ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಬಾಲಭಾರತಿ ನಾಲ್ಕನೆಯ ಇಯತ್ತೆ ಪಾಠ 13 ಗೋವಿನ ಹಾಡು ಭಾಗ-1 Chapter 13 . GOVIN HADU bhag 1 (THE STORY OF PUNYAKOTI)

 ಬಾಲಭಾರತಿ ನಾಲ್ಕನೆಯ ಇಯತ್ತೆ ಪಾಠ 13 ಗೋವಿನ ಹಾಡು ಭಾಗ-1
Chapter 13 . GOVIN HADU bhag 1 (THE STORY OF PUNYAKOTI)

            


೧೩. ಗೋವಿನ ಹಾಡು ಭಾಗ - ೧

ಶಬ್ದಗಳ ಅರ್ಥ

ವ್ಯಾಘ್ರ - ಹುಲಿ; ಬಿನ್ನಹ – ಬೇಡಿಕೊಳ್ಳು; ಧರಣಿ - ಭೂಮಿ, ಪೃಥ್ವಿ; ತುರು - ಹಸು;

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಒಂದೇ ವಾಕ್ಯದಲ್ಲಿ ಉತ್ತರ ಬರೆಯಿರಿ.

ಅ) ಕಾಳಿಂಗನು ಕೊಳಲನ್ನು ಊದಿ ಯಾರನ್ನು ಕರೆದನು?

ಉತ್ತರ: ಕಾಳಿಂಗನು ಕೊಳಲನು ಊದಿ ತನ್ನ ಆಕಳುಗಳಿಗೆ ಕರೆದನು.

ಆ) ಬಿಂದಿಗೆ ಹೇಗೆ ತುಂಬಿತು ?

ಉತ್ತರ: ಗೊಲ್ಲನು ಆಕಳುಗಳಿಗೆ ಕರೆದು ಸೂಸಿ ಹಾಲು ಕರೆಯುವಾಗ ಬಿಂದಿಗೆ ಹಾಲಿನಿಂದ ತುಂಬಿತು.

ಇ) ವ್ಯಾಘ್ರನು ಎಲ್ಲಿ ವಾಸಿಸುತ್ತಿದ್ದನು?

ಉತ್ತರ: ವ್ಯಾಘ್ರನು ಕಾಡಿನಲ್ಲಿ ಗುಹೆಯಲ್ಲಿ ವಾಸಿಸುತ್ತಿದ್ದನು.

ಈ) ಪುಣ್ಯಕೋಟಿ ಹಸುವು ಯಾರನ್ನು ನೆನೆಯುತ್ತಿತ್ತು ?

ಉತ್ತರ: ಪುಣ್ಯಕೋಟಿ ಹಸುವು ತನ್ನ ಕಂದನನ್ನು ನೆನೆಯುತ್ತಿತ್ತು. 

ಉ) ಪರಮಾತ್ಮನು ಯಾವ ಮಾತಿಗೆ ಮೆಚ್ಚಲಾರನು?

ಉತ್ತರ: ಪರಮಾತ್ಮನು ಸತ್ಯ ವಾಕ್ಯಕೆ ತಪ್ಪಿ ನಡೆದರೆ ಮೆಚ್ಚಲಾರನು.

ಪ್ರಶ್ನೆ ೨) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ಕಾಳಿಂಗನು ಹಸುಗಳನ್ನು ಯಾವ ಯಾವ ಹೆಸರುಗಳಿಂದ ಕರೆದನು?

ಉತ್ತರ: ಕಾಳಿಂಗನು ತನ್ನ ಹಸುಗಳಿಗೆ ಗಂಗೆ, ಗೌರಿ, ತುಂಗೆ, ಪುಣ್ಯಕೋಟಿ ಎಂಬಿತ್ಯಾದಿ ಹೆಸರುಗಳಿಂದ ಕರೆದನು. 

ಆ) ವ್ಯಾಘ್ರನು ಅಡ್ಡಗಟ್ಟಿ ಏಕೆ ನಿಂತನು ?

ಉತ್ತರ: ಪುಣ್ಯಕೋಟಿ ಹಸುವು ತನ್ನ ಕರುವನ್ನು ನೆನೆದು ಹಾಲುಣಿಸಿ ಬರಬೇಕೆಂದು ಹೊರಟಾಗ ದಾರಿಗೆ ಅಡ್ಡಗಟ್ಟಿ ವ್ಯಾಘ್ರನು ಇಂದು ನನಗೆ ಆಹಾರ ಸಿಕ್ಕಿತು ಎಂದು ಅಡ್ಡಗಟ್ಟಿ ನಿಂತಿತು.

ಇ) ಪುಣ್ಯಕೋಟಿಯು ಹುಲಿರಾಯನಲ್ಲಿ ಏನೆಂದು ಬೇಡಿಕೊಂಡಿತು ?

ಉತ್ತರ: ಪುಣ್ಯಕೋಟಿಯೂ ದೊಡ್ಡಿಯೊಳಗೆ ಕಂದ ಇದ್ದಾನೆ. ಒಂದು ನಿಮಿಷದಲ್ಲಿ ಮೊಳೆಯುಣಿಸಿ ಬರುವೆನು ಎಂದು ಹುಲಿರಾಯನಲ್ಲಿ ಬೇಡಿಕೊಂಡಿತು.

ಪ್ರಶ್ನೆ ೩) ಕೆಳಗಿನ ಪದ್ಯಗಳ ಸಾಲುಗಳನ್ನು ಪೂರ್ಣಗೊಳಿಸಿರಿ.

ಹಸಿದ ವೇಳೆಗೆ ಸಿಕ್ಕಿದೊಡವೆಯ ವಶವ ಮಾಡದೆ ಬಿಡಲು ನೀನು

ನುಸುಳಿ ಹೋಗುವೆ ಮತ್ತೆ ಬರುವೆಯ

ಹುಸಿಯ ನುಡಿಯುವೆನೆಂದಿತು ||

ಉಪಕ್ರಮ

○) ಸತ್ಯಮೇವ ಜಯತೆ - ಈ ಗಾದೆಮಾತಿನ ಮಹತ್ವವನ್ನು ಶಿಕ್ಷಕರಿಂದ /ಪಾಲಕರಿಂದ ಕೇಳಿ ತಿಳಿದುಕೊಳ್ಳಿರಿ.

2) ಕೆಳಗಿನ ಚಿತ್ರದಲ್ಲಿರುವ ಅಕ್ಷರಗಳಿಂದ ಕಾಡುಪ್ರಾಣಿ ಮತ್ತು ಸಾಕುಪ್ರಾಣಿಗಳನ್ನು ವಿಂಗಡಿಸಿ ಬರೆಯಿರಿ.

 

ಸಾಕುಪ್ರಾಣಿಗಳು                                      ಕಾಡುಪ್ರಾಣಿಗಳು

ಡು                                                   ತೋ

ಕುರಿ                                                   ಹುಲಿ

ಎಮ್ಮೆ                                                  ಚಿರತೆ

ತ್ತು                                                   ಕರಡಿ

ಆಕಳು

ನುಡಿಮುತ್ತು

·        ತಾಳ್ಮೆಗೂ ಮಿತಿ ಇದೆ. ಅದರಿಂದಾಚೆಗೆ ಅದು ಸದ್ಗುಣವೆನಿಸದು

·        ನುಡಿದಂತೆ ನಡೆ




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು