ಯಾ ಎಂದು ಹೇಳಿದರು. ಧರ್ಮದ ಹೆಸರಿನಲ್ಲಿ ಪ್ರಾಣಿ-ಪಕ್ಷಿಗಳಿಗೆ ಕೊಡುವ ಹಿಂಸೆಯನ್ನು ತಡೆದರು. ಬಡಬಗ್ಗರಿಗೆ, ಅಂಗವಿಕಲರಿಗೆ ದಾನ ಮಾಡಬೇಕೆಂದೂ, ಪಶು-ಪಕ್ಷಿಗಳಲ್ಲಿ ದಯೆ ತೋರಬೇಕೆಂದೂ ಜನರಿಗೆ ತಿಳಿಸಿದರು. ದೇವನೊಬ್ಬ ನಾಮ ಹಲವು ಎಂದು ಹೇಳಿ ದೇವನು ಒಬ್ಬನೇ ಆತನನ್ನು ಯಾವ ಹೆಸರಿನಿಂದ ಪೂಜಿಸಿದರೂ ಒಂದೇ ಎಂದು ಬೋಧಿಸಿದರು.

ಉ) ಅನುಭವ ಮಂಟಪದಲ್ಲಿ ಯಾವ ಚರ್ಚೆ ನಡೆಯುತ್ತಿತ್ತು ?

ಉತ್ತರ: ಅನುಭವ ಮಂಟಪದಲ್ಲಿ ದೂರ-ದೂರ ಪ್ರದೇಶದಿಂದ ಶರಣರು ಬಂದು ಅಲ್ಲಿ ಧಾರ್ಮಿಕ ಕಾಯಕದ ಮಹತ್ವ, ಸಾಮಾಜಿಕ ಶೋಷಣೆ, ಸಮಾನತವಾದ ಮುಂತಾದ ವಿಷಯಗಳ ಮೇಲೆ ಚರ್ಚೆ ಅಡೆಯುತ್ತಿತ್ತು.

ಪ್ರಶ್ನೆ ೨) ಬಿಟ್ಟ ಸ್ಥಳ ತುಂಬಿರಿ.

ಅ) ವಿಜಾಪೂರ ಜಿಲ್ಲೆಯ ಬಾಗೇವಾಡಿಯಲ್ಲಿಯ ಇಂಗಲೇಶ್ವರ ಗ್ರಾಮದಲ್ಲಿ ಬಸವಣ್ಣನವರು ಜನಿಸಿದರು.

ಆ) ಬಲದೇವನು ಅವರ ಸೋದರಮಾವ.

ಇ) ದಯವೇ ಧರ್ಮದ ಮೂಲವಯ್ಯ

) ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸಿದರು.

ಪ್ರಶ್ನೆ ೩) ಸರಿ / ತಪ್ಪು ಹೇಳಿರಿ.

ಅ) ತಂದೆ ತಾಯಿಗಳು ಪರಮ ಶಿವಭಕ್ತರಾಗಿದ್ದರು.            = ಸರಿ

ಆ) ಭೀಮಾ-ಕೃಷ್ಣಾ ಸಂಗಮದಲ್ಲಿ ಕಪ್ಪಡಿಸಂಗಮ ಸ್ಥಳವಿದೆ.   = ತಪ್ಪು

ಇ) ಕಲ್ಯಾಣದಲ್ಲಿ ಚಾಲುಕ್ಯ ಮನೆತನದ ಅರಸರು ರಾಜ್ಯವಾಳುತ್ತಿದ್ದರು.       = ತಪ್ಪು

ಈ) ಬಸವಣ್ಣನವರು ಬಲದೇವನ ಸೋದರಳಿಯ ಆಗಿದ್ದರು.   = ಸರಿ

ಉ) ಬಸವಣ್ಣನವರು ಕಲ್ಯಾಣವನ್ನು ಬಿಟ್ಟು ಕಪ್ಪಡಿ ಸಂಗಮಕ್ಕೆ ಬಂದರು.      = ಸರಿ

ಪ್ರಶ್ನೆ ೪) ಕೆಳಗಿನ ಶಬ್ದಗಳನ್ನು ವಾಕ್ಯದಲ್ಲಿ ಉಪಯೋಗಿಸಿರಿ.

ಅ) ಉನ್ನತಿ : ಧೈರ್ಯದಿಂದ ಪ್ರಯತ್ನ ಮಾಡಿ ಬಾಳಿನಲ್ಲಿ ಉನ್ನತಿಯನ್ನು ಸಾಧಿಸಬೇಕು.

ಆ) ಆಚರಣೆ : ನಾವು ಹಲವಾರು ಹಬ್ಬ ಹರಿದಿನಗಳನ್ನು ಆಚರಣೆ ಮಾಡುತ್ತೇವೆ.

ಉಪಕ್ರಮ

೧) ಕೆಳಗಿನ ವಾಕ್ಯಗಳನ್ನು ಪೂರ್ಣಗೊಳಿಸಿರಿ.

ಅ) ಆಚಾರವೇ ಸ್ವರ್ಗ ಅನಾಚಾರವೇ ನರಕ.

3) ಕಾಯಕವೇ ಕೈಲಾಸ

ಇ) ನುಡಿದಂತೆ ನಡೆ ಶಿವಕೀರ್ತಿಯ ಪಡೆ.

) ನುಡಿದರೆ ಮುತ್ತಿನ ಹಾರದಂತಿರಬೇಕು

ಉ) ನೀನೊಲಿದರೆ ಕೊರಡು ಕೊನರುವುದಯ್ಯಾ.

೨) ಶರಣ-ಶರಣೆಯರ ಜೀವನಚರಿತ್ರೆಯನ್ನು ಮತ್ತು ವಚನಗಳನ್ನು ಶಿಕ್ಷಕರಿಂದ/

ಪಾಲಕರಿಂದ ಕೇಳಿ ತಿಳಿದುಕೊಳ್ಳಿರಿ.

ನುಡಿಮುತ್ತು

·        ಶ್ರೇಷ್ಠ ಚಿಂತನೆ ವ್ಯಕ್ತಿಯನ್ನು ಯೋಗ್ಯ ವ್ಯಕ್ತಿಯನ್ನಾಗಿ ಮಾಡುತ್ತದೆ

·        ದುಡಿಮೆಯೇ ದೇವರು

ಗಮನಿಸಿರಿ

ಲಿಂಗಗಳು : ಲಿಂಗಗಳಲ್ಲಿ ಮುಖ್ಯವಾಗಿ ಮೂರು ಪ್ರಕಾರಗಳಿರುತ್ತವೆ.

೧) ಪುಲ್ಲಿಂಗ ೨) ಸ್ತ್ರೀಲಿಂಗ ೩) ನಪುಂಸಕಲಿಂಗ

ಪುಲ್ಲಿಂಗ : ಪುರುಷ ಪದದ ಅರ್ಥವನ್ನು ಸೂಚಿಸುವ ಶಬ್ದಕ್ಕೆ 'ಪುಲ್ಲಿಂಗ' ಎನ್ನುವರು.

ಉದಾ. : ರಾಮ, ಎತ್ತು, ಹುಂಜ ಇತ್ಯಾದಿ.

ಸ್ತ್ರೀಲಿಂಗ : ಸ್ತ್ರೀ ಪದದ ಅರ್ಥವನ್ನು ಸೂಚಿಸುವ ಶಬ್ದಕ್ಕೆ 'ಸ್ತ್ರೀಲಿಂಗ' ಎನ್ನುವರು.

ಉದಾ. : ಕಾವೇರಿ, ಆಕಳು, ಕುರಿ

ನಪುಂಸಕ ಲಿಂಗ : ಪುರುಷ ಪದ ಮತ್ತು ಸ್ತ್ರೀ ಪದಗಳನ್ನು ಹೊರತುಪಡಿಸಿ ಉಳಿದೆಲ್ಲ ಪದಗಳಿಗೆ 'ನಪುಂಸಕಲಿಂಗ' ಎನ್ನುವರು.

ಉದಾ. : ಚೆಂಡು, ಪುಸ್ತಕ, ನಾಣ್ಯ, ಗಿಡ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು