ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಬಾಲಭಾರತಿ ನಾಲ್ಕನೆಯ ಇಯತ್ತೆ ಪಾಠ 16. ಗೋವಿನ ಹಾಡು- ಭಾಗ 2 CHAPTER 16. GOVIN HADU Bhag 2 std 4rth

 ಬಾಲಭಾರತಿ ನಾಲ್ಕನೆಯ ಇಯತ್ತೆ ಪಾಠ 16. ಗೋವಿನ ಹಾಡು- ಭಾಗ 2 CHAPTER 16. GOVIN HADU Bhag 2 std 4rth
 

೧೬. ಗೋವಿನ ಹಾಡು – ಭಾಗ ೨

ಶಬ್ದಗಳ ಅರ್ಥ

ಭಾಷೆ - ವಚನ; ತಬ್ಬಲಿ - ಅನಾಥ; ಚಂಡ - ಕ್ರೂರ; ಕನ್ನೆ ಹೆಣ್ಣುಮಗಳು

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ಕರುವು ಪುಣ್ಯಕೋಟಿಗೆ ಏನೆಂದು ಕೇಳಿತು ?

ಉತ್ತರ: ಕೊಂದು ತಿನ್ನುವೆ ಎಂದ ಹುಲಿಗೆ ಭಾಷೆ ಕೊಟ್ಟು ಬಂದ ಹಸು ಪುಣ್ಯಕೋಟಿ ತನ್ನ ಕರುವಿಗೆ ಹಾಲುಣಿಸಿ ವಿಷಯ ತಿಳಿಸಿದಾಗ ಆ ಕರು ಇನ್ನೂ ಮುಂದೆ ನನಗೆ ಯಾರು ನೋಡಿಕೊಳ್ಳುತ್ತಾರೆ. ನಾನು ಯಾರ ಮೋಲೆ ಹಾಲು ಕುಡಿಯಲಿ, ಯಾರ ಬಳಿ ಮಲಗಲಿ, ಯಾರ ಜೊತೆ ಅಡಿಕೊಳ್ಳಲಿ ಎಂದು ಕೇಳಿತು.

ಆ) ಪುಣ್ಯಕೋಟಿಯು ಉಳಿದ ಹಸುಗಳಿಗೆ ಏನೆಂದು ಬೇಡಿಕೊಂಡಿತು ?

ಉತ್ತರ:ಪುಣ್ಯಕೋಟಿಯು ಉಳಿದ ಹಸುಗಳಿಗೆ, ಅಮ್ಮಗಳಿರಾ, ಅಕ್ಕಗಳಿರಾ, ನನ್ನ ಕಂದ ಇನ್ನೂ ಮುಂದೆ ನಿಮ್ಮ ಕಂದನೆಂದು ತಿಳಿದು ಜೋಪಾನ ಮಾಡಿರಿ. ನಿಮ್ಮ ಮುಂದೆ ಬಂದರೆ ಹಾಯಬೇಡಿ ಮತ್ತು ಹಿಂದೆ ಬಂದರೆ ಒದೆಯಬೇಡಿ ತಬ್ಬಲಿ ಮಗುವಿಗೆ ನಿಮ್ಮ ಮಗು ಎಂದು ತಿಳಿಯಿರಿ ಎಂದು ಬೇಡಿಕೊಂಡಿತು.

ಇ) ಕರುವನ್ನು ತಬ್ಬಿಕೊಂಡು ಪುಣ್ಯಕೋಟಿ ಏನೆಂದು ದು:ಖಿಸಿತು ?

ಉತ್ತರ:ಕರುವನ್ನು ತಬ್ಬಿಕೊಂಡು ಪುಣ್ಯಕೋಟಿ ತಬ್ಬಲಿಯು ನೀನಾದೆ ಮಗುವೇ, ಹೆಬ್ಬುಲಿಯ ಬಾಯಿಗೆ ಆಹಾರವಾಗಿ ಹೋಗುವೆನು ಇಬ್ಬರ ಋಣ ತೀರಿತೆಂದು ದು:ಖಿಸಿತು.

ಈ) ಹುಲಿಯ ಗವಿಗೆ ಬಂದು ಪುಣ್ಯಕೋಟಿಯು ಏನು ಹೇಳಿತು ?

ಉತ್ತರ: ಹುಲಿಗೆ ಕೊಟ್ಟ ಮಾತನಂತೆ ಮರಳಿ ಬಂದ ಪುಣ್ಯಕೋಟಿ ಹಸುವು ಹುಲಿಗೆ, ನನ್ನ ಖಂಡ ಬೇಕೋ, ಮಾಂಸಬೇಕೋ ಅಥವಾ ಬಿಸಿ ರಕ್ತ ಬೇಕೋ ಎಲ್ಲವನ್ನೂ ತಿಂದು ನೀನು ಸಂತಸಪಡು ಎಂದು ಹೇಳಿತು.

ಉ) ಈ ಕವಿತೆಯಿಂದ ತಿಳಿದು ಬರುವ ನೀತಿ ಯಾವುದು ?

ಉತ್ತರ: ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಲ್ಲ ಒಳ್ಳೆಯದಾಗುತ್ತದೆ ಎಂಬ ನೀತಿ ಈ ಕವಿತೆಯಿಂದತಿಳಿಯುವುದು.

ಪ್ರಶ್ನೆ ೨) ಈ ಮಾತನ್ನು ಯಾರು ಯಾರಿಗೆ ಹೇಳಿದರು.

ಅ) ಆರ ಮೊಲೆಯನು ಕುಡಿಯಲಮ್ಮ

ಉತ್ತರ: ಕರುವು ತನ್ನ ತಾಯಿ ಪುಣ್ಯಕೋಟಿಗೆ ಹೇಳಿತು.

ಆ) ಕಂದ ನಿಮ್ಮವನೆಂದು ಕಾಣಿರಿ ತಬ್ಬಲಿಯನೀ ಕರುವನು

ಉತ್ತರ: ಪುಣ್ಯಕೋಟಿ ಹಸು ತನ್ನ ಸಂಗಡಿಗ ಹಸುಗಳಿಗೆ

ಇ) ಎನ್ನ ಒಡಹುಟ್ಟಕ್ಕ ನೀನು         

ಉತ್ತರ: ಹುಲಿ ಪುಣ್ಯಕೋಟಿಗೆ ಹೇಳಿತು.

ಪ್ರಶ್ನೆ ೩) ಕವಿತೆಯ ಬಿಟ್ಟ ಸಾಲುಗಳನ್ನು ಪೂರ್ಣಗೊಳಿಸಿರಿ.

ಪುಣ್ಯಕೋಟಿಯ ಮಾತು ಕೇಳಿ

ಕಣ್ಣ ನೀರನು ಸುರಿಸಿ ನೊಂದು

ಕನ್ನೆಯಿವಳನು ಕೊಂದು ತಿಂದರೆ

ಮೆಚ್ಚನಾ ಪರಮಾತ್ಮನು ||

ಪ್ರಶ್ನೆ ೪) ಈ ಕವಿತೆಯನ್ನು ಕಂಠಪಾಠ ಮಾಡಿರಿ.

ಉಪಕ್ರಮ

೧) ಈ ಕವಿತೆಯನ್ನು ಸಾಭಿನಯದೊಂದಿಗೆ ಹಾಡಿರಿ.

೨) ಸತ್ಯ ಹರಿಶ್ಚಂದ್ರ ಮಹಾರಾಜರ ಕಥೆಯನ್ನು ಶಿಕ್ಷಕರಿಂದ / ಪಾಲಕರಿಂದ ಕೇಳಿ

ತಿಳಿದುಕೊಳ್ಳಿರಿ. ನಿತ್ಯ ಜೀವನದಲ್ಲಿ ಸತ್ಯ ಪರಿಪಾಲನೆ ಮಾಡಿರಿ.

ನುಡಿಮುತ್ತು

·        ಇನ್ನೊಬ್ಬರಿಗೆ ಕೆಟ್ಟದ್ದನ್ನು ಮಾಡುವವನು, ತನಗೆ ಕೆಟ್ಟದ್ದನ್ನು ಮಾಡಿಕೊಳ್ಳುತ್ತಾನೆ.

·        ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು