ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಮನೆಗೆ ಬರುವ ಹಾಗಿಲ್ಲ

 

ಮನೆಗೆ ಬರುವ ಹಾಗಿಲ್ಲ



ಕರ್ತವ್ಯದ ಶಿವಧನುಷ್ಯ ಕೆಳಗಿಡುವಂತಿಲ್ಲ                                                

ನಾನೋ ಕೋವಿಡ್ ಯೋಧ, ಮನೆಗೆ ಬರುವಂತಿಲ್ಲ.

ಜನತೆಯ ಚಿಂತೆ ಎನಗೆ, ಹೋರಾಡುವೆ ಜನತೆಗಾಗಿ

ಕರ್ತವ್ಯದಿ ಬಂಧಿಸಲ್ಪಟ್ಟ ನಾನು, ರಜೆ ತೆಗೆದುಕೊಳ್ಳುವಂತಿಲ್ಲ

ಕೆಲಸದ ಮೇಲಿರಲು ಮನೆ-ಮಡದಿ-ಮಕ್ಕಳು ನೆನೆಪಾಗುತ್ತಾರೆ

ಆದರೆ ನನಗೆ ನನ್ನ ಕುಟುಂಬದ ಜೊತೆ ಎರಡು ಗಳಿಗೆ ಕೂಡುವಂತಿಲ್ಲ

ಸಂಸರ್ಗದ ಭಯವೇ ನನಗೆ ದೂರವಿಟ್ಟಿದೆ ಮನೆಯಿಂದ

ಕಾಲೂರಿ ಮನೆಬಾಗಿಲಿಗೆ ಹೆಜ್ಜೆ ಹಾಕುವಂತಿಲ್ಲ

ತಾನು ಕಾಯಿಲೆಯಿಂದ ಬಳಲಿದ್ದರೂ ಅವಳಿಗೆ ನನ್ನದೇ ಚಿಂತೆ

ಆದರೆ ಭೇಟಿಯಾಗಿ ಅಮ್ಮನ ಕ್ಷೇಮ-ಕುಶಲ ವಿಚಾರಿಸುವಂತಿಲ್ಲ

ಮನೆಯ ಸೆಳೆತವಿಟ್ಟುಕೊಂಡು ಎರಡು ತುತ್ತು ಗಂಟಲಲ್ಲಿಳಿಸಲು ಯತ್ನಿಸುತ್ತೇನೆ

ಆದರೆ ಮಕ್ಕಳೊಂದಿಗೆ ಕುಳಿತು ಎರಡು ತುತ್ತು ತಿನ್ನುವಂತಿಲ್ಲ.

                        -ದಿನೇಶ ಚವ್ಹಾಣ, ಮೊ.ನಂ.7066102066

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು