ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಬಾಲಭಾರತಿ ನಾಲ್ಕನೆಯ ಇಯತ್ತೆ ಪಾಠ 15. ಸಂಸ್ಕಾರ CHAPTER 15. SANSKAR std 4rth

 ಬಾಲಭಾರತಿ ನಾಲ್ಕನೆಯ ಇಯತ್ತೆ ಪಾಠ 15. ಸಂಸ್ಕಾರ CHAPTER 15. SANSKAR std 4rth

 


೧೫. ಸಂಸ್ಕಾರ

ಶಬ್ದಗಳ ಅರ್ಥ

ಗುಜರಿ - ಹಳೆಯ ಸಾಮಾನುಗಳನ್ನು ಮಾರುವ ; ಕಂಗಳು- ಕಣ್ಣುಗಳು; ತುಕ್ಕು ಜಂಗುತಿಂದ, ನಿಷ್ಟ್ರಯೋಜಕ; ಸಂದೇಹ - ಸಂಶಯ ; ಹೊಳಹು ಪ್ರಕಾಶ ; ನಗೆಮೊಗ ನಗೆಮುಖ ; ಪರಿಷ್ಕರಣ - ಸರಿಪಡಿಸಿದ

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ಜನರು ಸಾಧುವಿನ ಬಳಿಗೆ ಏಕೆ ಹೋಗುತ್ತಿದ್ದರು ?

ಉತ್ತರ: ಸಾಧು ಊರಿನವರಿಗೆ ಜ್ಞಾನ, ತಿಳುವಳಿಕೆ ನೀಡುವ ಸೇವೆಗೈಯುತ್ತಿದ್ದನು. ಜನರು ತಮ್ಮ ಸುಖ ದು:ಖದ ಸಂಗತಿಗಳನ್ನು ತೋಡಿಕೊಂಡು ಆತನ ಕಡೆಯಿಂದ ಸುಲಭದಲ್ಲಿ ತಮ್ಮ ಸಂದೇಹ, ಸಮಸ್ಯೆಗಳನ್ನು ಪರಿಹಾರ ಕಂಡುಕೊಳ್ಳಲು ಸಾಧುವಿನ ಬಳಿಗೆ ಜನರು ಹೋಗುತ್ತಿದ್ದರು.

ಆ) ಯುವಕನು ಗುರುಗಳಿಗೆ ಯಾವ ಪ್ರಶ್ನೆ ಕೇಳಿದನು ?

ಉತ್ತರ: ಗುರೂಜಿ, ಸಂಸ್ಕಾರ ಎಂದರೇನು? ಸಂಸ್ಕೃತಿ ಎಂದರೇನು? ನಾವು ಸುಸಂಸ್ಕೃತರಾಗಬೇಕೆಂದು ಎಲ್ಲರೂ ಉಪದೇಶ ನೀಡುತ್ತಾರೆ. ಅದರ ಅರ್ಥ ತಿಳಿಸಬೇಕೆಂದು ಯುವಕನು ಗುರುಗಳಿಗೆ ಕೇಳಿದನು.

ಇ) ಗುರುಗಳು ಮೂರನೆಯ ಸಲ ಯಾವ ಪ್ರಶ್ನೆ ಕೇಳಿದರು ?

ಉತ್ತರ: ಕಬ್ಬಿಣದ ಕುಡುಗೊಲಿಗೆ ಬೇರೆ ಅನುಕೂಲಕರವಾದ ಯೋಗ್ಯ ಲೋಹ ಸೇರಿಸಿ ಮನೆಯ ಕಟಾಂಜನದ ಕಬ್ಬಿಣದ ಚೌಕಟ್ಟನ್ನಾಗಿ ತಯಾರಿಸಿದರೆ ಅದಕ್ಕೆ ಎಷ್ಟು ಬೆಲೆ ಬರಬಹುದು ಎಂದು ಗುರುಗಳು ಮೂರನೆಯ ಸಲ ಪ್ರಶ್ನೆ ಕೇಳಿದರು.

ಈ) ಕಬ್ಬಿಣದಲ್ಲಾದ ಐಂದ್ರಜಾಲಿಕ ಬದಲಾವಣೆಗಳನ್ನು ಹೇಳಿರಿ.

ಉತ್ತರ: ಸಂಸ್ಕಾರದಿಂದ ತುಕ್ಕು ಹಿಡಿದ ಕಬ್ಬಿಣದ ತುಂಡನ್ನು ಯಾವುದೇ ಉನ್ನತ ಮಟ್ಟಕ್ಕೂ ಏರಿಸುವುದು ಸಾಧ್ಯವಿದೆ. ಅದರ ತುಕ್ಕನ್ನು ಹೋಗಲಾಡಿಸಿ, ಅದರಲ್ಲಿಯ ಕೊಳೆ, ಕಸವನ್ನು ಬೇರ್ಪಡಿಸಿ ಅದಕ್ಕೆ ಒಳ್ಳೆಯ ಪ್ರಯೋಜನಕಾರಿ ಗುಣಗಳುಳ್ಳ ಲೋಹಗಳನ್ನು ಸೇರ್ಪಡಿಸಿ ಯೋಗ್ಯ ಆಕಾರ, ಆಕೃತಿಗಳಲ್ಲಿ ಮಾರ್ಪಡಿಸಿದಾಗ ಅದರ ಬೆಳೆಯು ಐವತ್ತು ಪೈಸೆಯ ಹಂತದಿಂದ ಹತ್ತಾರು ಸಾವಿರ ರೂಪಾಯಿಗಳ ಮಟ್ಟಕ್ಕೆ ಏರಿತು. ಇದು ಕಬ್ಬಿಣದಲ್ಲಾದ ಒಂದು ಐಂದ್ರಜಾಲಿಕ ಬದಲಾವಣೆಯಾಗಿದೆ.

ಉ) ಸಂಸ್ಕಾರ ಎಂದರೇನು ?

ಉತ್ತರ: ನಾವು ನಮ್ಮಲ್ಲಿದ್ದ ಅರೆಕೊರೆಗಳನ್ನು ಅರಿತು ಅವುಗಳನ್ನು ನೀಗಿಕೊಂಡು ಸದ್ಗುಣಗಳನ್ನು ಅಂಗೀಕರಿಸಿಕೊಂಡು, ಸುಸಂಸ್ಕೃತನಾಗಿ ಸಮಾಜಕ್ಕೆ ಹೆಚ್ಚು ಹೆಚ್ಚು ಪ್ರಯೋಜನಕಾರಿಯಾದರೆ ಬದುಕಿಗೆ ಬೆಲೆ ಬರುತ್ತದೆ. ಹಾಗೆ ಆಗುಗೊಳಿಸುವ ವಿಧಾನವೇ ಸಂಸ್ಕೃತಿ.

ಪ್ರಶ್ನೆ ೨) ಬಿಟ್ಟ ಸ್ಥಳ ತುಂಬಿರಿ.

ಅ) ಒಂದು ಊರಿನಲ್ಲಿ ಒಬ್ಬ ........ ಇದ್ದನು.

ಉತ್ತರ: ಸಾಧು

ಆ) ಗುರುಗಳು ತಮ್ಮೆದುರು ಬಿದ್ದುಕೊಂಡಿದ್ದ ಒಂದು ....... ಕೈಗೆ ಎತ್ತಿಕೊಂಡರು.

ಉತ್ತರ: ಕಬ್ಬಿಣದ ತುಂಡು

) ..............ಕೊಟ್ಟರೆ ಐವತ್ತು ಪೈಸೆ ಕೊಟ್ಟಾನು.

ಉತ್ತರ: ಗುಜರಿಯವನಿಗೆ

ಈ) ನೋಡಿದೆಯಾ ಈ ............ ಬದಲಾವಣೆಯ ಪರಿಣಾಮವನ್ನು ?

ಉತ್ತರ: ಐಂದ್ರಜಾಲಿಕ

ಉ) ಆಗ ಆತನಿಗೆ ಸಂಸ್ಕಾರ ಮತ್ತು .............. ಅರ್ಥ ಮತ್ತು ಮಹತ್ವ ಹೊಳೆದಂತಾಯಿತು

ಉತ್ತರ: ಸಂಸ್ಕೃತಿ

ಪ್ರಶ್ನೆ ೩) ಕೆಳಗಿನ ಪ್ರಸಂಗಗಳಲ್ಲಿ ಏನಾಗುತ್ತದೆ ಎಂಬುದನ್ನು ಬರೆಯಿರಿ.

ಅ) ಕಬ್ಬಿಣದ ತುಂಡನ್ನು ಮೂಲೆಯಲ್ಲಿ ಎಸೆದರೆ = ಕಬ್ಬಿಣಕ್ಕೆ ತುಕ್ಕು ಹಿಡಿಯುವುದು.

ಆ) ಕಬ್ಬಿಣದ ತುಂಡನ್ನು ಕಮ್ಮಾರನ ಬಳಿ ಒಯ್ದರೆ = ಕುಡುಗೋಲು ಮಾಡಲಾಗುತ್ತದೆ.

ಇ) ಕಬ್ಬಿಣದಲ್ಲಿ ಯೋಗ್ಯವಾದ ಲೋಹವನ್ನು ಬೆರೆಸಿದರೆ = ಕಟಾಂಜನ ಮಾಡಲು ಬರುತ್ತದೆ.

ಈ) ಕಬ್ಬಿಣದಲ್ಲಿ ಉತ್ತಮ ಧಾತುವನ್ನು ಸೇರ್ಪಡಿಸಿದರೆ = ಗಡಿಯಾರದ ಸ್ಪ್ರಿಂಗಿನಂತಹ ಮೌಲ್ಯವುಳ್ಳ ವಸ್ತುಗಳನ್ನು ತಯಾರಿಸಲು ಬರುವುದು.

ಪ್ರಶ್ನೆ ೪) ಕೆಳಗಿನ ಶಬ್ದಗಳನ್ನು ವಾಕ್ಯದಲ್ಲಿ ಉಪಯೋಗಿಸಿರಿ.

ಅ) ಉಪದೇಶ: ಸಾಧು ಜನರಿಗೆ ಒಳ್ಳೆಯ ಉಪದೇಶ ಮಾಡಿದರು.

ಆ) ಸಾಮರ್ಥ್ಯ: ಸಾಮರ್ಥ್ಯವುಳ್ಳ ಜಟ್ಟಿಂಗರು ಕುಸ್ತಿ ಆಡಲು ಜಾತ್ರೆಗೆ ಹೋದರು. ಶ್

ಇ) ಪರಿವರ್ತನೆ: – ಸಂಸ್ಕಾರದಿಂದ ಮನುಷ್ಯ ಪರಿವರ್ತನೆ ಆಗುತ್ತಾನೆ.

ಈ) ಸಮಾಜ: ಸಮಾಜ ನಮಗೆ ಕನ್ನಡಿ ಇದ್ದ ಹಾಗೆ.

ಪ್ರಶ್ನೆ ೫) ಕೆಳಗಿನ ವಾಕ್ಯಗಳಲ್ಲಿಯ ಗೆರೆ ಹೊಡೆದ ಶಬ್ದಗಳ ಲಿಂಗ, ವಚನಗಳನ್ನು ಗುರುತಿಸಿರಿ.

ಅ) ಕುದುರೆಗಳು ವೇಗವಾಗಿ ಓಡುತ್ತವೆ.

ಆ) ರಾಧೆಯು ಬೆಂಗಳೂರಿಗೆ ಹೋದಳು.

ಇ) ಸೋಮನು ಜಾತ್ರೆಯಲ್ಲಿ ಚೆಂಡುಗಳನ್ನು ಕೊಂಡನು.

ಈ) ವ್ಯಾಪಾರಿಯು ಬಟ್ಟೆಗಳನ್ನು ಮಾರಿದನು.

ಉ) ಎಮ್ಮೆ ಹುಲ್ಲು ತಿನ್ನುತ್ತದೆ.

ಅ. ಕ್ರ.

ಶಬ್ದಗಳು

ಲಿಂಗ

ವಚನ

ಅ)

ಕುದುರೆಗಳು

ನಪುಸಕಲಿಂಗ

ಬಹುವಚನ

ಆ)

ರಾಧೆಯು

ಸ್ತ್ರೀಲಿಂಗ

ಏಕವಚನ

ಇ)

ಸೋಮನು

ಪುಲ್ಲಿಂಗ

ಏಕವಚನ

ಈ)

ವ್ಯಾಪಾರಿಯು

ಪುಲ್ಲಿಂಗ

ಏಕವಚನ

ಉ)

ಎಮ್ಮೆ

ಸ್ತ್ರೀಲಿಂಗ

ಏಕವಚನ

ಊ)

ಚೆಂಡುಗಳನ್ನು

ನಪುಸಕಲಿಂಗ

ಬಹುವಚನ

 

ಉಪಕ್ರಮ

ಕೆಳಗಿನ ವಿಧಾನವನ್ನು ಪೂರ್ಣಗೊಳಿಸಿರಿ.

ನೀರು          ಅತಿಯಾಗಿ ಕಾಯಿಸಿದರೆ........

                ಅತಿಯಾಗಿ ತಂಪುಗೊಳಿಸಿದರೆ......

                ಬೀಸಿದರೆ.....

ಜೋಳ        ಹುರಿದರೆ

                ಕುದಿಸಿದರೆ

                ಹುಡುಗರಿಗೆ

                ಹುಡುಗಿಯರಿಗೆ

ಬಟ್ಟೆ           ಯುವಕರಿಗೆ

                ಯುವತಿಯರಿಗೆ

                ಅಜ್ಜನಿಗೆ

                ಅಜ್ಜಿಗೆ

ನುಡಿಮುತ್ತು

ಸಂಸ್ಕಾರದಿಂದ ಪರಿಪೂರ್ಣತೆ ಲಭಿಸುತ್ತದೆ.

ಸಜ್ಜನರ ಸಂಗ ಹೆಚ್ಚೇನು ಸವಿದಂತೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು