ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಕರ್ಜಾಳ ಕೇಂದ್ರದ ಶಿಕ್ಷಣ ಪರಿಷತ್ತು ಭಾವಪೂರ್ಣ ವಾತಾವರಣದಲ್ಲಿ ಸಂಪನ್ನ

      

ಕರ್ಜಾಳ ಕೇಂದ್ರದ ಶಿಕ್ಷಣ ಪರಿಷತ್ತು ಭಾವಪೂರ್ಣ ವಾತಾವರಣದಲ್ಲಿ ಸಂಪನ್ನವಾಯಿತು.

ಕರ್ಜಾಳ ಕೇಂದ್ರದ ಶಿಕ್ಷಣ ಪರಿಷತ್ತು ಭಾವಪೂರ್ಣ ವಾತಾವರಣದಲ್ಲಿ ಸಂಪನ್ನ

          ಇಂದು ಜಿ. ಪ. ಪ್ರಾಥಮಿಕ ಕನ್ನಡ ಶಾಲೆ, ಕರ್ಜಾಳ ತಾ. ಅಕ್ಕಲಕೋಟ ಜಿ. ಸೋಲಾಪೂರ ಶಾಲೆಯ ಆವರಣದಲ್ಲಿ ಕೇಂದ್ರ ಮಟ್ಟದ  ಶಿಕ್ಷಣ ಪರಿಷತ್ತು ಕಭಿ ಖುಷಿ ಕಭಿ ಗಮ್ ಎಂಬ ಸಂಮ್ಮಿಶ್ರ ಭಾವನೆಗಳನ್ನೋಳಗೊಂಡ ವಾತಾವರಣದಲ್ಲಿ ಸಂಪನ್ನವಾಯಿತು. ಈ ಶಿಕ್ಷಣ ಪರಿಷತ್ತಿನಲ್ಲಿ ಮೈಂದರ್ಗಿ ಬೀಟದ ಶಿಕ್ಷಣವಿಸ್ತಾರ ಅಧಿಕಾರಿಗಳಾದ ಸನ್ಮಾನ್ಯ ಶ್ರೀ ಸೋಮಶೇಖರ ಸ್ವಾಮಿ ಸಾಹೇಬರು, ಕೇಂದ್ರ ಪ್ರಮುಖ ಶ್ರೀ. ಜೀವರಾಜ ಖೋಬರೆ ಸಾಹೇಬರು, ಮಾರ್ಗದರ್ಶಕರಾಗಿ ಬಿ. ಆರ್. ಸಿ. ತಜ್ಞರಾದ ಶ್ರೀ. ಗಣೇಶ ಅಂಬುರೆ ಸರ, MDM ನಿಯಂತ್ರಕ ಶ್ರೀ ಪಂಡಿತ ಗುರವ ಸರ ಹಾಗೂ ಕೇಂದ್ರದಲ್ಲಿಯ ಎಲ್ಲ ಶಾಲೆಗಳ ಮುಖ್ಯಾದ್ಯಾಪಕರು ಮತ್ತು ಎಲ್ಲ ಶಿಕ್ಷಕರು ಉಪಸ್ಥಿತರಿದ್ದರು.

          ಪ್ರಥಮದಲ್ಲಿ ಕ್ರಾಂತಿಜ್ಯೋತಿ ಸಾವಿತ್ರೀಬಾಯಿ ಫುಲೆ ಇವರ ಪ್ರತಿಮೆ ಪೂಜೆಯೊಂದಿಗೆ ಶಿಕ್ಷಣ ಪರಿಷತ್ತು ಆರಂಭವಾಯಿತು. ಪ್ರಥಮ ಸತ್ರದಲ್ಲಿ ಪ್ರಶಾಸಕೀಯ ಸಂಗತಿಗಳ ಬಗ್ಗೆ ಚರ್ಚೆ ಮಾಡಲಾಯಿತು. ಶಾಲೆಯ ಕಾರ್ಯಕಲಾಪಗಳು, ವಾರ್ಷಿಕ ಪರೀಕ್ಷೆಯ ಮೂಲ್ಯಮಾಪನೆ, ಮಧ್ಯಾಹ್ನ ಭೋಜನ ಯೋಜನೆಯ ಬಗೆಗಿನ ದಕ್ಷತೆ ಹಾಗೂ ಸುರಕ್ಷಿತತೆ ಇವುಗಳ ಬಗೆಗೆ ವಿಸ್ತಾರ ಅಧಿಕಾರಿ ಶ್ರೀ ಸ್ವಾಮಿ ಸಾಹೇಬರು, ಶ್ರೀ ಖೋಬರೆ ಸಾಹೇಬರು, ಶ್ರೀ ಅಂಬುರೆ ಸರ ಹಾಗೂ ಶ್ರೀ ಗುರವ ಸರ ಇವರು ಸವಿಸ್ತಾರವಾಗಿ ಮಾರ್ಗದರ್ಶನ ಮಾಡಿದರು.        



          ಎರಡನೆಯ ಸತ್ರದಲ್ಲಿ ಮೇ 2025 ರ ಕೊನೆಯಲ್ಲಿ ತಮ್ಮ ಸೇವೆಯಿಂದ ನಿವೃತ್ತಿಹೊಂದುತ್ತಿರುವ ಮುಖ್ಯಾದ್ಯಾಪಕರು ಶ್ರೀ. ಮಾ. ಈ. ಪವಾರ ಸರ ಹಾಗೂ ಶ್ರೀ ಬಾಳಶಂಕರ ಸರ ಇವರನ್ನು ಸನ್ಮಾನ ಮಾಡಲಾಯಿತು. ಇವರೀರ್ವರ ಬಗೆಗೆ ಅನೇಕ ಶಿಕ್ಷಕ ಬಂಧು-ಭಗಿನಿಯರು ತಮ್ಮ ಹೃದಯಾಳದ ಭಾವನೆಗಳನ್ನು ಬಿಚ್ಚಿಟ್ಟರು. ತಮ್ಮ ಭೂತಕಾಲದ ನೆನಪುಗಳ ಮರುಸ್ಮರಣೆ ಮಾಡುತ್ತಾ ಭವಿಷ್ಯದಲ್ಲಿ ಸುಖ ಸಂತೋಷದಿಂದ ಆರೋಗ್ಯಪೂರ್ಣ ಬದುಕು ಸಾಗಲಿ ಎಂದು ಪ್ರಾರ್ಥನೆ ಮಾಡಿದರು. ಶ್ರೀ ಬಸವರಾಜ ಗುರವ ಸರ ತಮ್ಮ ಸಹಅಧ್ಯಾಯಿ ಸಹೋದರರ ಅಗಲುವಿಕೆಯಿಂದ ಕಣ್ಣೀರಿಟ್ಟರು. ತಮ್ಮ ಸಂವೇದನಶೀಲ ಭಾವನೆಯನ್ನು ತೋಡಿಕೊಂಡರು. ಆಗ ಎಲ್ಲ ಉಪಸ್ಥಿತ ಬಾಂಧವರ ಕಣ್ಣಾಲಿಗಳೂ ತೇವಗೊಂಡಿದ್ದವು. ತಮ್ಮ ಆತ್ಮೀಯ ವ್ಯಕ್ತಿ ದೂರ ಹೋಗುವಾಗ ಎಂತಹ ಧೈರ್ಯವಂತ ವ್ಯಕ್ತಿ ಇದ್ದರೂ ಮೃದುವಾಗುತ್ತಾನೆ ಎಂಬುದರ ಸಾಕ್ಷ ಚಿತ್ರ ಇದಾಗಿತ್ತು. ಯುವ ಶಿಕ್ಷಕ ಕವಿಗಳಾದ ಶ್ರೀ ಜಮಾಲೋದ್ದಿನ ಶೇಖ ಸರ ಸತ್ಕಾರಮೂರ್ತಿಗಳ ಸನ್ಮಾನಾರ್ಥಕವಾಗಿ ಒಂದು ಸುಂದರ ಕವಿತೆಯನ್ನು ಸಾದರಪಡಿಸಿದರು. ಸನ್ಮಾನಕ್ಕೆ ಉತ್ತರ ನೀಡಲು ನಿಂತಾಗ ಧೀರಗಂಭೀರ ಸ್ವಭಾವದ ಮುಖ್ಯಾದ್ಯಾಪಕರ ಕಂಗಳಲ್ಲೂ ಕಣ್ಣೀರು ಬಾರದೇ ಇರಲಿಲ್ಲ. ಕಲ್ಲಿಗೂ ಕನಿಕರ ಬರುವಂತಹ ಇಂದಿನ ಭಾವಪೂರ್ಣ ಶಿಕ್ಷಣ ಪರಿಷತ್ತು ನ ಭೂತೋ ನ ಭವಿಷ್ಯತಿ ಎನ್ನುವಂತೆ ಎಲ್ಲರ ಸ್ಮರಣೆಯಲ್ಲಿ ಉಳಿಯುವಂತಹದ್ದಾಯಿತು.  ತಮ್ಮ ವಿನೋದಮಯ ಶೈಲಿಯಿಂದ ಗಂಭೀರ ವಾತಾವರಣಕ್ಕೆ ಪುರ್ವಸ್ಥಿತಿಗೆ ತಂದವರು ಸದಾ ಹಸನ್ಮುಖಿಯಾಗಿದ್ದು ಇನ್ನೊಬ್ಬರ ನಗುವಿಗೂ ಕಾರಣರಾಗುವ ಎಲ್ಲರ ನೆಚ್ಚಿನ ಕೇಂದ್ರಪ್ರಮುಖರು ಶ್ರೀ ಜೀವರಾಜ ಖೋಬರೆ ಸಾಹೇಬರು. ಉಪಸ್ಥಿತ ಶಿಕ್ಷಕ ಸಮೂಹದಲ್ಲಿ ಹಾಸ್ಯದ ಹೊನಲು ಹರಿಸಿ ಅಶ್ರುಪೂರ್ಣ ವಾತಾವರಣವನ್ನು ನಗೆಯಲ್ಲಿ ರೂಪಾಂತರ ಮಾಡಿದರು. ಖೋಬರೆ ಸಾಹೇಬರು ಎಂದರೆ ಹರ್ ದರ್ದ್ ಕೀ ದವಾ!

          ಇಂದಿನ ಶಿಕ್ಷಣ ಪರಿಷತ್ತಿನ ಎಲ್ಲ ಹೊಣೆಗಾರಿಕೆ ಜಿ. ಪ. ಪ್ರಾಥಮಿಕ ಕನ್ನಡ ಶಾಲೆ ಕರ್ಜಾಳ ಈ ಶಾಲೆಯ ಮುಖ್ಯದ್ಯಾಪಕರು ಹಾಗೂ ಶಿಕ್ಷಕವೃಂದ ವಹಿಸಿದರು. ಊಟದ ಭರ್ಜರಿ ವ್ಯವಸ್ಥೆ ಮಾಡಲಾಗಿದ್ದು ಕರ್ನಾಟಕ ಶೈಲಿಯ ತುಪ್ಪಿನ ಘಟ್ಟಿ ಕಡಬು ಮೇಣುವಿನ ಮುಖ್ಯ ಆಕರ್ಷಣೆಯಾಗಿತ್ತು. ಘಟ್ಟಿ ಕಡಬು ನಿರ್ಮಾಪಕರು ದಹಿಟನೆವಾಡಿ ಶಾಲೆಯ ಮುಖ್ಯದ್ಯಾಪಕರು ಶ್ರೀ ಸಂತೋಷ ಜೀರಗೆ ಸರ. ಶಿಕ್ಷಣ ಪರಿಷತ್ತು ಯಶಶ್ವಿಗೊಳಿಸಲು ಕರ್ಜಾಳ ಶಾಲೆಗೆ ದಹಿಟನೆವಾಡಿ ಶಾಲೆಯೂ ಸಹಕಾರ ನಿಡಿದ್ದು ವಿಶೇಷ. ಕೊನೆಗೆ ವಂದನಾರ್ಪಣೆಯೊಂದಿಗೆ ಶಿಕ್ಷಣ ಪರಿಷತ್ತು ಮುಕ್ತಾಯವಾಯಿತು.    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು